Wednesday, February 5, 2025
Homeರಾಷ್ಟ್ರೀಯ | National200 ಸಸಿ ನೆಟ್ಟು ಪೋಷಿಸುವ ಷರತ್ತಿನೊಂದಿಗೆ ಕಳ್ಳನಿಗೆ ಜಾಮೀನು ನೀಡಿದ ಕೋರ್ಟ್

200 ಸಸಿ ನೆಟ್ಟು ಪೋಷಿಸುವ ಷರತ್ತಿನೊಂದಿಗೆ ಕಳ್ಳನಿಗೆ ಜಾಮೀನು ನೀಡಿದ ಕೋರ್ಟ್

Orissa HC grants bail to thief, tells him to plant '200 saplings'

ಕಟಕ್‌ , ಫೆ 4 (ಪಿಟಿಐ) ಕಳ್ಳತನದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬನಿಗೆ ಒರಿಸ್ಸಾ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಆತ ತನ್ನ ಗ್ರಾಮ ಮತ್ತು ಸುತ್ತಮುತ್ತ ಕನಿಷ್ಠ 200 ಸಸಿಗಳನ್ನು ನೆಟ್ಟು ಎರಡು ವರ್ಷಗಳ ಕಾಲ ಅವುಗಳನ್ನು ನಿರ್ವಹಿಸಬೇಕು ಎಂಬ ಷರತ್ತಿನ ಮೇಲೆ ಜಾಮೀನು ನೀಡಿದೆ.

ವ್ಯಕ್ತಿಗೆ ಜಾಮೀನು ನೀಡಲು ಹಲವಾರು ಷರತ್ತುಗಳಲ್ಲಿ ಇದೂ ಒಂದಾಗಿತ್ತು. ಕಳೆದ ವರ್ಷ ಡಿಸೆಂಬರ್‌ 25 ರಂದು ವಿದ್ಯುತ್‌ ಸರಬರಾಜು ಕಂಪನಿಯ ಕನಿಷ್ಠ ಆರು ವಿದ್ಯುತ್‌ ಕಂಬಗಳನ್ನು ಕದ್ದ ಆರೋಪದಲ್ಲಿ ಕೋಲಬಿರಾ ಪೊಲೀಸರು ಬಂಧಿಸಿದ್ದ ಜಾರ್ಸುಗುಡಾ ಜಿಲ್ಲೆಯ ಮಾನಸ್‌‍ ಅತಿ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್‌‍ ಕೆ ಪಾಣಿಗ್ರಾಹಿ ಅಂಗೀಕರಿಸಿದ್ದಾರೆ.

ಪ್ರಕರಣದ ಮೆರಿಟ್‌ಗೆ ಹೋಗದೆ, ಪ್ರಕರಣದ ಸಹ ಆರೋಪಿಯ ಜಾಮೀನು ಈಗಾಗಲೇ ವಿಸ್ತರಿಸಿರುವ ಅಂಶವನ್ನು ಪರಿಗಣಿಸದೆ, ಕೆಲವು ಷರತ್ತುಗಳ ಮೇಲೆ ಜಾಮೀನು ನೀಡುವಂತೆ ಕೆಳ ನ್ಯಾಯಾಲಯಕ್ಕೆ ಹೈಕೋರ್ಟ್‌ ಸೂಚಿಸಿದೆ.

ಪ್ರತಿ ಹದಿನೈದು ದಿನಗಳಿಗೊಮೆ ಪೊಲೀಸರ ಮುಂದೆ ಹಾಜರಾಗುವಂತೆ ಮತ್ತು ಯಾವುದೇ ಕ್ರಿಮಿನಲ್‌ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಮತ್ತು ಸಾಕ್ಷ್ಯವನ್ನು ಹಾಳು ಮಾಡದಂತೆ ಹೈಕೋರ್ಟ್‌ ಆರೋಪಿಯನ್ನು ಕೇಳಿದೆ.

ಅರ್ಜಿದಾರರು (ಮನಸ್‌‍ ಆಟಿ) ತಮ ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಭೂಮಿ ಅಥವಾ ಸಮುದಾಯದ ಜಮೀನು ಅಥವಾ ಯಾವುದೇ ಖಾಸಗಿ ಜಮೀನಿನಲ್ಲಿ ಮಾವು, ಬೇವು, ಹುಣಸೆ ಮುಂತಾದ ಸ್ಥಳೀಯ ತಳಿಗಳ 200 ಸಸಿಗಳನ್ನು ನೆಡಬೇಕು, ಎಂದು ಹೈಕೋರ್ಟ್‌ ಸ್ಥಳೀಯ ಪೊಲೀಸ್‌‍, ಅರಣ್ಯ ಮತ್ತು ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಆಟಿಗೆ ಸಸಿಗಳನ್ನು ಪೂರೈಸಲು ಜಿಲ್ಲಾ ನರ್ಸರಿಗೆ ಸೂಚಿಸಿದ ನ್ಯಾಯಾಲಯವು ತೋಟಕ್ಕೆ ಜಮೀನು ಗುರುತಿಸಲು ಸಹಾಯ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದೆ. ಈ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸಲಾಗುವುದು ಎಂದು ಹೈಕೋರ್ಟ್‌ ಆದೇಶದಲ್ಲಿ ಎಚ್ಚರಿಸಿದೆ.

RELATED ARTICLES

Latest News