ಅಬುಧಾಬಿ/ಟೋಕಿಯೊ. ಮೇ 22 (ಪಿಟಿಐ) ಅಪರೇಷನ್ ಸಿಂಧೂರ್ ನಂತರ ಸ್ವರಕ್ಷಣೆಯ ಹಕ್ಕನ್ನು ಪ್ರತಿವಾದಿಸಲು ಬಹುಪಕ್ಷೀಯ ನಿಯೋಗಗಳು ಜವಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ್ದು, ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯ ವಿರುದ್ಧ ಭಾರತ ತನ್ನ ಜಾಗತಿಕ ಸಂಪರ್ಕವನ್ನು ಪ್ರಾರಂಭಿಸಿದೆ.
ಜಪಾನ್ ಗೆ ಹೋಗುವ ನಿಯೋಗದ ನೇತೃತ್ವವನ್ನು ಜೆಡಿ(ಯು) ಸಂಸದ ಸಂಜಯ್ ಝಾ ವಹಿಸಿದ್ದರೆ, ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಹೋಗುವ ನಿಯೋಗದ ನೇತೃತ್ವ ವಹಿಸಿದ್ದಾರೆ. ಶಿಂಧೆ ನೇತೃತ್ವದ ನಿಯೋಗವು ಅಬುಧಾಬಿಯಲ್ಲಿ ಯುಎಇ ಫೆಡರಲ್ ನ್ಯಾಷನಲ್ ಕೌನ್ಸಿ ಲ್ ಸದಸ್ಯ ಆಹ್ಮದ್ ಮಿರ್ ಖರಿ ಅವರನ್ನು ಭೇಟಿ ಮಾಡಿ ಪಾಕಿಸ್ತಾನ ನೆಲದಿಂದ ಹುಟ್ಟಿಕೊಂಡಿರುವ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬಲವಾದ ಸಂಕಲ್ಪವನ್ನು ತಿಳಿಸಿದೆ.
ಅಪರೇಷನ್ ಸಿಂಧೂರ್ ಮೂಲಕ ಭಾರತದ ನಿರ್ಣಾಯಕ ಯಶಸ್ಸನ್ನು ನಾವು ಹೆಮ್ಮೆಯಿಂದ ಹಂಚಿಕೊಂಡಿದ್ದೇವೆ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನಾ ಬೆದರಿಕೆಗಳನ್ನು ಎತ್ತಿ ತೋರಿಸಿದ್ದೇವೆ ಎಂದು ಶಿಂಧೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಿಂಧೆ ಜೊತೆಗೆ, ನಿಯೋಗದಲ್ಲಿ ಮನನ್ ಕುಮಾರ್ ಮಿಶ್ರಾ (ಬಿಜೆಪಿ), ನಸ್ಮಿತ್ ಪಾತ್ರ (ಬಿಜೆಡಿ), ಇಟಿ ಮೊಹಮ್ಮದ್ ಬಶೀರ್ (ಐಯುಎಂಎಲ್), ಎಸ್ ಎಸ್ ಅಹ್ಲುವಾಲಿಯಾ (ಬಿಜೆಪಿ), ಅತುಲ್ ಗರ್ಗ್ (ಬಿಜೆಪಿ), ಬನ್ನು ರಿ ಸ್ವರಾಜ್ (ಬಿಜೆಪಿ), ಮಾಜಿ ರಾಜತಾಂತ್ರಿಕ ಸುಜನ್ ಆರ್ ನೋಯ್ ಮತ್ತು ಯುಎಇಗೆ ಭಾರತದ ರಾಯಭಾರಿ ನುಂಜಯ್ ಸುಧೀರ್ ಇದ್ದಾರೆ.
ಜಾಗತಿಕ ಭದ್ರತೆ ಮತ್ತು ಅಂತರರಾಷ್ಟ್ರೀಯ ಶಾಂತಿಯನ್ನು ಗೌರವಿಸುವ ಬಗ್ಗೆ ನಾವು ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಶಿಂಧೆ ಹೇಳಿದರು.ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಬಹು ಪಕ್ಷ ನಿಯೋಗವನ್ನು ಸ್ವೀಕರಿಸಿದ ಮೊದಲ ದೇಶ ಯುಎಇ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಇದು ಎರಡು ರಾಷ್ಟ್ರಗಳ ನಡುವಿನ ಅಳವಾದ ಸ್ನೇಹವನ್ನು ಒತ್ತಿಹೇಳುತ್ತದೆ.
ಝಾ ನೇತೃತ್ವದ ಜಪಾನ್ ನಿಯೋಗದಲ್ಲಿ ಬಿಜೆಪಿ ನಂನದರಾದ ಅಪರಾಜಿತ ಸಾರಂಗಿ, ಬ್ರಿಜ್ ಲಾಲ್, ಪ್ರಧಾನ್ ಬರುವಾ ಮತ್ತು ಹೇಮಾಂಗ್ ಜೋಶಿ. ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಸಿಪಿಐ(ಎಂ)ನ ಜಾನ್ ಬ್ರಿಟಾನ್ ಮತ್ತು ಮಾಜಿ ರಾಯಭಾರಿ ಮೋಹನ್ ಕುಮಾರ್ ಸೇರಿದ್ದಾರೆ.
ಗೌರವಾನ್ವಿತ ಸಂಸದ ಶ್ರೀ ನಂಜಯ್ ಕುಮಾರ್ ಝಾ ನೇತೃತ್ವದ ಸರ್ವಪಕ್ಷ ಸಂಸದೀಯ ನಿಯೋಗ ಟೋಕಿಯೊಗೆ ಆಗಮಿಸಿದ್ದು, ರಾಯಭಾರಿ ಸ್ವಾಗತಿಸಿದ್ದಾರೆ. ಅಪ್ ಸಿಂಧೂನರ್ ನಲ್ಲಿ ಕಂಡುಬರುವಂತೆ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ನಿಲುವನ್ನು ಎಲ್ಲಾ ಕಾರ್ಯಗಳಲ್ಲಿ ಹೈಲೈಟ್ ಮಾಡಲಾಗುತ್ತದೆ ಎಂದು ಜಪಾನ್ ನಲ್ಲಿರುವ ಭಾರತದ ರಾಯಭಾರ ಕಚೇರಿಯ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ಯೋಜನೆಗಳು ಮತ್ತು ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆಯ ಕುರಿತು ಅಂತರರಾಷ್ಟ್ರೀಯ ಸಮುದಾಯವನ್ನು ತಲುಪಲು ಭಾರತವು 33 ಜಾಗತಿಕ ರಾಜಧಾನಿಗಳಿಗೆ ಏಳು ಬಹು ಪಕ್ಷ ನಿಯೋಗಗಳನ್ನು ಕಳುಹಿಸುತ್ತಿದೆ.
26 ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಲಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು.ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ನಿಖರವಾದ ದಾಳಿಗಳನ್ನು ನಡೆಸಿತು. ಅದರ ನಂತರ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು.
ಪಾಕಿಸ್ತಾನದ ಕ್ರಮಗಳಿಗೆ ಭಾರತ ಬಲವಾಗಿ ಪ್ರತಿಕ್ರಿಯಿಸಿತು.ಮೇ 10 ರಂದು ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಮಾತುಕತೆಯ ನಂತರ ಮಿಲಿಟರಿ ಕ್ರಮವನ್ನು ನಿಲ್ಲಿಸುವ ಬಗ್ಗೆ ಒಪ್ಪಂದದೊಂದಿಗೆ ನೆಲದ ಮೇಲಿನ ಯುದ್ಧವು ಕೊನೆಗೊಂಡಿತು.