ಬೆಂಗಳೂರು, ಜ.24- ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ರೀತಿಯ ಒತ್ತಡವೂ ಹಾಕಿಲ್ಲ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಜನವರಿ 31ಕ್ಕೆ ನಿರ್ದೇಶಕರ ಅವ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಸೇವಾವ ಮುಕ್ತಾಯದ ನಿರ್ಧಾರ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದ್ದು, ಒತ್ತಡ ಹಾಕುವ ಜಾಯಮಾನ ನನಗಿಲ್ಲ. ಆಡಳಿತ ಮಂಡಳಿ ಸಭೆ ನಡೆಯುವಾಗ ನಾನು ಇರಲಿಲ್ಲ. ಸರ್ಕಾರ ನನ್ನ ಅಭಿಪ್ರಾಯ ಕೇಳಿಲ್ಲ ಎಂದು ಹೇಳಿದರು.
ಈಗಾಗಲೇ ಹೊಸ ನಿರ್ದೇಶಕರನ್ನು ಮಾಡುವ ಪ್ರಸ್ತಾವನೆ ಕಾರ್ಯ ನಡೆಯುತ್ತಿದೆ. ಸರ್ಕಾರ ಈಗಾಗಲೇ ಹೊಸ ನಿರ್ದೇಶಕರನ್ನು ನಿಯೋಜಿಸಲು ನಿರ್ಧಾರ ಮಾಡಿದೆ. ಈಗಾಗಲೇ ನಿರ್ದೇಶಕರ ನಿಯೋಜಿಸುವ ಕಾರ್ಯ ಮುಗಿದು ಹೋಗಿದೆ. ಇನ್ನೊಂದು ವಾರದಲ್ಲಿ ಹೊಸ ನಿರ್ದೇಶಕರು ಬರುತ್ತಾರೆ.ಯಾರು ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಸರ್ಕಾರ ಒಂದು ವೇಳೆ ನೀವೆ ಮುಂದುವರೆಯಿರಿ ಎಂದರೆ ಹೇಳಿದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.ನಿರ್ದೇಶಕನಾಗಿದ್ದಾಗಲೇ ವಿದೇಶ ಪ್ರವಾಸಕ್ಕೆ ಹೋಗಿಲ್ಲ. ಈಗ ವೃತ್ತಿ ಮುಂದುವರೆಸಲು ವಿದೇಶಕ್ಕೆ ಹೋಗುತ್ತಾರೆ ಅನ್ನೋ ಮಾತು ಸತ್ಯಕ್ಕೆ ದೂರವಾಗಿದೆ.
ವಿಶ್ವಭೂಪಟದಲ್ಲಿ ಜಯದೇವ ಆಸ್ಪತ್ರೆಗೆ ಮಾನ್ಯತೆ:
ಕಳೆದ 16 ವರ್ಷಗಳಿಂದ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ಶೇ.500 ರಷ್ಟು ಅಭಿವೃದ್ಧಿಯಾಗಿದೆ. ವಿಶ್ವಭೂಪಟದಲ್ಲಿ ಜಯದೇವ ಆಸ್ಪತ್ರೆಗೆ ಮಾನ್ಯತೆ ಸಿಕ್ಕಿದೆ. 125 ಹೃದ್ರೋಗ ತಜ್ಞರು ಆಸ್ಪತ್ರೆಯಲಿದ್ದು, ಭಾರತದಲ್ಲಿ ಎಲ್ಲೂ ಇಷ್ಟು ಹೃದ್ರೋಗ ತಜ್ಞರು ಇಲ್ಲ. 2022 ಅಧ್ಯಯನದಲ್ಲಿ ಟಾಪ್ 5 ಸೆಂಟರ್ಗಳ ಪೈಕಿ ನಂಬರ್ 1 ಸ್ಥಾನದಲ್ಲಿದೆ. ಆಸ್ಪತ್ರೆಗೆ ನಿಜವಾದ ವಿಐಪಿ ಅಂದ್ರೆ ಅದು ಬಡ ರೋಗಿಗಳು ಎಂದರು.
