Thursday, May 8, 2025
Homeರಾಷ್ಟ್ರೀಯ | Nationalನಿಖರ ದಾಳಿ ನಡೆಸಿ ಬಹಾವಲ್ಪುರದ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರ ಉಡಾಯಿಸಿದ ಭಾರತ

ನಿಖರ ದಾಳಿ ನಡೆಸಿ ಬಹಾವಲ್ಪುರದ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರ ಉಡಾಯಿಸಿದ ಭಾರತ

Operation Sindoor: Video shows Jaish den in Bahawalpur turned to rubble

ನವದೆಹಲಿ,ಮೇ.7- ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿದೆ. ಭಯೋತ್ಪಾದಕರನ್ನು ಪೋಷಿಸಿ ಕಾಶ್ಮೀರಕ್ಕೆ ಬಂದು ಹತ್ಯಾಕಾಂಡ ಸೃಷ್ಟಿಸಿದ್ದು ಇದೇ ಸ್ಥಳ. ಈ ಬಹವಾಲ್ಕು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ.

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿ ಇಲ್ಲೇ ಇದೆ. ಇದಲ್ಲದೆ, ಬಹವಾಲ್ಟುರದ ಮಸೀದಿಯನ್ನು ಜೈಶ್ ಭಯೋತ್ಪಾದಕ ತರಬೇತಿ ಕೇಂದ್ರವಾಗಿ ಪರಿವರ್ತಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಭಾರತ ದಾಳಿ ನಡೆಸಿರುವ ಮುರಿಡೈಯಲ್ಲಿ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿಯಿದ್ದರೆ,ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಲ್ವಾಪುರದಲ್ಲಿ ಮಸೂದ್ ಅಜರ್ ನಡೆಸುತ್ತಿರುವ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಇದೆ. ಈ ಎರಡು ನೆಲೆಗಳನ್ನು ಭಾರತ ಉಡೀಸ್ ಮಾಡಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಾವ್ಯಾವ ಸ್ಥಳಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿಲ್ಲ. ಆದರೆ, ಪಾಕಿಸ್ತಾನ ಎಲ್ಲೆಲ್ಲಿ ದಾಳಿ ನಡೆದಿದೆ ಎಂದು ಹೇಳಿದೆ.

ಅನೇಕ ಭಯೋತ್ಪಾದಕರು ಇಲ್ಲಿ ತರಬೇತಿ ಪಡೆಯುತ್ತಿದ್ದರು. ಭಾರತ ಪಹಲ್ಯಾಮ್ಗೆ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದಾಗ, ಭಯೋತ್ಪಾದಕರನ್ನು ಇಲ್ಲಿಂದ ಕೆಲವು ದಿನಗಳವರೆಗೆ ತೆಗೆದುಹಾಕಲಾಯಿತು ಎಂದು ಹೇಳಲಾಗುತ್ತಿದೆ. ಆದರೆ ನಂತರ ಈ ಭಯೋತ್ಪಾದಕರು ಅಲ್ಲಿಗೆ ಬಂದು ವಾಸಿಸಲು ಪ್ರಾರಂಭಿಸಿದರು. ಭಾರತ ಈ ಸ್ಥಳಕ್ಕೆ ಬರುತ್ತದೆ ಎಂದು ಅವರು ಊಹಿಸಿರಲಿಕ್ಕಿಲ್ಲ.

ಜೈಶ್-ಎ-ಮೊಹಮ್ಮದ್ 2000 ರಲ್ಲಿ ಬಹಾಗಲ್ಪುರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಸ್ಥಾಪಿಸಿತು. ಈ ಭಯೋತ್ಪಾದಕ ಶಿಬಿರವನ್ನು ಅಲ್-ರೆಹಮತ್ ಟ್ರಸ್ಟ್ ಎಂಬ ಮುಂಭಾಗದ ಸಂಘಟನೆಯ ಮೂಲಕ ನಡೆಸಲಾಗುತ್ತಿತ್ತು. ಅದು ದಾನ ಕಾರ್ಯಗಳನ್ನು ಮಾಡುತ್ತಿತ್ತು ಎಂದು ಹೇಳಲಾಗುತ್ತದೆ, ಆದರೆ ಅದರ ಮುಖ್ಯ ಉದ್ದೇಶ ಭಯೋತ್ಪಾದಕರಿಗೆ ತರಬೇತಿ ನೀಡುವುದಾಗಿತ್ತು.

