ನವದೆಹಲಿ,ಜೂ.29– ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಯುಜಿಸಿ-ನೆಟ್, ಜಂಟಿ ಸಿಎಸ್‌ಐಆರ್ ಯುಜಿಸಿ ನೆಟ್, ಎನ್‌ಸಿಇಟಿ ಪರೀಕ್ಷೆಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಹೊಸ ದಿನಾಂಕಗಳನ್ನು ಪ್ರಕಟಿಸಿದೆ.
ಯುಜಿಸಿ ನೆಟ್‌ಜೂನ್ 2024 ಪರೀಕ್ಷೆಗಳನ್ನು ಆಗಸ್ಟ್ 21 ಮತ್ತು ಸೆಪ್ಟೆಂಬರ್ 4 ರ ನಡುವೆ ಹಾಗೂ ಜಂಟಿ ಸಿಎಸ್‌ಐಆರ್, ಯುಜಿಸಿ ಎನ್‌ಇಟಿ ಮತ್ತು ಜುಲೈ 25ರಿಂದ ಜುಲೈ 27ರವರೆಗೆ ಮತ್ತು ಎನ್‌ಸಿಇಟಿ ಪರೀಕ್ಷೆಗಳನ್ನು ಜುಲೈ 10ರಂದು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ 2024 ಈಗಾಗಲೇ ನಿಗದಿಪಡಿಸಿದಂತೆ ಜುಲೈ 6ರಂದು ನಡೆಯಲಿದೆ. ಯುಜಿಸಿ-ನೆಟ್ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ. ಈ ಹಿಂದೆ, ಯುಜಿಸಿ ನೆಟ್ ಜೂನ್ 2024 ಪರೀಕ್ಷೆ ಆಫ್‌ಲೈನ್‌ನಲ್ಲಿ ನಡೆದಿತ್ತು.
ಯುಜಿಸಿ-ನೆಟ್ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ. ಈ ಹಿಂದೆ, ಯುಜಿಸಿ ನೆಟ್ ಜೂನ್ 2024 ಪರೀಕ್ಷೆ ಆಫ್‌ಲೈನ್‌ನಲ್ಲಿ ನಡೆದಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.