ಬೆಂಗಳೂರು,ಜ.2- ಯಮಹಾ ಬೈಕ್ ಶೋರೂಂವೊಂದರಲ್ಲಿ ರಾತ್ರಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಕೋಟ್ಯಂತರ ರೂ. ಮೌಲ್ಯದ 52ಕ್ಕೂ ಹೆಚ್ಚು ಬೈಕ್ಗಳು ಸುಟ್ಟು ಭಸ್ಮ ವಾಗಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿ.ನಾರಾಯಣಪುರದಲ್ಲಿ ಯಮಹಾ ಬೈಕ್ ಶೋರೂಂ ಇದೆ. ನಿನ್ನೆ ಎಂದಿನಂತೆ ಸಿಬ್ಬಂದಿ ಕೆಲಸ ಮುಗಿಸಿ ರಾತ್ರಿ 7 ಗಂಟೆಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಅಲ್ಲಿನ ಸೆಕ್ಯೂರಿಟಿ ಗಾರ್ಡ್ 8ಗಂಟೆ ವೇಳೆಗೆ ಊಟಕ್ಕೆ ಹೋಗಿದ್ದಾರೆ.
ರಾತ್ರಿ 8.45ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಶೋ ರೂಂ ಒಳಗೆ ಇದ್ದಂತಹ 50ಕ್ಕೂ ಹೆಚ್ಚು ಬೈಕ್ಗಳು ಬೆಂಕಿಗಾಹುತಿಯಾಗಿ ಬೆಂಕಿಯ ಕೆನ್ನಾಲಿಗೆ ಶೋ ರೂಂ ಪೂರ್ತಿ ಆವರಿಸಿಕೊಂಡಿದೆ. ಆದರೆ ಇದು ಯಾರ ಗಮನಕ್ಕೂ ಬಂದಿಲ್ಲ.
ಕೆಲ ಸಮಯದ ಬಳಿಕ ಶೋರೂಂ ಒಳಗೆ ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಹೊರಗೆ ಕಾಣಿಸಿಕೊಂಡಾಗ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.
ಅಷ್ಟರಲ್ಲಾಗಲೇ ಶೋ ರೂಂ ಹಿಂಬದಿಯಲ್ಲಿರುವ ಸರ್ವಿಸ್ ಸೆಂಟರ್ಗೂ ಬೆಂಕಿ ಆವರಿಸಿಕೊಂಡಿದೆ.
ಸುದ್ದಿ ತಿಳಿದು ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿ ಅಕ್ಕಪಕ್ಕದ ಮಳಿಗೆಗಳಿಗೆ ಆವರಿಸದಂತೆ ಹರಸಾಹಸ ಪಟ್ಟು ಬೆಂಕಿನಂದಿಸುವಷ್ಟರಲ್ಲಿ ಶೋರೂಂ ಒಳಗಿದ್ದ 52 ಬೈಕ್ಗಳು ಸೇರಿದಂತೆ ಪೀಠೋಪಕರಣಗಳು ಭಸವಾಗಿವೆ.
ಈ ಶೋ ರೂಂ ಪಕ್ಕದಲ್ಲೇ ಇರುವ ಮ್ತತೊಂದು ಶೋ ರೂಂನವರು ಮುನ್ನೆಚ್ಚರಿಕೆಯಾಗಿ ಮಳಿಗೆಯಲ್ಲಿದ್ದಂತಹ ಬೈಕ್ಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.ವಿದ್ಯುತ್ ಶಾರ್ಟ್ ಸಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮತ್ತೊಂದು ಪ್ರಕರಣ:
ಇದೇ ವ್ಯಾಪ್ತಿಯಲ್ಲಿ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದ್ದು, ಗುಜರಿ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದಂತಹ ವಸ್ತುಗಳೆಲ್ಲಾ ಸುಟ್ಟು ಭಸವಾಗಿವೆ.ಕೆ.ಆರ್ಪುರದ ದೇವಸಂದ್ರ, 9ನೇ ಕ್ರಾಸ್ನಲ್ಲಿರುವ ಗುಜರಿ ಅಂಗಡಿಯಲ್ಲಿ ರಾತ್ರಿ 7.30 ರ ಸುಮಾರಿನಲ್ಲಿ ಆಕಸಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.ಸುದ್ದಿ ತಿಳಿದು 2 ಅಗ್ನಿ ಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ವಿದ್ಯುತ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಈ ಎರಡೂ ಪ್ರಕರಣಗಳನ್ನು ಮಹದೇವಪುರ ಠಾಣೆ ಪೊಲೀಸರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.