Wednesday, August 13, 2025
Homeರಾಷ್ಟ್ರೀಯ | Nationalಉತ್ತರ ಪ್ರದೇಶದಲ್ಲಿ ಮಹಿಳೆಯನ್ನು ಕಚ್ಚಿ ಕೊಂದ ಬೀದಿ ನಾಯಿಗಳು

ಉತ್ತರ ಪ್ರದೇಶದಲ್ಲಿ ಮಹಿಳೆಯನ್ನು ಕಚ್ಚಿ ಕೊಂದ ಬೀದಿ ನಾಯಿಗಳು

Pack of stray dogs maul woman to death in UP's Kushinagar

ಕುಶಿನಗರ, ಆ. 13 (ಪಿಟಿಐ) ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ 30 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಬೀದಿ ನಾಯಿಗಳು ಕಚ್ಚಿ ಕೊಂದು ಹಾಕಿವೆ.ಅರ್ಜುನ್‌ ದುಮ್ರಿ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಸಂಜೆ 7 ಗಂಟೆ ಸುಮಾರಿಗೆ ಮಾಧುರಿಯ ಗ್ರಾಮ ಪಂಚಾಯತ್‌ ಕಟ್ಟಡದ ಬಳಿಯ ಭತ್ತದ ಗದ್ದೆಯಲ್ಲಿ ಬಿದ್ದಿದ್ದು, ಬೀದಿ ನಾಯಿಗಳು ಮಹಿಳೆಯೊಬ್ಬರ ಮೇಲೆ ದಾಳಿ ಮಾಡುತ್ತಿವೆ ಎಂದು ಕರೆ ಬಂದಿತು ಹೋಗಿ ನೋಡಿದಾಗ ನಾಯಿಗಳ ಹಿಂಡು ಮಹಿಳೆಯ ಕಚ್ಚಿ ಕೊಂದು ಹಾಕಿದ್ದವು ಎಂದು ಎಸ್‌‍ಎಚ್‌ಒ ರಾಮ್‌ಸಹಾಯ್‌‍ ಚೌಹಾಣ್‌ ತಿಳಿಸಿದ್ದಾರೆ.

ಪೊಲೀಸ್‌‍ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕೋಲುಗಳಿಂದ ನಾಯಿಗಳನ್ನು ಓಡಿಸಿ, ಶವವನ್ನು ವಶಕ್ಕೆ ಪಡೆದರು.ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದು, ಯಾವುದೋ ಕಾರಣಕ್ಕಾಗಿ ಪಂಚಾಯತ್‌ ಕಟ್ಟಡದ ಹಿಂದೆ ಹೋಗಿದ್ದರು ಆ ಸಂದರ್ಭದಲ್ಲಿ ನಾಯಿಗಳ ಹಿಂಡು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಒಂದು ವೇಳೆ ಮಹಿಳೆ ಅನ್ಯಕಾರಣಗಳಿಗಾಗಿ ಸಾವನ್ನಪ್ಪಿ ನಂತರ ನಾಯಿಗಳ ಹಿಂಡು ಶವವನ್ನು ಕಿತ್ತುತಿಂದಿರುವ ಸಾಧ್ಯತೆಗಳು ಇವೆ ಎಂದು ಪೊಲೀಸರು ಶಂಕಿಸಿದ್ದಾರೆ.ಗ್ರಾಮಸ್ಥರ ಪ್ರಕಾರ, ಮಹಿಳೆ ಆಗಾಗ್ಗೆ ಗ್ರಾಮದಲ್ಲಿ ಸುತ್ತಾಡುತ್ತಿದ್ದಳು ಮತ್ತು ಸೋಮವಾದಿಂದ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬವು ಆಕೆಗಾಗಿ ಹುಡುಕಾಟ ನಡೆಸಿತು ಆದರೆ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.ನಿನ್ನೆ ಆಕೆಯ ಶವ ಭತ್ತದ ಗದ್ದೆಯಲ್ಲಿ ಪತ್ತೆಯಾಗಿದ್ದು, ಅದರ ಭಾಗಗಳನ್ನು ನಾಯಿಗಳು ತಿಂದು ಹಾಕಿವೆ ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ವರ್ಷದ ಹಿಂದೆ ಹಸು ಮತ್ತು ಎಂಟು ತಿಂಗಳ ಹಿಂದೆ ಮೇಕೆಯನ್ನು ಕೊಂದ ಘಟನೆಗಳು ಸೇರಿದಂತೆ ಹಿಂದಿನ ಘಟನೆಗಳನ್ನು ಗ್ರಾಮಸ್ಥರು ಉಲ್ಲೇಖಿಸಿದ್ದಾರೆ.ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ವರದಿಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ವೃತ್ತ ಅಧಿಕಾರಿ ಕಸ್ಯ ಕುಂದನ್‌ ಸಿಂಗ್‌ ಹೇಳಿದ್ದಾರೆ.

ಬೀದಿ ನಾಯಿಗಳಿಂದ ಸಂಭವಿಸಿದೆ ಎನ್ನಲಾದ ಸಾವಿನ ಬಗ್ಗೆ ಆಡಳಿತಕ್ಕೆ ತಿಳಿಸಲಾಗಿದೆ ಮತ್ತು ವಿವರಗಳನ್ನು ಪರಿಶೀಲಿಸಲು ಬ್ಲಾಕ್‌ ಅಭಿವೃದ್ಧಿ ಅಧಿಕಾರಿಯನ್ನು ಕಳುಹಿಸಲಾಗಿದೆ ಎಂದು ಹಟ ಎಸ್‌‍ಡಿಎಂ ಯೋಗೇಶ್ವರ್‌ ಸಿಂಗ್‌ ಹೇಳಿದ್ದಾರೆ.ಬಲಿಪಶುವಿನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

RELATED ARTICLES

Latest News