Monday, September 1, 2025
Homeರಾಷ್ಟ್ರೀಯ | Nationalಕೇರಳದಲ್ಲಿ ಓಣಂ ಸಂಭ್ರಮ, 2 ಶತಮಾನಗಳ ಇತಿಹಾಸ ಹೊಂದಿದ ಈ ಹಬ್ಬದ ಹಿನ್ನಲೆ ಗೊತ್ತೇ..?

ಕೇರಳದಲ್ಲಿ ಓಣಂ ಸಂಭ್ರಮ, 2 ಶತಮಾನಗಳ ಇತಿಹಾಸ ಹೊಂದಿದ ಈ ಹಬ್ಬದ ಹಿನ್ನಲೆ ಗೊತ್ತೇ..?

Onam celebrations in Kerala

ತಿರುವನಂತಪುರಂ, ಆ.31– ಓಣಂ ಸಂದರ್ಭದಲ್ಲಿ ಕೇರಳದ ಜನತೆ ಈಗ ತಿರುಓಣಂ ದಿನಕ್ಕಾಗಿ ತಮ ಪ್ರೀತಿ ಪಾತ್ರರಿಗೆ ನೀಡುವ ಸಲುವಾಗಿ ಹೊಸ ಬಟ್ಟೆಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
ಓಣಕ್ಕೋಡಿ(ಹೊಸಬಟ್ಟೆ)ಯನ್ನು ಉಡುಗೊರೆ ನೀಡುವ ಸಂಪ್ರದಾಯ ಎರಡು ಶತಮಾನಗಳಷ್ಟು ಹಿಂದೆಯೇ ಈ ಹಿಂದಿನ ತಿರುವಾಂಕೂರು (ದಕ್ಷಿಣ ಕೇರಳ) ರಾಜಸಂಸ್ಥಾನದ ಜನರಲ್ಲಿ ಆಚರಣೆಯಲ್ಲಿತ್ತು ಎಂದು ಇತಿಹಾಸದ ದಾಖಲೆಗಳು ತಿಳಿಸುತ್ತವೆ.

ಐತಿಹಾಸಿಕ ದಾಖಲೆಯೊಂದರ ಪ್ರಕಾರ, ತಿರುವಾಂಕೂರಿನ ರಾಣಿಯೊಬ್ಬರು ಎರಡು ಶತಮಾನಗಳಷ್ಟು ಹಿಂದೆ ಬ್ರಿಟಿಷ್‌ ರೆಸಿಡೆಂಟರೊಬ್ಬರಿಗೆ ಓಣಕ್ಕೋಡಿಯನ್ನು ಉಡುಗೊರೆ ನೀಡಿ ಇದನ್ನು ತಿರುವಾಂಕೂರು ಅರಸರ ಆರಾಧ್ಯ ದೈವ ಶ್ರೀ ಪದನಾಭನ ಪ್ರಸಾದವಾಗಿ ಸ್ವೀಕರಿಸಲು ಕೋರಿದ್ದರು.

ಸಂಸ್ಥಾನಕ್ಕೆ 1810ರಿಂದ 1812ರವರೆಗೆ ರಾಣಿಯಾಗಿದ್ದ ಮತ್ತು 1815ರಲ್ಲಿ ಮರಣ ಹೊಂದುವ ತನಕ ರೀಜೆಂಟ್‌ ಆಗಿದ್ದ ರಾಣಿ ಗೌರಿ ಲಕ್ಷ್ಮೀಬಾಯಿ ಅವರು ಅಂದಿನ ಬ್ರಿಟಿಷ್‌ ರೆಸಿಡೆಂಟ್‌ ಕರ್ನಲ್‌ ಜಾನ್‌ ಮನ್ರೋ ಅವರಿಗೆ ಓಣಂ ಆಚರಣೆಯ ಅಂಗವಾಗಿ ಹೊಸ ವಸ್ತ್ರಗಳನ್ನು ನೀಡಿದ್ದರು.ಮನ್ರೋ ಅವರು ತಿರುವಾಂಕೂರಿನ ಮೊದಲ ಬ್ರಿಟಿಷ್‌ ದಿವಾನರೂ ಆಗಿದ್ದರು. ಅವರು ಈ ರಾಜಸಂಸ್ಥಾನದಲ್ಲಿ ಆಡಳಿತದ ಆಧುನೀಕರಣಕ್ಕೆ ಶ್ರೀಕಾರ ಹಾಕಿದವರು.

ಕರ್ನಲ್‌ ಮನ್ರೋ ಅವರಿಗೆ ರಾಣಿ ಲಕ್ಷ್ಮೀಬಾಯಿ ಬರೆದ ಎರಡು ಪ್ರತ್ಯೇಕ ಪತ್ರಗಳು ಕೇರಳ ಸೊಸೈಟಿ ಪತ್ರಗಾರದಲ್ಲಿ ಲಭ್ಯವಿದೆ. ಇದು ರಾಜ್ಯ ಸರ್ಕಾರ ಪ್ರಕಟಿಸಿದ ರಾಜ ಒಪ್ಪಂದಗಳು ಮತ್ತು ಅಪರೂಪದ ಐತಿಹಾಸಿಕ ದಾಖಲೆಗಳನ್ನು ಸಂಕಲನ ಮಾಡುವ ಸಂಸ್ಥೆಯಾಗಿದೆ.

RELATED ARTICLES

Latest News