Friday, January 31, 2025
Homeರಾಜ್ಯಮೈಕ್ರೋಫೈನಾನ್ಸ್ ಕಿರುಕುಳವನ್ನು ನಿರ್ಬಂಧಿಸುವ ಸುಗ್ರೀವಾಜ್ಞೆಗೆ ಸಂಜೆಯೊಳಗೆ ಸ್ಪಷ್ಟ ರೂಪ : ಪರಮೇಶ್ವರ್

ಮೈಕ್ರೋಫೈನಾನ್ಸ್ ಕಿರುಕುಳವನ್ನು ನಿರ್ಬಂಧಿಸುವ ಸುಗ್ರೀವಾಜ್ಞೆಗೆ ಸಂಜೆಯೊಳಗೆ ಸ್ಪಷ್ಟ ರೂಪ : ಪರಮೇಶ್ವರ್

Ordinance to curb microfinance harassment to get a clear shape by evening: Parameshwar

ಬೆಂಗಳೂರು,ಜ.31- ಮೈಕ್ರೋ ಫೈನಾನ್ಸ್ ಕಿರುಕುಳವನ್ನು ನಿರ್ಬಂಧಿಸುವ ಸುಗ್ರೀವಾಜ್ಞೆಗೆ ಇಂದು ಸಂಜೆಯೊಳಗಾಗಿ ಸ್ಪಷ್ಟ ರೂಪ ಸಿಗಲಿದ್ದು, 2-3 ದಿನಗಳಲ್ಲಿ ಅಂತಿಮ ಆದೇಶ ಹೊರಡುವ ಸಾಧ್ಯತೆಯಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಗ್ರೀವಾಜ್ಞೆಯ ಕರಡು ಮಸೂದೆ ತಯಾರಿಸುವಾಗ ಆರ್ಬಿಐನ ನಿಯಮಾವಳಿಗಳನ್ನು ಪರಿಶೀಲಿಸಬೇಕಿತ್ತು. ಈಗಾಗಲೇ ಸಹಕಾರ ಇಲಾಖೆ ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಕಾನೂನುಗಳಿವೆ. ಎಲ್ಲವನ್ನೂ ಸುಗ್ರೀವಾಜ್ಞೆಯೊಂದಿಗೆ ಸಮೀಕರಿಸಲು ಮುಖ್ಯಮಂತ್ರಿಯವರು ಪರಿಶೀಲಿಸುವಂತೆ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ ಎಂದರು.

ಎಲ್ಲಾ ಸಾಧಕ ಬಾಧಕಗಳನ್ನು ಪರಿಶೀಲಿಸಿ ಇಂದು ಸಂಜೆಯೊಳಗಾಗಿ ಸ್ಪಷ್ಟ ರೂಪ ನೀಡಲಾಗುವುದು. ಸರ್ಕಾರಕ್ಕೂ ಹೆಚ್ಚಿನ ಆತಂಕವಿದ್ದು, ಮಸೂದೆ ಶೀಘ್ರವಾಗಿ ಜಾರಿಯಾಗಬೇಕು ಎಂಬ ಒತ್ತಾಸೆಯಿದೆ. ಮೈಕ್ರೋಫೈನಾನ್ಸ್ ಕಂಪನಿಗಳವರು ಜನರಿಗೆ ನೀಡುವ ಕಿರುಕುಳ ದಿಂದಾಗಿ ಕೆಲವರು ಆತಹತ್ಯೆ ಮಾಡಿಕೊಂಡಿದ್ದಾರೆ, ಇನ್ನೂ ಕೆಲವರು ಮನೆ ಬಿಟ್ಟು ಹೋಗಿದ್ದಾರೆ. ಅನಧಿಕೃತವಾದ ಮೈಕ್ರೋ ಫೈನಾನ್ಸ್ ಕಂಪನಿಗಳು ಏನು ಮಾಡಿದರೂ ಕೇಳುವವರಿಲ್ಲ ಎಂಬಂತಹ ವಾತಾವರಣ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ತಮದೇ ಕ್ಷೇತ್ರದಲ್ಲಿ 2.5 ಲಕ್ಷ ರೂ.ಗಳನ್ನು ಒಬ್ಬರು ಸಾಲ ಪಡೆದಿದ್ದಾರೆ. 4.5 ಲಕ್ಷ ರೂ. ವಾಪಸ್ ಕಟ್ಟಿದ್ದಾರೆ. ಆದರೆ ಇನ್ನೂ 80 ಸಾವಿರ ರೂ. ಕಟ್ಟಬೇಕೆಂದು ಒತ್ತಡ ಹೇರಿ ಮನೆಗೆ ಬೀಗ ಹಾಕಲಾಗಿದೆ. ಇದರಿಂದಾಗಿ ಕುಟುಂಬದ ಸದಸ್ಯರು ಮನೆಬಿಟ್ಟು ಹೋಗಿದ್ದಾರೆ. ಇದು ತಮ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಮೈಕ್ರೋ ಫೈನಾನ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಕುಟುಂಬದವರಿಗೆ ಮನೆ ವಾಪಸ್ ಕೊಡಿಸಲಾಗಿದೆ ಎಂದರು.

ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಪಡೆದಿರುವ ಸಾಲವನ್ನು ಏಕಕಂತು ತಿರುವಳಿ ಮೂಲಕ ಇತ್ಯರ್ಥಪಡಿಸುವ ಬಗ್ಗೆಯೂ ಪರಿಶೀಲಿಸಲಾಗುವುದು. ಸದ್ಯಕ್ಕೆ ಕಿರುಕುಳವನ್ನು ತಪ್ಪಿಸುವುದು ನಮ ಮುಂದಿರುವ ಆದ್ಯತೆ. ಕಾನೂನನ್ನು ಜಾರಿಗೊಳಿಸುತ್ತಿದ್ದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ಸಾಧ್ಯತೆಯಿದ್ದು, ಅದರ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಮುಡಾ ಹಗರಣದಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ 31 ನಿವೇಶನಗಳನ್ನು ಪಡೆದುಕೊಂಡಿದ್ದು, ಅದರಲ್ಲಿ ಒಂದನ್ನು ಸಚಿವ ಮಹದೇವಪ್ಪ ಅವರ ಪುತ್ರ ನವೀನ್ ಬೋಸ್ ಅವರಿಗೆ ನೀಡಿದ್ದಾರೆ ಎಂಬ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರು ಭಾಗಿಯಾಗಿದ್ದಾರೆ ಎಂಬ ಕಾರಣಕ್ಕಾಗಿಯೇ ಬಿಜೆಪಿಯವರು ಮುಡಾ ಹಗರಣವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಇಲ್ಲವಾದರೆ ಇದು ಹೆಚ್ಚು ಸುದ್ದಿಯೇ ಆಗುತ್ತಿರಲಿಲ್ಲ ಎಂದರು.ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಅವಧಿ ಪೂರ್ಣಗೊಳಿಸುತ್ತಾರೆೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿರುವುದಕ್ಕೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.

ವಿಧಾನಪರಿಷತ್ನಲ್ಲಿ ಖಾಲಿ ಆಗುವ 4 ಸ್ಥಾನಗಳಿಗೆ ಸದಸ್ಯರನ್ನು ನೇಮಿಸಲು ಸಚಿವ ಸಂಪುಟ ಸಭೆ ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ. ಮುಖ್ಯಮಂತ್ರಿಯವರು ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ನಿನ್ನೆ ಸಚಿವ ಸಂಪುಟ ಸಭೆಯ ಬಳಿಕ ರಾಜನಹಳ್ಳಿಯ ವಾಲೀಕಿ ಪೀಠದ ಸ್ವಾಮೀಜಿ ಜಾತ್ರೆಗೆ ಕರೆಯಲು ತಮ ಕಚೇರಿಗೆ ಬಂದಿದ್ದರು. ಆ ವೇಳೆ ಸ್ವಾಮೀಜಿ ತಮ ಕಚೇರಿಯಲ್ಲಿರುವ ಮಾಹಿತಿ ಪಡೆದು ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಅವರೂ ಆಗಮಿಸಿದ್ದರು. ಅದರ ಹೊರತಾಗಿ ಯಾವುದೇ ಪ್ರತ್ಯೇಕ ಸಭೆಗಳನ್ನು ನಾವು ಮಾಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಕುಂಭಮೇಳ ಟೀಕಿಸುವವರನ್ನು ಅಯೋಗ್ಯರು ಎಂದು ಬಿಜೆಪಿಯ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಯಾವ್ಯಾವ ಪದಗಳನ್ನು ಯಾವಾಗ ಬಳಸಬೇಕು ಎಂದು ಅವರಿಗೇ ಗೊತ್ತಿರುತ್ತದೆ. ಇದರ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

RELATED ARTICLES

Latest News