ನವದೆಹಲಿ,ಅ.31- ಲೋಕಸಭೆಯಿಂದ ಗ್ರಾಮ ಪಂಚಾಯ್ತಿವರೆಗೆ ದೇಶಾದ್ಯಂತ ಏಕಕಾಲದಲ್ಲಿ ನಡೆಸುವ ಒಂದು ರಾಷ್ಟ್ರ, ಒಂದು ಚುನಾವಣೆ ಹಾಗೂ ಪ್ರತಿಯೊಬ್ಬರಿಗೂ ಸಮಾನ ನಾಗರಿಕತೆ ನೀಡುವ ಏಕರೂಪ ನಾಗರಿಕ ಸಂಹಿತೆಯು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ಈಗಾಗಲೇ ಒಂದು ರಾಷ್ಟ್ರ – ಒಂದು ಚುನಾವಣೆ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೀಡಿರುವ ವರದಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ಬೆನ್ನಲ್ಲೇ ಪ್ರಧಾನಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ದೇಶದ ಪ್ರಥಮ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ ದಿನಾಚರಣೆ ಪ್ರಯುಕ್ತ ಗುಜರಾತ್ನ ಕಾವಾಡಿಯದಲ್ಲಿರುವ ಏಕತಾ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ದೇಶದ ಎಲ್ಲ ಚುನಾವಣೆಗಳನ್ನು ಒಂದು ದಿನದಲ್ಲಿ ಇಲ್ಲವೇ ಒಂದು ನಿರ್ಧಿಷ್ಟ ದಿನಾಂಕದ ಚೌಕಟ್ಟಿನೊಳಗೆ ನಡೆಸುವ ಗುರಿಯನ್ನು ಹೊಂದಿz್ದÉÃವೆ. ಇದು ಅತಿ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ಈ ಪ್ರಸ್ತಾವನೆಯಲ್ಲಿ ನಾವು ಅನುಷ್ಠಾನ ಮಾಡುತ್ತೇವೆ ಎಂದು ದೇಶದ ಜನತೆಗೆ ಅಭಯ ನೀಡಿದರು.
ನಾವು ಈಗ ಒಂದು ರಾಷ್ಟ್ರ ಒಂದು ಚುನಾವಣೆಗೆ ಕೆಲಸ ಮಾಡುತ್ತಿದ್ದಾವೆ. ಇದು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ವರ್ಷಪೂರ್ತಿ ನಡೆಯುವ ಚುನಾವಣೆಯಿಂದ ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ. ಸಂಪನೂಲ ಕ್ರೋಢೀಕರಣಕ್ಕೂ ಅನುಕೂಲವಾಗಲಿದೆ. ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಕನಸು ನನಸಾಗುವ ಸಮಯ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆ ಜೊತೆಗೆ ನಮ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಮಾನ ನಾಗರಿಕ ಹಕ್ಕುಗಳನ್ನು ಒದಗಿಸುವ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಇದನ್ನು ಅನುಷ್ಠಾನ ಮಾಡಲಾಗಿದೆ. ಸಂಸತ್ನಲ್ಲೂ ಈ ಕಾಯ್ದೆಯನ್ನು ಮಂಡನೆ ಮಾಡುತ್ತೇವೆ ಎಂದು ಹೇಳಿದರು.
ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ಯಾರೊಬ್ಬರು ಆತಂಕಪಡುವ ಅಗತ್ಯವಿಲ್ಲ. ಸಮಾಜದಲ್ಲಿ ಉಂಟಾಗುತ್ತಿರುವ ಮೇಲು-ಕೀಳು ಭಾವನೆ ದೂರವಾಗಿ ಪ್ರತಿಯೊಬ್ಬರೂ ಸಮಾನರು ಎಂಬ ಕಲ್ಪನೆ ಮೂಡುತ್ತದೆ. ಕಾಯ್ದೆ ಜಾರಿಯಾಗುವುದರಿಂದ ನಾವು ಯಾರ ಹಕ್ಕುಗಳನ್ನೂ ಕಿತ್ತುಕೊಳ್ಳುವುದಿಲ್ಲ. ಸಂವಿಧಾನದ ಪರಿಕಲ್ಪನೆಯಲ್ಲೇ ಇದನ್ನು ಅನುಷ್ಠಾನ ಮಾಡುವುದಾಗಿ ವಾಗ್ದಾನ ಮಾಡಿದರು.
ಕೆಲವರು ಅನಗತ್ಯವಾಗಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಯಾರೂ ಕೂಡ ತಲೆ ಕೆಡಿಸಿಕೊಳ್ಳಬೇಡಿ. ನಾನು ಪ್ರಧಾನಿಯಾಗಿ ಅಭಯ ನೀಡುತ್ತೇನೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಮೋದಿ ಪುನರುಚ್ಚರಿಸಿದರು. ಜಮು ಮತ್ತು ಕಾಶೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ನಾವು ರದ್ದುಪಡಿಸಿದ್ದಾವೆ. ಈ ಕಾಯ್ದೆಯನ್ನು ನಾವು ಶಾಶ್ವತವಾಗಿ ಸಮಾಧಿ ಮಾಡಿದ್ದಾವೆ. ಆದರೆ ಪ್ರತಿಪಕ್ಷöಗಳು ಇದರಲ್ಲೂ ಹುಳುಕು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. 70 ವರ್ಷ ನಿಮಿಂದ ಆಗದೇ ಇರುವುದನ್ನು ನಾವು ಮಾಡಿದ್ದಾವೆ. ಜಮು-ಕಾಶೀರದಲ್ಲಿ ಈ ಕಾಯ್ದೆಯನ್ನು ರದ್ದುಪಡಿಸಿರುವುದರಿಂದ ಭಯೋತ್ಪಾದನೆ ಹಂತ ಹಂತವಾಗಿ ಕ್ಷಿöÃಣವಾಗುತ್ತಿದೆ.
