Friday, September 20, 2024
Homeರಾಷ್ಟ್ರೀಯ | Nationalವಕೀಲರ ನೊಂದಣಿಗೆ ದರ ನಿಗದಿ ಮಾಡಿದ ಸುಪ್ರೀಂ ಕೋರ್ಟ್

ವಕೀಲರ ನೊಂದಣಿಗೆ ದರ ನಿಗದಿ ಮಾಡಿದ ಸುಪ್ರೀಂ ಕೋರ್ಟ್

ನವದೆಹಲಿ, ಜು.30– ರಾಜ್ಯ ಬಾರ್‌ ಕೌನ್ಸಿಲ್‌ಗಳು ಸಾಮಾನ್ಯ ಮತ್ತು ಎಸ್‌‍ಸಿ-ಎಸ್‌‍ಟಿ ವರ್ಗಗಳ ಕಾನೂನು ಪದವೀಧರರನ್ನು ವಕೀಲರಾಗಿ ದಾಖಲಿಸಲು ಕ್ರಮವಾಗಿ 650 ಮತ್ತು 125 ರೂ.ಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.
ಭಾರತೀಯ ಬಾರ್‌ ಕೌನ್ಸಿಲ್‌ (ಬಿಸಿಐ) ಮತ್ತು ರಾಜ್ಯ ಬಾರ್‌ ಕೌನ್ಸಿಲ್‌ಗಳು, ಕಾನೂನು ಪದವೀಧರರನ್ನು ವಕೀಲರನ್ನಾಗಿ ದಾಖಲಿಸಲು ವಕೀಲರ ಕಾಯಿದೆಯಡಿ ಅಧಿಕಾರ ಹೊಂದಿದ್ದು, ಸಂಸತ್ತು ಜಾರಿಗೊಳಿಸಿದ ಕಾನೂನು ನಿಬಂಧನೆಗಳನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠವು ದಾಖಲಾತಿ ವಕೀಲರಿಗೆ ರಾಜ್ಯ ಬಾರ್‌ ಕೌನ್ಸಿಲ್‌ಗಳು ವಿಧಿಸುತ್ತಿರುವ ಅತಿಯಾದ ಶುಲ್ಕವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು.

ವಕೀಲರ ಕಾಯಿದೆ, 1961ರ ಸೆಕ್ಷನ್‌ 24ನ್ನು ಉಲ್ಲೇಖಿಸಿದ ಪೀಠ, ಕಾನೂನು ಪದವೀಧರರು ವಕೀಲರಾಗಿ ದಾಖಲಾಗಲು 650 ರೂ.ಗಳಾಗಿದ್ದು, ಸಂಸತ್ತು ಮಾತ್ರ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಅದನ್ನು ಹೆಚ್ಚಿಸಬಹುದು ಎಂದು ಹೇಳಿದೆ.
ಏಪ್ರಿಲ್ 10ರಂದು ಸುಪ್ರೀಂಕೋರ್ಟ್ ಕೇಂದ್ರ, ಬಿಸಿಸಿಐ ಮತ್ತು ಇತರ ರಾಜ್ಯ ವಕೀಲರ ಸಂಸ್ಥೆಗಳಿಗೆ ಅರ್ಜಿಗಳ ಕುರಿತು ನೋಟಿಸ್ ನೀಡಿತ್ತು.

ಅತಿಯಾದ ದಾಖಲಾತಿ ಶುಲ್ಕವನ್ನು ವಿಧಿಸುವುದು ಕಾನೂನು ನಿಬಂಧನೆಯನ್ನು ಉಲ್ಲಂಘಿಸುತ್ತದೆ ಮತ್ತು ಅದನ್ನು ಮಾಡದಂತೆ ಖಚಿತಪಡಿಸಿಕೊಳ್ಳಲು ಬಿಎಸ್ಐ ಮುಂದಾಗಬೇಕು ಎಂದು ಅರ್ಜಿಗಳಲ್ಲಿ ಕೋರಲಾಗಿತ್ತು.

ಉದಾಹರಣೆಗೆ ಒಡಿಶಾದಲ್ಲಿ 42,100 ರೂ., ಗುಜರಾತ್‌ನಲ್ಲಿ 25,000 ರೂ., ಉತ್ತರಾಖಂಡದಲ್ಲಿ 23,650 ರೂ., ಜಾರ್ಖಂಡ್‌ನಲ್ಲಿ 21,460 ರೂ. ಮತ್ತು ಕೇರಳದಲ್ಲಿ 20,050 ರೂ. ದಾಖಲಾತಿ ಶುಲ್ಕವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.ಅಂತಹ ಹೆಚ್ಚಿನ ಶುಲ್ಕಗಳು ಅಗತ್ಯ ಸಂಪನೂಲಗಳನ್ನು ಹೊಂದಿರದ ಯುವ ಮಹತ್ವಾಕಾಂಕ್ಷಿ ವಕೀಲರಿಗೆ ದಾಖಲಾತಿಯನ್ನು ಪರಿಣಾಮಕಾರಿಯಾಗಿ ನಿರಾಕರಿಸುತ್ತವೆ ಎಂದು ಹೇಳಲಾಗಿದೆ.

RELATED ARTICLES

Latest News