Tuesday, May 13, 2025
Homeರಾಷ್ಟ್ರೀಯ | Nationalಜಮ್ಮು- ಕಾಶ್ಮೀರದಲ್ಲಿ ಉಗ್ರರ ಬೇಟೆಯಾಡುತ್ತಿದೆ ಸೇನೆ, ಎನ್‌ಕೌಂಟ್‌ರನಲ್ಲಿ ಮೂವರು ಎಲ್‌ಇಟಿ ಉಗ್ರರು ಫಿನಿಷ್

ಜಮ್ಮು- ಕಾಶ್ಮೀರದಲ್ಲಿ ಉಗ್ರರ ಬೇಟೆಯಾಡುತ್ತಿದೆ ಸೇನೆ, ಎನ್‌ಕೌಂಟ್‌ರನಲ್ಲಿ ಮೂವರು ಎಲ್‌ಇಟಿ ಉಗ್ರರು ಫಿನಿಷ್

One LeT Terrorist Killed in Gunfight With Security Forces in Shopian

ಶ್ರೀನಗರ, ಮೇ 13-ಶ್ರೀನಗರ, ಮೇ 13- ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟಿರುವ ಬೆನ್ನಲ್ಲೇ, ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕಲ್ಲಾ‌ರ್ನ ಶುಕ್ಕೂ, ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಇ – ತೊಯ್ದಾ ಉಗ್ರಗಾಮಿ ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಇತರ ಇಬ್ಬರು ಲಷ್ಕರ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಪಹಲ್ಯಾಮ್‌ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಕಾರಣರಾದವರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸುವ ಪೋಸ್ಟರ್‌ಗಳು ಪುಲ್ವಾಮಾ ಜಿಲ್ಲೆಯಾದ್ಯಂತ ಕಾಣಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಎನ್ ಕೌಂಟರ್ ನಡೆದಿದೆ.

ಏಪ್ರಿಲ್ 22 ರ ಪಹಲ್ಯಾಮ್ ಭಯೋತ್ಪಾದಕ ದಾಳಿಯ ಹಿಂದಿನ ಕೈವಾಡವಿದೆ ಎಂದು ನಂಬಲಾದ ಮೂವರು ಪಾಕಿಸ್ತಾನಿ ಭಯೋತ್ಪಾದಕರಾದ ಆದಿಲ್ ಹುಸೇನ್ ಫೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಅವರ ಭಯೋತ್ಪಾದಕ ಮುಕ್ತ ಕಾಶ್ಮೀರ ಪೋಸ್ಟರ್‌ಗಳನ್ನು ಭದ್ರತಾ ಸಂಸ್ಥೆಗಳು ಹಾಕಿದ ಕೆಲವೇ ಕ್ಷಣಗಳ ನಂತರ ಈ ಬೆಳವಣಿಗೆ ನಡೆದಿದೆ.

ಕದನ ವಿರಾಮ ಬಳಿಕ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿಯವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಆದರೆ ಉಗ್ರರ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಮುಂದುವರಿಸಿದೆ. ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಓರ್ವ ಉಗ್ರನನ್ನು ಭಾರತದ ಸೈನಿಕರು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ. ಇನ್ನಿಬ್ಬರಿಗಾಗಿ ಶೋಪಿಯಾನ್ ನ ಕೆಲ್ಲಾರ್ ಕಾಡಿನಲ್ಲಿ ಸೈನಿಕರು ತಲಾಷ್ ನಡೆಸುತ್ತಿದ್ದಾರೆ.

