ಬೆಂಗಳೂರು, ಜ.3- ಸರ್ಕಾರದಿಂದ ಆಪರೇಷನ್ ಹಸ್ತ ನಡೆಯುತ್ತಿದ್ದು, ಕಾಂಗ್ರೆಸ್ನವರ ಆಪರೇಷನ್ ಹಸ್ತ ಯಾವುದೂ ವರ್ಕ್ ಆಗೋಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಗಿಸಬೇಕೆಂದು 12 ಜನ ಕರೆದುಕೊಂಡು ಬನ್ನಿ, 13 ಜನ ಕರೆದುಕೊಂಡು ಬನ್ನಿ ಎಂಬುದು ನಡೆಯುತ್ತಿದೆ. ಇದೆಲ್ಲವೂ ನನಗೆ ಗೊತ್ತಿದೆ. ನಮ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿಗಳು ಇಲ್ಲ ಎಂದರು.
ನಮ ಎಲ್ಲಾ ಶಾಸಕರು ಏನೇನು ರಾಜಕೀಯ ನಡೆಯುತ್ತಿದೆ ಎಂಬುದನ್ನು ನನ್ನ ಬಳಿ ಹೇಳಿದ್ದಾರೆ. ಜೆಡಿಎಸ್ಗೆ ಯಾವುದೇ ಶಾಕ್ ಕೊಡಲು, ದುರ್ಬಲ ಮಾಡಲು ಆಗೋಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ನವರು ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಕಾಂಗ್ರೆಸ್ನವರ ಪಾಪದ ಕೊಡ ತುಂಬಿದೆ. ದೇವರೇ ಕಾಂಗ್ರೆಸ್ನವರಿಗೆ ಶಿಕ್ಷೆ ಕೊಡುತ್ತಾನೆ ಎಂಬುದು ನನ್ನ ಅಭಿಪ್ರಾಯ ಎಂದು ನುಡಿದರು. ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ರಾಂತಿ, ವಾಂತಿ ಬಗ್ಗೆ ನಾನು ಹೇಳುವುದಿಲ್ಲ. ಈಗಾಗಲೇ ನೋಡಿ ಆಗಿದೆ. ನಾನು ಇದ್ಯಾವುದರ ಬಗ್ಗೆಯೂ ಹೇಳುವುದಿಲ್ಲ ಎಂದರು.
ನಾನು ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡುತ್ತೇನೆ. ನಿಮೆಲ್ಲರಿಗೂ ಆತಸಾಕ್ಷಿ ಅನ್ನೋದು ಇದ್ದರೆ, ನೀವು ಬೆಂಬಲ ಕೊಟ್ಟ ಸರ್ಕಾರ ಹೋಗುತ್ತಿರುವ ಮಾರ್ಗ ಏನು? ಜನರಿಗೆ ಯಾವ ವಚನ ಕೊಟ್ಟು ಬಂದಿದ್ದೀರಿ ಯೋಚನೆ ಮಾಡಿ. ನಿಮ ಗ್ಯಾರಂಟಿಗಳು ಬೇರೆ, ದೇಶದಲ್ಲಿ ಗ್ಯಾರಂಟಿ ಕೊಡಲು ಪೈಪೋಟಿ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ಕೊಟ್ಟಿದ್ದ ಹಿಮಾಲಯ ಪ್ರದೇಶ ಇವತ್ತು ಏನಾಗಿದೆ ಎಂದು ಪ್ರಶ್ನಿಸಿದರು.