Friday, November 7, 2025
Home Blog Page 100

ಬ್ರ್ಯಾಂಡ್‌ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ಕಳಂಕ ತರಬೇಡಿ : ಡಿಕೆಶಿ ವಿರುದ್ಧ ಅಶೋಕ್‌ ಕಿಡಿ

0

ಬೆಂಗಳೂರು,ಸೆ.18- ನೀವು ಬ್ರ್ಯಾಂಡ್‌ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ಬೆಂಗಳೂರಿನ ಹೆಸರಿಗೆ ಕಳಂಕ ತರುವ ಕೆಲಸ ಮಾಡಬೇಡಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಡಿಸಿಎಂ ಹಾಗೂ ನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ .ಶಿವಕುಮಾರ್‌ಗೆ ಚಾಟಿ ಬೀಸಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಉದ್ಯಮಿಗಳಿಗೆ, ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿದ್ದ ಬೆಂಗಳೂರು ನಗರ, ಇವತ್ತು ನಿಮ ದುರಾಡಳಿತದಿಂದ, ನಿರ್ಲಕ್ಷ್ಯದಿಂದ ಐಟಿಬಿಟಿ ಕಂಪನಿಗಳು, ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ಹೋಗುವ ಆಲೋಚನೆ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಊರಿಗೆ ಕಳಂಕ ತರುವ ಪಾಪದ ಕೆಲಸ ಮಾಡಿದರೆ ಇತಿಹಾಸದಲ್ಲಿ ಕನ್ನಡಿಗರು ಎಂದಿಗೂ ಕ್ಷಮಿಸದ ಖಳನಾಯಕನಾಗುತ್ತೀರಿ ಎಂದು ಅಶೋಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಹೊಸ ಜಿಎಸ್‌‍ಟಿಯಿಂದ 2 ರಿಂದ 3 ಸಾವಿರ ಕೋಟಿ ರೂ. ವಿದ್ಯುತ್‌ ಖರೀದಿ ವೆಚ್ಚ ಉಳಿಕೆ

ನವದೆಹಲಿ, ಸೆ.18– ಹೊಸ ಜಿಎಸ್‌‍ಟಿಯಿಂದ ಡಿಸ್ಕಾಂಗಳ ವಿದ್ಯುತ್‌ ಖರೀದಿ ಹೊರೆ ತಗ್ಗಿಸಲಿದ್ದು, ದೇಶಾದ್ಯಂತ ವಾರ್ಷಿಕ 2-3 ಸಾವಿರ ಕೋಟಿ ರೂ. ವಿದ್ಯುತ್‌ ಖರೀದಿ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ, ಪಿಎಂ ಸೂರ್ಯಘರ್‌ ಮತ್ತು ಪಿಎಂ ಕುಸುಮ್‌ ಘಟಕಗಳ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸ ಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಜಿಎಸ್‌‍ಟಿ 2ರಲ್ಲಿ ನವೀಕರಿಸಬಹುದಾದ ಇಂಧನ ಸಾಧನ-ಸಲಕರಣೆಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದ್ದು, ಇದು ಭಾರತದ ಶುದ್ಧ ಇಂಧನ ಪರಿವರ್ತನಾ ಗುರಿಯ ಮತ್ತಷ್ಟು ವೇಗಕ್ಕೆ ಮತ್ತು ಅತ್ಯಂತ ಕಡಿಮೆ ವಿದ್ಯುತ್‌ ಉತ್ಪಾದನಾ ವೆಚ್ಚಕ್ಕೆ ನಾಂದಿ ಹಾಡಲಿದೆ. ಶುದ್ಧ ಇಂಧನ ಯೋಜನೆಗಳ ವೆಚ್ಚ ಸಹ ಕಡಿಮೆಯಾಗುತ್ತದೆ. ಮನೆಗಳು, ರೈತರು, ಕೈಗಾರಿಕೆ ಮತ್ತು ಡೆವಲಪರ್‌ಗಳಿಗೆ ಇದರ ನೇರ ಪ್ರಯೋಜನವಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಿಎಂ ಸೂರ್ಯಘರ್‌ ಅಗ್ಗ: ಪಿಎಂ ಸೂರ್ಯ ಘರ್‌ ಯೋಜನೆಯಡಿ ಸೋಲಾರ್‌ ಮೇಲ್ಛಾವಣಿ 3 ಕಿಲೋವ್ಯಾಟ್‌ ಘಟಕ ಅಳವಡಿಕೆ 9,000ರೂ.ನಿಂದ 10,500 ರೂ.ವರೆಗೆ ಅಗ್ಗವಾಗಲಿದೆ. ಇದು ಲಕ್ಷಾಂತರ ಕುಟುಂಬಗಳು ಸೌರಶಕ್ತಿ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಲಿದೆ. ಅಲ್ಲದೇ, ವಿದ್ಯುತ್‌ ಬಳಕೆಯನ್ನೂ ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.

ಪಿಎಂ-ಕುಸುಮ್‌‍ ಅಡಿ ರೈತರು ಸುಮಾರು 2.5 ಲಕ್ಷ ರೂ. ವೆಚ್ಚದ 5 ಹೆಚ್‌.ಪಿ. ಸೌರ ಪಂಪ್‌ ಅಳವಡಿಸಿಕೊಳ್ಳುವುದಾದರೆ ಸುಮಾರು 17,500 ರೂ. ಕಡಿಮೆಯಾಗಲಿದೆ. ಈ ಯೋಜನೆಯಡಿ ರೈತರು ಸಹ ಗಣನೀಯವಾಗಿ ಪ್ರಯೋಜನ ಪಡೆಯುತ್ತಾರೆ. ದೇಶದಲ್ಲಿ 10 ಲಕ್ಷ ಸೌರ ಪಂಪ್‌ಗಳ ಪ್ರಮಾಣದಲ್ಲಿ ಒಟ್ಟಾರೆ 1,750 ಕೋಟಿ ರೂ.ಉಳಿಸಬಹುದು ಎಂದು ಅವರು ತಿಳಿಸಿದ್ದಾರೆ.

ಉದ್ಯೋಗ ಸೃಜನೆ: ಮಾಡ್ಯೂಲ್‌ ಮತ್ತು ಘಟಕ ವೆಚ್ಚದಲ್ಲಿ ಶೇ.3ರಿಂದ 4ರಷ್ಟು ಕಡಿಮೆ ಮಾಡುವುದು ಹಾಗೂ ಆರ್‌ಇ ಸಲಕರಣೆಗಳ ಉತ್ಪಾದನೆ ಹೆಚ್ಚಿಸುವುದು ಇದರ ಸದುದ್ದೇಶವಾಗಿದೆ. ಈ ಮಟ್ಟದ ಜಿಎಸ್‌‍ಟಿ ಸುಧಾರಣೆಯಿಂದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಮುಂದಿನ ದಶಕದಲ್ಲಿ ಸರಿ ಸುಮಾರು 5ರಿಂದ 7 ಲಕ್ಷ ಹಸಿರು ಉದ್ಯೋಗಗಳು ಸೃಜನೆಯಾಗಲಿವೆ ಎಂದಿದ್ದಾರೆ.

ಸಾಮಾನ್ಯವಾಗಿ ಪ್ರತಿ ಮೆಗಾವ್ಯಾಟ್‌ ವಿದ್ಯುತ್‌ ಘಟಕಕ್ಕೆ ಸುಮಾರು 3.5 -4 ಕೋಟಿ ರೂ.ಮೊತ್ತದ ಅವಶ್ಯಕತೆ ಇರುತ್ತದೆ. ಈಗ ಸೌರ ಯೋಜನೆ ಬಂಡವಾಳ ವೆಚ್ಚವು ಪ್ರತಿ ಮೆಗಾವ್ಯಾಟ್‌ಗೆ 2025 ಲಕ್ಷ ರೂ.ಉಳಿತಾಯವಾಗಲಿದೆ. 500 ಮೆಗಾವ್ಯಾಟ್‌ ಸೌರ ಪಾರ್ಕ್‌ನ ಪ್ರಮಾಣದಲ್ಲಿ ಇದು 100 ಕೋಟಿ ರೂ.ಗಿಂತ ಹೆಚ್ಚಿನ ಯೋಜನಾ ವೆಚ್ಚವನ್ನು ಉಳಿಸುತ್ತದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

2030ರ ವೇಳೆಗೆ 500 ಜಿ ಡಬ್ಲ್ಯು ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿ ಹಾಗೂ ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸುತ್ತದೆ. ದೇಶೀಯ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡಲಿದೆ. ಸ್ವದೇಶಿ ನಿರ್ಮಿತ ಇಂಧನ ಉಪಕರಣಗಳ ಭರಾಟೆ ಹೆಚ್ಚಿಸುವುದಲ್ಲದೆ, ಈ ಮೂಲಕ ಮೇಕ್‌ ಇನ್‌ ಇಂಡಿಯಾ, ಆತನಿರ್ಭರ ಭಾರತ್‌ ಯೋಜನೆಗಳಿಗೆ ಬಲ ತುಂಬಲಿದೆ ಎಂದಿದ್ದಾರೆ.

ಭಾರತ 2030ರ ವೇಳೆಗೆ 100 ಜಿ ಡಬ್ಲ್ಯು ಸೌರ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಗುರಿ ಹೊಂದಿದ್ದರಿಂದ ದೇಶೀಯ ಉತ್ಪಾದನಾ ಕೇಂದ್ರಗಳಲ್ಲಿ ಹೊಸ ಹೂಡಿಕೆಯನ್ನು ಉತ್ತೇಜಿಸುತ್ತದೆ. ಪ್ರತಿ ಜಿ ಡಬ್ಲ್ಯು ಉತ್ಪಾದನೆ ಸುಮಾರು 5,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಕಡಿತವು ಹೂಡಿಕೆದಾರರ ವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಹೊಸ ದರದ ಜಿಎಸ್‌‍ಟಿಯು ವಿದ್ಯುತ್‌ ಖರೀದಿ ಒಪ್ಪಂದ ಮತ್ತು ಯೋಜನೆಗಳನ್ನು ತ್ವರಿತಗೊಳಿಸಲು ಅನುವು ಮಾಡಿಕೊಡುತ್ತದೆ. ಭಾರತ 2030ರ ವೇಳೆಗೆ ಸುಮಾರು 300 ಜಿ ಡಬ್ಲ್ಯು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರಿಸಲು ಯೋಜಿಸುತ್ತಿದ್ದು, ಶೇ.23ರಷ್ಟು ವೆಚ್ಚ ಕಡಿತವಾಗಿ ಹೂಡಿಕೆ ಸಾಮರ್ಥ್ಯ 11.5 ಲಕ್ಷ ಕೋಟಿ ರೂ. ಮೊತ್ತವನ್ನು ಮುಕ್ತಗೊಳಿಸುತ್ತದೆ. ಪ್ರತಿ ಸೌರಶಕ್ತಿ ವಾರ್ಷಿಕ 1.3 ಮಿಲಿಯನ್‌ ಟನ್‌ ಸಿಓ2 ಉಳಿಸುತ್ತದೆ. 2030ರ ವೇಳೆಗೆ ವರ್ಷಕ್ಕೆ ಹೆಚ್ಚುವರಿಯಾಗಿ 5070 ಮಿಲಿಯನ್‌ ಟನ್‌ ಸಿಓ2 ಹೊರಸೂಸುವಿಕೆ ತಪ್ಪಿಸಬಹುದು ಎಂದಿದ್ದಾರೆ.

1 ಕೋಟಿ ಮೊತ್ತದ ತಂಬಾಕು ಪದಾರ್ಥ ಜಪ್ತಿ

ಬೆಂಗಳೂರು, ಸೆ.18- ಸೂಕ್ತ ದಾಖಲೆ ಹಾಗೂ ಬಿಲ್‌ಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಒಂದು ಕೋಟಿ ರೂ. ಮೊತ್ತದ ತಂಬಾಕು ಪದಾರ್ಥಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ 850 ಬಾಕ್ಸ್ ಗಳಲ್ಲಿ ಸಾಗಾಣಿಕೆ ಮಾಡಲಾದ ಕಮಲಾಪಸಂದ್‌ ಪಾನ್‌ಮಸಾಲ, ಹನ್ಸ್ ಚಾಪ್‌, ಚೈನಿ ಫಿಲ್ಟರ್‌ ತಂಬಾಕು ಹಾಗೂ ಶಿಖರ್‌ ಪಾನ್‌ಮಸಾಲ ಎಂಬ ಪ್ರಸಿದ್ಧ ಬ್ರ್ಯಾಂಡ್‌ಗಳ ಸರಕನ್ನು ರೈಲಿನ ಮೂಲಕ ಸಾಗಾಣಿಕೆ ಮಾಡಲಾಗಿದೆ.

ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂನಲ್ಲಿ ಹಾಗೂ ವಾಹನಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ದಾಸ್ತಾನು ಮಾಡಿದ ಈ ಸರಕಿನ ಬಗ್ಗೆ ಖಚಿತ ಮಾಹಿತಿ ಆಧರಿಸಿ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಿಭಾಗದ ಜಾರಿ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಿಸ್ತೃತವಾದ ಪರಿಶೀಲನೆಯ ಬಳಿಕ ಈ ಸರಕುಗಳಿಗೆ ಸೂಕ್ತ ದಾಖಲೆಗಳು ಹಾಗೂ ವಾರಸುದಾರರಿಲ್ಲದಿರುವುದು ಕಂಡು ಬಂದಿದೆ.

ತಂಬಾಕು ಉತ್ಪನ್ನಗಳಿಗೆ ಶೇ. 28 ರಷ್ಟು ಜಿಎಸ್‌‍ಟಿ ಹಾಗೂ ಸೆಸ್‌‍ ಸೇರಿ ಒಟ್ಟು ಶೇ. 56ರ ರಷ್ಟು ತೆರಿಗೆ ಇದೆ. ಸುಮಾರು ಒಂದು ಕೋಟಿ ರೂ. ಮೌಲ್ಯದ ಈ ಸರಕಿನಲ್ಲಿ ಸರ್ಕಾರಕ್ಕೆ ಭಾರೀ ಪ್ರಮಾಣದ ರಾಜಸ್ವ ನಷ್ಟವಾಗಿರುವುದು ಕಂಡು ಬಂದಿದೆ.

ನಿಯಮಾನುಸಾರ ಖರೀದಿ ಮಾಡದೇ ಸೂಕ್ತ ರಸೀದಿಗಳಿಲ್ಲದೇ ಸಾಗಾಣಿಕೆ ಮಾಡಲಾಗುತ್ತಿದ್ದ ಸರಕುಗಳನ್ನು ವಶಕ್ಕೆ ತೆಗೆದುಕೊಂಡಿರುವ ಜಾರಿ ವಿಭಾಗದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಕನಿಷ್ಕ ತಿಳಿಸಿದ್ದಾರೆ.

ದಸರಾ ಉದ್ಘಾಟನೆ ವಿವಾದ ಸುಪ್ರೀಂ ಅಂಗಳಕ್ಕೆ

ಬೆಂಗಳೂರು,ಸೆ.18- ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ವಿಜೇತೆ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಅರ್ಜಿ ವಿಚಾರಣೆಯು ಶುಕ್ರವಾರ ನಡೆಯಲಿದ್ದು ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮತಿಸಿದೆ. ಕರ್ನಾಟಕ ಹೈ ಕೋರ್ಟ್‌ ಈ ಹಿಂದೆ ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಪಿಐಎಲ್‌ಗಳನ್ನು ವಜಾಗೊಳಿಸಿತ್ತು. ಗೌರವ್‌ ಎಂಬ ವಕೀಲರು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆಹೋಗಿದ್ದಾರೆ.

ನಾಡ ಹಬ್ಬ ದಸರಾ ದಸರಾ ಉದ್ಘಾಟನೆಗೆ ಹಿಂದೂಯೇತರ ವ್ಯಕ್ತಿಯನ್ನು ಸರ್ಕಾರ ಆಹ್ವಾನಿಸಿದೆ. ನಮ ಧಾರ್ಮಿಕ ನಂಬಿಕೆಗಳ ಪ್ರಕಾರ ದಸರಾ ಉದ್ಘಾಟನೆಯನ್ನು ಹಿಂದೂ ಧರ್ಮೀಯರೇ ಉದ್ಘಾಟಿಸಬೇಕು ಇದು ನಂಬಿಕೆಯ ಪ್ರಶ್ನೆಯಾಗಿದ್ದು ನಾಡ ದೇವತೆ ಒಪ್ಪದೆ ಇರುವವರು ಹಾಗೂ ಸಂಪ್ರದಾಯವನ್ನು ಪಾಲನೆ ಮಾಡದಿರುವವರು ಉದ್ಘಾಟನೆ ಮಾಡುವುದು ಸರಿಯಲ್ಲ. ಹೀಗಾಗಿ ತಕ್ಷಣವೇ ತುರ್ತು ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡರು.

ಇದಕ್ಕೆ ಸಮತಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಪೀಠ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ಒಪ್ಪಿಗೆ ನೀಡಿತು.

ಪ್ರಕರಣದ ಹಿನ್ನೆಲೆ :
ಪ್ರಸಕ್ತ ವರ್ಷದ ದಸರಾ ಹಬ್ಬ ಉದ್ಘಾಟನೆಗೆ ಬಾನು ಮುಷ್ತಾಕ್‌ ರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರತಾಪ್‌ ಸಿಂಹ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸರ್ಕಾರ ಈ ಆಹ್ವಾನವನ್ನು ಹಿಂಪಡೆಯಲು ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಹಾಕಿದ್ದರು. ದಸರಾ ಹಿಂದೂ ಧಾರ್ಮಿಕ ಹಬ್ಬ, ವೇದ, ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ಬಾನು ಮುಷ್ತಾಕ್‌ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿರುವುದರಿಂದ ಅವರಿಗೆ ಆಹ್ವಾನ ನೀಡಿರುವುದು ಸಾಂವಿಧಾನಿಕ ಹಕ್ಕುಗಳು ಹಾಗೂ ಧಾರ್ಮಿಕ ಭಾವನೆಗಳ ಉಲ್ಲಂಘನೆಯಾಗಿದ್ದು, ಧಾರ್ಮಿಕ ಸಂಪ್ರದಾಯದ ಪಾವಿತ್ರ್ಯ ಕಾಪಾಡಬೇಕೆಂದು ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿ ಆದೇಶ ನೀಡಿತ್ತು.

ಯಾವುದೇ ಹಕ್ಕು ಉಲ್ಲಂಘನೆ ಮಾಡಿಲ್ಲ. ಸಂವಿಧಾನದ ಯಾವ ವಿಧಿ ಕೂಡಾ ಉಲ್ಲಂಘನೆ ಆಗಿಲ್ಲ. ದೇವಸ್ಥಾನಕ್ಕೆ ಹಿಂದೂಯೇತರರು ಬರಬಾರದು ಎಂಬ ನಿಯಮವೂ ಇಲ್ಲ. ಮುಜರಾಯಿ ಇಲಾಖೆ ಕೂಡಾ ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಕೋರ್ಟ್‌ ಮುಂದೆ ಕೊಟ್ಟಿತ್ತು.

ಸರಕಾರ ಜಾತ್ಯತೀತವಾಗಿ ಕಾರ್ಯಕ್ರಮ ನಡೆಸುತ್ತಿದೆ. ಈ ಹಿಂದೆ ನಿಸಾರ್‌ ಅಹದ್‌ ಕೂಡಾ ಉದ್ಘಾಟಿಸಿದ್ದರು. ವಿರೋಧ ವ್ಯಕ್ತಪಡಿಸಿರುವ ಅರ್ಜಿದಾರರಿಗೆ ದಂಡ ವಿಧಿಸಬೇಕು ಎಂದು ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿದ್ದರು. ಚಾಮುಂಡಿ ತೇರಿಗೆ ನಾನು ಹೋಗಬೇಕೆಂದಿದ್ದೆ ಎಂದು ಸ್ವತಃ ಬಾನು ಮುಷ್ತಾಕ್‌ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ದೇವಿಯೇ ನನ್ನನ್ನ ಕರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದನ್ನೂ ಅಡ್ವೊಕೇಟ್‌ ಜನರಲ್‌ ಹೇಳಿದ್ದರು.

ತಮ ಹಕ್ಕು ಯಾವುದಾದರೂ ಉಲ್ಲಂಘನೆಯಾಗಿದೆಯೇ ಎಂದು ಅರ್ಜಿದಾರರಾದ ಪ್ರತಾಪ್‌ ಸಿಂಹ ಅವರನ್ನು ಕೋರ್ಟ್‌ ಪ್ರಶ್ನಿಸಿತ್ತು.ಹೀಗಾಗಿ ಸುಮನೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿ, ಅರ್ಜಿದಾರರ ವಿರುದ್ಧ ದಂಡ ಹಾಕುವುದಕ್ಕೆ ಹೈಕೋರ್ಟ್‌ ನಿರಾಕರಿಸಿತ್ತು. ಅಭಿಪ್ರಾಯ ಹೇಳುವಂಥಾದ್ದು ಎಲ್ಲರ ಹಕ್ಕು, ಆದರೆ ನಿಮ ಸಾಂವಿಧಾನಿಕ ಹಕ್ಕು ಏನು ಕಸಿಯಲಾಗಿದೆ? ಪೂಜಾರಿಯ ಹಕ್ಕನ್ನು ಕಸಿದರೆ, ವ್ಯಕ್ತಿಯ ಆಸ್ತಿ ಕಸಿದರೆ ಪ್ರಶ್ನೆ ಮಾಡಬಹುದು, ಆದರೆ ಇಲ್ಲಿ ನಿಮ ಯಾವ ಹಕ್ಕು ಕಸಿಯಲಾಗಿದೆ ಎಂದು ಹೈಕೋರ್ಟ್‌ ಪ್ರಶ್ನಿಸಿತ್ತು.

ಇದಕ್ಕೆ ಪ್ರತಾಪ್‌ ಸಿಂಹ ಪರ ವಕೀಲರು ಅವರಿಗೆ ಮೂರ್ತಿ ಪೂಜೆ ಬಗ್ಗೆ ನಂಬಿಕೆ ಇಲ್ಲ, ಅರಿಶಿನ ಕುಂಕುಮದ ಬಗ್ಗೆ ನಂಬಿಕೆ ಇಲ್ಲ, ಸಂಪ್ರದಾಯ ವಿರೋಧಿಯಾಗಿದ್ದಾರೆ ಎಂಬುದನ್ನೂ ಉಲ್ಲೇಖ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಸನಾತನ ಧರ್ಮ ಎಲ್ಲಾ ವಿಧದ ನಂಬಿಕೆಯನ್ನು ಒಳಗೊಂಡಿದೆ ಎಂದು ಪ್ರತಿವಾದ ಮಾಡಿದರು.
ಹೀಗಾಗಿ ದೇವಾಲಯ ಯಾರಿಗೋ ಒಬ್ಬರಿಗೆ ಸೇರಿದ್ದಲ್ಲ, ಎಲ್ಲರೂ ಹೋಗಿ ಬರಬಹುದು ಎಂದು ಸಮರ್ಥನೆ ಮಾಡಿಕೊಂಡಿದ್ದರಿಂದ ಮೂರೂ ಪಿಐಎಲ್‌ಗಳನ್ನು ವಜಾಗೊಳಿಸಲಾಗಿತ್ತು.

ಬೆಂಗಳೂರು ಅಲ್ಲ ಗುಂಡಿಯೂರು, ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ

ಬೆಂಗಳೂರು, ಸೆ.18- ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಈ ಅಪಮಾನಕ್ಕೆ ಹೊಣೆಗಾರರು. ಬೆಂಗಳೂರು ಮತ್ತು ಕರ್ನಾಟಕ ಇವತ್ತು ಅದಕ್ಷರು, ಭ್ರಷ್ಟರ ಕೈಯ್ಯಲ್ಲಿ ಸಿಕ್ಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಕಂಡೆಲ್ಲೆಲ್ಲ ಕಸದ ರಾಶಿ. ಗ್ರೇಟರ್‌ ಬೆಂಗಳೂರು ಎಂದರೆ ಇದೇನಾ? ಜಿಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಉದ್ಯಮಿಗಳು ಸರ್ಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಈ ಸರ್ಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ತೆರಿಗೆ ಹಾಕುವುದರಲ್ಲಿ ಸರ್ಕಾರದ್ದು ರಾಕೆಟ್‌ ವೇಗ. ಗುಂಡಿ ಮುಚ್ಚುವುದರಲ್ಲಿ ಕೊನೇಪಕ್ಷ ಆಮೆ ವೇಗವೂ ಇಲ್ಲ. ಕೊಳ್ಳೆ ಹೊಡೆಯುವುದರಲ್ಲಿ ಇರುವ ಉನಾದ, ಅಭಿವೃದ್ಧಿಯತ್ತ ವಿಪರೀತ ಉಪೇಕ್ಷೆ. ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್‌ ಬೆಂಗಳೂರು ಗಬ್ಬೆದ್ದು ನಾರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಗುಂಡಿ ಮುಚ್ಚುವುದಕ್ಕೆ ಬಿಡಿಗಾಸಿಲ್ಲದ ಸರ್ಕಾರ ಜನರಿಂದ ಕಿತ್ತುಕೊಳ್ಳುತ್ತಿರುವ ತೆರಿಗೆ ಹಣ ಏನು ಮಾಡುತ್ತಿದೆ? ಅದು ಯಾರ ಕಿಸೆ ಸೇರುತ್ತಿದೆ? ಇದಕ್ಕೆ ಉತ್ತರ ಬೇಕು ಎಂದು ಆಗ್ರಹಿಸಿರುವ ಅವರು, ಕಂಪನಿಗಳು ರಾಜ್ಯ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆರಾಜ್ಯಗಳತ್ತ ವಲಸೆ ಹೋಗುತ್ತಿವೆ. ಆ ರಾಜ್ಯಗಳು ಇಂಥ ಸಮಯಕ್ಕೇ ಕಾಯುತ್ತಾ ರಿಯಾಯ್ತಿ ಮೇಲೆ ರಿಯಾಯ್ತಿಗಳನ್ನು ನೀಡುತ್ತಿವೆ. ಭಂಡ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್‌ ಪರಂಪರೆ, ಹಿನ್ನೆಲೆ ಇದೆ. ಈ ಎಮೆ ಚರ್ಮದ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ ಎಂದು ಅವರು ಕಂಪನಿಗಳಲ್ಲಿ ಮನವಿ ಮಾಡಿದ್ದಾರೆ.

ಉತ್ತರಾಖಂಡ್‌ನಲ್ಲಿ ಭೂಕುಸಿತದಲ್ಲಿ 10ಕ್ಕೂ ಹೆಚ್ಚು ಮಂದಿ ಕಣ್ಮರೆ

ಡೆಹ್ರಾಡೂನ್‌,ಸೆ.18- ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಮೇಘಸ್ಫೋಟದಲ್ಲಿ ಕನಿಷ್ಠ ಪಕ್ಷ 10 ಜನ ಕಾಣೆಯಾಗಿದ್ದಾರೆ. ಭಾರೀ ಮಳೆಯಿಂದಾಗಿ ಆರು ಕಟ್ಟಡಗಳು ಅವಶೇಷಗಳಾಗಿ ಕುಸಿದಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಂಡವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ತಡರಾತ್ರಿ ನಂದಾ ನಗರದಲ್ಲಿ ಈ ಘಟನೆ ನಡೆದಿದೆ. ವಶೇಷಗಳ ಅಡಿಯಿಂದ ಇಬ್ಬರನ್ನು ರಕ್ಷಿಸಲಾಗಿದ್ದು, ವೈದ್ಯಕೀಯ ತಂಡ ಮತ್ತು ಮೂರು ಆಂಬ್ಯುಲೆನ್‌್ಸಗಳನ್ನು ಪೀಡಿತ ಪ್ರದೇಶಕ್ಕೆ ರವಾನಿಸಲಾಗಿದೆ.

ಕಾಣೆಯಾದ 10 ಜನರಲ್ಲಿ ಆರು ಮಂದಿ ಕುಂತ್ರಿ ಲಗಾ ಫಾಲಿ ಗ್ರಾಮದಲ್ಲಿ, ಇಬ್ಬರು ಸರ್ಪಾನಿಯಲ್ಲಿ ಮತ್ತು ಇಬ್ಬರು ಧುರ್ಮಾದಲ್ಲಿ ವರದಿಯಾಗಿದ್ದಾರೆ. ಹಿರಿಯ ವ್ಯಕ್ತಿಗೆ 75 ವರ್ಷ ಮತ್ತು ಕಿರಿಯ ವ್ಯಕ್ತಿಗೆ 10 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಚಮೋಲಿಯಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸ್ಥಳೀಯರ ಪ್ರಕಾರ, ಮೇಘಸ್ಫೋಟದ ಪರಿಣಾಮವಾಗಿ ಹಲವಾರು ಜನರು ಇನ್ನೂ ತಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಕೇವಲ ನಾಲ್ಕು ದಿನಗಳ ಹಿಂದೆ, ರಾಜ್ಯ ರಾಜಧಾನಿ ಡೆಹ್ರಾಡೂನ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ರಸ್ತೆಗಳು ಕೊಚ್ಚಿಹೋಗಿ ಮನೆಗಳು, ಅಂಗಡಿಗಳಿಗೆ ಹಾನಿಯಾಗಿದ್ದವು. ಎರಡು ಪ್ರಮುಖ ಸೇತುವೆಗಳು ಕುಸಿದು ಬಿದ್ದವು, ನಗರವನ್ನು ಸುತ್ತಮುತ್ತಲಿನ ಇತರ ಪ್ರದೇಶಗಳಿಗೆ ಸಂಪರ್ಕಿಸುವ ಬಹು ಮಾರ್ಗಗಳು ಕಡಿತಗೊಂಡಿದ್ದವು.
ರಾಜ್ಯ ಸರ್ಕಾರವು ಡೆಹ್ರಾಡೂನ್‌, ಚಂಪಾವತ್‌ ಮತ್ತು ಉಧಮ್‌ ಸಿಂಗ್‌ ನಗರಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದ್ದು, ಸೆ.20 ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಮತ್ತು ಮತ್ತಷ್ಟು ಸಾವು-ನೋವುಗಳು, ಭೂಕುಸಿತಗಳು ಮತ್ತು ಮೂಲಸೌಕರ್ಯ ಕುಸಿತದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.

ರಾಜ್ಯಾದ್ಯಂತ ಇಲ್ಲಿಯವರೆಗೆ 15 ಜನರು ಕಾಣೆಯಾಗಿದ್ದು, 900 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಅಗತ್ಯ ಸೇವೆಗಳ ತ್ವರಿತ ಪುನಃಸ್ಥಾಪನೆಯತ್ತ ಗಮನ ಹರಿಸಲಾಗಿದೆ ಎಂದು ಹೇಳಿದರು.

ಹಾನಿಗೊಳಗಾದ ಮೂಲಸೌಕರ್ಯಗಳನ್ನು ದುರಸ್ತಿ ಮಾಡುವುದು ಮತ್ತು ರಸ್ತೆ ಮತ್ತು ವಿದ್ಯುತ್‌ ಸಂಪರ್ಕವನ್ನು ಆದಷ್ಟು ಬೇಗ ಪುನಃಸ್ಥಾಪಿಸುವುದು ನಮ ಪ್ರಯತ್ನ ಎಂದು ಧಾಮಿ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಾನಿಗೊಳಗಾದ ವಿದ್ಯುತ್‌ ಮಾರ್ಗಗಳಲ್ಲಿ ಶೇ. 85 ರಷ್ಟನ್ನು ಪುನಃಸ್ಥಾಪಿಸಲಾಗಿದೆ ಮತ್ತು ಉಳಿದವುಗಳನ್ನು ಸಹ ಒಂದು ಅಥವಾ ಎರಡು ದಿನಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ವಾರ ಬೆಟ್ಟದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾದ ನಂತರ ಉತ್ತರಾಖಂಡದ ಜೊತೆಗೆ, ಹಿಮಾಚಲ ಪ್ರದೇಶದಲ್ಲೂ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಮಳೆಯಿಂದ ಉಂಟಾದ ವಿಪತ್ತುಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಡಾ.ವಿಷ್ಣುವರ್ಧನ್‌, ಶೃತಿ, ಉಪೇಂದ್ರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ

ಬೆಂಗಳೂರು,ಸೆ.18– ಚಂದನವನದ ಅಭಿಮಾನಿಗಳಿಗೆ ಸಂತಸದ ದಿನ. ಒಂದೇ ದಿನ ಮೂವರು ಕಲಾವಿದರ ಹುಟ್ಟುಹಬ್ಬ. ಡಾ.ವಿಷ್ಣುವರ್ಧನ್‌, ಶೃತಿ, ಉಪೇಂದ್ರ ಇವರ ಕಲಾವಿದರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ವಿಷ್ಣುವರ್ಧನ್‌ ಅವರಿಗೆ 75ನೇ ವರ್ಷದ ಸಂಭ್ರಮ. ಅಭಿಮಾನ್‌ ಸ್ಟುಡಿಯೋದಲ್ಲಿ ಸಮಾಧಿಯನ್ನ ನೆಲಸಮ ಮಾಡಲಾಗಿದ್ದರೂ ಹೀಗಾಗಿ ಇಂದು ಕೂಡ ಅಭಿಮಾನಿಗಳೆಲ್ಲಾ ಸೇರಿ ಆ ಜಾಗದಲ್ಲಿ ಅನ್ನದಾನ ಮಾಡುವ ಮೂಲಕ ವಿಷ್ಣು ಫೋಟೋಗೆ ಪೂಜೆ ಸಲ್ಲಿಸಿ ತಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಮೂಲಕ ಬಂದ ಶೃತಿ ಅವರಿಗೂ ಹುಟ್ಟುಹಬ್ಬದ ಸಂಭ್ರಮ. ಅವರ ಅಭಿಮಾನಿ ಬಳಗವೆಲ್ಲಾ ಸೇರಿ, ಕುಟುಂಬಸ್ಥರೆಲ್ಲ ಒಟ್ಟುಗೂಡಿ ಇಂದು ಇಸ್ಕಾನ್‌ ದೇವಸ್ಥಾನದಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.

50ನೇ ವರ್ಷದ ಹುಟ್ಟುಹಬ್ಬ ಮಾಡಬೇಕೆಂಬುದು ಮಗಳ ಆಸೆಯಾಗಿತ್ತು. ಇಂದಿನ ಸಂಭ್ರಮಕ್ಕೆ ಚಿತ್ರರಂಗದ ಎಲ್ಲಾ ನಟ ನಟಿಯರು ಬಂದಿರೋದು ನನಗೆ ಬಹಳ ಖುಷಿ ತರಿಸಿದೆ ಎಂದು ಶೃತಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ ಅವರು ಕನ್ನಡದಲ್ಲಿ ಹಲವು ಭಿನ್ನ ಸಿನಿಮಾಗಳನ್ನು ನೀಡಿ ಹೊಸ ರೀತಿಯಲ್ಲಿ ಆಲೋಚಿಸುವಂತೆ ಮಾಡಿದವರು, ಇವರು 57ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಬೆಳಗ್ಗೆಯಿಂದಲೇ ಉಪೇಂದ್ರ ಮನೆಯ ಮುಂದೆ ಅಭಿಮಾನಿಗಳು ನೆರೆದಿದ್ದು, ತನ್ನಿಷ್ಟದ ನಟನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಮೂವರು ದಿಗ್ಗಜ ನಟರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಹೊಸ ಹಂತ ತಲುಪಲಿದೆ ಭಾರತ-ಅಮೆರಿಕ ಬಾಹ್ಯಾಕಾಶ ಪಾಲುದಾರಿಕೆ

ಹೂಸ್ಟನ್‌, ಸೆ.18-ಭಾರತ ಮತ್ತು ಅಮೆರಿಕ ಬಾಹ್ಯಾಕಾಶ ಪಾಲುದಾರಿಕೆ ಹೊಸ ಹಂತದ ಆರಂಭವನ್ನು ಸೂಚಿಸಿದೆ.ವಾಷಿಂಗ್ಟನ್‌ ಡಿಸಿಯಲ್ಲಿ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಅಧಿಕಾರಿಗಳು ಮತ್ತು ಗಗನಯಾತ್ರಿಗಳು ಎರಡು ದೇಶಗಳ ಸಹಕಾರವು ಈಗ ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಾರ್ಯಾಚರಣೆಗಳಿಗೆ ಹೇಗೆ ಎಂಬುದರ ಬಗ್ಗೆ ಬೆಳಕು ಚಲ್ಲಿದೆ.

ಭವಿಷ್ಯದ ಪಾಲುದಾರಿಕೆಯ ಗಡಿಗಳು ಎಂಬ ಕಾರ್ಯಕ್ರಮ ಇಲ್ಲಿನ ಇಂಡಿಯಾ ಹೌಸ್‌‍ನಲ್ಲಿ ನಡೆಸಲಾಯಿತು ಈ ವೇಳೆ ನಾಸಾ-ಇಸ್ರೋ ಜಂಟಿಯಾಗಿ ನಿಸಾರ್‌ ಉಪಗ್ರಹ ಯಶಸ್ವಿ ಉಡಾವಣೆ ಮತ್ತು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ ಆಕ್ಸಿಯಮ್‌ ಮಿಷನ್‌ -4 ಸೇರಿದಂತೆ ಇತ್ತೀಚಿನ ಮೈಲಿಗಲ್ಲುಗಳ ಬಗ್ಗೆ ಹರ್ಷ ವ್ಯಕ್ತವಾಯಿತು.

ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್‌ ಕ್ವಾತ್ರಾ ಮಾತನಾಡಿ ಎರಡೂ ದೇಶಗಳ ಪಾಲುದಾರಿಕೆಯನ್ನು ವೈಜ್ಞಾನಿಕ ಪರಿಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ವಾಣಿಜ್ಯ ಸಹಕಾರವನ್ನು ಮುಂದುವರಿಸಲು ಒಂದು ಕ್ರಿಯಾತಕ ವೇದಿಕೆ ಎಂದು ಬಣ್ಣಿಸಿದರು.

ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಪರಿಣಾಮಕಾರಿ ಪರಿಶೋಧನೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮಿದೆ ಮತ್ತು ಅಮೆರಿಕ ಜೊತೆಗಿನ ಜಂಟಿ ಪ್ರಯತ್ನಗಳು ಮುಂದಿನ ದಶಕಗಳಲ್ಲಿ ಬಾಹ್ಯಾಕಾಶಕ್ಕೆ ಮಾನವ ಮಿಷನ್‌ಗೆ ವೇಗ ಸಿಗಲಿದೆ ಎಂದು ಅವರು ಹೇಳಿದರು. ನಾಸಾದ ಭೂ ವಿಜ್ಞಾನ ವಿಭಾಗದ ನಿರ್ದೇಶಕಿ ಡಾ. ಕರೆನ್‌ ಸೇಂಟ್‌ ಜರ್ಮೈನ್‌ ತಮ ಭಾಷಣದಲ್ಲಿ ಇದು ಪರಿಣತರನ್ನು ಒಟ್ಟುಗೂಡಿಸುವುದು,ವೈಜ್ಞಾನಿಕ ಪ್ರಗತಿಯನ್ನು ಹೇಗೆ ವೇಗಗೊಳಿಸುತ್ತದೆ ಎಂಬುದನ್ನು ಪ್ರದರ್ಶಿಸಿದೆ ಎಂದರು.

ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸೌ, ನಿಕ್‌ ಹೇಗ್‌ ಮತ್ತು ಬುಚ್‌ ವಿಲೋರ್‌ ಶುಕ್ಲಾ ಜೊತೆಗೆ ವರ್ಚುವಲ್‌ ಪ್ಯಾನೆಲ್‌ಗೆ ಸೇರಿದರು. ಕಕ್ಷೆಯಲ್ಲಿ ಕ್ಷಣಗಳು ಎಂಬ ಶೀರ್ಷಿಕೆಯ ಪ್ಯಾನಲ್‌ ಚರ್ಚೆಯ ಸಮಯದಲ್ಲಿ, ಅವರು ತರಬೇತಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಜೀವನ ಮತ್ತು ಮಾನವ ಬಾಹ್ಯಾಕಾಶ ಹಾರಾಟದ ಬದಲಾಗುತ್ತಿರುವ ಮುಖದ ಬಗ್ಗೆ ಪ್ರಾಮಾಣಿಕ ಕಥೆಗಳನ್ನು ಹಂಚಿಕೊಂಡರು.

ಶುಕ್ಲಾ ಅವರ ಪ್ರಯಾಣವು ಅಂತರರಾಷ್ಟ್ರೀಯ ಪಾಲುದಾರಿಕೆಗಳ ಬಲ ಮತ್ತು ಜಾಗತಿಕ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದ್ದು ಮೋದಿ ಹೇಳಿದಂತೆ ಕೇಳುತ್ತಿದೆ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಸೆ.18- ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದ್ದು, ಪ್ರಧಾನಿ ಹೇಳಿದಂತೆ ಕೇಳುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿಯವರು ಮತಗಳವು ಆರೋಪವನ್ನು ಮಾಡಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಮೂರನೇ ಅವಧಿಯಲ್ಲಿ ಜನಪ್ರಿಯತೆ ಕಡಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹವಾ ಕೂಡ ಕಡಿಮೆಯಾಗಿದ್ದು, ವಿರೋಧಪಕ್ಷಗಳ ಮತ ತೆಗೆದು ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಬಿಜೆಪಿ ಅಧಿಕಾರ ಇರುವ ಕಡೆ ಇದು ಹೆಚ್ಚು ನಡೆಯುತ್ತದೆ. ಈ ರೀತಿ ಮಾಡದಿದ್ದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಗಾಂಧಿನಗರ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರು ಬಳಸಲಾಗಿದೆ. ಇಂತಹುದನ್ನು ಮಾಡುವ ಮೂಲಕ ಬಿಜೆಪಿಯವರು ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಟೀಕಿಸಿದರು.

ಮಾಲೂರು ಶಾಸಕ ನಂಜೇಗೌಡ ಅವರ ಆಯ್ಕೆ ಅಸಿಂಧು ವಿಚಾರ, ನ್ಯಾಯಾಲಯಕ್ಕೆ ಬಿಟ್ಟದ್ದು. ನಮಿಂದ ಅಕ್ರಮ ಆಗಿಲ್ಲ. ಚುನಾವಣೆ ನಡೆದಾಗ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು ಎಂದರು.

ಕ್ರಿ.ಪೂ.26450 ವರ್ಷಗಳ ಹಳೆಯ ಹಿಂದೂ ಕಲ್ಪವಿಗ್ರಹ

ಬೆಂಗಳೂರು, ಸೆ.18- ಲೇ ಮೆಂಥಾಂಗ್‌ನಲ್ಲಿ ಸುಮಾರು 1959-60ರಲ್ಲಿ ಖಾಂಫಾ ಅಂಗರಕ್ಷರರೊಂದಿಗೆ ಬಂದಿದ್ದ ಟಿಬೇಟಿಯನ್‌ ಸನ್ಯಾಸಿಯೊಬ್ಬರು ಭಾರಿ ಗಾತ್ರದ ವಕ್ಷಸ್ಥಳವುಳ್ಳ ಪ್ರತಿಮೆಯೊಂದನ್ನು ಸಿಐಎ ಅಧಿಕಾರಿಗಳಿಗೆ ನೀಡಿದರೆಂದು ಹೇಳಲಾಗಿದೆ. ಈ ಎದೆವಿಗ್ರಹ ಮತ್ತು ಅದರ ಪ್ರಾಮುಖ್ಯವನ್ನು ಸಿಐಎ ಅಧಿಕಾರಿಗಳಿಗೆ ಸನ್ಯಾಸಿ ವಿವರಿಸಿದರು.

ಕುತೂಹಲಗೊಂಡ ಸಿಐಎ ಅಧಿಕಾರಿಯೊಬ್ಬರು ಆ ಬೌದ್ಧ ಸನ್ಯಾಸಿ ಆ ಎದೆವಿಗ್ರಹದ ಬಗ್ಗೆ ತಮಗೆ ಹೇಳಿದ್ದನ್ನು ಬರೆದಿರಿಸಿದರು. ಆದರೆ ಆ ವೇಳೆಗೆ ಅಮೆರಿಕದಲ್ಲಿ ವಿಗ್ರಹಾರಾಧನೆ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆ ಸಮಯದಲ್ಲಿ ಟಿಬೆಟ್‌ನೊಳಗೆ ಮುನ್ನುಗ್ಗುತ್ತಿದ್ದ ಚೀನೀ ಪಡೆಗಳ ವಿರುದ್ಧ ಗೆರಿಲ್ಲಾ ಸಮರ ನಡೆಸುವುದೇ ಅಮೆರಿಕ ಪಡೆಗಳ ಗುರಿಯಾಗಿತ್ತು.

ಅದೇ ವಾರ ಯುದ್ಧದಲ್ಲಿ ಟಿಬೆಟಿಯನ್‌ ಸನ್ಯಾಸಿ ಮತ್ತು ಅಂಗರಕ್ಷಕರು ಮಡಿದರು. ಸಿಐಎ ಅಧಿಕಾರಿ ಚೀನೀ ಪಡೆಗಳಿಂದ ಆ ವಿಗ್ರಹವನ್ನು ಪಡೆದುಕೊಂಡರು. ಆ ನಿಗೂಢ ಎದೆ ವಿಗ್ರಹವನ್ನು ಏನು ಮಾಡಬೇಕೆಂದು ಹೊಳೆಯದೆ ಸಿಐಎ ಅಧಿಕಾರಿಗಳು ಅದನ್ನು ವಿಮಾನವೊಂದರಲ್ಲಿರಿಸಿ ಭಾರತದಲ್ಲಿನ ರಹಸ್ಯ ವಾಯುನೆಲೆಯೊಂದಕ್ಕೆ ರವಾನಿಸಿದರು. ತರುವಾಯ ಕೊಲರಾಡೋದ ವೈಲ್‌ನಲ್ಲಿ ಈಗ ಬಳಕೆಯಲ್ಲಿಲ್ಲದ ಸೇನಾ ನೆಲೆಯಾದ ಕ್ಯಾಂಪ್‌ ಹಾಲೆಗೆ ಸಾಗಿಸಲಾಯಿತು. ಕೆಲವು ವಾರಗಳ ಬಳಿಕ ವಾಷಿಗ್ಟನ್‌ ಡಿಸಿಯ ಸಿಐಎ ಉಗ್ರಾಣದಲ್ಲಿ ಎಸ್‌‍ಟಿ ಸರ್ಕಸ್‌‍ ಮುಸ್ತಾಂಗ್‌-0813 ಎಂಬ ಶೀರ್ಷಿಕೆಯಡಿ ಇರಿಸಲಾಯಿತು.

ತಿಂಗಳುಗಳು ಉರುಳಿದವು. ಸಿಐಎನ ಕೆಲವು ಅಧಿಕಾರಿಗಳು ಆ ವಕ್ಷಸ್ಥಳ ಮತ್ತು ಅದರ ಅಂಶಗಳ ಬಗ್ಗೆ ತಿಳಿಯುವ ಆಸಕ್ತಿ ತಳೆದರು. ಶೋಧ ಕೈಗೊಂಡಾಗ ಅದರೊಳಗೆ ಒಂದು ವಿಚಿತ್ರ ಹಸ್ತಪ್ರತಿ ದೊರೆಯಿತು. ಇದರ ಜೊತೆಗೆ ಅಸಾಧಾರಣವಾದ ಆ ಪುರಾತನ ವಿಗ್ರಹದ ವಿಶಿಷ್ಟ ವಿನ್ಯಾಸವು ಅವರನ್ನು ವಿಗ್ರಹವನ್ನು ಮಾಡಲಾದ ಮರದ ರೇಡಿಯೋ ಕಾರ್ಬನ್‌ ಪರೀಕ್ಷೆ ಮಾಡಲು ಪ್ರೇರೇಪಿಸಿತು.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ರೇಡಿಯೇಷನ್‌ ಪ್ರಯೋಗಾಲಯ ತಿಳಿಸಿದ ಫಲಿತಾಂಶ ಅವರನ್ನು ನಿಬ್ಬೆರಗಾಗಿಸಿತು. ಆ ಪುರಾತನ ವಿಗ್ರಹ ಇಂದಿನ ಯುಗಕ್ಕೆ ಸೇರಿರಲಿಲ್ಲ. ಈ ವಿಷಯವನ್ನು ಸನ್ಯಾಸಿ ಮೊದಲೇ ಪ್ರತಿಪಾದಿಸಿದ್ದ. ಆದರೆ ಸಿಐಎ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆ ವಿಗ್ರಹವು ದ್ವಾಪರಯುಗಕ್ಕೆ ಸೇರಿದ್ದಾಗಿದೆ ಎಂದು ಪರೀಕ್ಷಾ ಫಲಿತಾಂಶಗಳು ತಿಳಿಸಿದವು. ಇದು ಇಲ್ಲಿಯವರೆಗೆ ದೊರೆತಿರುವ ಅತಿ ಹಳೆಯ ಮಾನವಕೃತ ಕಲಾಕೃತಿಯಾಗಿದೆ.ಈ ವಿಗ್ರಹವು ಕ್ರಿಸ್ತ ಪೂರ್ವ ಸುಮಾರು 26,450ರ ಕಾಲಕ್ಕೆ ಸೇರಿದೆ ಎಂದು ಗೊತ್ತಾಯಿತು. ಇಂದು ಇದು 25,450 ವರ್ಷಗಳಿಗಿಂತ ಹಳೆಯದಾಗಿದೆ ಎಂದು ಹೇಳಲಾಗಿದೆ. ಮಹಾಭಾರತದಲ್ಲಿ ಬಣ್ಣಿಸಿರುವ ಕುರುಕ್ಷೇತ್ರ ಮಹಾಯುದ್ಧ ನಡೆದಿದ್ದ ಕಾಲಕ್ಕಿಂತ ಈ ವಿಗ್ರಹವು 23,300 ವರ್ಷಗಳಷ್ಟು ಪ್ರಾಚೀನವಾದದ್ದಾಗಿದೆ ಎನ್ನುವುದು ವಿಶೇಷ.

ಈ ವಿಗ್ರಹವನ್ನು ಪರೀಕ್ಷಿಸಿರುವ ತಜ್ಞರು ಇದು ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಹಿಂದೂ ವಿಗ್ರಹವಾಗಿದೆ ಎಂದು ತಿಳಿಸಿದ್ದಾರೆ.ಈಜಿಪ್ಟಿಯನ್‌, ಮೆಸಪಟೋಮಿಯನ್‌ ಅಥವಾ ಸಿಂಧೂಕಣಿವೆ ನಾಗರಿಕತೆ ಈ ಉತ್ಖನದ ಮೂಲಕ ಬೆಳಕಿಗೆ ಬಂದ ಯಾವ ನಾಗರಿಕತೆಯೂ 6000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿರಲಿಲ್ಲ!