ಬೆಂಗಳೂರು,ಆ.20- ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಕ್ಕೆ ಕೆಲವು ತಿದ್ದುಪಡಿ ಮಾಡುವ ಸಂಬಂಧ ಸದನ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ವಿಧಾನಪರಿಷತ್‌ನಲ್ಲಿ ಸಭಾತ್ಯಾಗ ಮಾಡಿದರು. ಸಭಾತ್ಯಾಗದ ನಡುವೆಯೇ ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ವಿಧೇಯಕವನ್ನು ಸದನದಲ್ಲಿ ಅಂಗೀಕರಿಸಲಾಯಿತು.
ಇದಕ್ಕೂ ಮುನ್ನ ವಿಧೇಯಕದ ಬಗ್ಗೆ ಮಾತನಾಡಿದ ಸಣ್ಣ ನೀರಾವರಿ ಸಚಿವ, ಈ ವಿಧೇಯಕ ಜಾರಿಗೆ ಬರುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದನ್ನು ನಾವು ಸಾವರ್ಜನಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿ ಮಾಡಿದ್ದೇವೆ. ಇದರಲ್ಲಿ ಖಾಸಗಿಯವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸದಸ್ಯರ ಆತಂಕ ಬೆಂಗಳೂರು ಭಾಗದ್ದು ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ 206 ಬಿಡಿಎಗೆ ಸೇರುತ್ತವೆ. ಈ ಕೆರೆಗಳ ಬಗ್ಗೆ ಆತಂಕ ಇವೆ ಎನ್ನುವುದು ಅವರ ಮಾತಾಗಿದೆ. 35 ಸಾವಿರ ಕೆರೆಗಳ ಸರ್ವೇ ಮಾಡಿದ್ದೇವೆ ಎಂದು ಹೇಳಿದರು.
ಈ ಪೈಕಿ 13644 ಕೆರೆಗಳ ಒತ್ತುವರಿಯಾಗಿವೆ. ಆ ಪೈಕಿ 7986 ಕೆರೆಗಳು ಒತ್ತುವರಿಯಿಂದ ತೆರವುಗೊಳಿಸಲಾಗಿದೆ. 5600 ಕೆರೆ ಒತ್ತುವರಿಯಿಂದ ತೆರವುಗೊಳಿಸಬೇಕು, ಕೆರೆ ಸಂರಕ್ಷಣೆ, ಅಭಿವೃದ್ಧಿಗೆ ಈಗಾಗಲೇ ಬಜೆಟ್ ನಲ್ಲೇ ಘೋಷಣೆ ಆಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಗ್ರಾಮದಲ್ಲಿ ಕೆರೆಗಳ ಸಂರಕ್ಷಣೆಗೆ ಸಮಿತಿಯನ್ನು ರಚಿಸಿದ್ದೇವೆ. ಇದಕ್ಕೆ ಬೇಕಾದ ಸದಸ್ಯರನ್ನು ಅವರೇ ನೇಮಕ ಮಾಡಿಕೊಳ್ಳುತ್ತಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಸರ್ಕಾರ ಕೆರೆ ಸಂರಕ್ಷಣೆ ಮಾಡಲು ಬದ್ದವಿದೆ, ಯಾರಿಗೂ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಇದು ಸಾಂವಿಧಾನಿಕ ನ್ಯಾಯಾಲಯ ಅಲ್ಲ, ಇದನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬ ನಿಯಮವಿಲ್ಲ. ಇದು ಸಲಹಾ ಸೂಚನೆ ಕೊಡುತ್ತದೆ ಎಂದರು. ಕೆರೆಗಳ ಸಂರಕ್ಷಣೆ ಹಿಂದೆ ಇಲ್ಲಿ ಯಾವುದೇ ಸೂಟ್ ಕೇಸ್ ಎಂದು ಇಲ್ಲ, ನಿಮಗೆ ಅನುಭವ ಆಗಿರಬೇಕು ನಮಗೆ ಆಗಿಲ್ಲ, ಅಪಾರ್ಟ್ ಮೆಂಟ್‌ಗಳ ವಿಚಾರವೂ ಇಲ್ಲ, ಸಿಟಿ ರವಿ ಹಿರಿಯರು ಇದ್ದಾರೆ. ಈ ಬಗ್ಗೆ ಸೂಟ್ ಕೇಸ್ ಎಂದೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ವೇಳೆ ಸಿ.ಟಿ. ರವಿ ಆಕ್ಷೇಪಿಸಿ, ಭೂ ಮಾಫಿಯಾ ಒತ್ತಡಕ್ಕೆ ಸರ್ಕಾರ ಮಣಿದಂತೆ ಕಾಣುತ್ತಿದೆ, ನಮ ಸರ್ಕಾರ ಇದ್ದಾಗಲೂ ಒತ್ತಡ ಇತ್ತು, ಈಗಿನ ಸರ್ಕಾರದ ಮೇಲೆ ಅನುಮಾನ ಬರುತ್ತಿದೆ, ಸೂಟ್ ಕೇಸ್‌ಗಳು ಎಲ್ಲಾದರೂ ಕೆಲಸ ಮಾಡಿದ್ದಾವಾ ಎಂಬ ಅನುಮಾನ ಬರುತ್ತಿದೆ, ಮತ್ತೊಮೆ ಬಿಲ್ ಪರಾಮರ್ಶೆ ಮಾಡಿ ಜಂಟಿ ಸದನ ಸಮಿತಿಗೆ ಬಿಲ್ ನೀಡಿ, ಮೆಜಾರಿಟಿ ಮೇಲೆ ಸರ್ಕಾರ ಮುಂದುವರಿಯುವುದು ಬೇಡ, ರಿಯಾಲಿಟಿ ಮೇಲೆ ನಿರ್ಧಾರ ಮಾಡಲಿ ಎಂದು ಒತ್ತಾಯ ಮಾಡಿದರು.
