Tuesday, May 20, 2025
Homeರಾಷ್ಟ್ರೀಯ | Nationalದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 257ಕ್ಕೆ ಏರಿಕೆ, ಆತಂಕ ಬೇಡ ಎಂದ ಸರ್ಕಾರ

ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 257ಕ್ಕೆ ಏರಿಕೆ, ಆತಂಕ ಬೇಡ ಎಂದ ಸರ್ಕಾರ

Number of Covid infected people in the country rises to 257

ನವದೆಹಲಿ,ಮೇ- ಪ್ರಸ್ತುತ ಭಾರತದಲ್ಲಿ ಕೋವಿಡ್‌ ಪ್ರಕರಣಗಳು 257ಕ್ಕೆ ಏರಿದ್ದರೂ ಆತಂಕ ಪಡುವ ಅಗತ್ಯವಿಲ್ಲವೆಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇಂದು ನಡೆದ ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಕೇಂದ್ರ, ತುರ್ತು ವೈದ್ಯಕೀಯ ಪರಿಹಾರ ವಿಭಾಗ ವಿಪತ್ತು ನಿರ್ವಹಣಾ ಕೋಶ, ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳ ಅಧಿಕಾರಿಗಳ ಸಭೆಯಲ್ಲಿ ಕೋವಿಡ್‌ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಕ್ರಮಗಳನ್ನು ಘೋಷಿಸಲಾಗುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಜಾರಿಗೊಳಿಸಲು ಮುಂದಾಗಿದೆ. ಸದ್ಯ ಭಾರತದಲ್ಲಿ ಕಂಡು ಬಂದಿರುವ ಕೋವಿಡ್‌ ಪ್ರಕರಣಗಳು ಸೌಮ್ಯವಾಗಿದ್ದು, ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ. ಆದರೂ ಜನನಿಬಿಡ ಪ್ರದೇಶಗಳಲ್ಲಿ ಮತ್ತು ಹೊರ ದೇಶಗಳಿಂದ ಬರುವವರ ಬಗ್ಗೆ ಗಮನ ಹರಿಸಲು ಮುಂದಾಗಿದೆ. ಇದರಲ್ಲಿ ಚೀನಾ ಮತ್ತು ಹಾಂಕಾಂಗ್‌ನಿಂದ ಬರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಮತ್ತೆ ಶುರುವಾಯ್ತಾ ಕೊರೋನಾ ಕೇಡುಗಾಲ..? ಮುಂಬೈನಲ್ಲಿ ಇಬ್ಬರ ಸಾವು, ಸರ್ಕಾರ ಅಲರ್ಟ್

RELATED ARTICLES

Latest News