Thursday, February 6, 2025
Homeರಾಜ್ಯಪಡಿತರ ಚೀಟಿ ಪರಿಷ್ಕರಣೆ ಗೊಂದಲಗಳ ಕುರಿತು ಸರ್ಕಾರಕ್ಕೆ ವಿಪಕ್ಷಗಳ ತರಾಟೆ

ಪಡಿತರ ಚೀಟಿ ಪರಿಷ್ಕರಣೆ ಗೊಂದಲಗಳ ಕುರಿತು ಸರ್ಕಾರಕ್ಕೆ ವಿಪಕ್ಷಗಳ ತರಾಟೆ

Opposition parties slam government over ration card revision confusion

ಬೆಳಗಾವಿ,ಡಿ.9- ಬಿಪಿಎಲ್ ಪಡಿತರಚೀಟಿ ಪರಿಷ್ಕರಣೆ ಕುರಿತಂತೆ ಉಂಟಾಗಿರುವ ಗೊಂದಲಗಳ ಬಗ್ಗೆ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್ನಲ್ಲಿಂದು ಜರುಗಿತು. ಸದಸ್ಯರಾದ ಸಿ.ಟಿ.ರವಿ, ಜವ ರಾಯಿಗೌಡ, ಟಿ.ಎ.ಶರವಣ, ಹನುಮಂತಪ್ಪ ನಿರಾಣಿ ಮತ್ತಿ ತರರು ಪ್ರಶ್ನೆ ಕೇಳಿದ್ದರು.

ಜೆಡಿಎಸ್ನ ಜವರಾಯಿಗೌಡ ಅವರು, 40 ಲಕ್ಷ ನಕಲಿ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಸಚಿವರೇ ಹೇಳಿದ್ದಾರೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ನ ಡಿ ಸೋಜಾ ಅವರ ತೆರಿಗೆ ಕಟ್ಟದೇ ಇರುವವರು ಪಡಿತರಚೀಟಿ ಪಡೆದುಕೊಂಡರೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ಹಾಗಾದರೆ ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ. ಇವರನ್ನು ರಕ್ಷಣೆ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.

ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರತಿನಿತ್ಯ ಕಾಳ ಸಂತೆಯಲ್ಲಿ ಅಕ್ಕಿಮಾರಾಟವಾಗುತ್ತಿದೆ. ಅಕ್ಕಿ ಯಾರೂ ಕೊಡುತ್ತಾರೆ. ಎಲ್ಲಿಂದ ಹೋಗುತ್ತೆ..? ಇದನ್ನ ನಿಯಂತ್ರಿಸಲು ಸರ್ಕಾರದ ಕ್ರಮ ಏನು ಎಂದು ಪ್ರಶ್ನಿಸಿದರು.

ಜೆಡಿಎಸ್ ಸದಸ್ಯ ಟಿ.ಎ.ಶರವಣ ಮಾತನಾಡಿದ ಬಿಪಿಎಲ್ ಕಾರ್ಡ್ ಗೆ ಅನರ್ಹರಿಗೆ ಕಾರ್ಡ್ ಕೊಟ್ಟ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಆಗಿದೆ. ಅರ್ಹರು ಮತ್ತು ಅನರ್ಹ ಮಾನದಂಡಗಳು ಏನು..? ಒಒಂದೊಂದು ಸರಿ ಒಂದೊಂದು ಉತ್ತರ ಕೊಡುತ್ತಿದ್ದೀರಾ? ಒಂದೂವರೇ ಕೋಟಿ ಬಿಪಿಎಲ್ ಕಾರ್ಡ್ನ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಬೇರೆಡೆ ಮಾರಾಟ ಆಗುತ್ತದೆ ಇದಕ್ಕೆ ಸರ್ಕಾರದ ಕ್ರಮ ಏನು ಎಂದು ಪ್ರಶ್ನೆ ಮಾಡಿದರು.

ಸದಸ್ಯರ ಪ್ರಶನೆಗಳಿಗೆ ಉತ್ತರಿಸಿದ ಸಚಿವ ಕೆ.ಹೆಚ್.ಮುನಿಯಪ್ಪ, ಕುಟುಂಬದ ವಾರ್ಷಿಕ ಆದಾಯ 1,20,000 ಇರುವವರಿಗೆ ತೆರಿಗೆ ಪಾವತಿದಾರರಿಗೆ ಮತ್ತು ಸರ್ಕಾರಿ ನೌಕರರಿಗೆ ಹೊರೆತುಪಡಿಸಿ ಎಲ್ಲರಿಗೂ ಬಿಪಿ ಎಲ್ ನೀಡಿದ್ದೇವೆ. ಮೂರು ತಿಂಗಳು ಸಮಯ ಕೊಟ್ಟರೆ ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ. 13 ಲಕ್ಷ ಕಾರ್ಡ್ಗಳನ್ನು ಪರಿಷ್ಕರಣೆ ಮಾಡಿದಾಗ 3,35,000 ಅನರ್ಹರು ಕಂಡುಬಂದಿದ್ದಾರೆ ಎಂದರು.

ಕೆಲವು ಬಿಪಿಎಲ್ ಕಾರ್ಡ್ದಾರರಿಗೆ ತೊಂದರೆ ಆಗಿದೆ. ಮೂರು ತಿಂಗಳು ಸಹಕಾರ ಕೊಟ್ಟರೆ ಸರಿಪಡಿಸುತ್ತೇವೆ. ಅನರ್ಹರಿಗೆ ಪೆನಾಲಿಟಿ ಕೂಡ ಹಾಕಿದ್ದೀವಿ. ಹಣ ವಸೂಲಿ ಮಾಡುವವರ ವಿರುದ್ಧ ಲಿಖಿತ ಅರ್ಜಿ ಕೊಟ್ಟರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಎಂದರು.

ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು, ನಿರ್ಧಾಕ್ಷಿಣ್ಯವಾಗಿ ಕ್ರಮ ವಹಿಸಿ. ಇದಕ್ಕೆ ನಮ ಸಂಪೂರ್ಣ ಬೆಂಬಲ ನಿಮಗೆ ಇದೆ. ನೀವು ಯಾಕೆ ಎದುರುತ್ತಿದ್ದೀರಾ? ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

RELATED ARTICLES

Latest News