ಧಾರವಾಡ,ಯಾದಗಿರಿ,ವಿಜಯಪುರ,ಅ. 29– ವಕ್ಫ್ ಜಾಗ ವಿವಾದ ತಾರಕಕ್ಕೇರಿದ್ದು, ಸಾವಿರಾರು ರೈತರ ಜಮೀನು ಅಲ್ಲದೆ ಮಠಮಂದಿರಗಳ ಆಸ್ತಿಯೂ ವಕ್ಫ್ ಬೋರ್ಡ್‌ನದೆಂದು ನಮೂದಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ರೈತರ ಎಕರೆ ವಕ್ಫ್ ಬೋರ್ಡ್‌ದೆಂದು ನಮೂದಾಗಿದ್ದು ಕಂಗೆಟ್ಟಿರುವ ರೈತರು ಬೀದಿಗಳಿದು ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ ಧಾರವಾಡ, ಯಾದಗಿರಿ, ಚಿತ್ರದುರ್ಗ ಸೇರಿದಂತೆ ವಿವಿಧೆಡೆ ವಕ್ಫ್ ಮೂಲಕ ರೈತರ ಆಸ್ತಿ ಕಬಳಿಕೆಗೆ ಮುಂದಾಗಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಲಬುರಗಿಯಲ್ಲಿ 15 ಸಾವಿರದಷ್ಟು ಎಕರೆ ಜಮೀನು ವಕ್ಫ್ ಬೋರ್ಡ್‌ದೆಂದು ರೈತರ ಪಹಣಿಯಲ್ಲಿ ನಮೂದಾಗಿದ್ದು, ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದ ಜಮೀನು ಈಗ ಏಕಾಏಕಿ ವಕ್‌್ಫ ಬೋರ್ಡ್‌ದೆಂದು ಪಹಣಿಯಲ್ಲಿ ನಮೂದಾಗಿರುವುದಕ್ಕೆ ರೈತರು ಕಂಗಾಲಾಗಿದ್ದಾರೆ.ಪಹಣಿ ಹಿಡಿದು ಜಿಲ್ಲಾಧಿಕಾರಿಗಳು ತಾಲ್ಲೂಕು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ ಸಂಸದ ಗೋವಿಂದ ಕಾರಜೋಳ ನೇತೃತ್ವದ ನಿಯೋಗ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ವಿವಾದಾತಕ ಜಮೀನಿನ ಮಾಹಿತಿ ಪಡೆದು ರೈತರಿಗೆ ಅಭಯ ನೀಡಿದ್ದಾರೆ. ಸರ್ಕಾರದ ಈ ನಿರ್ಲಕ್ಷ್ಯದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ವಕ್ಫ್ ಮಂಡಳಿ ಶಾಕ್ ನೀಡಿದ್ದು ರೈತರ ಪಹಣಿ ಕಾಲಂನಲ್ಲಿ ವಕ್‌್ಫ ಎಂದು ನಮೂದಾಗಿದ್ದು ಆತಂಕ ಸೃಷ್ಟಿಸಿದೆ. ಇದರಿಂದ ರೈತಾಪಿ ವರ್ಗ ಬೀದಿಗೆ ಬೀಳುವ ಭೀತಿ ಉಂಟಾಗಿದೆ. ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಗೆ ನೀಡಿರುವ ನೋಟೀಸ್‌ನಿಂದ ಜಿಲ್ಲೆಯಲ್ಲೇ ಸುಮಾರು 1440 ರೈತರು ಜಮೀನು ಕಳೆದುಕೊಳ್ಳುತ್ತೇವೆಂಬ ಭಯದಲ್ಲೇ ಇದ್ದಾರೆ. ವಂಶಪಾರಂಪರ್ಯವಾಗಿ ನಮ ಹಿರಿಯರಿಂದ ಜಮೀನಿನಲ್ಲಿ ನಾವು ಉಳುಮೆ ಮಾಡುತ್ತಿದ್ದೇವೆ. ಆದರೆ ಈಗ ಒಳಗೊಳಗೆ ಕೆಲವರು ರೈತರ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ತಮ ಅಳಲು ತೋಡಿಕೊಂಡಿದ್ದಾರೆ.
