Thursday, November 6, 2025
Home Blog Page 13

ರಾಜ್ಯೋತ್ಸವ ಭಾಷಣದಲ್ಲಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕುರಿತು ಮತ್ತೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.1- ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಪ್ರತ್ಯೇಕ ಹಾಗೂ ಪರೋಕ್ಷ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲೇ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾಡು ಎಂದರೆ ರಸ್ತೆ, ಸೇತುವೆ, ವಿದ್ಯುತ್‌, ರೈಲು, ವಿಮಾನ, ಸುಸಜಿತ ಕಟ್ಟಡಗಳಷ್ಟೇ ಅಲ್ಲ, ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಮುಖ್ಯ. ಅನ್ಯಭಾಷೆ, ಸಂಸ್ಕೃತಿ, ಜಾತಿ,ಧರ್ಮ ಹಾಗೂ ಇತರ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.

ಜಗತ್ತಿನ ಯಾವ ಭಾಷೆಗೂ ಇಲ್ಲದ ಬಿಕ್ಕಟ್ಟು ಕನ್ನಡಕ್ಕೆ ಬಂದುದೊದಗಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆಯ ನಿರ್ಲಕ್ಷದಿಂದಾಗಿ ಸಮಸ್ಯೆ ಹೆಚ್ಚಾಗಿದೆ. ಮುಂದುವರಿದ ಭಾಷಾಗಳಲ್ಲಿನ ಮಕ್ಕಳು ತಮ ಮಾತೃ ಭಾಷೆಯಲ್ಲೇ ಯೋಚಿಸಿ, ಕಲಿಯುತ್ತಿದ್ದಾರೆ. ನಮಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿಯಿದೆ. ಹಿಂದಿ, ಇಂಗ್ಲಿಷ್‌ನಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಇದು ನಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರಬೇಕಿದ್ದು, ಕೇಂದ್ರ ಸರ್ಕಾರ ಇತ್ತ ಗಮನ ಹರಿಸಿಬೇಕು. ಜಗತ್ತಿನ ಮುಖ್ಯ ದೇಶಗಳಲ್ಲಿ ನಡೆಯುತ್ತಿರುವ ಅನ್ವೇಷಣೆಗಳಿಗೆ ಸರಿಸಾಟಿಯಾಗಿ ನಿಲ್ಲುವ ಆಲೋಚನೆಗಳನ್ನು ಕಲಿಸುವುದು ಬಹಳ ಮುಖ್ಯವಾಗಿದೆ ಎಂದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ, ಕರ್ನಾಟಕದಿಂದ 4.5 ಲಕ್ಷ ಕೋಟಿ ರುಪಾಯಿಗಿಂತಲೂ ಹೆಚ್ಚಿನ ತೆರಿಗೆ ಸಂಪತ್ತನ್ನು ನೀಡಲಾಗುತ್ತಿದೆ. ಅದರ ಪ್ರತಿಯಾಗಿ ಬಿಡಿಗಾಸು ಮಾತ್ರ ಕೊಡುವ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು.ಹಿಂದಿ ಭಾಷೆಯನ್ನು ಏರುವ ನಿರಂತರ ಹುನ್ನಾರ ನಡಯುತ್ತಿದೆ. ಹಿಂದಿ ಮತ್ತು ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಕನ್ನಡ ಸೇರಿದಂತೆ ಇತರ ದೇಶೀಯ ಭಾಷೆಗಳನ್ನು ಕಡಗಣಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನೀಡದೆ ವಂಚಿಸಲಾಗುತ್ತಿದೆ. ಕನ್ನಡ ಶಾಸ್ತ್ರೀಯ ಭಾಷೆಗೆ ನೀಡಬೇಕಾದ ಅನುದಾನವನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಈ ಕನ್ನಡ ವಿರೋಧಿ ನೀತಿಯನ್ನು ವಿರೋಧಿಸಬೇಕಾಗಿದೆ ಎಂದು ಕರೆ ನೀಡಿದರು.

ಕೇಂದ್ರ ಸರ್ಕಾದ ಮಲತಾಯಿ ಧೋರಣೆಯಿಂದ ಒಕ್ಕೊರಲಿನಿಂದ ಖಂಡಿಸಬೇಕಿದೆ. ಕಳೆದ 5 ವರ್ಷಗಳಲ್ಲಿ 15ನೇ ಹಣಕಾಸು ಆಯೋಗದ ಮೂಲಕ ಮಾಡಿದ ದ್ರೋಹದಿಂದ ರಾಜ್ಯಕ್ಕೆ 70 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ಅನುದಾನವನ್ನು ನೀಡದಿರುವುದು ಮತ್ತು ಯೋಜನೆಗಳ ಕಡಗಣೆನಿಯಿಂದ ರಾಜ್ಯಕ್ಕೆ ಒಟ್ಟು 1 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದ್ದು, ರಾಜ್ಯ ಸರ್ಕಾರದ ಹೋರಾಟ ನಡೆಸುತ್ತಿದೆ. ಜನ ಸಮುದಾಯವೂ ಗಂಭೀರವಾಗಿ ಪ್ರಶ್ನಿಸಬೇಕಿದೆ. ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸಿ ರಾಜ್ಯಗಳ ಅಧಿಕಾರಗಳನ್ನು ಮೊಟಕುಗೊಳಿಸುವ ಹೊಸಹಾತುಶಾಹಿ ಮನೋಭಾವ ಇತ್ತೀಚೆಗೆ ಕಾಣಿಸುತ್ತಿದೆ. ಇಡೀ ನಾಡು ಕೇಂದ್ರ ವಿರುದ್ಧ ಪ್ರತಿಭಟಿಸದಿದ್ದೆ ನಮನ್ನು ಅಪೋಶನ ತೆಗೆದುಕೊಳ್ಳಬಹುದು ಎಂದು ಆತಂಕ ವ್ಯಕ್ತ ಪಡಿಸಿದರು.

ರಾಜಕೀಯ ಕಾರಣಕ್ಕೆ ರಾಜ್ಯದ ಸೌಹಾರ್ದ ಪರಂಪರೆಗೆ ಕೋಮುವಾದಿ ಶಕ್ತಿಗಳು ನಿರಂತರವಾಗಿ ವಿಷ ಹಾಕುತ್ತಿವೆ. ಭಾರತವನ್ನು ಹಿಟ್ಲರ್‌ನ ಜರ್ಮನಿ, ಮುಸಲೋನಿಯ ಇಟಲಿ, ಟ್ರಾಂಕೋಸ್‌‍ನ ಸ್ಪೇನ್‌ ಮಾದರಿಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಎಲ್ಲಾ ಧರ್ಮದಲ್ಲೂ ಮೂಲ ಭೂತವಾದಿಗಳಿದ್ದಾರೆ. ಯುವ ಜನ ಇದಕ್ಕೆ ಬಲಿಯಾಗಬಾರದು. ವೈಚಾರಿಕವಾಗಿ ಯೋಚಿಸುವ ಗುಣ ಬೆಳೆಸಬೇಕು.
ಕೃತಕಬುದ್ಧಿಮತ್ತೆ ಜಗತನ್ನು ಆಕ್ರಮಿಸುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗುವ ಆತಂಕವಿದೆ. ಹೊಸ ಸವಾಲಿಗೆ ತಕ್ಕ ಹಾಗೆ ಭಾಷೆಯನ್ನು ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ತಂತ್ರಜ್ಞರು ಹಾಗೂ ವಿದ್ವಾಂಸರು ಒಗ್ಗೂಡಿ ಕೆಲಸ ಮಾಡಬೇಕು. ಕನ್ನಡ ಭಾಷೆ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟಕ್ಕೇರಿಸಲು ಹೊಸ ನೀತಿ ರೂಪಿಸುವುದಾಗಿ ಹೇಳಿದರು.

