Operation Sindoor : Live Updates
ನವದೆಹಲಿ : “ಆಪರೇಷನ್ ಸಿಂಧೂರ” ಹೆಸರಿನಲ್ಲಿ ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರ ಆರಂಭಿಸಿದ ಭಾರತ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 9 ಉಗ್ರರ ತಾಣಗಳ ಮಧ್ಯರಾತ್ರಿ ದಾಳಿ ನಡೆಸಿದೆ. ಭಾರತೀಯ ಮಹಿಳೆಯರ ಕುಂಕುಮ ಅಳಿಸಿದ್ದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರದ ಹೆಸರಿನಲ್ಲಿ ಈ ಕಾರ್ಯಚರಣೆ ನಡೆದಿದ್ದು. ಒಟ್ಟು 9 ಉಗ್ರರ ತಾಣಗಳ ಮೇಲೆ ಭಾರತದ ಮೂರು ಸೇನೆಗಳು ಜೊತೆಯಾಗಿ ದಾಳಿ ನಡೆಸಿವೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಯಾಮ್ ನಲ್ಲಿ ನಡೆದ ಭೀಕರ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಿಒಕೆಯ 9: ಉಗ್ರರ ನೆಲೆಗಳನ್ನು ಕ್ಷಿಪಣಿ ದಾಳಿ ಮೂಲಕ ನೆಲಸಮ ಮಾಡಲಾಗಿದೆ. ಘಟನೆಯಲ್ಲಿ 70ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದು ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಗಿರುವ ವಿಡಿಯೋಗಳು ಹರಿದಾಡುತ್ತಿವೆ. ಭಾರತವು 6 ಸ್ಥಳಗಳಲ್ಲಿ 24 ದಾಳಿಗಳನ್ನು ನಡೆಸುವ ಮೂಲಕ ಭಯೋತ್ಪಾದನೆ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶವನ್ನು ವಿಶ್ವಕ್ಕೆ ರವಾನಿಸಿದೆ.
ಬುಧವಾರ ಮಧ್ಯರಾತ್ರಿ 1.44 ರಿಂದ 2.07 ರ ವರೆಗೆ ಅಂದರೆ ಕೇವಲ 23 ನಿಮಿಷಗಳಲ್ಲಿ ವಾಯು ದಾಳಿ ನಡೆಸಲಾಗಿದೆ. ಈ ಹಿಂದೆ ಉರಿ ದಾಳಿಗೆ 11 ದಿನದಲ್ಲಿ ಪುಲ್ವಾಮಾ ದಾಳಿಗೆ 12 ದಿನಗಳಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದ ಭಾರತ ಪಹಲ್ಲಾಮ್ ದಾಳಿಗೆ ಸರಿಯಾಗಿ 15 ದಿನಗಳಲ್ಲಿ ಪ್ರತೀಕಾರ ತೀರಿಸಿಕೊಂಡಿದೆ.ಇನ್ನೊಂದೆಡೆ ಭಾರತದಿಂದ ದಾಳಿ ಆಗಿರುವುದನ್ನು ಪಾಕಿಸ್ತಾನ ಕೂಡ ಖಚಿತಪಡಿಸಿದೆ. ಪಂಜಾಬ್ ಪ್ರಾಂತ್ಯದ ಬಹವಾಲ್ಟುರ್, ಮುರಿಡೈ, ಪಾಕ್ ಆಕ್ರಮಿಯ ಕಾಶ್ಮೀರದ ಮುಜಫರಾಬಾದ್, ಕೋಟಿ, ಬಾಗ್‌ನಲ್ಲಿ ದಾಳಿ ಆಗಿದೆ ಎಂದು ತಿಳಿಸಿದೆ.
ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದಿಂದ ದಾಳಿ ನಡೆಸಲಾಗಿದೆ. ದಾಳಿಗಳಲ್ಲಿ 70 ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ ಎಂಬುದಾಗಿ ಕೆಲ ವರದಿಗಳು ಹೇಳಿವೆ. ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದ್ದ ಒಂಬತ್ತು ಸ್ಥಳಗಳ ಮೇಲೆ ಸೇನೆ ರ್ಎಸ್ಟೈಕ್ ನಡೆಸಿದೆ. ಇದು ಉಗ್ರರ ನೆಲೆಗಳನ್ನು ಕೇಂದ್ರೀಕೃತವಾಗಿಸಿಕೊಂಡು ನಡೆದ ದಾಳಿಯಾಗಿದ್ದು, ಪಾಕಿಸ್ತಾನದ ಯಾವುದೇ ಮಿಲಿಟರಿ ಸೌಕರ್ಯದ ಮೇಲೆ ದಾಳಿ ನಡೆಸಿಲ್ಲ. ಇದು ಪರಿಸ್ಥಿತಿ ಉದ್ವಿಗ್ನಗೊಳಿಸುವ ಕಾರ್ಯಾಚರಣೆಯಲ್ಲ ಎಂದು. ಭಾರತ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಗಿರುವ ವಿಡಿಯೋಗಳು ಹರಿದಾಡುತ್ತಿವೆ.ದಾಳಿ ನಡೆಸಲಾದ 9 ಸ್ಥಳಗಳಲ್ಲಿ ಬಹಾವಲ್ಲುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡೈಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ಮೂಲಗಳು ತಿಳಿಸಿವೆ. ಭಾರತದ ದಾಳಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್, ಭಾರತದ ದಾಳಿಗೆ ಪ್ರತ್ಯುತ್ತರ ನೀಡುವ ನೈತಿಕ ಪಾಕಿಸ್ತಾನಕ್ಕಿದೆ.