ಉಗ್ರರ ದಾಳಿ ಹಿನ್ನೆಲೆಯಲ್ಲಿ ಸ್ಥಳವನ್ನು ಸುತ್ತುವರೆದಿರುವ ಸೇನಾಪಡೆ ಕಾರ್ಯಾಚರಣೆಯನ್ನು ಎನ್‌ಕೌಂಟರ್ ಆಗಿ ಬದಲಾಯಿಸಿದ್ದು, ವಾಳಿಗೆ ತಕ್ಕ ಉತ್ತರ ನೀಡುತ್ತಿದೆ. ಸೇನಾ ಪಡೆಗಳ ಜಂಟಿ ತಂಡವು ಶಂಕಿತ ಸ್ಥಳದ ಕಡೆಗೆ ಸಮೀಪಿಸುತ್ತಿದ್ದಂತೆ, ಅಡಗಿಕೊಂಡಿದ್ದ ಉಗ್ರಗಾಮಿ ಪಡೆಗಳ ಮೇಲೆ ಗುಂಡು ಹಾರಿಸಿದರು. ಪರಿಣಾಮ ಮೂವರು ಲಷ್ಕರ್ ಉಗ್ರರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ಖಚಿತಪಡಿಸಿದೆ.

ಬಂಡಿಪೋರಾ ಜಿಲ್ಲೆಯ ಕುಲ್ಕರ್ ಬಾಜಿಪೋರಾ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಪರಿಣಾಮ ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಮೇ 6 ರಂದು ಜಮ್ಮು ಮತ್ತು ಕಾಶ್ಮೀರದ ಬುಡ್ಯಾಮ್ ಜಿಲ್ಲೆಯಲ್ಲಿ ನಡೆದ ನಾಕಾ-ತಪಾಸಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಗೆ ಸಹಾಯಕಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದವು. ಶಂಕಿತರಿಂದ ಒಂದು ಪಿಸ್ತೂಲ್, ಒಂದು ಗ್ರೆನೇಡ್ ಮತ್ತು 15 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಯೋತ್ಪಾದಕರ ಅಡಗುತಾಣದಿಂದ ಭದ್ರತಾ ಪಡೆಗಳು ಐದು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿದ್ದರು. ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಪೂಂಚ್‌ನ ಸುರಂಕೋಟೆ ಅರಣ್ಯ ಪ್ರದೇಶದಲ್ಲಿ ಅಡಗುತಾಣವನ್ನು ಪತ್ತೆಹಚ್ಚಿದ್ದಾರೆ.

ಸುರನ್‌ಕೋಟ್ ಸೆಕ್ಟರ್‌ನ ಹರಿ ಮರೋಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಉಗ್ರರ ಅಡಗುತಾಣವನ್ನು ಭೇದಿಸಲಾಗಿದೆ ಎಂದು ಪೂಂಚ್ ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ್‌ಗೆ ತೆರಳುವ ಮೊದಲು ನೆರೆಯ ಕುಲ್ಲಾಮ್ ಜಿಲ್ಲೆಯಲ್ಲಿ ಎನ್‌ಕೌಂಟರ್ ಪ್ರಾರಂಭವಾಯಿತು.

