ಬೆಂಗಳೂರು,ಅ.17- ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಯಡವನಹಳ್ಳಿ ಯಲ್ಲಿನ ಆಕ್ಸ-ಫರ್ಡ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಹತ್ತು ವರ್ಷಗಳ ಹಿಂದೆ ಸ್ಥಾಪಿತಗೊಂಡರೂ, ಅತ್ಯಂತ ಪರಿಶ್ರಮದಿಂದ ಇಂದು ವಿಶ್ವದರ್ಜೆಯಲ್ಲಿ ತಲೆ ಎತ್ತಿ ನಿಂತಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಪ್ರಶಂಶಿಸಿದರು.
ಇಂದು ಆಕ್ಸ್-ಫರ್ಡ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಬ್ರೆನ್ ನ್ಯೂರೋ ಸೆಂಟರ್ ಉದ್ಘಾಟನೆ ಮತ್ತು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ಎಂಬಿಬಿಎಸ್ ವಿದ್ಯಾರ್ಥಿಗಳ-2024-25ನೇ ಬ್ಯಾಚ್‌ಗೆ ಶುಭಕೋರಿ ಮಾತನಾಡಿ, ಡಾ. ಎಸ್.ಎನ್.ವಿ.ಎಲ್ . ನರಸಿಂಹರಾಜುರವರ ನೇತೃತ್ವದಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಅಭಿವೃದ್ಧಿ ಕಂಡಿದೆ. ಐಸಿಯೂ ಸೌಲಭ್ಯ, ಆಂಜಿಯೋಗ್ರಾ, ಆಂಜಿಯೋಪ್ಲಾ ನರರೋಗ ವಿಭಾಗ, ಆರ್ಥೋಪೆಡಿಕ್ , ವಿಶ್ವದರ್ಜೆಯ ಆಪರೇಷನ್ ಥಿಯೇಟರ್ ಇದೆ. ಎಲ್ಲಾ ಸೌಲಭ್ಯಗಳಿರುವ ಅತ್ಯಂತ ಸುಸಜ್ಜಿತ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಹತ್ತು ವರ್ಷದಲ್ಲಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜು ಹೆಚ್ಚು ಅಭಿವೃದ್ದಿ ಹೊಂದಿದ್ದು, ಪ್ರತಿ ದಿನ ಸುಮಾರು 700-800 ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಡಾ. ವೆಂಕಟರಮಣ ರವರ ತಂಡವೂ ಸಹ ಜವಾಬ್ದಾರಿವಹಿಸಿಕೊಂಡಿರುವುದು ಒಳ್ಳೆಯ ಸಂಗತಿ ಬ್ರೆನ್ ಸ್ಟೋಕ್ , ಹಾರ್ಟ್ ಅಟ್ಯಾಕ್ ಆದಲ್ಲಿ ತಕ್ಷಣವೇ ಚಿಕಿತ್ಸೆ ಅಗತ್ಯ. ರೋಗಿಗಳನ್ನ ಬೆಂಗಳೂರಿಗೆ ಸಂಚಾರ ದಟ್ಟಣೆಯಲ್ಲಿ ಯಲ್ಲಿ ಎರಡು ಗಂಟೆಗಳು ಬೇಕಾಗುತ್ತದೆ. ಹಾರ್ಟ್ ಅಟ್ಯಾಕ್ ಮತ್ತು ಬ್ರೈನ್ ಸ್ಟ್ರೋಕ್ ಆದಾಗ ಮೂವತ್ತು ನಿಮಿಷ ತಡವಾದ್ರು ಕೂಡ ಸಾವಿನ ಪ್ರಮಾಣ 7% ಜಸ್ತಿಯಾಗುತ್ತದೆ. ಇದರಿಂದಾಗಿ ಬೆಂಗಳೂರು, ಆನೇಕಲ್ ಸೇರಿದಂತೆ ಸುತ್ತಮುತ್ತಲಿನ ಜನರು ಆಕ್ಸ-ಫರ್ಡ್ ಆಸ್ಪತ್ರೆಯಲ್ಲಿ ಸಿಗುತ್ತಿರುವ ಉತ್ತಮ ಸೇವೆಯನ್ನ ಪಡೆದುಕೊಳ್ಳಬೇಕಿದೆ. ಇಲ್ಲಿ ನುರಿತ ವೈದ್ಯರು, ಸಿಬ್ಬಂದಿ ವರ್ಗ ಕೆಲಸ ಮಾಡುತ್ತಿದ್ದು, ಅತ್ತಿಬೆಲೆಯಲ್ಲಿನ ಆಕ್ಸ-ಫರ್ಡ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವೂ ಗ್ರಾಮೀಣ ಭಾಗದ ಮತ್ತು ಬಡಜನರ ಪಾಲಿಗೆ ವರದಾನ ವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಕ್ಸ-ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ನರಸಿಂಹರಾಜು, ಡಾ.ಎನ್ .ಕೆ.ವೆಂಕಟರಮಣ, ವೈ ಶ್ರೀನಿವಾಸಲು, ಡಾ.ವಿ.ಬಿ. ಗೌಡ, ಡಾ.ರಜಿನಿ ಎಂ., ಡಾ. ಸಿ.ಆರ್.ಜಯಂತಿ, ಡಾ.ಸುಮಾ, ವೈದ್ಯಕೀಯ ಅಧ್ಯಾಪಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.