ಬೆಂಗಳೂರು, ಆ.24- ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ ಬಳಿಕ ದೇಶದಲ್ಲಿ ಬಹಳಷ್ಟು ಕುಟುಂಬಗಳು ನೆಮ್ಮದಿಯಾಗಿವೆ. ಇದೇ ಸಂದರ್ಭದಲ್ಲಿ ಸುಮಾರು 2 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೆಂದ್ರ ಸರ್ಕಾರ ಆ. 19ರಂದು ಸಚಿವ ಸಂಪುಟಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಗೆ ಅಂಗೀಕಾರ ನೀಡಿತ್ತು. ಲೋಕಸಭೆಯಲ್ಲಿ ಆ.20ರಂದು, ರಾಜ್ಯ ಸಭೆಯಲ್ಲಿ ಆ. 21 ರಂದು ಮಸೂದೆಗೆ ಅನುಮೋದನೆ ದೊರೆತ್ತಿದೆ. ಆ. 22 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕುವ ಮೂಲಕ ಮಸೂದೆ ಜಾರಿಗೆ ಬಂದಿದೆ.
ಈ ಮಸೂದೆ ಸೃಜನಾತಕ ಇ ಸ್ಫೋರ್ಟ್‌್ಸ ಮತ್ತು ಆನ್‌ಲೈನ್ ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುತ್ತದೆ. ಆದರೆ ಹಾನಿಕಾರಕ ಆನ್‌ಲೈನ್ ಹಣದ ಗೇಮಿಂಗ್ ಸೇವೆಗಳು, ಅವುಗಳ ಜಾಹಿರಾತುಗಳು ಮತ್ತು ಹಣಕಾಸು ವ್ಯವಹಾರಗಳನ್ನು ನಿಷೇಧಿಸುತ್ತದೆ. ಆನ್‌ಲೈನ್ ಫ್ಯಾಂಟೆಸಿ ಸ್ಫೋರ್ಟ್‌್ಸನಿಂದ ಹಿಡಿದು, ಪೋಕರ್, ರಮಿ, ಇತರ ಕಾರ್ಡ್‌ಗಳ ಆನ್‌ಲೈನ್ ಜೂಜು ಮತ್ತು ಜೂಜಿನ ಚಟುವಟಿಕೆಗಳನ್ನು ನಿಷೇಧಿಸಿದೆ.
ಸುಳ್ಳು ಲಾಭದಾಸೆ ತೋರಿಸಿ ಯುವಕರನ್ನು ಪ್ರಚೋಧಿಸಿ, ವ್ಯಸನಕಾರಿ ಆಟಗಳಿಗೆ ದೂಡುವ ಮೂಲಕ ಇಡೀ ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಆನ್‌ಲೈನ್ ರಿಯಲ್ ಮನಿಗೇಮಿಂಗ್ ಅಪ್ಲಿಕೇಷನ್‌ಗಳಿಂದ ಯುವಕರನ್ನು ರಚಿಸುವ ಉದ್ದೇಶ ಕಾಯ್ದೆಗೆ ಇದೆಯೆಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಆನ್‌ಲೈನ್ ಗೇಮಿನಿಂದ ಉಂಟಾಗುವ ವ್ಯಸನ, ಆರ್ಥಿಕ ನಷ್ಟ ಮತ್ತು ಆತಹತ್ಯೆಯಂತಹ ತೀವ್ರ ಪರಿಣಾಮಗಳನ್ನು ಈ ಕಾಯ್ದೆಯಿಂದ ತಡೆಯಬಹುದಾಗಿದೆ. ಈ ರೀತಿಯ ಆನ್‌ಲೈನ್ ಗೇಮ್‌ಗಳು ಆರ್ಥಿಕ ವಂಚನೆ, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ದುರ್ಬಳಕೆಯಾಗುತ್ತಿವೆ. ಬೆಟ್ಟಿಂಗ್ ಮತ್ತು ಜೂಜಾಟ ಭಾರತೀಯ ನ್ಯಾಯ ಸಂಮಿತೆ ಅಡಿ ಅಪರಾಧವಾಗಿದ್ದು, ವಿವಿಧ ರಾಜ್ಯಸರ್ಕಾರಗಳು ಕಾನೂನು ಪ್ರಕಾರ ನಿರ್ಬಂಧಿತ ಅಥವಾ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್‌ನಿಂದ ಸಂಪಾದನೆಯಾದ ಹಣದ ಮೇಲೆ ಶೇ. 18ರಷ್ಟು ಜಿಎಸ್‌ಟಿ ವಿಧಿಸಿತ್ತು. ಆ ಬಳಿಕ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳು ತೀವ್ರಗೊಂಡವು. ವ್ಯಸನಕ್ಕೆ ಸಿಲುಕಿದ ಯುವ ಸಮುದಾಯ ಆರ್ಥಿಕ ನಷ್ಟಕ್ಕೊಳಗಾಗಿದ್ದಲ್ಲದೇ ಅಪರಾಧ ಚಟುವಟಿಗಕೆಗಳಲ್ಲೂ ತೊಡಗಿಸಿಕೊಂಡಿದ್ದು, ವರದಿಯಾಗಿತ್ತು.