ದೇಶವು ಏಕತೆಯಿಂದ ಇರಬೇಕೆಂದು ಪ್ರಥಮ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಕನಸಾಗಿತ್ತು. ಇದು ನಾವು ಅವರಿಗೆ ನೀಡುತ್ತಿರುವ ಅತಿದೊಡ್ಡ ಶ್ರದ್ಧಾಂಜಲಿ ಎಂದು ಬಣ್ಣಿಸಿದರು.
70 ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳು ದೇಶಾದ್ಯಂತ ಸಂವಿಧಾನವನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಸಂವಿಧಾನವನ್ನು ಜಪಿಸುವವರು ಅದಕ್ಕೆ ಅಪಮಾನ ಮಾಡಿದ್ದಾರೆ ಎಂದು ಪರೋಕ್ಷöವಾಗಿ ಕಾಂಗ್ರೆಸï ವಿರುದ್ಧ ಕಿಡಿಕಾರಿದರು.
ಭಾರತವು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಕಳೆದ ಹತ್ತು ವರ್ಷಗಳಿಂದ ಅನೇಕ ಬೆದರಿಕೆಗಳು ಎದುರಾಗಿದ್ದರೂ ನಾವು ಯಾವುದಕ್ಕೂ ಜಗ್ಗಿಲ್ಲ. ಭಯೋತ್ಪಾದಕರ ಯಜಮಾನರು ಈಗ ಭದ್ರತಾ ವಿಷಯದ ಬಗ್ಗೆ ಮಾತನಾಡುತ್ತಿರುವುದು ತುಂಬಾ ಹಾಸ್ಯಾಸ್ಪದ ಎಂದು ಕಾಂಗ್ರೆಸï ಮೇಲೆ ಕಟಕಿಯಾಡಿದರು.
ನಕ್ಸಲ್ ನಿರ್ಮೂಲನೆ:
ದೇಶದ ಭದ್ರತೆಗೆ ಸವಾಲಾಗಿ ಪರಿಣಿಮಿಸಿರುವ ನಕ್ಸಲೀಯರನ್ನು ಹತ್ತಿಕ್ಕಲು ನಮ ಸರ್ಕಾರ ಬದ್ದವಾಗಿದೆ. ಛತ್ತೀಸïಘಡ, ಜಾರ್ಖಂಡ್, ಒಡಿಶಾ ಬಿಹಾರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಎಲ್ಲೆಲ್ಲಿ ನಕ್ಸೀಲಿಯರ ಹಾವಳಿ ಇತ್ತೋ ಅದನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುತ್ತಿದ್ದಾವೆ. ದೇಶದಲ್ಲಿ ನಕ್ಸಲೀಯರನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ನಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು. ಕಾಡಿನಲ್ಲಿರುವ ನಕ್ಸಲೀಯರಿಗಿಂಗ ಈಗ ನಾಡಿನಲ್ಲಿರುವ ಅರ್ಬನ್ ನಕ್ಸಲೀಯರು ತುಂಬ ಅಪಾಯಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇಂಥವರನ್ನು ಗುರುತಿಸಿ ಕಾನೂನಿನ ಪ್ರಕಾರ ಶಿಕ್ಷೆö ನೀಡುತ್ತೇವೆ. ಯಾವುದೇ ಕಾರಣಕ್ಕೂ ನಮ ಸರ್ಕಾರ ಹಿಂಸಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಇನ್ನು ಎರಡು ವರ್ಷ ಕಳೆದರೆ ದೇಶದ ಹೆಮೆಯ ಪುತ್ರ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 150ನೇ ಜನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ದೇಶದ ಬಗ್ಗೆ ಅವರಿಗಿದ್ದ ಕಳಕಳಿ, ಏಕತೆ ಅನನ್ಯ. ಮುಂದಿನ ಜನಾಂಗಕ್ಕೆ ಅವರ ಚಿಂತನೆಗಳು ಆದರ್ಶವಾಗಲಿ ಎಂದು ಮೋದಿ ಆಶಿಸಿದರು. ಇದಕ್ಕೂ ಮುನ್ನ ಭಾರತೀಯ ಸೇನಾಪಡೆಗಳಿಂದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಹೆಲಿಕಾಪ್ಟರ್ಗಳಿಂದ ಪುಷ್ಪನಮನ ಸಲ್ಲಿಸಲಾಯಿತು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಮೆರಗು ನೀಡಿದವು.