ಹೊಸ ತಲೆ ಮಾರಿನ ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸಿ ನಮ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳೋಣ. ಯುವ ತಲೆಮಾರು ಎದ್ದು ನಿಂತರೆ, ಕನ್ನಡ ಮತ್ತು ಕರ್ನಾಟಕವನ್ನು ಮುಂದುವರೆದ ದೇಶಗಳ ಮಟ್ಟಕ್ಕೆ ಬೆಳೆಸಬೇಕಾಗಿದೆ. ಜನರಲ್ಲಿ ಭಾಷೆ ಮತ್ತು ಸಂಸ್ಕೃತಿಯ ಅಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳನ್ನು ತಮ ಸರ್ಕಾರ ಆಯೋಜಿಸುತ್ತಲೆ ಇದೆ. ವಾಣಿಜ್ಯ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸಲಾಗಿದ್ದು, ಹೆಸರಾಯಿತು ಕನ್ನಡ ಉಸಿರಾಯಿತು ಕನ್ನಡ ಅಭಿಯಾನ ನಡೆಸಲಾಗಿದೆ. ವಿಧಾನಸೌಧದ ಬಳಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಭಾಷೆ ನಮ ಹೆಮೆಯ ಪರಂಪರೆ ಮತ್ತು ಸಂಸ್ಕೃತಿ ಅಭಿವ್ಯಕ್ತಿಯ ರೂಪ. ಕನ್ನಡಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಮಹಾ ಕಾವ್ಯ ಮಹಾಭಾರತದಲ್ಲಿ ದಕ್ಷಿಣ ಭಾರತದ ಶಿಲ್ಪ ಕಾವ್ಯಗಳಲ್ಲಿ ಕನ್ನಡ ಉಲ್ಲೇಖ ಕಂಡು ಬರುತ್ತಿದೆ. ಕನ್ನಡ ನಾಡಿನ ಸಾಮ್ರಾಜ್ಯ ಪ್ರಭಾವ ಭಾರತದೆಲ್ಲೆಡೆ ಇದ್ದು, ಬಂಗಾಳದ ಸೇನಾ ರಾಜವಂಶರು ಹಾಗೂ ಬಿಹಾರದ ಯಾದವರು ತಮನ್ನು ತಾವು ಕನ್ನಡದ ವಂಶಸ್ತರು ಎಂದು ಹೇಳಿಕೊಂಡಿದ್ದಾರೆ.
ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ನಾಡಿನ ಅಸೀತೆಗಾಗಿ ನಡೆದ ಗೋಕಾಕ್‌ ಚಳುವಳಿಗಾರರನ್ನು ಸರಿಸಿಕೊಳ್ಳುವುದು ಅನಿವಾರ್ಯ ಎಂದರು.

ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡಕ್ಕೆ ತನ್ನದೇ ಆದ ಭಾಷಾ ಸ್ಥಾನಮಾನ ಸಿಕ್ಕಿದೆ. ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿ, ಬಹು ಜನಾಂಗಗಳು ಒಟ್ಟು ಗೂಡಿ ಬದಕುವುದನ್ನು ನಮ ಹಿರಿಯರು ಕಂಡುಕೊಂಡಿದ್ದರು. ಮೊದಲಿನಿಂದಲೂ ನಮಲ್ಲಿ ಐಕ್ಯತೆಯೊಂದಿಗೆ ನಾಡನ್ನು ಕಟ್ಟಿ ಬೆಳೆಸಲಾಗಿದೆ. ನಾವು ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.


ಶಿಕ್ಷಣ ಬಲರ್ವಧನೆಗೆ 65 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ವಸತಿ ಶಾಲೆಗಳಲ್ಲಿ 8.36 ಲಕ್ಷ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಅಗತ್ಯ ಇರುವ ಕಡೆಗಳಲ್ಲಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಆರಂಭಿಸುತ್ತಿದ್ದೇವೆ. ರಾಜ್ಯಗಳಲ್ಲಿ ಶತಮಾನ ಪೂರೈಸಿದ 3 ಸಾವಿರ ಸರ್ಕಾರಿ ಶಾಲೆಗಳಿವೆ, ಅವುಗಳ ಜೀರ್ಣೋದ್ಧಾರ ಮಾಡಲಾಗುವುದು. 800 ಸರ್ಕಾರಿ ಶಾಲೆಗಳನ್ನು ಪಬ್ಲಿಕ್‌ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 180 ಮದ್ರಾಸ್‌‍ಗಳಲ್ಲಿ ಕನ್ನಡ ಕಲಿಸಲಾಗುತ್ತಿದ್ದು, ಅದನ್ನು 1,500 ಮದ್ರಾಸಗಳಿಗೆ ವಿಸ್ತರಿಸಲಾಗುತ್ತಿದೆ. 483 ಕೋಟಿ ರೂ. ವೆಚ್ಚಗಳಲ್ಲಿ 100 ಉರ್ದು ಶಾಲೆಗಳನ್ನು ಕೆಪಿಎಸ್‌‍ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷರ ನೇಮಕಾತಿ ಹಾಗೂ ತರಬೇತಿಗಳನ್ನು ಕಾಲಕಾಲಕ್ಕೆ ಕೈಗೊಳ್ಳಲಾಗಿದೆ. 800 ಪದವಿ ಪೂರ್ವ ಉಪನ್ಯಾಸಕರು ಸೇರಿ ಹೊಸದಾಗಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.


ಪ್ರೊಫೆಸರ್‌ ಸುಖದೇವ್‌ ಭೋರಟ್‌ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ವರದಿ ನೀಡಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಲಾಗುವುದು. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ ಎಂದರು.ಮೊಬೈಲ್‌ ಬಳಕೆಯಿಂದ ಮಕ್ಕಳಲ್ಲಿನ ಅಪಾಯಗಳ ಬಗ್ಗೆ ಇದೇ ವೇಳೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ತಂತ್ರಜ್ಞಾನ ಬಳಕೆ ಅನುಕೂಲದ ಜೊತೆಗೆ ಅನಾನುಕೂಲಗಳನ್ನು ತಂದೊಡುತ್ತಿದೆ ಎಂದರು.

ರಾಜ್ಯದಲ್ಲಿ ಪಂಚಖಾತ್ರಿ ಯೋಜನೆಗಳ ಮೂಲಕ 1.04 ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ರವಾನಿಸಲಾಗಿದೆ ಎಂದು ಪ್ರತಿಯೊಂದು ಯೋಜನೆಯ ಬಗ್ಗೆಯೂ ವಿವರಣೆ ನೀಡಿದರು. 2024-25ನೇ ಸಾಲಿನ ವಿದೇಶಿ ಹೂಡಿಕೆಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕೆ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ. 50107 ಕೋಟಿ ವಿದೇಶಿ ನೇರ ಹೂಡಿಕೆ ರಾಜ್ಯದಲ್ಲಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ದೇಶದಲ್ಲೇ ಶೇ.51ರಷ್ಟು ಹೂಡಿಕೆ ಪಾಲನ್ನು ಪಡೆದಿವೆ.

