ಬೆಂಗಳೂರು,ಆ.11-ತನಗೆ ನಿಂದಿಸಿದರೆಂಬ ಕಾರಣಕ್ಕೆ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ನೆರೆಮನೆಯ ಗೃಹಿಣಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನರ್ಸಿಂಗ್ ವಿದ್ಯಾರ್ಥಿನಿ ಸುಷಾ (25) ಹಲ್ಲೆಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಬಸಪ್ಪ ಗಾರ್ಡ್‌ನಲ್ಲಿ ವಾಸವಿರುವ ಕೋಲಾರ ಮೂಲದ ಗೃಹಿಣಿ ಲಲಿತಾ (40) ಅವರಿಗೆ ನೆರೆಮನೆಯಲ್ಲಿ ವಾಸವಿರುವ ಸುಷಾ ನಿಮಗೆ ಮಕ್ಕಳಿಲ್ಲ ಎಂದು ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ನಿನ್ನೆ ಮುಂಜಾನೆ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಕೋಪಗೊಂಡ ಲಲಿತಾ ಅವರು ಮನೆಯೊಳಗೆ ಹೋಗಿ ಮಚ್ಚು ತೆಗೆದುಕೊಂಡು ಬಂದು ಸುಷಾ ಮೇಲೆ ಮೂರ್ನಾಲ್ಕು ಕಡೆ ಹಲ್ಲೆ ನಡೆಸಿದ್ದರಿಂದ ಗಂಭೀರ ಪೆಟ್ಟಾಗಿ ತೀವ್ರರಕ್ತಸ್ರಾವವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಸುಷಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
- BIG NEWS : ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ..!
- ಯೆಲ್ಲೋ ಲೈನ್ ಮೆಟ್ರೋ ಸಂಚಾರ ಆರಂಭ, ಪ್ರಯಾಣಿಕರಲ್ಲಿ ಸಂತಸ
- ಭಾರತೀಯ ನೌಕಾಪಡೆಗೆ ಮತ್ತೆರಡು ಅತ್ಯಾಧುನಿಕ ಯುದ್ಧನೌಕೆ ಸೇರ್ಪಡೆ
- ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ-ಜೆಡಿಎಸ್ ಶಾಸಕರ ಪ್ರತಿಭಟನೆ
- ಪೋಷಕರ ಒಪ್ಪಿಗೆ ಪಡೆದು ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು ವಿತರಣೆ : ಮಧು ಬಂಗಾರಪ್ಪ