ಶತ್ರು ರಾಷ್ಟ್ರದ ದಾಳಿಯನ್ನು ನಾನು ಖಂಡಿಸುತ್ತೇನೆ. ಭಾರತದ ಈ ದಾಳಿ ಯುದ್ಧಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ. ಈ ದಾಳಿಯಿಂದ ಪಾಕಿಸ್ತಾನದ ಬಹವಾಲ್ಟುರದಲ್ಲಿ ಕತ್ತಲೆ ಆವರಿಸಿತು. ಆಸ್ಪತ್ರೆಗಳಲ್ಲಿ ಜನರ ಸಂದಣಿಯ ದೃಶ್ಯಗಳು ಕಂಡುಬಂದವು, ಲಾಹೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಈ ದಾಳಿಯಿಂದ ಪಾಕಿಸ್ತಾನದಲ್ಲಿ ಭೀತಿಯ ವಾತಾವರಣವು ನಿರ್ಮಾಣವಾಯಿತು.
ಇನ್ನೂ ಅಲ್ಲಿನ ಮಸೀದಿಗಳಲ್ಲಿ ಎಲ್ಲರೂ ಅಲರ್ಟ್ ಆಗಿರುವಂತೆ ಜೋರಾಗಿ ಸ್ಪೀಕರ್‌ಗಳ ಮೂಲಕ ಸಂದೇಶ ನೀಡುತ್ತಿದೆ.ಭಾರತದ ಕ್ಷಿಪಣಿ ದಾಳಿಯು ಪಿಒಕೆಯ ಮೂರು ಸ್ಥಳಗಳ ಮೇಲೆ ನಡೆದಿದೆ. ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಪಾಕಿಸ್ತಾನದ ಮಿಲಿಟರಿ ಸಾರ್ವಜನಿಕ ಸಂಪರ್ಕ ವಿಭಾಗದ ಮಹಾನಿರ್ದೇಶಕ ಅಹ್ಮದ್ ಷರೀಫ್ ಚೌಧರಿ ಪ್ರಕಾರ, ಭಾರತ ಸೇನೆಯು ಪಾಕ್ ಆಕ್ರಮಿತ ಪ್ರದೇಶದ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿದೆ.
ಯಾವುದೇ ನಾಗರಿಕರು, ಆರ್ಥಿಕ ಸ್ಥಳ ಅಥವಾ ಪಾಕ್ ಸೇನೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿಲ್ಲ. ಇದು ಕೇವಲ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ದಾಳಿಯ ಕುರಿತಂತೆ ಸ್ಪಷ್ಟನೆ ನೀಡಿದೆ.ಭಾರತೀಯ ಸಶಸ್ತ್ರ ಪಡೆಗಳು ಅಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿವೆ ಎಂದು ಭಾರತದ ರಕ್ಷಣಾ ಸಚಿವಾಲಯ ದೃಢಪಡಿಸಿದೆ.
ಸ್ವಲ್ಪ ಸಮಯದ ಹಿಂದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಿಒಣಿಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಅಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದವು, ಅಲ್ಲಿಂದ ಭಾರತದ ಮೇಲೆ ದಾಳಿ ನಡೆಸಲು ಯೋಜಿಸಲಾಗಿತ್ತು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಭಾರತದ ದಾಳಿಯ ಕೆಲ ಹೊತ್ತಿನ ಬಳಿಕ, ಗಡಿಯುದ್ದಕ್ಕೂ ತೀವ್ರವಾದ ಕೆಲ್ ದಾಳಿ ಪೂಂಚ್ ಕೃಷ್ಣ ಘಾಟಿ, ಶಹಪುರ್ ಮತ್ತು ಮಂಕೋಟೆ, ಜಮ್ಮು ಪ್ರದೇಶದ ರಾಜೇರಿ ಜಿಲ್ಲೆಯ ಲಾಮ್, ಮಂಜಕೋಟೆ ಮತ್ತು ಉತ್ತರ ಕಾಶ್ಮೀರದ ಕುಪ್ಪಾರಾ ಜಿಲ್ಲೆಯ ಕರ್ನಾ ಪ್ರದೇಶದಿಂದ ವರದಿಯಾಗಿದೆ. ಮಂಕೋಟೆಯಿಂದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ.
ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಲು ಗಡಿಯನ್ನು ಕಾಯುತ್ತಿರುವ ಭಾರತೀಯ ಭದ್ರತಾ ಪಡೆಗಳು ಸಹ ಪ್ರತಿದಾಳಿ ನಡೆಸಿದವು ಮತ್ತು ಕೊನೆಯ ವರದಿಗಳು ಬಂದಾಗ ಎರಡೂ ಕಡೆಯ ನಡುವೆ ಗಡಿಯಾಚೆಗಿನ ಶೆಲ್ ದಾಳಿ ನಡೆಯುತ್ತಿತ್ತು. ಪಾಕಿಸ್ತಾನದ ಶೆಲ್ ದಾಳಿಯಿಂದಾಗಿ ಜನರು ಬಂಕರ್‌ಳಲ್ಲಿ ಆಶ್ರಯ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 22 ರಂದು ನಡೆದ ಪೆಹಲಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿತ್ತು. ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಸಿಂಧೂ ಜಲ ಒಪ್ಪಂದವನ್ನು ಭಾರತವು ಮೊಟಕುಗೊಳಿಸಿತ್ತು. ಪಾಕಿಸ್ತಾನಿ ನಾಗರಿಕರಿಗೆ ಎಲ್ಲಾ ವರ್ಗದ ವೀಸಾಗಳನ್ನು ಭಾರತವು ರದ್ದುಗೊಳಿಸಿತ್ತು.
.