ಹಿಂದಿನ ಸರ್ಕಾರ ವಿದ್ಯುತ್‌ ಉತ್ಪಾದನೆಯನ್ನು ನಿರ್ಲಕ್ಷ್ಯಿಸಿತ್ತು, ನಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ನವೀಕೃತ ಇಂಧನವೇ 24 ಸಾವಿರ ಮೇಗಾವ್ಯಾಟ್‌ ಆಗಿದೆ. ತಲಾ ಆದಾಯದಲ್ಲೂ ಕಳೆದ 10 ವರ್ಷದಲ್ಲಿ ಶೇ.101ರಷ್ಟು ಸಾಧನೆ ಮಾಡಲಾಗಿದೆ. ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಗೋವಿನಿಂದ ಗ್ರಾಹಕರವರೆಗೆ ಎಂಬ ಶೀರ್ಷಿಕೆಯ ನಂದಿನ ಬ್ರಾಂಡ್‌ 175ಕ್ಕೂ ಹೆಚ್ಚಿ ಹಾಲಿ ಉತ್ಪನ್ನಗಳನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ 8 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಬಂಡವಾಳ ವೆಚ್ಚ ಹೆಚ್ಚಿಸಲಾಗಿದೆ. ದೇಶದಲ್ಲಿ ಶೇ.7ರಷ್ಟಿದ್ದರೆ, ರಾಜ್ಯದ ನಿರೋದ್ಯೋಗದ ಪ್ರಮಾಣ ಶೇ.2.7ರಷ್ಟಿದೆ. ಶೇ.60ರಷ್ಟು ಜೈವಿಕ ತಂತ್ರಜ್ಞಾನ ಕಂಪೆನಿಗಳು ರಾಜ್ಯದಲ್ಲಿವೆ. ರಫ್ತಿನಲ್ಲಿ ಶೇ।58ರಷ್ಟು ಕೊಡುಗೆ ನೀಡುತ್ತಿದೆ. ಐಟಿ, ಹಣಕಾಸು, ಆತಿಥ್ಯ, ರಿಯಲ್‌ ಎಸ್ಟೇಟ್‌ ನಲ್ಲಿ, ಕೃಷಿಯಲ್ಲಿ ಕಾಫಿ, ಎಣ್ಣೆಕಾಳು, ರಾಗಿ ಸೇರಿ ಅನೇಕ ಉತ್ಪನ್ನಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿಕೊಂಡರು.

ಕನ್ನಡಕ್ಕೆ ಈ ವರ್ಷ ಬಾನುಮುಷ್ತಾಕ್‌ ಮತ್ತು ದೀಪಾಬಸ್ತಿ ಬೂಕರ್‌ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಕನ್ನಡವನ್ನು ಜಾಗತಿಕ ವೇದಿಕೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಸರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಾಸಕರಾದ ರಿಜ್ವಾನ್‌ ಅರ್ಷದ್‌, ಗಣೇಶ್‌ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯರಾದ ಹಣಮಂತ ನಿರಾಣಿ, ಬಿ.ಜಿ.ಪಾಟೀಲ್‌, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಡಿಜಿಪಿ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ನಗರದಲ್ಲಿ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ ಅಳವಡಿಕೆ : ಡಿಕೆ ಶಿವಕುಮಾರ್

ಬೆಂಗಳೂರು, ನ.1– ರಸ್ತೆ ಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ, ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್‌‍ ಇಲಾಖೆ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದರು.

ವಿಧಾನಸೌಧದ ಬಳಿಯ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ಇರುವ ಸಮಸ್ಯೆ ಕುರಿತು ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, ಈಗಾಗಲೇ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ದಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ. ಕಸ ಎಸೆಯುವವರಿಗೆ ದಂಡ ವಿಧಿಸುವ ಕೆಲಸವೂ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದರು.

ಮುಂಬೈನಲ್ಲೂ ಮೂಲೆ, ಮೂಲೆಯಲ್ಲಿ ಕಸದ ರಾಶಿ:
ಶುಕ್ರವಾರದಂದು ಮುಂಬೈಗೆ ತೆರಳಿದ್ದೆ. ಅಲ್ಲಿಯೂ ಸಹ ಮೂಲೆ, ಮೂಲೆಯಲ್ಲಿ ಕಸ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಜನರು ತಮಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಜನರು ಸ್ವಚ್ಚ ಬೆಂಗಳೂರಿಗೆ ಹೆಚ್ಚು ಸಹಕಾರ ನೀಡಬೇಕು ಎಂದರು.

ಮುಂಬೈ ನಗರದಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಹಾಗೂ ನಿರ್ವಹಣೆ ನಡೆಸಿದವರಿಗೆ ಆ ರಸ್ತೆ ಬದಿಗಳ ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಬೆಂಗಳೂರಿನಲ್ಲೂ ಈ ಮಾದರಿ ಜಾರಿ ಮಾಡುವ ಕುರಿತು ಚರ್ಚೆ ಮತ್ತು ಆಲೋಚನೆ ನಡೆಸಲಾಗುತ್ತಿದೆ ಎಂದರು.

ಡಬ್ಬಗಳನ್ನು ಇಟ್ಟುಕೊಂಡು ಮನೆಯ ಕಸವನ್ನು ಅದರಲ್ಲಿ ಸಂಗ್ರಹಿಸಿ. ಅವುಗಳನ್ನು ಕಡ್ಡಾಯವಾಗಿ ಕಸ ಸಂಗ್ರಹ ವಾಹನಗಳಿಗೆ ನೀಡಿ ಎಂದು ಮನವಿ ಮಾಡುತ್ತೇನೆ. ನಮ ಅಧಿಕಾರಿಗಳು ಶುಕ್ರವಾರ ತಡರಾತ್ರಿವರೆಗೂ ನನಗೆ ಕಸ ವಿಲೇವಾರಿ ಸೇರಿದಂತೆ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದರು.

ಕಸ ಸಂಗ್ರಹಣೆಗೆ ಸರಿಯಾದ ವ್ಯವಸ್ಥೆಯಿಲ್ಲ ಎನ್ನುವ ನಾಗರಿಕರ ಆರೋಪದ ಬಗ್ಗೆ ಕೇಳಿದಾಗ, ಇದೆಲ್ಲವೂ ಸುಳ್ಳು. ಪ್ರತಿದಿನವೂ ಮನೆಗಳಲ್ಲಿ ಕಸ ಸಂಗ್ರಹ ನಡೆಯುತ್ತಿದೆ. ಸಮಸ್ಯೆ ಎದುರಾಗಿದ್ದರೆ ಸೂಚಿತ ದೂರವಾಣಿ ಸಂಖ್ಯೆಗೆ ದೂರು ನೀಡಲಿ. ಇಡೀ ದೇಶದಲ್ಲಿಯೇ ಅತ್ಯುತ್ತಮ ವ್ಯವಸ್ಥೆ ರೂಪಿಸಿದ್ದೇವೆ. ಎಲ್ಲಾದರೂ ಕಸ, ರಸ್ತೆಗುಂಡಿ ಕಂಡರೆ ನಮಗೆ ಪೋಟೊ ಹಾಗೂ ಜಾಗ ಕಳಿಸಿ ಎನ್ನುವ ಅವಕಾಶ ನೀಡಿದ್ದೇವೆ. ಮಾಧ್ಯಮಗಳು ಪ್ರತಿದಿನ ಒಂದೊಂದು ರಸ್ತೆಗುಂಡಿ ಹಾಕುತ್ತಲೇ ಇರುತ್ತಾರೆ. ಎಷ್ಟೇ ಕೆಲಸ ಮಾಡಿದರೂ ರಸ್ತೆಗುಂಡಿ ಇದ್ದೇ ಇರುತ್ತದೆ. ವಾಹನಗಳು ಜರ್ಕ್‌ ಹೊಡೆದರೆ ರಸ್ತೆಗುಂಡಿ ಉಂಟಾಗುತ್ತದೆ. ಆದ ಕಾರಣಕ್ಕೆ ನಾವು ಈ ಸಮಸ್ಯೆ ನಿವಾರಣೆಗೆ ಏನೇನೊ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಹತ್ತು ವರ್ಷ ಬಾಳಿಕೆ ಬರುವ ಡಾಂಬರ್‌ ರಸ್ತೆ ತಂತ್ರಜ್ಞಾನದ ಬಗ್ಗೆ ಆಲೋಚನೆ:
ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವ ಡಾಂಬರ್‌ ರಸ್ತೆ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣವು ಹೈದರಾಬಾದ್‌ ಸೇರಿದಂತೆ ಇತರೆಡೆ ಮಾಡಲಾಗುತ್ತಿದೆಯಂತೆ. ಇದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾಮಗಾರಿ ನಡೆಸುವ ಯಂತ್ರಗಳು ಸಾಕಷ್ಟು ದುಬಾರಿಯಾದ ಕಾರಣಕ್ಕೆ ಕನಿಷ್ಠ ಹತ್ತು ಕಿ.ಮೀ. ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಈ ತಂತ್ರಜ್ಞಾನ ಹೊಂದಿರುವವರು ತಿಳಿಸಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು.