ಕೆಲವು ಸಂದರ್ಭಗಳಲ್ಲಿ ನಷ್ಟಕ್ಕೊಳಗಾದವರು ಆತಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿತ್ತು. ಕರ್ನಾಟಕ ವಿಧಾನಸಭೆಯಲ್ಲಿ ಆನ್‌ಲೈನ್ ಗೇಮ್ ವ್ಯಸನಕ್ಕೆ ಸಿಲುಕಿ ಆತಹತ್ಯೆ ಮಾಡಿಕೊಂಡ ಯುವಕರ ಬಗ್ಗೆ ಶಾಸಕರು ಕರುಣಾಜನಕವಾಗಿ ವಿವರಣೆ ನೀಡಿದ್ದರು. ಆದರೂ ರಾಜ್ಯಸರ್ಕಾರ ಆನ್‌ಲೈನ್ ಗೇಮಿಂಗ್‌ನ್ನು ಹತ್ತಿಕ್ಕುವ ಪ್ರಯತ್ನ ಮಾಡಲಿಲ್ಲ. ಬದಲಾಗಿ ಆನ್‌ಲೈನ್ ಗೇಮ್ ಒಂದು ಕೌಶಲ್ಯಭರಿತ ಕ್ಷೇತ್ರ. ವಾರ್ಷಿಕವಾಗಿ ಇದು 40 ಸಾವಿರ ಕೋಟಿ ರೂ. ವಹಿವಾಟು ಹೊಂದಿದೆ. ಇದು ಭವಿಷ್ಯದ ಡಿಜಿಟಲ್ ಆಥಿಕತೆಯೆಂದು ಸಮರ್ಥಿಸಿಕೊಳ್ಳುತ್ತಿತ್ತು. ಆನ್‌ಲೈನ್ ಗೇಮಿಂಗ್‌ನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಹಲವಾರು ಕಾರ್ಯಗಾರರು, ಸೆಮಿನಾರ್‌ಗಳು ನಡೆದಿದ್ದವು. ಯುವಸಮುದಾಯ ಆನ್‌ಲೈನ್ ಗೇಮ್‌ನ ಚಟಕ್ಕೆ ಬಿದ್ದು, ಸಮಸ್ಯೆ ಅನುಭವಿಸುತ್ತಿದೆ ಎಂದು ನಾನಾ ರೀತಿಯ ವರದಿಗಳು ಕೇಳಿ ಬಂದರೂ ಸರ್ಕಾರ ಅದಕ್ಕೆ ಕಿವಿಗೊಟ್ಟಿರಲಿಲ್ಲ. ತಮ ಪಕ್ಷದ ಶಾಸಕರ ಒತ್ತಾಯಕ್ಕೂ ಮಣಿಯದೇ ಆನ್‌ಲೈನ್ ಗೇಮ್‌ಗಳ ಉತ್ತೇಜನವನ್ನು ಮುಂದುವರೆಸಿತ್ತು.
ಈ ಹಿಂದೆ ತೆರಿಗೆ ಹಾಕಿ ಆನ್‌ಲೈನ್ ಗೇಮ್‌ಗಳನ್ನು ಭಾಗಶಃ ಅಧಿಕೃತಗೊಳಿಸಿದ್ದ ಕೇಂದ್ರ ಸರ್ಕಾರ, ಈಗ ಪ್ರಚಾರ ಹಾಗೂ ನಿಯಂತ್ರಣ ಮಸೂದೆ ಮೂಲಕ ಕಡಿವಾಣ ಹಾಕಲಾರಂಭಿಸಿದೆ. ಈ ದಿಢೀರ್ ಬೆಳವಣಿಗೆ ಡಿಜಿಟಲ್ ಆರ್ಥಿಕ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಲಿದೆ. ಸುಮಾರು 2 ಲಕ್ಷ ಜನ ನಿರುದ್ಯೋಗಿಗಳಾಗಿದ್ದಾರೆ.
2030ರ ವೇಳೆಗೆ 10 ಬಿಲಿಯನ್ ಡಾಲರ್ ವಹಿವಾಟಿನ ಅಂದಾಜುಗಳು , ಸುಮಾರು 10 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಯ ಲೆಕ್ಕಾಚಾರಗಳು ತಲೆಕೆಳಕ್ಕಾಗಿವೆ. ಕೇಂದ್ರ ಸರ್ಕಾರ ಸಮಾಲೋಚನೆ ನಡೆಸಿದೆ, ಪೂರ್ವಾಪರ ಆಲೋಚಿಸದೆ ಮಸೂದೆ ಜಾರಿಗೊಳಿಸುವ ಮೂಲಕ ಡಿಜಿಟಲ್ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವಾಗುವ ನಿರ್ಧಾರ ತೆಗೆದುಕೊಂಡಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಆದರೆ ಆನ್‌ಲೈನ್ ಗೇಮ್‌ನ ಮಸೂದೆ ಬಹಳಷ್ಟು ಕುಟುಂಬಗಳಿಗೆ ನೆಮದಿ ತಂದಿದೆ ಎಂದು ಹೇಳಲಾಗುತ್ತಿದೆ.