ಲೋಕಸಭಾ ಚುನಾವಣೆ : ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಚ್ಚರಿ ಫಲಿತಾಂಶ ಬರಲಿದೆ – ಬೊಮ್ಮಾಯಿ ಭವಿಷ್ಯ
ಆಡಳಿತ ಮಂಡಳಿಯ ನಿರ್ಧಾರದಂತೆ ಜನವರಿ 31ಕ್ಕೆ ನನ್ನ ಜವಬ್ದಾರಿ ಮುಗಿಯುತ್ತದೆ. 300 ಹಾಸಿಗೆ ಇದ್ದ ಆಸ್ಪತ್ರೆಯು ನನ್ನ ಅವಧಿಯಲ್ಲಿ ಈಗ 2 ಸಾವಿರ ಹಾಸಿಗೆ ಹೆಚ್ಚಳವಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿದೆ. ಪಂಚತಾರಾ ಖಾಸಗಿ ಆಸ್ಪತ್ರೆ ರೀತಿ ಸರ್ಕಾರಿ ಆಸ್ಪತ್ರೆ ಆಗಬೇಕೆಂದು ಕನಸ್ಸು ಕಂಡಿದ್ದೆ, ಅದು ನನಸಾಗಿದೆ ಎಂದು ಅವರು ಹೇಳಿದರು.
ಬಡವರಿಗೆ ಮಾತ್ರವಲ್ಲ ಶ್ರೀಮಂತರಿಗೆ ಚಿಕಿತ್ಸೆ ಸಿಗಬೇಕೆಂದು ನನ್ನ ಕನಸ್ಸು ನನಸಾಗಿದೆ. 75 ಲಕ್ಷ ಓಪಿಡಿ ನಡೆಸಿದ್ದೇವೆ. 8 ಲಕ್ಷ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಕಳೆದ ಮೇ ತಿಂಗಳಲ್ಲಿ ಕೇಂದ್ರೀಯ ಸಂಸದೀಯ ಸಂಸ್ಥೆ ಭೇಟಿ ಕೊಟ್ಟಿತ್ತು. ಆ ಸಂದರ್ಭದಲ್ಲಿ ಇಲ್ಲಿನ ಚಿಕಿತ್ಸೆ ಕಂಡು ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗೆ ಜಯದೇವ ಆಸ್ಪತ್ರೆ ಮಾದರಿ ಅಂದಿತ್ತು. ಜಯದೇವ ಹೃದ್ರೋಗ ಸಂಸ್ಥೆ ಮೈಸೂರಲ್ಲಿ ನಿರ್ಮಾಣಗೊಂಡಿದೆ. ಬೆಂಗಳೂರು ಮಧ್ಯಭಾಗ ಮಲ್ಲೇಶ್ಚರದಲ್ಲೂ ಸ್ಯಾಟಲೈಟ್ ಸೆಂಟರ್ ತೆರೆದಿದ್ದೇವೆ. ಇಎಸ್ ಐ ಆಸ್ಪತ್ರೆಯಲ್ಲೂ ಶಾಖೆ ತೆರೆದಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕದಲ್ಲಿ 201 ರಲ್ಲಿ 135 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ತೆರೆದಿದ್ದೇವೆ. ಶೇ. 85% ಕಾಮಗಾರಿ ಪೂರ್ಣಗೊಂಡಿದ್ದು, ಏಪ್ರಿಲ್ನಲ್ಲಿ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ಕೊಡಲಾಗುತ್ತಿದೆ. ಚಿಕಿತ್ಸೆ ಅವಶ್ಯಕತೆ ಇದ್ದವರೂ ಹಣವಿಲ್ಲದೆ ವಂಚಿತರಾಗಬಾರದು ಎಂದು ನಾನು ಟ್ರೀಟ್ಮೆಂಟ್ ಫಸ್ಟ್ ಮಾಡಿದ್ದೆ ಎಂದರು.