ನವಹದಲಿ,ಮೇ 11-ಭಾರತದಲ್ಲಿ ತೈಲ ಅಭಾವ ಇಲ್ಲ ಎಂದು ಭಾರತೀಯ ತೈಲ ಸಂಸ್ಥೆಗಳು ಹೇಳಿವೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತವರಣ ಸೃಷ್ಟಿಯಾಗಿರುವ ನಡುವೆಯೇ ಪೆಟ್ರೋಲ್, ಡಿಸೇಲ್ ಅಥವಾ ಎಲ್‌ಪಿಜಿ ಅನಿಲ ಯಾವುದೇ ಅಭಾವ ಇಲ್ಲ ಈಗಾಗಲೆ ನಾವು ಮುನ್ನಚ್ಚರಿಕೆಯಿಂದ ಸಾಕಾಷ್ಟು ದಾಸ್ತಾನು ಮಾಡಲಾಗಿದೆ. ಆತಂಕ ಪಟಡುವ ಅಗತ್ಯವಿಲ್ಲವೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಅತೀದೊಡ್ಡ ತೈಲ ಸಂಸ್ಥೆಯಾಗಿರುವ ಇಂಡಿಯನ್ ಆಯಿಲ್ ಕಾಪೊರೇಷನ್ (ಐಒಸಿ) ಈಗಾಗಲೇ ತನ್ನ ಅಂಗ ಸಂಸ್ಥೆಗಳಿಗೆ ಈ ಬಗ್ಗೆ ಯಾವುದೇ ಸುಳ್ಳು ಮಾಹಿತಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಪೆಟ್ರೋಲ್ ಬಂಕ್ ಗಳ ಮುಂದೆ ಜನರು ಸಾಲು ಗಟ್ಟಿ ನಿಟ್ಟಿದ್ದಾರೆ ಎಂಬುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ದೇಶದ ಬಹುತೇಕ ಅತೀ ಹೆಚ್ಚು ಬಳಕೆಯ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್‌ಗಳು ಒಂದು ತಿಂಗಳಿಗೆ ಆಗುವಷ್ಟು ರೀ ಪಿಲ್ಲಿಂಗ್ ಮಾಡಲಾಗಿದೆ. ಅದೇ ರೀತಿ ರೈಲ್ವೆ ಇಲಾಖೆಯು ಕೂಡ ಸಾಕಷ್ಟು ಡಿಸೇಲ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿದೆ. ಇಷ್ಟಾದರೂ ಹೆಚ್ಚಾಗಿ ಸ್ವಂತ ವಾಹನಗಳನ್ನು ಬಳಸುವುದನ್ನು ಕಡಿಮೆ ಮಾಡಿ ಸಮೂಹ ಸಾರಿಗೆಯನ್ನ ಬಳಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.