ಬೆಂಗಳೂರು, ಆ.23- ಧರ್ಮದ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸರ್ಕಾರ ನಿಷ್ಪಕ್ಷವಾದ ತನಿಖೆ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ಆರಂಭದಲ್ಲಿ ಬಿಜೆಪಿಯವರು ಏನನ್ನೂ ಮಾತನಾಡಿರಲಿಲ್ಲ. ಅಡ್ಡೆಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವ ಕೆಲಸ ಮಾಡಿದರು. ನಾನು ಷಡ್ಯಂತ್ರ ನಡೆದಿದೆ ಎಂದು ಹೇಳಿದ ಮೇಲೆ ಈಗ ಚರ್ಚೆ ಮಾಡುತ್ತಿದ್ದಾರೆ ಎಂದರು.
ನನಗೆ ಮೊದಲಿನಿಂದಲೂ ನಂಬಿಕೆಯಿತ್ತು. ಆದರೂ ತನಿಖೆಗೆ ಯಾವತ್ತೂ ಅಡ್ಡಿ ಪಡಿಸಲಿಲ್ಲ. ಧರ್ಮಸ್ಥಳದ ಕುಟುಂಬದವರೇ ಖುದ್ದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಎಸ್‌ಐಟಿ ತನಿಖೆಯವರನ್ನು ಸ್ವಾಗತಿಸಿದರು.ವಿಚಾರಣೆ ನಡೆಯುತ್ತಿದ್ದು, ಯಾರೆಲ್ಲ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ನಮ ಸರ್ಕಾರ ಮೊದಲಿನಿಂದಲೂ ಹೇಳುತ್ತಾ ಬಂದಿದೆ.
ಗೃಹಸಚಿವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಅವರು ವಿಧಾನಸಭೆ ಮತ್ತು ಕಾಂಗ್ರೆಸ್ ಶಾಸಕಾಂಗ ಸಭೆಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ನಾವು ಅವರು ಅಥವಾ ಇವರು ಎಂಬ ಯಾರ ಪರವೂ ಇಲ್ಲ. ನ್ಯಾಯದ ಪರವಾಗಿ ಇದ್ದೇವೆ. ಧರ್ಮದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಅನನ್ಯಭಟ್ ವಿಚಾರವಾಗಿ ಗೊಂದಲದ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳ ಕುರಿತು ಗೃಹ ಸಚಿವರು ಗಮನ ಹರಿಸುತ್ತಾರೆ ಎಂದು ತಿಳಿಸಿದರು.ಬಿಹಾರದಲ್ಲಿ ಲೋಕಸಭೆಯ ವಿರೋಧ ಪಕ್ಷದ ರಾಹುಲ್‌ಗಾಂಧಿ ನಡೆಸುವ ರಾಜಕೀಯ ಜಾಥಾದಲ್ಲಿ ಭಾಗವಹಿಸಲು ರಾಜ್ಯದಿಂದ ಕಾಂಗ್ರೆಸ್ಸಿನ ಶಾಸಕರ ತಂಡ ತೆರಳುತ್ತಿದೆ. ಬಹಳಷ್ಟು ಶಾಸಕರು ಬಿಹಾರದ ಯಾತ್ರೆಯಲ್ಲಿ ಭಾಗವಹಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಮೊದಲ ಹಂತದ ತಂಡದಲ್ಲಿ ಒಂದಷ್ಟು ಶಾಸಕರು ತೆರಳುತ್ತಿದ್ದಾರೆ. ವಿಮಾನದಲ್ಲಿ ಸ್ಥಳಾವಕಾಶ ಇರುವಷ್ಟು ಶಾಸಕರು ಪ್ರಯಾಣಿಸುತ್ತಿದ್ದು, ಎರಡನೇ ತಂಡದಲ್ಲಿ ಮತ್ತಷ್ಟು ಮಂದಿ ಭೇಟಿ ನೀಡಲಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸಮಯವಾಕಾಶ ನೋಡಿಕೊಂಡು ಒಂದೊಂದು ದಿನ ಬಿಹಾರದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾನೂ ಕೂಡ ಭೇಟಿ ನೀಡುತ್ತಿದ್ದೇನೆ ಎಂದರು.
ಚುನಾವಣೆಗಳ ಪೂರ್ವ ತಯಾರಿ ಬಗ್ಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ ಸಭೆ ನಡೆಸಿದ್ದಾರೆ. ನ್ಯಾಯಾಲಯ ಆದೇಶ ನೀಡಿದ ಮೇಲೆ ಚುನಾವಣೆ ನಡೆಸಬೇಕು. ಚುನಾವಣಾ ಜವಾಬ್ದಾರಿಗಳ ಬಗ್ಗೆ ಸುರ್ಜೇವಾಲ ಸಭೆ ನಡೆಸಿ, ನಾಯಕರಿಗೆ ಜವಾಬ್ದಾರಿ ಹಂಚಿದ್ದಾರೆ ಎಂದು ತಿಳಿಸಿದರು.
- ನವೆಂಬರ್ನಲ್ಲಿ ಕೆಸೆಟ್-25ರ ಪರೀಕ್ಷೆ
- ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಕರ್ನಾಟಕದ ಕೈ ನಾಯಕರಿಗೆ ಸುರ್ಜೇವಾಲ ಕಟ್ಟಪ್ಪಣೆ
- ಬಿಹಾರ : ಟ್ಯಾಂಕರ್ಗೆ ಆಟೋ ಡಿಕ್ಕಿಯಾಗಿ 8 ಮಂದಿ ದುರ್ಮರಣ
- ಶಾಲೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ 14 ವರ್ಷದ ವಿದ್ಯಾರ್ಥಿ
- ಧರ್ಮದ ವಿಚಾರದಲ್ಲಿ ರಾಜಕಾರಣ ಬೇಡ, ಸರ್ಕಾರ ನಿಷ್ಪಕ್ಷವಾದ ತನಿಖೆ ನಡೆಸಲಿದೆ ; ಡಿಕೆಶಿ