ನವದೆಹಲಿ, ಫೆ.4- ಚಾಟ್ಜಿಪಿಟಿ ಸಷ್ಟಿಕರ್ತ ಓಪನ್ ಎಐ ಸಂಸ್ಥೆ ಮುಖ್ಯಸ್ಥ ಸ್ಯಾಮ್ ಆಲ್‌್ಟವ್ಯಾನ್ ನಾಳೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.ಅವರು ತಮ ಪ್ರವಾಸದ ಸಮಯದಲ್ಲಿ ಉನ್ನತ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ ಮತ್ತು ಉದ್ಯಮದ ಫೈರ್ಸೈಡ್ ಚಾಟ್ನಲ್ಲಿ ತೊಡಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಆಪಲ್ನ ಆಪ್ಸ್ಟೋರ್ನಲ್ಲಿ ಅಗ್ರ ಶ್ರೇಯಾಂಕದ ಉಚಿತ ಅಪ್ಲಿಕೇಶನ್ ಆಗಿದ್ದ ಡೀಪ್ಸೀಕ್ ಅನ್ನು ಚಾಟ್ಜಿಪಿಟಿ ಹಿಂದಿಕ್ಕಿದೆ, ಎಐ ಚಿಪ್ಮೇಕರ್ ಮತ್ತು ವಾಲ್ ಸ್ಟ್ರೀಟ್ ಸೂಪರ್ಸ್ಟಾರ್ ಚಾಪ್ಜಿಪಿಟಿ ಮಾರುಕಟ್ಟೆ ಬಂಡವಾಳದಲ್ಲಿ 590 ಶತಕೋಟಿ ಅಮೆರಿಕನ್ ಡಾಲರ್ ಮಟ್ಟ ತಲುಪಿ ಇತಿಹಾಸ ಸೃಷ್ಟಿಸಿದೆ.
ಆಲ್‌್ಟವ್ಯಾನ್ ಅವರು ತಮ ಪ್ರವಾಸದ ಸಮಯದಲ್ಲಿ ನವದೆಹಲಿಯಲ್ಲಿ ಫೈರ್ಸೈಡ್ ಚಾಟ್ನಲ್ಲಿ ಉಪಸ್ಥಿತರಿರುತ್ತಾರೆ ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳು ಇತರ ವಿವರಗಳನ್ನು ನೀಡಿಲ್ಲ,