70ನೇ ಕನ್ನಡ ರಾಜ್ಯೋತ್ಸವ : ಕನ್ನಡದಲ್ಲಿ ಶುಭಕೋರಿದ ಪ್ರಧಾನಿ ಮೋದಿ ಹಾಗೂ ಗಣ್ಯರು

ಬೆಂಗಳೂರು,ನ.1-70ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಕೇಂದ್ರದ ಸಚಿವರು ಸಮಸ್ತ ಕನ್ನಡಿಗರಿಗೆ ಕನ್ನಡದಲ್ಲಿ ಶುಭಕೋರಿದ್ದಾರೆ. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಅಮಿತ್‌ ಷಾ, ನಿರ್ಮಾಲ ಸೀತರಾಮನ್‌ ಸೇರಿದಂತೆ ಹಲವರು ಶೋಭ ಕೋರಿ ಕರ್ನಾಟಕವು ಪ್ರಗತಿ, ಸಮೃದ್ಧಿ ಮತ್ತು ಸಾಮರಸ್ಯದ ಹೊಸ ಎತ್ತರಗಳನ್ನು ಏರಲಿ ಎಂದು ಶುಭ ಹಾರೈಸಿದ್ದಾರೆ.

ತಮ ಎಕ್‌್ಸ ಖಾತೆಯಲ್ಲಿ ಕನ್ನಡದಲ್ಲೇ ಪೋಸ್ಟ್‌ ಮಾಡಿರುವ ಮೋದಿ, ಕನ್ನಡಿಗರಿಗೆ 70ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಇಂದು ನಾವು ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನೂ ಸಹ ನಾವು ಆಚರಿಸುತ್ತೇವೆ.

ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್‌ ಷಾ ಕೂಡ ಕನ್ನಡದಲ್ಲೇ ಶುಭ ಕೋರಿದ್ದು, ಕರ್ನಾಟಕದ ಸಹೋದರ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕವು ಕಲೆ, ನಾವೀನ್ಯತೆ ಮತ್ತು ಕಲಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಜನರು ನಮ ಸಂಸ್ಕೃತಿ ಮತ್ತು ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ರಾಜ್ಯವು ಸದಾ ಸಮೃದ್ಧಿ ಮತ್ತು ವೈಭವದೊಂದಿಗೆ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಆಶಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಕೂಡ ರಾಜ್ಯೋತ್ಸವಕ್ಕೆ ಶುಭಾಷಯ ತಿಳಿಸಿದ್ದು, ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಕರ್ನಾಟಕವು ರಾಷ್ಟ್ರಕ್ಕೆ ಶ್ರೇಷ್ಠ ಸಮಾಜ ಸುಧಾರಕರು, ಲೇಖಕರು, ಸಂಗೀತಗಾರರು, ದಾರ್ಶನಿಕ ರಾಜರು, ಉದ್ಯಮಿಗಳು ಮತ್ತು ನವೋದ್ಯಮಗಳನ್ನು ನೀಡಿದೆ. ಸಂಸ್ಕೃತಿ ಮತ್ತು ನಾವೀನ್ಯತೆ ಹೇಗೆ ಒಟ್ಟಿಗೆ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಇದು ಒಂದು ಉಜ್ವಲ ಉದಾಹರಣೆಯಾಗಿದೆ. ರಾಜ್ಯವು ಪ್ರಗತಿ, ಸಮೃದ್ಧಿ ಮತ್ತು ಸಾಮರಸ್ಯದ ಹೊಸ ಎತ್ತರಗಳನ್ನು ಏರಲಿ ಎಂದು ಶುಭ ಹಾರೈಸಿದ್ದಾರೆ.

ಕರ್ನಾಟಕ, ಕೇರಳ ಆಂಧ್ರ ಮತ್ತಿತರ ರಾಜ್ಯಗಳಿಗೆ ಶುಭ ಕೋರಿದ ಶಾ
ನವದೆಹಲಿ, ನ. 1 (ಪಿಟಿಐ) ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕ, ಛತ್ತೀಸ್‌‍ಗಢ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಕೇರಳದ ಜನರಿಗೆ ರಾಜ್ಯ ರಚನೆಯ ದಿನದಂದು ಶುಭಾಶಯಗಳನ್ನು ಕೋರಿದರು, ರಾಜ್ಯಗಳು ಸಾರ್ವಜನಿಕ ಕಲ್ಯಾಣ, ಸ್ವಚ್ಛತೆ ಮತ್ತು ಸಮೃದ್ಧಿಯತ್ತ ಪ್ರಗತಿ ಸಾಧಿಸುತ್ತಿವೆ ಎಂದು ಹೇಳಿದರು.

ಕರ್ನಾಟಕದ ಸಹೋದರ ಸಹೋದರಿಯರಿಗೆ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ ಕರ್ನಾಟಕವು ಕಲೆ, ನಾವೀನ್ಯತೆ ಮತ್ತು ಕಲಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದೆ ಮತ್ತು ಆ ರಾಜ್ಯದ ಜನರು ಸಂಸ್ಕೃತಿ ಮತ್ತು ರಾಷ್ಟ್ರದ ಬೆಳವಣಿಗೆಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.ರಾಜ್ಯವು ಸಮೃದ್ಧಿ ಮತ್ತು ವೈಭವದಿಂದ ಸಮೃದ್ಧಿಯಾಗಲಿ ಎಂದು ಅವರು ಆಶಿಸಿದ್ದಾರೆ.

ರಾಜ್ಯೋತ್ಸವ ದಿನದಂದು ಆಂಧ್ರಪ್ರದೇಶದ ಜನರಿಗೆ ಶಾ ಅವರು ಶುಭಾಶಯಗಳನ್ನು ಕೋರಿದರು.ಚೈತನ್ಯಶೀಲ ಸಂಸ್ಕೃತಿ, ಪರಂಪರೆ ಮತ್ತು ಗಮನಾರ್ಹ ಪ್ರತಿಭೆಗಳ ನಾಡು, ಆಂಧ್ರಪ್ರದೇಶವು ಭಾರತದ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತದೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರದ ಅಡಿಯಲ್ಲಿ ರಾಜ್ಯವು ನಿರಂತರ ಸಮೃದ್ಧಿಯನ್ನು ಬಯಸುತ್ತದೆ ಎಂದು ಅವರು ಹೇಳಿದರು.ರಾಜ್ಯ ರಚನೆಯ ದಿನವಾದ ೞಪಿರವಿೞ ಶುಭ ಸಂದರ್ಭದಲ್ಲಿ ಶಾ ಕೇರಳದ ಜನರಿಗೆ ಶುಭಾಶಯಗಳನ್ನು ಸಲ್ಲಿಸಿದರು.ಕೇರಳವು ತನ್ನ ಕಾಲಾತೀತ ಸಂಪ್ರದಾಯಗಳು, ನೈಸರ್ಗಿಕ ಸೌಂದರ್ಯ ಮತ್ತು ತನ್ನ ಜನರ ಸೃಜನಶೀಲ ಮನೋಭಾವದೊಂದಿಗೆ ನಮ್ಮ ಸಾಂಸ್ಕೃತಿಕ ಭೂದೃಶ್ಯದಲ್ಲಿ ಪ್ರಕಾಶಮಾನವಾದ ತಾಣವಾಗಿ ನಿಂತಿದೆ. ರಾಜ್ಯದ ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.

ಛತ್ತೀಸ್‌‍ಗಢದ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ, ಬುಡಕಟ್ಟು ಸಂಸ್ಕೃತಿ ಮತ್ತು ಕಲೆಗಳಿಂದ ಸಮೃದ್ಧವಾಗಿರುವ ರಾಜ್ಯವಾದ ಛತ್ತೀಸ್‌‍ಗಢದ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಅಡ್ಡಿಯಾಗಿರುವ ನಕ್ಸಲಿಸಂ ಅನ್ನು ತೊಡೆದುಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಬದ್ಧವಾಗಿವೆ ಎಂದು ಗೃಹ ಸಚಿವರು ಹೇಳಿದರು.

