Friday, November 22, 2024
Homeರಾಷ್ಟ್ರೀಯ | Nationalವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಸರಿ ಬಣ್ಣ ಏಕೆ..?

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಸರಿ ಬಣ್ಣ ಏಕೆ..?

ನವದೆಹಲಿ,ಅ.5- ಕಿತ್ತಳೆ ಬಣ್ಣದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲನ್ನು ಪ್ರಾರಂಭಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಬೆರೆಸಬಾರದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪಗಳಿಗೆ ತಿಳಿಸಿದ್ದಾರೆ. ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಅವರು, ಮಾನವನ ಕಣ್ಣುಗಳಿಗೆ 2 ಬಣ್ಣಗಳು ಹೆಚ್ಚು ಗೋಚರಿಸುತ್ತವೆ. ಅವುಗಳೆಂದರೆ ಹಳದಿ ಮತ್ತು ಕಿತ್ತಳೆ ಬಣ್ಣ. ಯುರೋಪ್‍ನಲ್ಲಿ ಸುಮಾರು ಶೇ.80ರಷ್ಟು ರೈಲುಗಳನ್ನು ಕಿತ್ತಳೆ ಅಥವಾ ಹಳದಿ ಬಣ್ಣದ ಸಂಯೋಜನೆಯೊಂದಿಗೆ ಮಾಡಲಾಗುತ್ತದೆ ಎಂದಿದ್ದಾರೆ.


ಹಳದಿ ಮತ್ತು ಕಿತ್ತಳೆ ಬಣ್ಣಗಳಂತೆ ಹೊಳೆಯುವ ಬೆಳ್ಳಿಯಂತಹ ಇತರ ಹಲವು ಬಣ್ಣಗಳಿವೆ. ಆದರೆ ನಾವು ಮಾನವನ ಕಣ್ಣಿಗೆ ಚೆನ್ನಾಗಿ ಗೋಚರಿಸುವ ದೃಷ್ಟಿಕೋನದಿಂದ ಅದರ ಬಗ್ಗೆ ಮಾತನಾಡಿದರೆ, ಈ ಎರಡು ಬಣ್ಣಗಳು ಅತ್ಯುತ್ತಮವೆಂದು ಪರಿಗಣಿಸಬಹುದು ಎಂದು ವೈಷ್ಣವ್ ಎಂದಿದ್ದಾರೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ವಂದೇ ಭಾರತ್ ರೈಲುಗಳಲ್ಲಿ ಕಿತ್ತಳೆ ಬಣ್ಣ ಬಳಸಿರುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಇದು 100% ವೈಜ್ಞಾನಿಕ ಚಿಂತನೆ. ಈ ಕಾರಣದಿಂದಲೇ ಹಡಗು ಹಾಗೂ ವಿಮಾನಗಳಲ್ಲಿ ಇಡಲಾಗಿರುವ ಬ್ಲ್ಯಾಕ್ ಬಾಕ್ಸ್‍ಗಳಿಗೆ ಕಿತ್ತಳೆ ಬಣ್ಣ ಬಳಿಯಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿಗಳು ಹಾಗೂ ಲೈಫ್ ಜಾಕೆಟ್‍ಗಳು ಕೂಡಾ ಕಿತ್ತಳೆ ಬಣ್ಣದಲ್ಲಿರುತ್ತವೆ ಎಂದು ಅವರು ವಿವರಿಸಿದರು.

ಭಾರತೀಯ ರೈಲ್ವೆ ತನ್ನ ಮೊದಲ ಕಿತ್ತಳೆ ಹಾಗೂ ಬೂದು ಬಣ್ಣದ ಸಂಯೋಜನೆಯ ವಂದೇ ಭಾರತ್ ರೈಲನ್ನು ಕೇರಳದ ಕಾಸರಗೋಡು ಹಾಗೂ ತಿರುವನಂತಪುರಂ ನಡುವೆ ಸಂಚರಿಸಲು ನೀಡಿದೆ. ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 9 ರೈಲುಗಳೊಂದಿಗೆ ವೀಡಿಯೋ ಕಾನರೆನ್ಸ್ ಮೂಲಕ ಚಾಲನೆ ನೀಡಿದ್ದರು.

RELATED ARTICLES

Latest News