ನ್ಯೂಯಾರ್ಕ್, ಫೆ 23- ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ನುಗ್ಗಿ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದು ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿಯಲ್ಲಿ ಒಬ್ಬ ಅಧಿಕಾರಿಯೂ ಸಾವನ್ನಪ್ಪಿದ್ದಾರೆ ಎಂದು ಪೆನ್ಸಿಲ್ವೇನಿಯಾದ ಪೊಲೀಸರು ತಿಳಿಸಿದ್ದಾರೆ.
ಯಾರ್ಕ್ ಕೌಂಟಿ ಡಿಸ್ಟಿಕ್ಸ್‌ನ ಅಟಾರ್ನಿ ಟಿಮ್ ಬಾರ್ಕರ್ ಎಂಬಾತ ಹ್ಯಾಂಡ್ ಗನ್ ಮತ್ತು ಜಿಪ್ ಟೈಗಳನ್ನು ಹೊಂದಿರುವ ಬ್ಯಾಗ್‌ನೊಂದಿಗೆ ಇಲ್ಲಿನ ಯುಪಿಎಂಸಿ ಮೆಮೋರಿಯಲ್ ಆಸ್ಪತ್ರೆಗೆ ಬಂದು ನೇರವಾಗಿ ಐಸಿಯು ವಿಭಾಗಕ್ಕೆ ನುಗ್ಗಿ ಏಕಾಏಕಿ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.
ಭೀತಿಗೊಂಡ ವೈದ್ಯರು, ನರ್ಸ್ ಮತ್ತು ಸಿಬ್ಬಂದಿ ಸೇರಿದಂತೆ ಕೆಲವರನ್ನು ಒತ್ತೆಯಾಳಗಿಸಿಕೊಂಡಿದ್ದಾನೆ ಈ ವೇಳೆ ಹಲವರ ಮೇಲೆ ಹಲ್ಲೆ ನಡಡೆಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರೊಂದಿಗೆ ನಂತರ ಗುಂಡಿನ ಚಕಮಕಿ ನಡೆದು ಅಧಿಕಾರಿಯೊಬ್ಬರು ಗುಂಡೇಟಿನಿಂದ ಮೃತಪಟ್ಟರೆ ಮತ್ತಿಬ್ಬರು ಗಾಯಗೊಂಡಿದ್ದಾರೆ.
ನಂತರ ಬಂದೂಕುಧಾರಿಯನ್ನು ಪೊಲೀಸ್ ಪಡೆ ಹೊಡೆದುರುಳಿಸಿ ಒತ್ತೆಯಾಳುಗಳನ್ನು ಬಂಧಮುಕ್ತಗೊಳಿಸಿದ್ದಾರೆ.
ಟ್ರಂಪ್ ಆಡಳಿತ ಬಂದ ನಂತರ ಇದು ಮೊದಲ ಭೀಕರ ಘಟನೆಯಾಗಿದೆ.ಮೃತ ಆರೋಪಿಯ ಉದ್ದೇಶದ ಬಗ್ಗೆ ತನಿಖೆ ನಡೆಯತ್ತಿದೆ. ಪೊಲೀಸ್ ಅಧಿಕಾರಿ ಸಾವಿಗೆ ಸಹದ್ಯೋಗಿಗಳು ಕಣ್ಣೀರು ಹಾಕಿದ್ದಾರೆ.ಶೂಟೌಟ್‌ನಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.