Tuesday, May 20, 2025
Homeರಾಜ್ಯಗ್ರೇಟರ್ ಬೆಂಗಳೂರಲ್ಲ, ಅನಾಥ ಬೆಂಗಳೂರು : ಶರವಣ ಟೀಕೆ

ಗ್ರೇಟರ್ ಬೆಂಗಳೂರಲ್ಲ, ಅನಾಥ ಬೆಂಗಳೂರು : ಶರವಣ ಟೀಕೆ

Not Greater Bangalore, Orphan Bangalore: Saravana

ಬೆಂಗಳೂರು, ಮೇ 20- ಮಹಾಮಳೆಯಿಂದ ರಾಜಧಾನಿ ಬೆಂಗಳೂರು ತತ್ತರಿಸಿ, ಗ್ರೇಟರ್ ಬೆಂಗಳೂರು ಕಲ್ಪನೆಯೇ ಕೊಚ್ಚೆ ಹೋಗುವಂತಹ ಸ್ಥಿತಿಯ ನಡುವೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್ ನೀರೋ ದೊರೆಯಂತೆ ಸಾಧನಾ ಸಮಾವೇಶದಲ್ಲಿ ತೊಡಗಿರುವುದು ಅಮಾನವೀಯತೆಯ ಲಕ್ಷಣ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಮತ್ತು ಜೆಡಿಎಸ್ ಹಿರಿಯ ನಾಯಕ ಟಿ. ಎ.ಶರವಣ ಟೀಕಿಸಿದ್ದಾರೆ.

ಬೆಂಗಳೂರಲ್ಲಿ ಮಹಾಮಳೆಗೆ ಅಮಾಯಕರ ಪ್ರಾಣಗಳೇ ಕೊಚ್ಚಿ ಹೋಗಿದ್ದು, ಅವುಗಳಿಗೆ ಬೆಲೆಯೇ ಇಲ್ಲದೆ ಅಂಧ ದರ್ಬಾನರ್‌ನಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷ ಮತ್ತು ಬೆಂಗಳೂರು ಉಸ್ತುವಾರಿ ಸಚಿವರ ವರ್ತನೆಯನ್ನು ಜನ ಕ್ಷಮಿಸುವುದಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯಲ್ಲಿ ಜನಸಾಮಾನ್ಯರ ಬದುಕು ಕೊಚ್ಚಿ ಹೋಗಿದೆ. ಕೊಳೆಗೇರಿ ಪ್ರದೇಶಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಬೀದಿಗೆ ಬರುವಂತಾಗಿದ್ದಾರೆ. ಅವರ ಅಗತ್ಯತೆ, ಬೇಕು, ಬೇಡಗಳನ್ನು ಗಮನಿಸಿ ಸಹಾಯ ಹಸ್ತ ಚಾಚಲು ಒಬ್ಬ ಕಾಂಗ್ರೆಸ್ ನಾಯಕ ಇಲ್ಲ ಎನ್ನುವುದು ವಿಪರ್ಯಾಸ, ದುರ್ದೈವದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇಡೀ ಸಚಿವ ಸಂಪುಟವೇ ಸಾಧನಾ ಸಮಾವೇಶದಲ್ಲಿ ಬೀಡುಬಿಟ್ಟಿದ್ದು, ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಇದು ಗ್ರೇಟರ್ ಬೆಂಗಳೂರು ಅಲ್ಲ ಅನಾಥ ಬೆಂಗಳೂರಾಗಿದೆ ಎಂದು ಶರವಣ ಟೀಕಿಸಿದ್ದಾರೆ.

RELATED ARTICLES

Latest News