ಕೌರವರು ವಿಧುರನ ಮಾತು ಕೇಳಲಿಲ್ಲ, ವಿಧುರನ ಮಾತಿನ ಪ್ರಕಾರ ಪಾಂಡವರಿಗೆ ಏನು ಸಲ್ಲಬೇಕೋ ಅದನ್ನು ನೀಡಲಿಲ್ಲ. ಕೌರವರು ನಾಶವಾಗಿ ಹೋದರು ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.ಆದರೆ ಕೆರೆಗಳ ಬಫರ್ ಝೋನ್ ಬದಲಾಯಿಸಿದರೆ ಬೆಂಗಳೂರು, ಬೆಂಗಳೂರಿನ ನಾಗರೀಕರು ನಾಶವಾಗುತ್ತಾರೆ, ಬಫರ್ ಝೋನ್ ಆಗಿದೆ. ಇರುವ ಕೆರೆಗಳನ್ನಾದರೂ ನಾವು ಸಂರಕ್ಷಣೆ ಮಾಡಬೇಕಲ್ಲ, ಈ ಬಿಲ್‌ನ ಸದುದ್ದೇಶ ಏನು ಎಂದು ಪ್ರಶ್ನೆ ಮಾಡಿದರು.
ಆಗ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಬೆಂಗಳೂರು ಸಮಸ್ಯೆ ಬೇರೆ ಗ್ರಾಮೀಣ ಭಾಗದ ಸಮಸ್ಯೆ ಬೇರೆ, ಬೆಂಗಳೂರು ಕಾಂಕ್ರೀಟ್ ಕಾಡಾಗಿದೆ, ನಾವೂ ಈ ಬಿಲ್ ಸಾರಾಸಗಟಾಗಿ ವಿರೋಧ ಮಾಡುತ್ತಿಲ್ಲ, ಬೆಂಗಳೂರು ಬೆಳೆಯುತ್ತಿರುವ ನಗರ, ಇನ್ನೊಂದು ಸಲ ಪರಿಷ್ಕರಣೆ ಮಾಡಿ, ಇದೇನು ಬಾರೀ ಪ್ರಾಮುಖ್ಯತೆ ಇರುವ ವಿಧೇಯಕವಲ್ಲ. ಸದನ ಸಮಿತಿಗೆ ಇದನ್ನು ಒಪ್ಪಿಸಿ ಎಂದು ಒತ್ತಾಯ ಮಾಡಿದರು.
- ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ವಿಧಾನಪರಿಷತ್‌ನಲ್ಲಿ ಪಕ್ಷಬೇಧ ಮರೆತು ಆಗ್ರಹ
- ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡು 73 ಜನ ಸಾವು
- ಅಮರಾವತಿ ನಿರ್ಮಾಣ ಹೊಣೆ ಸಿಂಗಾಪುರದ ಹೆಗಲಿಗೆ
- ಮೃತ ಕೆಎಸ್ಆರ್ಟಿಸಿ ನೌಕರರ ಕುಟುಂಬಕ್ಕೆ ಅಪಘಾತೇತರ ಪರಿಹಾರ ಹೆಚ್ಚಳ
- ಬಸ್ಗಳ ಮೇಲೆ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಘೋಷವಾಕ್ಯ ಕಡ್ಡಾಯ