Monday, March 10, 2025
Homeರಾಷ್ಟ್ರೀಯ | Nationalರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ

ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ

Opposition walks out of Rajya Sabha, Nadda says govt ready to discuss all issues

ನವದೆಹಲಿ, ಮಾ.10- ನಕಲಿ ಮತದಾರರ ಗುರುತಿನ ಚೀಟಿಯಿಂದ ಹಿಡಿದು ಅಮೆರಿಕದ ಧನಸಹಾಯದವರೆಗಿನ ವಿಷಯಗಳ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸದಸ್ಯರು ರಾಜ್ಯ ಸಭೆಯಲ್ಲಿ ಸಭಾತ್ಯಾಗ ನಡೆಸಿದರು.

ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಯಾವುದೇ ವಿಷಯದ ನಿಯಮಗಳ ಅಡಿಯಲ್ಲಿ ಚರ್ಚೆಗೆ ಸಿದ್ದ ಎಂದು ಎಂದು ಸ್ಪಷ್ಟಪಡಿಸಿದರೂ ತೃಪ್ತರಾಗದ ವಿಪಕ್ಷ ಸದಸ್ಯರು ಸದನದಿಂದ ಹೊರ ನಡೆದರು.
ಸದನದ ಉಪ ಸಭಾಪತಿ ಹರಿವಂಶ್ ಅವರು ನಿಯಮ 267 ರ ಅಡಿಯಲ್ಲಿ 12 ನೋಟೀಸ್ ಅನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ ನಂತರ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿ ಇದು ತುರ್ತು ವಿಷಯಗಳಾಗಿದ್ದು ಚರ್ಚೆಗೆ ಇಡೀ ದಿನದ ಮೀಸಲಿಡಲು ಒತ್ತಾಯಿಸಿದರು.

ನಂತರ ಪ್ರತಿಪಕ್ಷಗಳ ಸಂಸದರು ಕೆಲಕಾಲ ಧರಣಿ ನಡೆಸಿ ಧರಣಿ ನಡೆಸಿ ಸಭಾತ್ಯಾಗ ನಡೆಸಿದರು. ಸಭಾನಾಯಕ ಮತ್ತು ಕೇಂದ್ರ ಸಚಿವ ನಡ್ಡಾ ಅವರು ಸಭಾತ್ಯಾಗವನ್ನು ಬೇಜವಾಬ್ದಾರಿ ವರ್ತನೆ ಎಂದು ಬಣ್ಣಿಸಿದರು ಮತ್ತು ಕಾಂಗ್ರೆಸ್ ಮುಖ್ಯಸ್ಥಖರ್ಗೆ ಸೇರಿದಂತೆ ವಿರೋಧ ಪಕ್ಷದ ಸಂಸದರು

ಸದನದ ನಿಯಮಗಳ ಬಗ್ಗೆ ಪುನಶ್ವೇತನ ಕೋರ್ಸ್ಗೆ ಹೋಗಬೇಕೆಂದು ಸಲಹೆ ಟೀಕಿಸಿದರು.
ಅಧ್ಯಕ್ಷರ ವಿಸ್ತ್ರತವಾದ ತೀರ್ಪಿನ ಹೊರತಾಗಿಯೂ ವಿರೋಧ ಪಕ್ಷದ ಸಂಸದರು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡುವ ಅಭ್ಯಾಸವನ್ನು ಸಂಸತ್ತಿನ ನಿಯಮದ ಕೆಟ್ಟ ವಿನ್ಯಾಸ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಸೂರಿನಡಿಯಲ್ಲಿ ಏನು ಬೇಕಾದರೂ ಚರ್ಚಿಸಲು ಸಿದ್ಧವಾಗಿದೆ. ಆದರೆ ಸದನದಲ್ಲಿ ಚರ್ಚೆಗೆ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ ಎಂದು ನಡ್ಡಾ ಹೇಳಿದರು, ಮುಂದಿನ 10 ದಿನಗಳಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಸಂಸದರು ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶವನ್ನು ಪಡೆಯುತ್ತಾರೆ.

ನಾವು ಆ ಚರ್ಚೆಗೆ ಸಿದ್ಧರಿದ್ದೇವೆ. ಅಲ್ಪಾವಧಿಯ ಚರ್ಚೆಗಳಿಗೆ ಅವಕಾಶವಿದೆ ಮತ್ತು ದೀರ್ಘಾವಧಿಯ ಚರ್ಚೆಗಳಿಗೆ ಅವಕಾಶವಿದೆ. ಅವರು (ವಿರೋಧ) ನಿಯಮಗಳನ್ನು ಓದುವುದಿಲ್ಲ, ಎಂದು ನಡ್ಡಾ ಅವರು ವಿರೋಧ ಪಕ್ಷದ ಸಂಸದರನ್ನು ಮೊದಲು ನಿಯಮಗಳನ್ನು ಓದಿ ಚರ್ಚೆಯನ್ನು ಕಲಿಯುವಂತೆ ಕೇಳಿದರು.

ಒಂದು ರೀತಿಯಲ್ಲಿ ಸಂಸತ್ತು ಮತ್ತು ಪ್ರಜಾಪ್ರಭುತ್ವವನ್ನು ಕೆಡಿಸುವ ಪ್ರಯತ್ನ ಇದಾಗಿದೆ ಎಂದು ನಡ್ಡಾ ಆರೋಪಿಸಿದ್ದಾರೆ. ರಾಜ್ಯಗಳಾದ್ಯಂತ ಬಹು ನಕಲಿ ಮತದಾರರ ಗುರುತಿನ ಚೀಟಿಗಳನ್ನು ನೀಡುವಲ್ಲಿ ಚುನಾವಣಾ ಆಯೋಗದ ಅಪಾದಿತ ಲೋಪದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.

ಎಎಪಿಯ ಸಂಜಯ್ ಸಿಂಗ್ ಷೇರುಪೇಟೆ ಸೂಚ್ಯಂಕಗಳ ನಿರಂತರ ಕುಸಿತದಿಂದ ಸಣ್ಣ ಹೂಡಿಕೆದಾರರಿಗೆ ಉಂಟಾದ ಆರ್ಥಿಕ ನಷ್ಟದ ಬಗ್ಗೆ ಚರ್ಚೆಗೆ ಒತ್ತಾಯಿಸಿದರೆ, ಸಮಾಜವಾದಿ ಪಕ್ಷದ ರಾಮ್‌ಜಿ ಲಾಲ್ ಸುಮನ್, ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ನಿಧಿಯ ಕುರಿತು ನೀಡಿದ ಹೇಳಿಕೆಯ ಬಗ್ಗೆ ಚರ್ಚೆಗೆ ಕರೆ ನೀಡಿದರು.

RELATED ARTICLES

Latest News