ಭಯೋತ್ಪಾದಕರನ್ನು ಸದೆಬಡಿಯಲು ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಭಾರತವು ಪಾಕಿಸ್ತಾನಕ್ಕೆ ಬಲವಾದ ಎಚ್ಚರಿಕೆಯನ್ನು ನೀಡಿದೆ. ಭವಿಷ್ಯದ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ದೃಢವಾದ ಪ್ರತಿಕ್ರಿಯೆಯನ್ನು ಎದುರಿಸಲಾಗುವುದು ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಅಪರೇಷನ್ ಸಿಂಧೂರ್ ಹೊಸ ಮಾನದಂಡವನ್ನು ರೂಪಿಸಿದೆ ಎಂದು ಹೇಳಿದರು. ನಾವು ನಮ್ಮ ಹರತ್ತುಗಳಿಗೆ ತಕ್ಕ ಉತ್ತರವನ್ನು ನೀಡುತ್ತೇವೆ. ನಾವು ಭಯೋತ್ಪಾದನೆಯ ಬೇರುಗಳು ಹೊರಹೊಮ್ಮುವ ಪ್ರತಿಯೊಂದು ಸ್ಥಳದಲ್ಲೂ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ಎರಡನೆಯದಾಗಿ, ಭಾರತ ಯಾವುದೇ ಪರಮಾಣು ಬ್ಯಾಕ್ ಮೇಲೆ ಅನ್ನು ಸಹಿಸುವುದಿಲ್ಲ. ಭಾರತವು ಆಣಸ್ತಬ್ಲಾಕ್‌ಮೇಲ್‌ನ ನೆಪದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಯೋತ್ಪಾದಕರ ಅಡಗುತಾಣಗಳ ಮೇಲೆ ನಿಖರವಾಗಿ ಮತ್ತು ನಿರ್ಣಾಯಕವಾಗಿ ದಾಳಿ ಮಾಡುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಪಹಲ್ಯಾಮ್ ಉಗ್ರರನ್ನು ಹೊಡೆದುರುಳಿಸುವವರೆಗೆ ಈ ಕಾರ್ಯಾಚರಣೆ ನಿಲ್ಲುವುದು ಅನುಮಾನ. ಕದನ ವಿರಾಮದ ಬೆನ್ನಲ್ಲೇ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಅದಾದ ಬಳಿಕ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಶೆಲ್ ವಾಳಿ ನಡೆಸಿದ್ದು ಗಮನಕ್ಕೆ ಬಂದಿದೆ. ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನ ಗಡಿ ಭಾಗಗಳಲ್ಲಿ ಪಾಕಿಸ್ತಾನಿ ಶೇಲ್ ದಾಳಿಯನ್ನು ವಿಫಲಗೊಳಿಸಲಾಗಿದೆ. ಶೆಲ್ ಗಳ ಆವಶೇಷಗಳು ಲಭ್ಯವಾಗಿವೆ.

ರಚೌರಿ ಗಡಿಯಲ್ಲಿ ಜೀವಂತ ಶೆಲ್ ಸಿಕ್ಕಿದೆ. ಸ್ಫೋಟಿಸದೇ ವಿಫಲವಾಗಿ ಬಿದ್ದಿದ್ದ ಪಾಕಿಸ್ತಾನಿ ಶೆಲ್ ಅನ್ನು ಭಾರತೀಯ ಸೇನೆ ನಿಷ್ಕ್ರಿಯಗೊಳಿಸಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ಈ ಶೆಲ್ ದಾಳಿ ನಡೆಸಲಾಗಿತ್ತು. ಯುದ್ಧ ಆರಂಭದಲ್ಲಿ ಶಾಂತಿಮಂತ್ರ ಜಪಿಸಿದ್ದ ಪಾಕ್ ಮತ್ತೆ ತನ್ನ ಕೆಟ್ಟ ಬುದ್ದಿ ಪ್ರದರ್ಶಿಸಿದೆ.

ಕದನ ವಿರಾಮ ಬಳಿಕವೂ ಗಡಿಯಲ್ಲಿ ವಿಫಲ ದಾಳಿಯತ್ನ ನಡೆಸಿದೆ. ಸದ್ಯ ಭಾರತ ಆಕ್ಟ್ ಆಫ್ ವಾರ್ ನಿಯಮ ಜಾರಿಗೆ ತಂದಿದೆ. ಇನ್ನುಂದೆ ಗಡಿಯಲ್ಲಿ ಎಲ್ಲಿಯಾದರೂ ಉಗ್ರರಿಂದ, ಪಾಕಿಸ್ತಾನದಿಂದ ಒಂದೇ ಒಂದು ದಾಳಿ, ಬಂದೂಕಿನ ಶಬ್ದ ಕೇಳಿ ಬಂದರೂ ಅದನ್ನು ದಾಳಿ ಎಂದು ಪರಿಗಣಿಸಿ ಯುದ್ಧ ಮಾಡಲಾಗುವುದು. ನಿಮ್ಮ ಅಣ್ವಸ್ತ್ರ ಬೆದರಿಕೆಗೆ ಭಾರತ ಒಗ್ಗಲ್ಲ ಎಂದು ಪ್ರಧಾನಿ ಗುಡುಗಿದ್ದಾರೆ.

RELATED ARTICLES

Latest News