Sunday, June 30, 2024
Homeಅಂತಾರಾಷ್ಟ್ರೀಯRussia under attack : ರಷ್ಯಾದಲ್ಲಿ ಬಂದೂಕುಧಾರಿಗಳ ಗುಂಡಿನ ದಾಳಿಗೆ 15ಕ್ಕೂ ಹೆಚ್ಚು ಮಂದಿ ಬಲಿ

Russia under attack : ರಷ್ಯಾದಲ್ಲಿ ಬಂದೂಕುಧಾರಿಗಳ ಗುಂಡಿನ ದಾಳಿಗೆ 15ಕ್ಕೂ ಹೆಚ್ಚು ಮಂದಿ ಬಲಿ

ಮಾಸ್ಕೋ,ಜೂ.24- ರಷ್ಯಾದ ಉತ್ತರ ಕಾಕಸಸ್‌‍ ಪ್ರದೇಶದ ಡಾಗೆಸ್ತಾನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಅಪ್ರಚೋದಿತವಾಗಿ ಎರಡು ಚರ್ಚ್‌ ಮತ್ತು ಪೊಲೀಸ್‌‍ ಪೋಸ್ಟ್‌ ಮೇಲೆ ಗುಂಡು ಹಾರಿಸಿದ್ದು, ಪೊಲೀಸರು ಮತ್ತು ಪಾದ್ರಿ ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಗವರ್ನರ್‌ ಸೆರ್ಗೆಯ್‌ ಮೆಲಿಕೋವ್‌ ತಿಳಿಸಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಮಾಸ್ಕೋ ಬಳಿಯ ಸಂಗೀತ ಕಛೇರಿ ಹಾಲ್‌ ಮೇಲೆ ಇಸ್ಲಾಮಿಕ್‌ ಸ್ಟೇಟ್‌ ನಡೆಸಿದ ದಾಳಿಯಲ್ಲಿ 145 ಜನ ಸಾವನ್ನಪ್ಪಿದ್ದರು. ಇದೀಗ ಉತ್ತರ ಕಾಕಸಸ್‌‍ನ ಮಖಚ್ಕಲಾ ಮತ್ತು ಡರ್ಬೆಂಟ್‌ ನಗರಗಳಾದ್ಯಂತ ಅಂತಹದ್ದೇ ದಾಳಿಗಳು ಸಂಭವಿಸಿದೆ. ದಾಳಿಯ ಕೆಲವೇ ಸಮಯದಲ್ಲಿ ಮಖಚ್ಕಲಾದಲ್ಲಿ ನಾಲ್ವರು ಮತ್ತು ಡರ್ಬೆಂಟ್‌ನಲ್ಲಿ ಇಬ್ಬರು ಬಂದೂಕುಧಾರಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಡಾಗೆಸ್ತಾನ್‌ನ ಅತಿದೊಡ್ಡ ನಗರ ಮಖಚ್ಕಲಾ ಮತ್ತು ಕರಾವಳಿ ನಗರ ಡರ್ಬೆಂಟ್‌ನಲ್ಲಿ ಏಕಕಾಲದಲ್ಲಿ ದಾಳಿಗಳು ನಡೆದಿದ್ದು, ಇದು ದೇಶಕ್ಕೆ ಕರಾಳ ದಿನವಾಗಿದೆ. ಅಲ್ಲದೇ ಈ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಗವರ್ನರ್‌ ಸೆರ್ಗೆಯ್‌ ಮೆಲಿಕೋವ್‌ ತಿಳಿಸಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿಯೂ ಇಂದು ವೀಡಿಯೋ ಮೂಲಕ ತಿಳಿಸಿದ್ದಾರೆ.

ಎರಡು ಆರ್ಥೊಡಾಕ್‌್ಸ ಚರ್ಚ್‌ಗಳು, ಸಿನಗಾಗ್‌ ಮತ್ತು ಟ್ರಾಫಿಕ್‌ ಪೋಲಿಸ್‌‍ ಪೋಸ್ಟ್‌ ಅನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಮೃತರಲ್ಲಿ ಪೊಲೀಸ್‌‍ ಅಧಿಕಾರಿಗಳಲ್ಲದೆ, ಡರ್ಬೆಂಟ್‌ನಲ್ಲಿ 40 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ ಆರ್ಥೊಡಾಕ್‌್ಸ ಪಾದ್ರಿ ಸೇರಿದಂತೆ ಹಲವು ನಾಗರಿಕರು ಸೇರಿದ್ದಾರೆ ಎಂದು ಮೆಲಿಕೊವ್‌ ತಿಳಿಸಿದ್ದಾರೆ. ಈ ಭಯೋತ್ಪಾದಕ ದಾಳಿಗಳ ಹಿಂದೆ ಯಾರು ಇದ್ದಾರೆ ಮತ್ತು ಅವರು ಯಾವ ಉದ್ದೇಶ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ಅವರು ಉಕ್ರೀನ್‌ ಯುದ್ಧವನ್ನು ನೇರವಾಗಿ ಪ್ರಸ್ತಾಪಿಸದೆ ಹೇಳಿದ್ದಾರೆ.

ದಾಳಿಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕಂಡು ಹಿಡಿಯಲು ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಡಾಗೆಸ್ತಾನ್‌ ಸರ್ಕಾರ ಜೂನ್‌ 24ರಿಂದ 26ರ ವರೆಗೆ ಶೋಕಾಚರಣೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗಿದೆ ಮತ್ತು ಎಲ್ಲ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ತನಿಖಾ ಸಮಿತಿಯು ಈ ಶಂಕಿತ ಭಯೋತ್ಪಾದಕ ಕೃತ್ಯಗಳ ತನಿಖೆಯನ್ನು ಪ್ರಾರಂಭಿಸಿದೆ. ಆದಾಗ್ಯೂ ದಾಳಿಯ ಜವಾಬ್ದಾರಿಯನ್ನು ತಕ್ಷಣಕ್ಕೆ ಯಾವ ಸಂಘಟನೆಯೂ ವಹಿಸಿಕೊಂಡಿಲ್ಲ. ದಾಳಿಕೋರರಲ್ಲಿ ಮಧ್ಯ ಡಾಗೆಸ್ತಾನ್‌ನ ಸೆರ್ಗೋಕಲಾ ಜಿಲ್ಲೆಯ ಮುಖ್ಯಸ್ಥರ ಇಬ್ಬರು ಪುತ್ರರು ಸೇರಿದ್ದಾರೆ ಎಂದು ರಷ್ಯಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.ಅಧಿಕಾರಿಗಳು ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದಾರೆ.

ದಾಳಿಯಲ್ಲಿ ಪಾದ್ರಿ ಮತ್ತು ಪೊಲೀಸರು ಸಾವನ್ನಪ್ಪಿದ್ದಾರೆ. 6 ಬಂದೂಕುಧಾರಿಗಳನ್ನು ರಕ್ಷಣಾ ಪಡೆಗಳು ಬೆನ್ನಟ್ಟಿ ಹೊಡೆದುರುಳಿಸಿವೆ. ದಾಳಿಯಲ್ಲಿ ಎಷ್ಟು ಉಗ್ರರು ಭಾಗಿಯಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಭಯೋತ್ಪಾದನಾ ವಿರೋಧಿ ಸಮಿತಿ ತಿಳಿಸಿದೆ.ಮಾಸ್ಕೋ ಬಳಿಯ ಸಂಗೀತ ಕಛೇರಿ ಹಾಲ್‌ ಮೇಲೆ ಇಸ್ಲಾಮಿಕ್‌ ಸ್ಟೇಟ್‌ ನಡೆಸಿದ ದಾಳಿಯಲ್ಲಿ 145 ಜನರು ಸಾವನ್ನಪ್ಪಿದ ಕೆಲವೆೇ ದಿನಗಳ ಅಂತರದಲ್ಲಿ ಈ ಘಟನೆ ನಡೆದಿದೆ.

ಈ ಭಯೋತ್ಪಾದಕ ದಾಳಿ ಹಿಂದೆ ಯಾರಿದ್ದಾರೆ? ಅವರು ಯಾವ ಉದ್ದೇಶ ಹೊಂದಿದ್ದಾರೆ? ಎನ್ನುವುದು ಸ್ಪಷ್ಟವಾಗಿದೆ ಎಂದು ಪರೋಕ್ಷವಾಗಿ ಉಕ್ರೀನ್‌ ವಿರುದ್ಧ ಟೀಕಿಸಿದ್ದಾರೆ. ದಾಳಿ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕಂಡುಹಿಡಿಯಲು ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ.

ಡಾಗೆಸ್ತಾನ್‌ ಸರ್ಕಾರ ಜೂ.24ರಿಂದ 26ರ ವರೆಗೆ ಶೋಕಾಚರಣೆ ಘೋಷಿಸಿ ಆದೇಶ ಹೊರಡಿಸಿದೆ. ರಾಷ್ಟ್ರ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗಿದೆ ಮತ್ತು ಎಲ್ಲ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ತಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನಾ ಸಂಬಂಧ ರಷ್ಯಾದ ತನಿಖಾ ಸಮಿತಿಯು ಈ ಶಂಕಿತ ಭಯೋತ್ಪಾದಕ ಕೃತ್ಯಗಳ ತನಿಖೆ ಪ್ರಾರಂಭಿಸಿದೆ.

ಆದಾಗ್ಯೂ ದಾಳಿಯ ಜವಾಬ್ದಾರಿಯನ್ನು ತಕ್ಷಣಕ್ಕೆ ಯಾವ ಸಂಘಟನೆಯೂ ದಾಳಿಯ ಹೊಣೆ ವಹಿಸಿಕೊಂಡಿಲ್ಲ. ದಾಳಿಕೋರರಲ್ಲಿ ಮಧ್ಯ ಡಾಗೆಸ್ತಾನ್‌ನ ಸೆರ್ಗೋಕಲಾ ಜಿಲ್ಲೆಯ ಮುಖ್ಯಸ್ಥರ ಇಬ್ಬರು ಪುತ್ರರು ಸೇರಿದ್ದಾರೆ ಎಂದು ರಷ್ಯಾದ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.ದಾಳಿಯ ಹೊಣೆಗಾರಿಕೆಯನ್ನು ತಕ್ಷಣಕ್ಕೆ ಯಾವುದೇ ಸಂಸ್ಥೆ ಒಪ್ಪಿಕೊಂಡಿಲ್ಲ. ಭಯೋತ್ಪಾದಕ ಕೃತ್ಯದ ಆರೋಪದ ಮೇಲೆ ಅಽ ಕಾರಿಗಳು ಕ್ರಿಮಿನಲ್‌ ತನಿಖೆ ಆರಂಭಿಸಿದ್ದಾರೆ.

RELATED ARTICLES

Latest News