ರಾಜ್ಯ ಮತ್ತು ದೇಶದಲ್ಲಿ ನಕ್ಸಲಿಸಂ ತನ್ನ ಕೊನೆಯ ಉಸಿರನ್ನು ಎಣಿಸುತ್ತಿದೆ. ಮಾರ್ಚ್‌ 31, 2026 ರ ವೇಳೆಗೆ, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಂಪು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತವೆ ಮತ್ತು ಛತ್ತೀಸ್‌‍ಗಢದಲ್ಲಿ ಅಭಿವೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದರು.ಹರಿಯಾಣದ ಜನರಿಗೆ ತಮ್ಮ ಸಂದೇಶದಲ್ಲಿ, ಶಾ ರಾಜ್ಯವು ತನ್ನ ವೀರ ಸೈನಿಕರು ಮತ್ತು ಶ್ರಮಶೀಲ ರೈತರಿಗೆ ಹೆಸರುವಾಸಿಯಾಗಿದೆ ಮತ್ತು ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ ಎಂದು ಹೇಳಿದರು.

ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾದ ಹರಿಯಾಣದ ಪ್ರಗತಿ ಮತ್ತು ಪ್ರಗತಿಯ ಈ ಪ್ರಯಾಣವು ಶಾಶ್ವತವಾಗಿ ಮುಂದುವರಿಯಲಿ. ಹರಿಯಾಣ ರಚನೆಯ ದಿನದಂದು ರಾಜ್ಯದ ಎಲ್ಲಾ ನಿವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅವರು ಹೇಳಿದರು.ಮಧ್ಯಪ್ರದೇಶದ ಜನರಿಗೆ, ಗೃಹ ಸಚಿವರು ರಾಜ್ಯವು ಸಾಂಸ್ಕೃತಿಕ ಪರಂಪರೆಯಿಂದ ತುಂಬಿದ್ದು, ನೈಸರ್ಗಿಕ ಸೌಂದರ್ಯವನ್ನು ಒಳಗೊಂಡಿದೆ ಮತ್ತು ಇಂದು, ಅದು ಸಾರ್ವಜನಿಕ ಕಲ್ಯಾಣ, ಸ್ವಚ್ಛತೆ ಮತ್ತು ಸಮೃದ್ಧಿಯತ್ತ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.ರಾಜ್ಯದ ನಿವಾಸಿಗಳ ನಿರಂತರ ಪ್ರಗತಿಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.

ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಪೊಲೀಸರ ದಾಳಿ, 115 ಮಂದಿ ವಶಕ್ಕೆ

ಬೆಂಗಳೂರು,ನ.1-ನಗರದ ಹೊರವಲಯದ ರೆಸಾರ್ಟ್‌ಗಳಲ್ಲಿ ಆಗಾಗ್ಗೆ ರೇವ್‌ ಪಾರ್ಟಿಗಳು ನಡೆಯುತ್ತಿದ್ದು, ಇಂದು ಬೆಳಗಿನ ಜಾವ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಅಡ್ಡೆ ಮೇಲೆ ದಾಳಿ ಮಾಡಿದ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸುಹಾಸ್‌‍ ಗೌಡ ಎಂಬುವವರಿಗೆ ಸೇರಿದ ಅಯಾನಾ ರೆಸಾರ್ಟ್‌ನಲ್ಲಿ ಅವಧಿಗೂ ಮೀರಿ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌‍ಪಿ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಪೊಲೀಸರು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ರೆಸಾರ್ಟ್‌ ಮೇಲೆ ದಾಳಿ ಮಾಡಿ 35 ಯುವತಿಯರು ಸೇರಿದಂತೆ ಒಟ್ಟು 115 ಮಂದಿಯನ್ನು ವಶಕ್ಕೆ ಪಡೆದು ಅವರೆಲ್ಲರನ್ನೂ ಬೆಂಗಳೂರು ದಕ್ಷಿಣ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಪೊಲೀಸರ ವಶದಲ್ಲಿರುವವರೆಲ್ಲರೂ ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ. ಈ ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ರೆಸಾರ್ಟ್‌ನ್ನು ಪರಿಶೀಲಿಸುತ್ತಿದ್ದಾರೆ.ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರವಷ್ಟೇ ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರು ಮಾದಕ ವಸ್ತು ಸೇವಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ರೆಸಾರ್ಟ್‌ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮಾಧ್ಯಮದವರು ಚಿತ್ರೀಕರಣ ಮಾಡಲು ಯತ್ನಿಸಿದಾಗ ಪೊಲೀಸರು ಚಿತ್ರೀಕರಣ ಮಾಡದಂತೆ ತಡೆ ಹಿಡಿದಿದ್ದಾರೆ. ಈ ಬಗ್ಗೆ ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇತ್ತೀಚೆಗೆ ಆನೇಕಲ್‌ ಬಳಿಯ ಖಾಸಗಿ ರೆಸಾರ್ಟ್‌ ಹಾಗೂ ದೇವನಹಳ್ಳಿ ಬಳಿಯ ಫಾರ್ಮ್‌ ಹೌಸ್‌‍ನಲ್ಲಿ ರೇವ್‌ ಪಾರ್ಟಿ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಹಲವರನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ಮಾಸುವ ಮುನ್ನವೇ ಇಂದು ಬೆಳಗಿನ ಜಾವ ಈ ದಾಳಿ ನಡೆದಿದೆ.

ಬೆಂಗಳೂರು-ಕೊಚ್ಚಿ ವಂದೇ ಭಾರತ್‌ ರೈಲಿನ ವೇಳಾಪಟ್ಟಿ ಪ್ರಕಟ

ಕೊಚ್ಚಿ, ನ. 1 (ಪಿಟಿಐ) ಶೀಘ್ರದಲ್ಲೇ ಸಂಚಾರ ಆರಂಭಿಸಲಿರುವ ಹೊಸ ಬೆಂಗಳೂರು-ಕೊಚ್ಚಿ ವಂದೇ ಭಾರತ್‌ ಎಕ್ಸ್ ಪ್ರೆಸ್‌‍ ರೈಲಿನ ವೇಳಾಪಟ್ಟಿಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
ರೈಲ್ವೆ ಮಂಡಳಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ರೈಲು ಸಂಖ್ಯೆ 26651 ಕೆಎಸ್‌‍ಆರ್‌ ಬೆಂಗಳೂರು-ಎರ್ನಾಕುಲಂ ಜಂಕ್ಷನ್‌ ವಂದೇ ಭಾರತ್‌ ಎಕ್‌್ಸಪ್ರೆಸ್‌‍ ಬೆಂಗಳೂರಿನಿಂದ ಬೆಳಿಗ್ಗೆ 5.10 ಕ್ಕೆ ಹೊರಟು ಮಧ್ಯಾಹ್ನ 1.50 ಕ್ಕೆ ಎರ್ನಾಕುಲಂ ಜಂಕ್ಷನ್‌ ತಲುಪಲಿದೆ.

ರಿಟರ್ನ್‌ ಸೇವೆ, 26652 ಎರ್ನಾಕುಲಂ ಜಂಕ್ಷನ್‌ -ಕೆಎಸ್‌‍ಆರ್‌ ಬೆಂಗಳೂರು, ಎರ್ನಾಕುಲಂನಿಂದ ಮಧ್ಯಾಹ್ನ 2.20 ಕ್ಕೆ ಹೊರಟು ರಾತ್ರಿ 11 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಈ ರೈಲು ಕೃಷ್ಣರಾಜಪುರಂ, ಸೇಲಂ, ಈರೋಡ್‌‍, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್‌ ಮತ್ತು ತ್ರಿಶೂರ್‌ನಲ್ಲಿ ನಿಲುಗಡೆ ಹೊಂದಿರುತ್ತದೆ.

