ಬೆಂಗಳೂರು ಮೇ 7 – ಪಹಲ್ಯಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿರುವ ಅಪರೇಷನ್ ಸಿಂಧೂರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಧಿಯಾಗಿ ರಾಜ್ಯದ ಎಲ್ಲಾ ನಾಯಕರು ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಆಪರೇಷನ್ ಸಿಂಧೂರ್ ನಡೆಸಿರುವ ನಮ್ಮ ಸೇನೆಯ ಅಸೀಮ ಧೈರ್ಯಕ್ಕೆ ಒಂದು ಸಲ್ಯೂಟ್, ಯೋಧರ ದಿಟ್ಟ ನಾಯಕತ್ವದ ಹೋರಾಟ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾನೆ ಮಾಡಿದೆ ಎಂದಿದ್ದಾರೆ.
ಪಹಲ್ಟಾಮ್ ನ ಫೈಶಾಚಿಕ ದಾಳಿ ಅಮಾಯಕರ ಕೊಲೆಗಳಷ್ಟೇ, ಭಾರತದ ಸ್ಪೂರ್ತಿಯ ಕಗ್ಗೋಲೆಯೂ ಹೌದು. ಬಲಿಪಶುಗಳಾದವರ ಕುಟುಂಬದವರಿಗೆ ನ್ಯಾಯ ದೊರಕಿಸುವುದು, ಮಾನವೀಯತೆ ಮತ್ತು ಶಾಂತಿಯ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬ ಭಾರತೀಯರಿಗೆ ನ್ಯಾಯ ದೊರಕಿಸುವಲ್ಲಿ ಸೈನಿಕರ ಪರಿಶ್ರಮದ ಪ್ರತಿಜ್ಞೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು.
ದೇಶದ ಸಾರ್ವಭೌಮತ್ವ ಹಾಗೂ ನಮ್ಮ ಸೇನೆಯ ಜೊತೆಗೆ ಕರ್ನಾಟಕ ನಿಂತಿದೆ. ದೇಶ ರಕ್ಷಣೆಯಲ್ಲಿ ಶೌರ್ಯ, ತ್ಯಾಗದ ಯೋಧರ ಬದ್ದತೆ ಹೆಮ್ಮೆ ಪಡುವ ವಿಚಾರ, ಭಯೋತ್ಪಾದನೆಗೆ ನಮ್ಮ ನೆಲದಲ್ಲಿ ಜಾಗ ಇಲ್ಲ, ಭಾರತದ ಉಗ್ರವಾದಕ್ಕೆ ಒಮ್ಮತದಿಂದ ಬಲವಾದ ಪ್ರತಿರೋಧ ವ್ಯಕ್ತ ಪಡಿಸಲಿದೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮ ಸಂದೇಶದಲ್ಲಿ ಆಪರೇಷನ್ ಸಿಂಧೂರ್ ಪಹಲ್ಯಾಮ್ ದಾಳಿಯ ಹೇಡಿತನದ ಭಯೋತ್ಪಾದನಾ ಕೃತ್ಯಕ್ಕೆ ಯೋಗ್ಯವಾದ ಉತ್ತರ. ಸರ್ಕಾರ ಹಾಗೂ ಸೇನೆಯ ಜೊತೆಗೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಸಚಿವ ಹೆಚ್.ಕೆ.ಪಾಟೀಲ್, ಉಗ್ರವಾದವನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ತೀಕ್ಷ್ಮವಾದ ಏರ್ ಸ್ಟೈಕ್ ಮಾಡಿರುವ ಆಪರೇಷನ್ ಸಿಂಧೂರ್ ಶಾಂತಿ ಮತ್ತು ಭದ್ರತೆ ಪ್ರಬಲ ಸಂದೇಶ ರವಾನೆ ಮಾಡಿದೆ ಎಂದು ಹೇಳಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್, ಆಪರೇಷನ್ ಸಿಂಧೂರ್ ಭಾರತವನ್ನು ಕಡೆಗಣ್ಣಿನಿಂದ ನೋಡಿದವರಿಗೆ ತಕ್ಕ ಉತ್ತರವಾಗಿದೆ. ಇಡೀ ದೇಶವೇ ಒಗ್ಗಟ್ಟಿನಲ್ಲಿದೆ. ನಮ್ಮ ಸೇನೆಗೆ ಸದಾ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ವರ್ ಸೇರಿದಂತೆ ಎಲ್ಲರೂ ಆಪರೇಷನ್ ಸಿಂಧೂರ್ ಅನ್ನು ಸ್ವಾಗತಿಸಿದ್ದಾರೆ.