ಬೆಂಗಳೂರು,ಜ.14– ಅಭಿಮಾನಿ ಬಳಗದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರು, ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್.ರಮೇಶ್ ರವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಅಚರಿಸಿದರು.
ಎನ್.ಆರ್.ರಮೇಶ್ ಅಭಿಮಾನಿ ಬಳಗದ ಸದಸ್ಯರು ಬೆಳಗಿನಿಂದಲೇ ಹಲವಾರು ಸೇವಾಕಾರ್ಯದಲ್ಲಿ ತೊಡಗಿ ಅರ್ಥಪೂರ್ಣವಾಗಿ ತಮ ನಾಯಕನ ಹುಟ್ಟುಹಬ್ಬ ಆಚರಿಸಿದರು. ಇದೇ ವೇಳೆ ಸಾರ್ವಜನಿಕರು, ಅಭಿಮಾನಿಗಳು ಹಾಗೂ ಸ್ನೇಹಿತರು ಎನ್.ಆರ್.ರಮೇಶ್ ಅವರನ್ನು ಸನಾನಿಸಿದರು. ಸ್ನೇಹಿತರು ತಂದ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಎನ್.ಆರ್.ರಮೇಶ್ ಮಾತನಾಡಿ, ಜನಶಕ್ತಿ ಮುಂದೆ ಯಾವ ಶಕ್ತಿಯೂ ಇಲ್ಲ, ಜನರ ಸೇವೆಯನ್ನು ದೇವರ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ಯಡಿಯೂರು ವಾರ್ಡ್ ಇಂದು ಅತ್ಯಂತ ಸುಂದರ ವಾರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಯಡಿಯೂರು ಕೆರೆ ಅಂಗಳವನ್ನು ಪ್ರವಾಸಿತಾಣವಾಗಿ ಮಾಡಲಾಗಿದೆ. ಆಯುರ್ವೇದ ಸಸಿಗಳನ್ನು ನೆಟ್ಟು ಜನರ ಆರೋಗ್ಯಕ್ಕೆ ಪೂರಕವಾಗಿ ಧನ್ವಂತರಿ ಉದ್ಯಾನವನ ಕಂಗೊಳಿಸಿದೆ ಎಂದರು.
ಕನ್ನಡ ಮೇರುನಟ ಡಾ.ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪ್ರತಿಮೆ ಸೌತ್ಎಂಡ್ ವೃತ್ತದಲ್ಲಿ ಸ್ಥಾಪಿಸಲಾಗಿದೆ. ಮೂವರು ಮಹನೀಯರುಗಳು ಒಂದೇ ಜಾಗದಲ್ಲಿ ಇರುವುದು ರಾಜ್ಯದಲ್ಲಿಯೆ ಪ್ರಥಮ ಎಂದು ಹರ್ಷ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಲೋಕದ ಎಂಟು ಜ್ಞಾನಪೀಠ ಪುರಸ್ಕೃತ ಹಲವಾರು ಮಹನೀಯರ ಪ್ರತಿಮೆಗಳನ್ನು ಉದ್ಯಾನವನದ ಹಲವಾರು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇದರಿಂದ ಮುಂದಿನ ಪೀಳಿಗೆಯ ಯುವ ಸಮುದಾಯ ಮಹನೀಯರ ಸಾಧನೆ ನೋಡಿ ಅವರ ಆದರ್ಶ, ಮಾರ್ಗದರ್ಶನದಲ್ಲಿ ಸಾಗಲಿ ಎಂಬ ಆಶಯವಾಗಿದೆ.
ಬಯೋಗ್ಯಾಸ್ ಘಟಕದಿಂದ ಯಡಿಯೂರು ವಾರ್ಡ್ ನಲ್ಲಿರುವ ಪಾರ್ಕ್, ಬಿಬಿಎಂಪಿ ಕಚೇರಿಗಳಿಗೆ ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಇದರಿಂದ ಆರ್ಥಿಕವಾಗಿ ಹಣ ಉಳಿತಾಯವಾಗುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉಚಿತ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗಾವಕಾಶ ನೀಡಲಾಗಿದೆ. ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಒಳಾಂಗಣ ಕ್ರೀಡಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಗ್ರಂಥಾಲಯ ಸ್ಥಾಪನೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮತ್ತು ವೈಟ್ ಟಾಫಿಂಗ್ ಕಾಮಗಾರಿ ಪೂರ್ಣ ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ಉಳಿತಾಯ ಮಾಡಲಾಗಿದೆ ಎಂದರು.