ಸೌತ್‌ ರೈಲ್ವೇ ಮತ್ತು ನೈಋತ್ಯ ರೈಲ್ವೆ ವಲಯಗಳಿಗೆ ಸಾಧ್ಯವಾದಷ್ಟು ಬೇಗ ಸೇವೆಯನ್ನು ಪರಿಚಯಿಸಲು ಸಚಿವಾಲಯ ಸೂಚನೆ ನೀಡಿದೆ. ಅಗತ್ಯವಿದ್ದರೆ, ಉದ್ಘಾಟನಾ ರೈಲನ್ನು ವಿಶೇಷ ಸೇವೆಯಾಗಿ ನಿರ್ವಹಿಸಬಹುದು, ಅದು ನಂತರ ಅದರ ಲಿಂಕ್‌ ಅನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತಿರುವನಂತಪುರಂ-ಕಾಸರಗೋಡು ಮತ್ತು ತಿರುವನಂತಪುರಂ-ಮಂಗಳೂರು ಮಾರ್ಗಗಳ ನಂತರ ಕೇರಳದಲ್ಲಿ ಇದು ಮೂರನೇ ವಂದೇ ಭಾರತ್‌ ಎಕ್‌್ಸಪ್ರೆಸ್‌‍ ಸೇವೆಯಾಗಲಿದೆ.

ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಮೃಗಾಲಯದಲ್ಲಿ ಕಾಂಗರೂ ಸಾವು

ತಿರುಪತಿ, ನವೆಂಬರ್‌ 1 (ಪಿಟಿಐ) ಎರಡು ತಿಂಗಳ ಹಿಂದೆ ತಿರುಮಲ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಮೃಗಾಲಯಕ್ಕೆ ಆಗಮಿಸಿದ್ದ ಗಂಡು ಕೆಂಪು ಕುತ್ತಿಗೆಯ ವಾಲಬಿ (ಕಾಂಗರೂ) ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅ. 30 ರ ತಡರಾತ್ರಿ ಮಾರ್ಸ್ಪಿಯಲ್‌ ಪ್ರಾಣಿಯು ಸಾವನ್ನಪ್ಪಿದೆ ಎಂದು ಮೃಗಾಲಯವು ಹೇಳಿಕೆಯಲ್ಲಿ ತಿಳಿಸಿದೆ.ಶ್ರೀ ವೆಂಕಟೇಶ್ವರ ಮೃಗಾಲಯ ಗಂಡು ಕೆಂಪು ಕುತ್ತಿಗೆಯ ವಾಲಬಿಯ ಮರಣವನ್ನು ಘೋಷಿಸಲು ತೀವ್ರ ವಿಷಾದವಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಅಸ್ವಸ್ಥಗೊಂಡಿದ್ದ ಕಾಂಗರೂವಿಗೆ ಮೃಗಾಲಯದ ಪಶುವೈದ್ಯಕೀಯ ತಂಡವು ತೀವ್ರ ನಿಗಾ ವಹಿಸಲು ಮತ್ತು ಸಕಾಲಿಕ ಔಷಧಿಗಳನ್ನು ಒದಗಿಸಲು ಪ್ರೇರೇಪಿಸಿತು. ನಿರಂತರ ಚಿಕಿತ್ಸೆ ಮತ್ತು ನಿಕಟ ಮೇಲ್ವಿಚಾರಣೆಯ ಹೊರತಾಗಿಯೂ, ರಾತ್ರಿಯಲ್ಲಿ ಅದರ ಸ್ಥಿತಿ ಹದಗೆಟ್ಟಿತು.ಕಾರ್ಡಿಯೋಪಲ್ಮನರಿ ಪುನರುಜ್ಜೀವನ ಸೇರಿದಂತೆ ತುರ್ತು ಕಾರ್ಯವಿಧಾನಗಳನ್ನು ಮಾಡಲಾಯಿತು ಆದರೆ ದುರದೃಷ್ಟವಶಾತ್‌ ಅವು ವಿಫಲವಾದವು ಎಂದು ಹೇಳಿಕೆ ತಿಳಿಸಿದೆ.

ಶಿಷ್ಟಾಚಾರದ ಪ್ರಕಾರ, ಮೃತದೇಹವನ್ನು ವಿವರವಾದ ಮರಣೋತ್ತರ ಪರೀಕ್ಷೆಗಾಗಿ ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯದ ರೋಗಶಾಸ್ತ್ರ ವಿಭಾಗಕ್ಕೆ ಕಳುಹಿಸಲಾಯಿತು, ಇದು ಟಾಕ್ಸೊಪ್ಲಾಸ್ಮಾಸಿಸ್‌‍ ಅನ್ನು ಸಾವಿಗೆ ಕಾರಣವೆಂದು ನಿರ್ಧರಿಸಿತು.

ಟೊಕ್ಸೊಪ್ಲಾಸ್ಮಾಸಿಸ್‌‍ ಎಂಬುದು ಪ್ರೊಟೊಜೋವನ್‌ ಟೊಕ್ಸೊಪ್ಲಾಸ್ಮಾ ಗೊಂಡಿಯಿಂದ ಉಂಟಾಗುವ ಸೋಂಕಾಗಿದ್ದು, ಇದು ಮಾನವರು, ಭೂಮಿ ಮತ್ತು ಸಮುದ್ರ ಸಸ್ತನಿಗಳು ಮತ್ತು ಹಲವಾರು ಪಕ್ಷಿ ಪ್ರಭೇದಗಳ ಮೇಲೆ ಪರಿಣಾಮ ಬೀರುವ ಕಡ್ಡಾಯ ಅಂತರ್ಜೀವಕೋಶದ ಪರಾವಲಂಬಿಯಾಗಿದೆ.ನಂತರ ಶವವನ್ನು ವಿಶ್ವವಿದ್ಯಾಲಯದ ಮರಣೋತ್ತರ ಪರೀಕ್ಷೆ ಸಂಕೀರ್ಣದಲ್ಲಿ ಹೂಳಲಾಯಿತು.

ಸುಡಾನ್‌ನ ಆಸ್ಪತ್ರೆ ಮೇಲೆ ದಾಳಿ ಮಾಡಿ 460 ಜನರನ್ನು ಕೊಂದ ಬಂದೂಕುಧಾರಿಗಳ ಗುಂಪು

ಜಿನೀವಾ, ಅ.31-ಸುಡಾನ್‌ನ ಆಸ್ಪತ್ರೆಯ ಮೇಲೆ ಬಂದೂಕುಧಾರಿಗಳ ಗುಂಪು ದಾಳಿ ಮಾಡಿ ಗುಂಡಿಕ್ಕಿ 460 ಜನರನ್ನು ಕೊಂದಿರುವ ಘಟನೆ ಕಳೆದ ರಾತ್ರಿ ನಡೆದಿದೆ.ವೈದ್ಯರು ಮತ್ತು ದಾದಿಯರನ್ನು ಅಪಹರಿಸಲಾಗಿದ್ದು ನಂತರ ಸಿಬ್ಬಂದಿ, ರೋಗಿಗಳು ಮತ್ತು ಅಲ್ಲಿ ಆಶ್ರಯ ಪಡೆದಿದ್ದ ಜನರ ಮೇಲೆ ಗುಂಡು ಹಾರಿಸಿ ನರಮೇಧ ಮಾಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ದೇಶದ ಡಾರ್ಫರ್‌ ಪ್ರದೇಶದಲ್ಲಿ ಪ್ರಬಲ ಅರೆಸೈನಿಕ ಗುಂಪಾದ ರಾಪಿಡ್‌ ಸಪೋರ್ಟ್‌ ಫೋರ್ಸ ಹಿಂಸಾಚಾರದ ಭಾಗವಾಗಿದೆ.

ಕಳೆದ 18 ತಿಂಗಳ ಕಾಲ ಮುತ್ತಿಗೆ ಹಾಕಿದ ನಂತರ ಪ್ರಮುಖ ನಗರವಾದ ಎಲ್‌‍-ಫಶರ್‌ ಅನ್ನು ವಶಪಡಿಸಿಕೊಂಡಿದೆ. ಹೋರಾಟಗಾರರು ಮನೆ ಮನೆಗೆ ಹೋಗಿ ನಾಗರಿಕರನ್ನು ಕೊಂದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿ ತಿಳಿಸಿದೆ.

