Saturday, May 10, 2025
Homeರಾಷ್ಟ್ರೀಯ | National'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಐವರು ಮೋಸ್ಟ ವಾಂಟೆಡ್ ಉಗ್ರರು ಫಿನಿಷ್

‘ಆಪರೇಷನ್ ಸಿಂಧೂರ್’ ದಾಳಿಯಲ್ಲಿ ಐವರು ಮೋಸ್ಟ ವಾಂಟೆಡ್ ಉಗ್ರರು ಫಿನಿಷ್

Operation Sindoor: Five top JeM, LeT terrorists killed in May 7 strike,

ನವದೆಹಲಿ,ಮೇ.10- ಭಾರತ ನಡೆಸಿದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ ಸೇರಿದ ಕುಖ್ಯಾತ ಐದು ಮಂದಿ ಬಯೋತ್ಪಾದಕರು ಸಾನನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರಲ್ಲಿ ಒಬ್ಬರು ಎಲ್‌ಇಟಿ ಮುದಾಸರ್ ಖಾದಿಯಾನ್ ಖಾಸ್ ಅಲಿಯಾಸ್ ಮುದಾಸರ್ ಅಲಿಯಾಸ್ ಅಬು ಜುಂದಾಲ್ ಎಂದು ತಿಳಿದುಬಂದಿದೆ. ಈತ ಮುರಿಡೈಯಲ್ಲಿರುವ ಮರ್ಕಜ್ ತೈಬಾದ ಉಸ್ತುವಾರಿ ವಹಿಸಿದ್ದ ಎಂದು ತಿಳಿಸಲಾಗಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಪರವಾಗಿ ಅವರ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಸರ್ಕಾರಿ ಶಾಲೆಯಲ್ಲಿ ನಡೆಸಲಾಗಿದೆ.

ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಪೊಲೀಸ್ ಐಜಿ ಪ್ರಾರ್ಥನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೆಇಎಂ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸಹೋದರ ಹಫೀಜ್ ಮುಹಮ್ಮದ್ ಜಮೀಲ್ ಕೂಡ ಬಲಿಯಾಗಿದ್ದು ಈತ ದಾಳಿಯಲ್ಲಿ ಗಾಯಗೊಂಡ ಬಹವಲ್ಪುರದ ಮರ್ಕಜ್ ಸುಭಾನ್ ಅಲ್ಲಾಹ್ಯನ ಉಸ್ತುವಾರಿ ವಹಿಸಿದ್ದರು.

ಯುವಕರಿಗೆ ಗ್ರವಾದಕ್ಕೆ ಪ್ರಚೋದನೆ ಮತ್ತು ಜೆಇಎಂಗೆ ನಿಧಿಸಂಗ್ರಹಣೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಉಸ್ತಾದ್ ಜಿ, ಮೊಹಮ್ಮದ್ ಸಲೀಮ್ ಮತ್ತು ಘೋಸಿ ಸಹಾಬ್ ಎಂಬ ಅಡ್ಡ ಹೆಸರುಗಳನ್ನು ಹೊಂದಿದ್ದ ಮತ್ತು ಜೆಇಎಂ ಜೊತೆ ಸಂಬಂಧ ಹೊಂದಿದ್ದ ಮೊಹಮ್ಮದ್ ಯೂಸುಫ್ ಅಜರ್ ನನ್ನು ಕೂಡ ಸದೆಬಡಿಯಲಾಗಿದೆ.

ಮಸೂದ್ ಅಜರ್‌ನ ಸೋದರ ಮಾವ ಐಸಿ -814 ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದರು.ಎಲ್‌ ಇಟಿಯ ಖಾಲಿದ್ ಅಲಿಯಾಸ್ ಅಬು ಆಕಾಶ ಮತ್ತು ಜೆಇಎಂನ ಮೊಹಮ್ಮದ್ ಹಸನ್ ಖಾನ್ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಹೊಡೆದುರುಳಿಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಖಾಲಿದ್ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಮತ್ತು ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ.

ಫೈಸಲಾಬಾದ್‌ನಲ್ಲಿ ನಡೆದ ಈತನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಉಪ ಆಯುಕ್ತರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.ಖಾನ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಪ್ಪಿ ಆಸ್ಕರ್ ಖಾನ್ ಕಾಶ್ಮೀರಿ ಅವರ ಮಗ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News