ಜೈಶ್ ಅನ್ನು ಮಸೂದ್ ಅಜರ್ ಸೃಷ್ಟಿಸಿದನು ಮತ್ತು ಭಯೋತ್ಪಾದಕರನ್ನು ಇಲ್ಲಿಂದ ಕಾಶ್ಮೀರಕ್ಕೆ ನಿರಂತರವಾಗಿ ಕಳುಹಿಸಲಾಗುತ್ತಿತ್ತು. 2019 ರಲ್ಲಿ ಪೇಶಾವರದಲ್ಲಿ ನಡೆದ ಸ್ಫೋಟದ ನಂತರ ಮಸೂದ್ ಅಜರ್ ಕಣ್ಮರೆಯಾದನು. ಆದರೆ 2024 ರಲ್ಲಿ ಮತ್ತೆ ಕಾಣಿಸಿಕೊಂಡನು. ಅಂದಿನಿಂದ ಅವನು ಏನೋ ತಪ್ಪು ಮಾಡುವ ಉದ್ದೇಶದಿಂದ ಬಂದಿದ್ದಾನೆ ಎಂದು ಅಂದಾಜಿಸಲಾಗಿತ್ತು.

ಬಹವಾಲ್ವುರ ಶಿಬಿರವನ್ನು ಜೈಶ್ ಭಯೋತ್ಪಾದಕರ ನೇಮಕಾತಿ ಮತ್ತು ನಿಧಿಸಂಗ್ರಹಕ್ಕಾಗಿ ಬಳಸಿಕೊಂಡಿತ್ತು. ಇಲ್ಲಿ ನೇಮಕಗೊಂಡ ಭಯೋತ್ಪಾದಕರನ್ನು ನಂತರ ಟೈಬರ್ ಪಬ್ದುನ್ಯಾ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ವಿವಿಧ ಶಿಬಿರಗಳಿಗೆ ತರಬೇತಿಗಾಗಿ ಕಳುಹಿಸಲಾಯಿತು. 2001 ರ ಭಾರತೀಯ ಸಂಸತ್ತಿನ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಹಲವಾರು ಪ್ರಮುಖ ದಾಳಿಗಳನ್ನು ಈ ಶಿಬಿರದಿಂದ ಯೋಜಿಸಲಾಗಿತ್ತು.

ಡೇಮಿಯನ್ ಸೈಮನ್ (ದಿ ಇಂಟೆಲ್ ಲ್ಯಾಬ್) ವರದಿಯ ಪ್ರಕಾರ, ಪಾಕಿಸ್ತಾನವನ್ನು ಎಫ್‌ಎಟಿಎಫ್‌ನ ಬೂದು ಪಟ್ಟಿಯಿಂದ ತೆಗೆದುಹಾಕಿದ ನಂತರ ಈ ಶಿಬಿರವು ವಿಸ್ತರಿಸುತ್ತಿದೆ.
ಪ್ರಧಾನಿ ಮೋದಿ ಸಭೆ ಮೇಲೆ ಸಭೆ ನಡೆಸಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜನರು ಬಯಸಿದ ರೀತಿಯಲ್ಲೇ ಪ್ರತೀಕಾರ ಎಂದಿದ್ದರು. ಇದರ ಬೆನ್ನಲ್ಲೆ ಆಪರೇಷನ್ ಸಿಂಧೂರ ಮೂಲಕ ಭಾರತ ದಾಳಿ ನಡೆಸಿದೆ.

RELATED ARTICLES

Latest News