ಕಳೆದ 15 ವರ್ಷಗಳಿಂದ ಯಡಿಯೂರು ವಾರ್ಡ್ನಲ್ಲಿ ಜನಸಂಪರ್ಕ ಅಭಿಯಾನ ಯಶ್ವಸಿಯಾಗಿ ನಡೆಯುತ್ತಿದೆ. ಪ್ರತಿ ಭಾನುವಾರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅಲಿಸಿ, ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ. ಭ್ರಷ್ಟ ಬಿಬಿಎಂಪಿ ಮತ್ತು ಸರ್ಕಾರದ ಅಧಿಕಾರಿಗಳ ವಿರುದ್ಧ, ಹೋರಾಟದಲ್ಲಿ ನೂರಾರು ಅಧಿಕಾರಿಗಳ ವಿರುದ್ಧ ಸಮರ ಸಾರಲಾಗಿದೆ. ಭ್ರಷ್ಟರ ಮುಖ ಬಯಲು ಮಾಡುವ ತನಕ ನನ್ನ ಹೋರಾಟ ನಿಲ್ಲದು. ನನ್ನ ಹೋರಾಟ, ಅಭಿವೃದ್ಧಿ ಕೆಲಸಗಳಿಗೆ ಎಂದರು.
ಇದೇ ಸಂದರ್ಭದಲ್ಲಿ ಸಂಘಟನೆಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ , ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.ಇದೇ ವೇಳೆ ಉಚಿತ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಉಚಿತ ರಕ್ತದಾನ ಶಿಬಿರ ಕೂಡ ಆಯೋಜಿಸಾಗಿತ್ತು. ಅನೇಕ ಗಣ್ಯರು ಆಗಮಿಸಿ ಎನ್.ಆರ್.ರಮೇಶ್ ಅವರಿಗೆ ಅಭಿನಂದಿಸಿದರು.
ರಮೇಶ್ ಯುವ ಬ್ರಿಗೇಡ್ ವತಿಯಿಂದ ಕಡಿಮೆ ದರಕ್ಕೆ ಪಡಿತರ ಎನ್.ಆರ್ ರಮೇಶ್ ಅವರ ಜನದಿನದ ಅಂಗವಾಗಿ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಎನ್ಆರ್ಆರ್ ಯುವ ಬ್ರಿಗೇಡ್ ವತಿಯಿಂದ ಉತ್ಕೃಷ್ಟ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೇವಲ 10 ರೂ.ಗೆ ನೀಡುವ ಯೋಜನೆಯನ್ನು ಘೋಷಿಸಿದರು.ಹಲವಾರು ಅನಾಥಾಶ್ರಮಗಳಲ್ಲಿ ಊಟೋಪಚಾರದ ವ್ಯವಸ್ಥೆ, ಹಣ್ಣು ಹಂಪಲುಗಳನ್ನು ಹಂಚುವ ಕಾರ್ಯವನ್ನು ಅವರ ಅಭಿಮಾನಿಗಳು ಮಾಡಿದರು.
ಬೆಂಗಳೂರು ನೇತ್ರಾಲಯ ವತಿಯಿಂದ ಉಚಿತ ನೇತ್ರ ಚಿಕಿತ್ಸಾಶಿಬಿರವನ್ನು ಆಯೋಜಿಸಿದ್ದು, ಅವಶ್ಯಕತೆ ಇರುವ ಎಲ್ಲರಿಗೂ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕಗಳ ವಿತರಿಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ಈಗಾಗಲೇ ಪ್ರಾರಂಭವಾಗಿರುವ ರಮೇಶ್ ಅವರ ಜನ ದಿನೋತ್ಸವ ಕಾರ್ಯಕ್ರಮವನ್ನು ಜ. 19ರ ವರೆಗೆ ನಿರಂತರವಾಗಿ ನಗರದ ಬೇರೆ ಬೇರೆ ಭಾಗಗಳಲ್ಲಿ ಅವರ ಅಭಿಮಾನಿಗಳು ಆಯೋಜಿಸಿದ್ದು, ಜ.19ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ 3000 ಸಾವಿರಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದಾರೆ ಎಂದು ಅಭಿಮಾನಿಗಳು ತಿಳಿಸಿದರು.