ಮುಂಬೈ, ಅ. 8 (ಪಿಟಿಐ) – ಮಹಾರಾಷ್ಟ್ರ ಸರ್ಕಾರ ತನ್ನ ಮಗನಿಗೆ 2 ಕೋಟಿ ರೂಪಾಯಿ ಬಹುಮಾನ ನೀಡಿದ್ದಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್ ಕಂಚಿನ ಪದಕ ವಿಜೇತ ಸ್ವಪ್ನಿಲ್ ಕುಸಾಲೆ ಅವರ ತಂದೆ ನಿರಾಶೆ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ ಹರಿಯಾಣ ತನ್ನ ಕ್ರೀಡಾಪಟುಗಳಿಗೆ ಹೆಚ್ಚಿನ ಮೊತ್ತವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಕೊಲ್ಹಾಪುರ ಮೂಲದ ಸ್ವಪ್ನಿಲ್ ಕುಸಾಲೆ (29) ಆಗಸ್ಟ್‌ನಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್‌್ಸನಲ್ಲಿ 50 ಮೀಟರ್ ರೈಫಲ್ 3 ಸ್ಥಾನಗಳ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.ಪುಣೆಯ ಬಾಲೆವಾಡಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಳಿ ತನ್ನ ಮಗನಿಗೆ 5 ಕೋಟಿ ರೂಪಾಯಿ ಬಹುಮಾನ ಮತ್ತು ಫ್ಲ್ಯಾಟ್ ಸಿಗಬೇಕು ಎಂದು ಅವರ ತಂದೆ ಸುರೇಶ್ ಕುಸಾಲೆ ಹೇಳಿದ್ದಾರೆ.
ಕೊಲ್ಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಸಾಲೆ, ಹರಿಯಾಣ ಸರ್ಕಾರವು ತನ್ನ ಪ್ರತಿಯೊಬ್ಬ (ಒಲಿಂಪಿಕ್ಸ್ ಪದಕ ವಿಜೇತ) ಆಟಗಾರನಿಗೆ 5 ಕೋಟಿ ರೂಪಾಯಿಗಳನ್ನು ನೀಡುತ್ತದೆ (ಹರಿಯಾಣ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂಪಾಯಿ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂಪಾಯಿ, ಕಂಚಿಗೆ 2.5 ಕೋಟಿ ರೂಪಾಯಿಗಳನ್ನು ನೀಡುತ್ತದೆ).
ಮಹಾರಾಷ್ಟ್ರ ಸರ್ಕಾರವು ಘೋಷಿಸಿದ ಹೊಸ ನೀತಿಯ ಪ್ರಕಾರ, ಒಲಿಂಪಿಕ್ ಕಂಚಿನ ಪದಕ ವಿಜೇತರು 2 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಸ್ವಪ್ನಿಲ್ ಮಹಾರಾಷ್ಟ್ರದ ಎರಡನೇ ವೈಯಕ್ತಿಕ ಒಲಿಂಪಿಕ್ ಪದಕ ವಿಜೇತರಾಗಿದ್ದಾರೆ. ಭಾರತಕ್ಕಾಗಿ ಪ್ಯಾರಿಸ್ ಒಲಿಂಪಿಕ್‌್ಸನಲ್ಲಿ ಐದು ವ್ಯಕ್ತಿಗಳು ಪದಕಗಳನ್ನು ಗೆದ್ದಿದ್ದಾರೆ, ಅವರಲ್ಲಿ ನಾಲ್ವರು ಹರಿಯಾಣದವರು ಮತ್ತು ಒಬ್ಬರು ಮಹಾರಾಷ್ಟ್ರದ ಸ್ವಪ್ನಿಲ್ ಕುಸಾಲೆ.
ಮಹಾರಾಷ್ಟ್ರಕ್ಕೆ ಹೋಲಿಸಿದರೆ ಹರಿಯಾಣವು ತುಂಬಾ ಚಿಕ್ಕ ರಾಜ್ಯವಾಗಿದೆ, ಆದರೆ ಇದು ಪದಕ ವಿಜೇತ ಕ್ರೀಡಾಪಟುಗಳಿಗೆ ಹೆಚ್ಚಿನ ಬಹುಮಾನವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಆದರೆ, ನಮ ಸರ್ಕಾರ ಚಿನ್ನದ ಪದಕ ವಿಜೇತರಿಗೆ 5 ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ ರೂ. 3 ಕೋಟಿ ಮತ್ತು ಕಂಚಿನ ಪದಕ ವಿಜೇತರಿಗೆ ರೂ. 2 ಕೋಟಿ ಘೋಷಿಸಿದೆ. ಮಹಾರಾಷ್ಟ್ರದ ಇಬ್ಬರು ಆಟಗಾರರು ಮಾತ್ರ ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದಿರುವಾಗ ಇಂತಹ ಮಾನದಂಡ ಏ ಎಂದು ಸುರೇಶ ಕುಸಾಲೆ ಕೇಳಿದರು.