Saturday, August 2, 2025
Homeಬೆಂಗಳೂರುಸ್ಮೋಕಿಂಗ್ ಜೋನ್‌ ಇಲ್ಲದ ಬಾರ್‌ಗಳಿಗೆ ನೋಟೀಸ್‌‍

ಸ್ಮೋಕಿಂಗ್ ಜೋನ್‌ ಇಲ್ಲದ ಬಾರ್‌ಗಳಿಗೆ ನೋಟೀಸ್‌‍

Notice to bars without smoking zones

ಬೆಂಗಳೂರು, ಆ.1– ಸೋಕಿಂಗ್‌ ಜೋನ್‌ ಸ್ಥಾಪಿಸದ ನಗರದ ನೂರಾರು ಹೋಟೆಲ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿಗೆ ಬಿಬಿಎಂಪಿ ನೋಟೀಸ್‌‍ ಜಾರಿ ಮಾಡಿದೆ.ಬಿಬಿಎಂಪಿ ವ್ಯಾಪ್ತಿಯ 412 ಹೋಟೆಲ್‌‍ಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ತಂಬಾಕು ನಿಯಂತ್ರಣ ಕಾಯ್ದೆ ಅಡಿ ನೋಟೀಸ್‌‍ ಜಾರಿ ಮಾಡಲಾಗಿದೆ.

ಪಾಲಿಕೆ ಅರೋಗ್ಯ ಇಲಾಖೆಯಿಂದ ನೋಟೀಸ್‌‍ ಜಾರಿ ಮಾಡಿದ್ದು, ಈ ಕೂಡಲೇ ಧೂಮಪಾನ ವಲಯ ಸ್ಥಾಪಿಸಬೇಕು ಎಂದು ತಾಕೀತು ಮಾಡಲಾಗಿದೆ.ನಗರದ ಬಹುತೇಕ ಬಾರ್‌, ಹೋಟೆಲ್‌‍ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ಮೋಕಿಂಗ್‌ ಜೋನ್‌ ಇಲ್ಲ. ತಂಬಾಕು ನಿಯಂತ್ರಣ ಕಾಯ್ದೆ ಅಡಿ ಸ್ಮೋಕಿಂಗ್‌ ಜೋನ್‌ ಕಡ್ಡಾಯ ಹೀಗಾಗಿ ನೋಟೀಸ್‌‍ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

30ಕ್ಕಿಂತ ಹೆಚ್ಚಿನ ಆಸನ ಇರುವ ಪಬ್‌, ಬಾರ್‌, ರೆಸ್ಟೋರೆಂಟ್‌ ಮತ್ತು ಹೋಟೆಲ್‌ ಗಳಲ್ಲಿ ಸೋಕಿಂಗ್‌ ಜೋನ್‌ ಸ್ಥಾಪಿಸುವುದು ಕಡ್ಡಾಯ. ಆದರೆ, ನಗರದ ನೂರಾರು ಹೋಟೆಲ್‌‍. ಬಾರ್‌ .ರೆಸ್ಟೋರೆಂಟ್‌ ಗಳಲ್ಲಿ ಧೂಮಪಾನ ವಲಯ ಇಲ್ಲ.

ಈ ಹಿನ್ನೆಲೆಯಲ್ಲಿ ನಗರದ 412 ಪಬ್‌‍, ಬಾರ್‌, ಹೋಟೆಲ್‌‍ ಮತ್ತು ರೆಸ್ಟೋರೆಂಟ್‌ ಗಳಿಗೆ ಪಾಲಿಕೆಯಿಂದ ನೋಟೀಸ್‌‍.. ನೋಟೀಸ್‌‍ ಜಾರಿ ಮಾಡಿ 7 ದಿನಗಳಲ್ಲಿ ಸ್ಮೋಕಿಂಗ್‌ ವಲಯ ಸ್ಥಾಪಿಸ ಬೇಕು ಎಂದು ಸೂಚಿಸಲಾಗಿದೆ.ಗಡುವಿನೊಳಗೆ ಸೋಕಿಂಗ್‌ ಜೋನ್‌ ಸ್ಥಾಪಿಸದಿದ್ದರೆ, ಅಂತವರ ಟ್ರೇಡ್‌ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

RELATED ARTICLES

Latest News