Saturday, August 9, 2025
Homeರಾಷ್ಟ್ರೀಯ | Nationalಆಪರೇಷನ್ ಅಕಾಲ್‌ : ಉಗ್ರರರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮ

ಆಪರೇಷನ್ ಅಕಾಲ್‌ : ಉಗ್ರರರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮ

Operation Akhal enters day 9: Two soldiers killed in J&K's Kulgam; encounter still under way

ಶ್ರೀನಗರ,ಆ.9- ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ದಕ್ಷಿಣ ಕಾಶೀರದ ಕುಲ್ಗಾಮ್‌ ಜಿಲ್ಲೆಯ ಅಕಾಲ್‌ ಪ್ರದೇಶದಲ್ಲಿ ಉಗ್ರರೊಂದಿಗೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರು ಹುತಾತ್ಮ ರಾಗಿದ್ದಾರೆ.

ಭಯೋತ್ಪಾದಕರೊಂದಿಗಿನ ಕಾರ್ಯಾಚರಣೆ 9ನೇ ದಿನಕ್ಕೆ ಕಾಲಿಟ್ಟಿದ್ದು, ಭಯೊತ್ಪಾದನಾ ವಿರೋಧಿ ಸುದೀರ್ಘ ಕಾರ್ಯಾಚರಣೆ ಇದಾಗಿದೆ. ಸೇನಾಧಿಕಾರಿಗಳ ಮಾಹಿತಿ ಪ್ರಕಾರ ಹುತಾತರಾದ ಸೈನಿಕರನ್ನು ಲ್ಯಾನ್ಸ್ ನಾಯಕ್‌ ಪ್ರೀತ್‌ ಪಾಲ್‌ಸಿಂಗ್‌ ಮತ್ತು ಅರ್ಮಿಂದರ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಆ.1 ರಂದು ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ಈವರೆಗೆ 9 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೊದಲ ಎರಡು ದಿನಗಳಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು ಎಂದು ಭಾರತೀಯ ಸೇನೆ ದೃಢಪಡಿಸಿದೆ.

RELATED ARTICLES

Latest News