ಆಸ್ಪತ್ರೆ ದಾಳಿ ಮತ್ತು ಇತರ ಹಿಂಸಾಚಾರದ ಬಗ್ಗೆ ಹಲವು ವಿವರಗಳು ನಿಧಾನವಾಗಿ ಹೊರಬರುತ್ತಿವೆ ಮತ್ತು ಒಟ್ಟು ಸಾವಿನ ಸಂಖ್ಯೆ ನಿಗರವಾಗಿ ಇನ್ನೂ ತಿಳಿದಿಲ್ಲ. ಎಲ್‌‍-ಫಶರ್‌ನ ಪತನವು ಆಫ್ರಿಕಾದ ಮೂರನೇ ಅತಿದೊಡ್ಡ ದೇಶದಲ್ಲಿ ಆರ್‌ಎಸ್‌‍ಎಫ್‌‍ ಮತ್ತು ಮಿಲಿಟರಿ ನಡುವಿನ ಕ್ರೂರ ಯುದ್ದ , ಎರಡು ವರ್ಷಗಳ ಈ ಯುದ್ಧದ ಹೊಸ ಹಂತವನ್ನು ಸೂಚಿಸುತ್ತೆದೆ.

ಯುಎನ್‌ನ ಅಂಕಿಅಂಶಗಳ ಪ್ರಕಾರ, ಯುದ್ಧವು 40,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ, ಆದರೆ ನೆರವು ಗುಂಪುಗಳು ಅದು ಕಡಿಮೆ ಎಣಿಕೆಯಾಗಿದೆ ಮತ್ತು ನಿಜವಾದ ಸಂಖ್ಯೆ ಹಲವು ಪಟ್ಟು ಹೆಚ್ಚಿರಬಹುದು ಎಂದು ಹೇಳುತ್ತವೆ.ಯುದ್ಧವು 14 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಮತ್ತು ಸಾವಿರಾರು ಜನರನ್ನು ಕೊಂದಿದೆ ಎನ್ನಲಾಗಿದೆ.
ಸ್ಪೇನ್‌ನಷ್ಟು ಗಾತ್ರದ ಪ್ರದೇಶವಾದ ಡಾರ್ಫರ್‌ನ ಕೆಲವು ಭಾಗಗಳಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಕ್ಷಾಮವನ್ನು ಘೋಷಿಸಲಾಗಿದೆ.

ದಾಖಲೆ ವೇಗದಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಿದ ಚೀನಾ ಶೆನ್‌ಝೌ ನೌಕೆ

ಜಿಯುಕ್ವಾನ್‌, ನ. 1 (ಎಪಿ) ಚೀನಾ ತನ್ನ ಶೆನ್‌ಝೌ 21 ಬಾಹ್ಯಾಕಾಶ ನೌಕೆಯನ್ನು ತನ್ನ ಯಶಸ್ವಿ ಉಡಾವಣೆಯ ನಂತರ ದಾಖಲೆಯ ವೇಗದಲ್ಲಿ ಚೀನಾದ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕ್‌ ಮಾಡಿದೆ ಎಂದು ಘೋಷಿಸಿದೆ.

ಇಡೀ ಡಾಕಿಂಗ್‌ ಪ್ರಕ್ರಿಯೆಯು ಸುಮಾರು 3.5 ಗಂಟೆಗಳ ಕಾಲ ನಡೆಯಿತು ಇದು ಹಿಂದಿನ ಕಾರ್ಯಾಚರಣೆಗಳಿಗಿಂತ ಮೂರು ಗಂಟೆಗಳು ಕಡಿಮೆ ಎಂದು ಚೀನಾ ಮ್ಯಾನ್‌್ಡ ಸ್ಪೇಸ್‌‍ ಏಜೆನ್ಸಿ ತಿಳಿಸಿದೆ.

ಶೆನ್‌ಝೌ 21 ಬಾಹ್ಯಾಕಾಶ ನೌಕೆಯು ತಡರಾತ್ರಿ 11:44 ಕ್ಕೆ ವಾಯುವ್ಯ ಚೀನಾದ ಜಿಯುಕ್ವಾನ್‌ ಉಡಾವಣಾ ಕೇಂದ್ರದಿಂದ ಯೋಜಿಸಿದಂತೆ ಹಾರಿತು. ಶೆನ್‌ಝೌ 21 ರಲ್ಲಿರುವ ಮೂವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದ ಟಿಯಾನ್ಹೆ ಕೋರ್‌ ಮಾಡ್ಯೂಲ್‌ ಅನ್ನು ಪ್ರವೇಶಿಸುತ್ತಾರೆ.

ಸಿಬ್ಬಂದಿಯಲ್ಲಿ ಪೈಲಟ್‌ ಮತ್ತು ಮಿಷನ್‌ ಕಮಾಂಡರ್‌ ಜಾಂಗ್‌ ಲು ಸೇರಿದ್ದಾರೆ, ಅವರು ಎರಡು ವರ್ಷಗಳ ಹಿಂದೆ ಬಾಹ್ಯಾಕಾಶ ನಿಲ್ದಾಣಕ್ಕೆ ಶೆನ್‌ಝೌ 15 ಮಿಷನ್‌ನಲ್ಲಿದ್ದರು.
ಇತರ ಇಬ್ಬರು ಮೊದಲ ಬಾರಿಗೆ ಹಾರುತ್ತಿದ್ದಾರೆ. ಎಂಜಿನಿಯರ್‌ ಆಗಿರುವ 32 ವರ್ಷದ ವೂ ಫೀ ಬಾಹ್ಯಾಕಾಶ ಹಾರಾಟಕ್ಕೆ ಸೇರಿದ ದೇಶದ ಅತ್ಯಂತ ಕಿರಿಯ ಗಗನಯಾತ್ರಿ.

ಜಾಂಗ್‌ ಹಾಂಗ್‌ಜಾಂಗ್‌‍ ಒಬ್ಬ ಪೇಲೋಡ್‌ ತಜ್ಞರಾಗಿದ್ದು, ಅವರು ಗಗನಯಾತ್ರಿಯಾಗುವ ಮೊದಲು ಹೊಸ ಶಕ್ತಿ ಮತ್ತು ಹೊಸ ವಸ್ತುಗಳ ಮೇಲೆ ಕೇಂದ್ರೀಕರಿಸುವ ಸಂಶೋಧಕರಾಗಿದ್ದರು.
ಟಿಯಾಂಗಾಂಗ್‌ ಬಾಹ್ಯಾಕಾಶ ನಿಲ್ದಾಣದ ಕುರಿತು ಟೈ-ಚಿ, ತೋಟಗಾರಿಕೆ ಮತ್ತು ಕಾವ್ಯವನ್ನು ಮೆಚ್ಚುವ ಮೂಲಕ ತಂಡವು ಬಾಹ್ಯಾಕಾಶ ನಿಲ್ದಾಣವನ್ನು ರಾಮರಾಜ್ಯವನ್ನಾಗಿ ಪರಿವರ್ತಿಸುತ್ತದೆ ಎಂದು ಜಾಂಗ್‌ ಹೇಳಿದರು. ಅವರ ಹಿಂದಿನವರಂತೆ, ಅವರು ಸುಮಾರು ಆರು ತಿಂಗಳ ಕಾಲ ನಿಲ್ದಾಣದಲ್ಲಿಯೇ ಇರುತ್ತಾರೆ.ಬಾಹ್ಯಾಕಾಶದಲ್ಲಿದ್ದಾಗ, ಗಗನಯಾತ್ರಿಗಳು ಜೈವಿಕ ತಂತ್ರಜ್ಞಾನ, ಏರೋಸ್ಪೇಸ್‌‍ ಮೆಡಿಸಿನ್‌‍, ಮೆಟೀರಿಯಲ್‌ ಸೈನ್‌್ಸ ಮತ್ತು ಇತರ ಕ್ಷೇತ್ರಗಳಲ್ಲಿ 27 ವೈಜ್ಞಾನಿಕ ಮತ್ತು ಅನ್ವಯಿಕ ಯೋಜನೆಗಳನ್ನು ನಡೆಸಲು ಯೋಜಿಸಿದ್ದಾರೆ.