ಕಳೆದ 2018ರಲ್ಲಿ ಕೊಂಡಗಿ ಗ್ರಾಮದ ರೈತ ಸುನೀಲ್ ಅವರು ತಮ ತಂದೆ ಅಂಬಣ್ಣ ಅವರ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಆಗ ಪಹಣಿಯಲ್ಲಿ ಏನೂ ಇರಲಿಲ್ಲ. ನಂತರ ಕೆಲ ದಿನಗಳಲ್ಲಿ ರೈಲ್ವೆ ಇಲಾಖೆ ಕಾಮಗಾರಿ ಕೈಗೊಳ್ಳಲು ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾದಾಗ ನಂ.11 ರ ಕಾಲಂನಲ್ಲಿ ವಕ್‌್ಫ ಆಸ್ತಿ ಎಂದು ನಮೂದಾಗಿದೆ ಎಂದು ಆರೋಪಿಸಿದ್ದಾರೆ.
ರೈತರ ಜಮೀನು ಬಳಿ ಯಾವುದೇ ದರ್ಗಾ-ಮಸೀದಿ ಇಲ್ಲದಿದ್ದರೂ ವಕ್ಫ್ ಮಂಡಳಿ ಹೇಗೆ ನಮ ಜಮೀನು ಎನ್ನುತ್ತಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ದೂರಿದ್ದಾರೆ. ಧಾರಾವಾಡ ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಕೆಲ ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್‌್ಫ ಆಸ್ತಿ ಎಂದು ನಮೂದಾದ ಹಿನ್ನೆಲೆಯಲ್ಲಿ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಇಂದು ಬೆಳಿಗ್ಗೆ ಬಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ರೈತರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.
ಉಪ್ಪಿನ ಬೆಟಗೇರಿ ಗ್ರಾಮದ ಮೂವರು ರೈತರ ಪಹಣಿ ಪತ್ರದಲ್ಲಿ ಆ ಜಮೀನು ವಕ್ಫ್ ಆಸ್ತಿಗೆ ಸೇರಿದ್ದು ಎಂದು ದಾಖಲಾಗಿದೆ. ವಿಜಯಪುರದಲ್ಲೂ ಇದೇ ರೀತಿ ನಡೆದಿದ್ದು, ಈ ವಕ್ಫ್ ಆಸ್ತಿ ಎಂದು ನಮೂದಾಗುವುದು ಈಗ ಧಾರವಾಡ ಜಿಲ್ಲೆಗೂ ವಕ್ಕರಿಸಿದೆ ! ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಅವರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಮಾಹಿತಿ ಪಡೆದುಕೊಂಡ ಪ್ರಮೋದ್ ಮುತಾಲಿಕ್‌ರವರು ರೈತರಿಗೆ ತೊಂದರೆಯಾದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಈ ಕುರಿತು ಸಂಘಟಿತ ಹೋರಾಟ ನಡೆಯಬೇಕಿದ್ದು , ಎಲ್ಲರೂ ಹೋರಾಟಕ್ಕೆ ಮುಂದಾಗೋಣ ಎಂದರು. ಇನ್ನು ಅ.31 ರಂದು ಧಾರವಾಡ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಲು ಉಪ್ಪಿನ ಬೆಟಗೇರಿ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಮಠದ ಆಸ್ತಿಯೂ ವಕ್ಫ್ ಪಾಲು :
ಸಿಂದಗಿ ಪಟ್ಟಣದ ವಿರಕ್ತ ಮಠದ ಸರ್ವೆ ನಂ 1020 ರ ಅಸ್ತಿಯಲ್ಲಿ ಖಬರಸ್ಥಾನ ವಕ್ಫ್ ಬೋರ್ಡ್ ಎಂದು ನೋಂದಣಿಯಾಗಿದೆ.ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ ಇತ್ತು. 2018 – 2019 ರಲ್ಲಿ ವಕ್‌್ಫ ಬೋರ್ಡ್ ಎಂದು ಸೇರ್ಪಡೆಯಾಗಿದೆ.
ವಕ್‌್ಫ ಬೋರ್ಡ್‌ಗೆ 1.28 ಎಕರೆ ಆಸ್ತಿಯನ್ನು ಸೇರಿಸಿದ್ದಕ್ಕೆ ಮಠದ ಭಕ್ತರ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಮಠ ವಕ್ಫ್ ಬೋರ್ಡ್ ಖಬರಸ್ಥಾನ ಆಗಿದ್ದು ಹೇಗೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ರೀತಿ ಸಿಂಧಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದೆ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾದ ವಿಚಾರ ತಿಳಿದು ಭಕ್ತರು ಈಗ ಮಠದ ಮುಂದೆ ಜಮಾಯಿಸುತ್ತಿದ್ದಾರೆ.