ಬೆಂಗಳೂರು,ಏ.24- ನಿವೃತ್ತ ಡಿಜಿಪಿ ಓಂ ಪ್ರಕಾಶ್ ರವರ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಆರಂಭಿಸಿದ್ದಾರೆ.
ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರುಪ್ರಕರಣದ ದಾಖಲೆಗಳನ್ನು ನಿನ್ನೆ ಸಿಸಿಬಿಗೆ ಹಸ್ತಾಂತರಿಸಿದ್ದು, ಸಿಸಿಬಿಯ ಮಹಿಳಾ ಭದ್ರತಾ ವಿಭಾಗದ (ಡಬ್ಲ್ಯೂಪಿಡಬ್ಲ್ಯೂ)ಎಸಿಪಿ ಧಮೇಂದ್ರ ಅವರ ತಂಡ ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಕೈಗೊಂಡಿದೆ.
ಓಂ ಪ್ರಕಾಶ್ ಅವರ ಮಗಳು ಕೃತಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಲಿದ್ದಾರೆ.ಓಂ ಪ್ರಕಾಶ್ ರವರ ಪತ್ನಿ ಪಲ್ಲವಿ ಅವರ ಬಂಧನವಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹಾಡ ಹಗಲೇ ಓಂ ಪ್ರಕಾಶ್ ರವರನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದ್ದು ಈ ಸಂಬಂಧ ಅವರ ಪುತ್ರ ಎಚ್‌ಎಸ್‌ಆರ್ ಲೇಟೌಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಾಗಿ ತನಿಖೆ ಮುಂದುವರೆಸಿದ ಪೊಲೀಸರು ಪಲ್ಲವಿಯನ್ನು ಬಂಧಿಸಿ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ.