Wednesday, August 20, 2025
Homeರಾಷ್ಟ್ರೀಯ | Nationalದೆಹಲಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ

ದೆಹಲಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ

Over 50 Delhi Schools Get Bomb Threat, Two Days After 32 Schools Received Hoax Alerts

ನವದೆಹಲಿ, ಆ. 20 (ಪಿಟಿಐ) ರಾಷ್ಟ್ರ ರಾಜಧಾನಿ ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆಗಳು ನಿರಂತರವಾಗತೊಡಗಿದೆ. ಈ ಹಿಂದೆ ಹಲವಾರು ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿರುವ ಬೆನ್ನಲ್ಲೇ ಇಂದು ಅಲ್ಲಿನ ಐವತ್ತಕ್ಕೂ ಹೆಚ್ಚಿನ ಶಾಲೆಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆಗಳು ಬಂದಿವೆ.

ತಕ್ಷಣ ಅಲರ್ಟ್‌ ಆದ ಪೊಲೀಸರು ಮತ್ತು ಇತರ ತುರ್ತು ಸಂಸ್ಥೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೆಹಲಿ ಅಗ್ನಿಶಾಮಕ ಸೇವೆಗಳ ಪ್ರಕಾರ, ಮಾಲ್ವಿಯಾ ನಗರದ ಎಸ್‌‍ಕೆವಿ ಮತ್ತು ಪ್ರಸಾದ್‌ ನಗರದ ಆಂಧ್ರ ಶಾಲೆ ಎಂಬ ಎರಡು ಶಾಲೆಗಳಿಗೆ ಬಾಂಬ್‌ ಬೆದರಿಕೆಗಳ ಬಗ್ಗೆ ಕ್ರಮವಾಗಿ ಬೆಳಿಗ್ಗೆ 7.40 ಮತ್ತು 7.42 ಕ್ಕೆ ಮಾಹಿತಿ ಬಂದಿದೆ.

ಅದೇ ರೀತಿ ನಗರದ ಇತರ ಹಲವಾರು ಪ್ರದೇಶಗಳಲ್ಲಿರುವ ಶಾಲೆಗಳಿಗೂ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ ಹೀಗಾಗಿ ಪೊಲೀಸ್‌‍ ತಂಡಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್‌ ನಿಷ್ಕ್ರಿಯ ದಳಗಳು ತಕ್ಷಣ ಆವರಣಕ್ಕೆ ಧಾವಿಸಿದವು.

ಆಗಸ್ಟ್‌ 18 ರಂದು ನಗರದಾದ್ಯಂತ 32 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದ ಕೇವಲ ಎರಡು ದಿನಗಳ ನಂತರ ಹೊಸ ಬೆದರಿಕೆಗಳು ಬರುತ್ತಿರುವುದು ಆತಂಕ ತಂದಿದೆ, ಆದರೆ ಇದುವರೆಗೂ ಬಂದಿರುವ ಎಲ್ಲಾ ಕರೆಗಳು ಹುಸಿಯಾಗಿವೆ ಎನ್ನುವುದು ಸಮಾಧಾನಕರ ವಿಷಯವಾದರೂ ಭವಿಷ್ಯದಲ್ಲಿ ಏನಾಗುವುದೋ ಎನ್ನುವ ಆತಂಕ ಪೋಷಕರನ್ನು ಕಾಡತೊಡಗಿದೆ.

RELATED ARTICLES

Latest News