ಪುಣೆ,ಜು.10- ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ, ಯಾರು ಮುಟ್ಟಾಗಿದ್ದಾರೆಂದು ತಿಳಿಯಲು ಬಲವಂತವಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸ್ನಾನಗೃಹದ ನೆಲದ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಪ್ರಾಂಶುಪಾಲರು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರನ್ನು ಕರೆಸಿ, ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ. ಮುಟ್ಟಾಗುತ್ತಿರುವವರು ಮತ್ತು ಮುಟ್ಟಾಗದವರು. 10ರಿಂದ 12 ವರ್ಷದೊಳಗಿನ ಕೆಲವು ಹುಡುಗಿಯರನ್ನು ಪರೀಕ್ಷಿಸಲು ಒಬ್ಬ ಮಹಿಳಾ ಸಹಾಯಕಿಗೆ ಸೂಚಿಸಿದ್ದಾರೆ. ತಪಾಸಣೆಯ ಸಮಯದಲ್ಲಿ ಮಹಿಳಾ ಸಹಾಯಕಿ ಅವರ ಒಳಉಡುಪುಗಳನ್ನು ಮುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಒಬ್ಬ ಹುಡುಗಿ ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಿದ್ದಳು, ಆದರೆ ಮುಟ್ಟಾಗುತ್ತಿಲ್ಲ ಎಂದು ಹೇಳಿದ ಹುಡುಗಿಯರ ಗುಂಪಿನಲ್ಲಿ ಅವರು ಕಂಡುಬಂದರು. ಇದರ ನಂತರ ಪ್ರಾಂಶುಪಾಲರು ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಮುಂದೆ ಅವಳನ್ನು ಗದರಿಸುವ ಮೂಲಕ ಅವಮಾನಿಸಿದ್ದಾರೆ.
ತಮ ಮಕ್ಕಳಿಂದ ಘಟನೆಯ ಬಗ್ಗೆ ತಿಳಿದ ನಂತರ, ಕೋಪಗೊಂಡ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಲು ಜಮಾಯಿಸಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಶಾಲಾ ಪ್ರಾಂಶುಪಾಲರು, ಒಬ್ಬ ಪಿಯೋನ್, ಇಬ್ಬರು ಶಿಕ್ಷಕರು ಮತ್ತು ಇಬ್ಬರು ಟ್ರಸ್ಟಿಗಳು ಸೇರಿದಂತೆ ಆರು ಜನರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಶಾಲೆಯಲ್ಲಿ ಐದರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಶಿಕ್ಷಕರು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಯಾರು ಮುಟ್ಟಾಗಿದ್ದಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದ್ದು, ಪೋಷಕರಲ್ಲಿ ಆಕ್ರೋಶ ಉಂಟುಮಾಡಿದೆ.
- ಸಿದ್ದರಾಮಯ್ಯನವರೇ ಸಿಎಂ ಆಗಿ ಸಿದ್ದು ಮುಂದುವರೆಯುತ್ತಾರೆ : ಪುತ್ರ ಯತೀಂದ್ರ
- ಪಾಲಿಕೆಗಳ ನೌಕರರ ಕಷ್ಟಗಳನ್ನೂ ಕೇಳಿಸಿಕೊಳ್ಳಿ : ರಾಜ್ಯ ಸರ್ಕಾರಕ್ಕೆ HDK ಆಗ್ರಹ
- ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟದ ಭಾಗ್ಯ
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಚೋರನ ಬಂಧನ
- ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್ ನಡೆಸಲು ಮಾತ್ರ ಯೋಗ್ಯರು : ಶಿವಸೇನೆ ಶಾಸಕ ಗಾಯಕ್ವಾಡ್