ನವದೆಹಲಿ, ಸೆ.27- ಕೇರಳದ ಪ್ರವಾಹವನ್ನು ಪ್ರಮುಖ ಕೇಂದ್ರ ವಸ್ತುವಾಗಿ ಬಿಂಬಿಸಿರುವ 2018 ಎಂಬ ಮಲಯಾಳಂ ಸಿನಿಮಾವು 2024ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದ ಮೊದಲ ಭಾರತೀಯ ಸಿನಿಮಾ ಎಂಬ ಕೀರ್ತಿಗೆ ಭಾಜನವಾಗಿದೆ ಎಂದು ಜ್ಯೂರಿ ಮುಖ್ಯಸ್ಥ ಗಿರೀಶ್ ಕಾಸರವಳ್ಳಿ ಅವರು ತಿಳಿಸಿದ್ದಾರೆ.
ಮಲಯಾಳಂನ ಖ್ಯಾತ ನಿರ್ದೇಶಕ ಜುಡೆ ಅಂಥೋನಿ ಜೋಸೆಫ್ ಅವರು ನಿರ್ದೇಶಿಸಿರುವ 2018 ಸಿನಿಮಾವು ಮೇ 8, 2023 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು 200 ಕೋಟಿಗೂ ಹೆಚ್ಚು ಸಂಭಾವನೆ ಗಳಿಸಿ ನಿರ್ಮಾಪಕರ ಗಲ್ಲಾಪೆಟ್ಟಿಗೆಯನ್ನು ತುಂಬಿಸಿತ್ತು. 2018 `ಪ್ರತಿಯೊಬ್ಬರು ಇಲ್ಲಿ ಹೀರೋಗಳೇ’ ಎಂಬ ಉಪಶೀರ್ಷಿಕೆ ಯಡಿ ಕಾವ್ಯ ಫಿಲಂ ಕಂಪೆನಿ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿತ್ತು.
ಆತಂಕ ಸೃಷ್ಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರೋಣ್ ಹಾರಾಟ
ಚಿತ್ರದ ನಾಯಕ ಟಿವಿನೊ ಥಾಮಸ್ ಸುಳ್ಳು ವೈದ್ಯಕೀಯ ದಾಖಲೆ ನೀಡಿ ರಜೆ ಪಡೆದು ತವರಿಗೆ ಬಂದಿದ್ದಾಗ ಉಂಟಾದ ಪ್ರವಾಹದಲ್ಲಿ ಆತ ಜನರನ್ನು ಯಾವ ರೀತಿ ರಕ್ಷಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕೇರಳದಲ್ಲಿ 2018ರಲ್ಲಿ ಉಂಟಾದ ಪ್ರವಾಹವನ್ನು ಆಧಾರಿಸಿಯೇ ಈ ಸಿನಿಮಾವನ್ನು ನಿರ್ಮಿಸಲಾಗಿದೆ.
ಈ ಸಿನಿಮಾದಲ್ಲಿ ಅಸೀಫ್ ಅಲಿ, ಲಾಲ್, ನರೇನ್, ಕುಂಚಚೊಕೊ ಬೊಮನ್, ಅಪರ್ಣ ಬಲಮುರಳಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವೇಣು ಕುನ್ನಿಪಿಳ್ಳೈ, ಸಿ.ಕೆ.ಪದ್ಮಾ ಕುಮಾರ್ ಹಾಗೂ ಅಂಟೊ ಜೋಸೆಫ್ ಅವರು 2018 ಕ್ಕೆ ಬಂಡವಾಳ ಹೂಡಿದ್ದಾರೆ.
ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ
ಮಾರ್ಚ್ 2024, 10 ರಂದು ಲಾಸ್ ಏಂಜಲೀಸ್‍ನಲ್ಲಿ ನಡೆಯಲಿರುವ 96ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ವಿಶ್ವದಾದ್ಯಂತ 200ಕ್ಕೂ ಹೆಚ್ಚು ಸಿನಿಮಾಗಳು ಪಾಲ್ಗೊಳ್ಳಲಿದ್ದು ಪ್ರಶಸ್ತಿ ಗೆಲ್ಲಲು ಪರಸ್ಪರ ಪೈಪೋಟಿ ನಡೆಸಲಿವೆ. 2023ನೇ ಸಾಲಿನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ ಟಾಲಿವುಡ್‍ನ ಆರ್‍ಆರ್ ಆರ್ ಸಿನಿಮಾದ ನಾಟೊ ನಾಟೊ ಗೀತೆ ಹಾಗೂ ದಿ ಎಲಿಫೆಂಟ್ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.