ಮೊದಲ ಬಾರಿಗೆ, ಚೀನಾ ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಇಲಿಗಳನ್ನು ಕಳುಹಿಸುತ್ತಿದೆ. ತೂಕವಿಲ್ಲದಿರುವಿಕೆ ಮತ್ತು ಬಂಧನವು ಅವುಗಳ ನಡವಳಿಕೆಯ ಮಾದರಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲು ಒಟ್ಟು ನಾಲ್ಕು, ಎರಡು ಗಂಡು ಮತ್ತು ಎರಡು ಹೆಣ್ಣು, ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಚೀನೀ ಅಕಾಡೆಮಿ ಆಫ್‌ ಸೈನ್ಸಸ್‌‍ನ ಎಂಜಿನಿಯರ್‌ ಹಾನ್‌ ಪೀ ಹೇಳಿದರು.

ಇದು ಬಾಹ್ಯಾಕಾಶದಲ್ಲಿ ಸಣ್ಣ ಸಸ್ತನಿಗಳ ಸಂತಾನೋತ್ಪತ್ತಿ ಮತ್ತು ಮೇಲ್ವಿಚಾರಣೆಗೆ ಪ್ರಮುಖ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳಲು ಮತ್ತು ಬಾಹ್ಯಾಕಾಶ ಪರಿಸರದಲ್ಲಿ ಇಲಿಗಳ ತುರ್ತು ಪ್ರತಿಕ್ರಿಯೆಗಳು ಮತ್ತು ಹೊಂದಾಣಿಕೆಯ ಬದಲಾವಣೆಗಳ ಪ್ರಾಥಮಿಕ ಮೌಲ್ಯಮಾಪನವನ್ನು ಮಾಡಲು ನಮಗೆ ಸಹಾಯ ಮಾಡುತ್ತದೆ ಎಂದು ಹಾನ್‌ ಹೇಳಿದರು.ಚೀನಾದ ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಪ್ರಕಾರ, 60 ದಿನಗಳಿಗೂ ಹೆಚ್ಚು ಕಾಲ ತೀವ್ರ ತರಬೇತಿಯ ನಂತರ 300 ಅಭ್ಯರ್ಥಿಗಳಿಂದ ಬಾಹ್ಯಾಕಾಶ ಇಲಿಗಳನ್ನು ಆಯ್ಕೆ ಮಾಡಲಾಗಿದೆ, 60 ದಿನಗಳಿಗೂ ಹೆಚ್ಚು ಕಾಲ ತೀವ್ರ ತರಬೇತಿಯ ನಂತರ.

ಇಲಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಐದರಿಂದ ಏಳು ದಿನಗಳವರೆಗೆ ಇದ್ದು, ಶೆನ್‌ಝೌ 20 ರಲ್ಲಿ ಭೂಮಿಗೆ ಹಾರುವ ನಿರೀಕ್ಷೆಯಿದೆ ಎಂದು ಚೀನಾ ರಾಷ್ಟ್ರೀಯ ರೇಡಿಯೋ ವರದಿ ಮಾಡಿದೆ.ಚೀನಾದ ಬಾಹ್ಯಾಕಾಶ ಕಾರ್ಯಕ್ರಮವು ಅಗಾಧವಾದ ರಾಷ್ಟ್ರೀಯ ಹೆಮ್ಮೆಯ ಮೂಲವಾಗಿದೆ ಮತ್ತು ಕಳೆದ ಎರಡು ದಶಕಗಳಲ್ಲಿ ದೇಶದ ತಾಂತ್ರಿಕ ಪ್ರಗತಿಯ ವಿಶಿಷ್ಟ ಲಕ್ಷಣವಾಗಿದೆ.

ಚೀನಾ 2003 ರಲ್ಲಿ ತನ್ನ ಮೊದಲ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಹಿಂದಿನ ಸೋವಿಯತ್‌ ಒಕ್ಕೂಟ ಮತ್ತು ಯುನೈಟೆಡ್‌ ಸ್ಟೇಟ್‌್ಸ ನಂತರ ಹಾಗೆ ಮಾಡಿದ ಮೂರನೇ ರಾಷ್ಟ್ರವಾಯಿತು.ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆಯ ವಕ್ತಾರ ಜಾಂಗ್‌ ಜಿಂಗ್ಬೊ, ಚಂದ್ರನಿಗೆ ಗಗನಯಾತ್ರಿಯನ್ನು ಕಳುಹಿಸುವ ಏಜೆನ್ಸಿಯ ಯೋಜನೆಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಕುರಿತು ಮಾತನಾಡದಂತೆ ವರಿಷ್ಠರ ಆಜ್ಞೆಯಾಗಿದೆ : ಸಚಿವ ಮಧುಬಂಗಾರಪ್ಪ

ಕೊಳ್ಳೇಗಾಲ,ನ.1-ಮುಖ್ಯ ಮಂತ್ರಿ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪಿಸುವುದು ಬೇಡ, ಯಾರೊಬ್ಬರೂ ಮಾತನಾಡಕೊಡದೆಂದು ವರಿಷ್ಠರ ಆಜ್ಞೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ತಿಳಿಸಿದರು.

ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ವಸತಿಗೃಹಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ. ಎಂ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಕುರಿತು ಎಂಎಲ್‌‍ಎ ಹಾಗೂ ಸಚಿವರು ಯಾರೊಬ್ಬರೂ ಮಾತನಾಡಕೊಡದೆಂದು ಕಾಂಗ್ರೆಸ್‌‍ ಪಕ್ಷದ ವರಿಷ್ಠರಸೂಚನೆಯಾಗಿದೆ. ಪಕ್ಷದ ವರಿಷ್ಠರು ನಿಮಗೆ ನೀಡಿರುವ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಿ ಬೇರೆ ವಿಷಯ ಮಾತನಾಡಬೇಡಿ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ನಿಮ ಸಚಿವ ಸ್ಥಾನವು ಹೋಗಲಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ನೀವು ನನ್ನ ಭವಿಷ್ಯ ತೀರ್ಮಾನ ಮಾಡಿ ನುಡಿಯುವರಾಗಿದ್ದರೆ ಕರ್ನಾಟಕದ ಎಲ್ಲಾ ಜನರು ನಿಮ ಮನೆಯ ಬಾಗಿಲಿನಲ್ಲಿ ನಿಲ್ಲುತ್ತಿದ್ದರು. ಇಂತಹ ಪ್ರಶ್ನೆಗಳನ್ನು ಕೇಳುವ ಚಾಳಿ ಬಿಡಬೇಕು. ಸಚಿವ ಸಂಪುಟದ ವಿಚಾರವನ್ನು ಕಾಂಗ್ರೆಸ್‌‍ ವರಿಷ್ಠರು ತೀರ್ಮಾನಿಸುತ್ತಾರೆ. ಕಾಂಗ್ರೆಸ್‌‍ ಪಕ್ಷ ಸಚಿವರಾಗಿ ಒಳ್ಳೆಯ ಕೆಲಸಮಾಡಿ ಎಂದು ಅವಕಾಶ ನೀಡಿದೆ ಸಚಿವ ಸ್ಥಾನ ಬೇಡ ಪಕ್ಷಕ್ಕೆ ದುಡಿ ಎಂದು ಹೇಳಿದರೆ ದುಡಿಯುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದರು.

ಕಳೆದ ವರ್ಷ ಎಸ್‌‍ಎಸ್‌‍ಎಸ್‌‍ಸಿ ಪರೀಕ್ಷೆ ಒಂದು ಬಾರಿ ನಡೆಸಿ ಆ ಪರೀಕ್ಷೆಯಲ್ಲಿ ಫೇಲಾದ ವಿಧ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದರಿಂದ 1 ಲಕ್ಷದ 16 ಸಾವಿರ ವಿದ್ಯಾಥಿಗಳು ಪಾಸಾಗಿ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ಶುಲ್ಕ ಪಡೆಯದೆ ಅವಕಾಶ ನೀಡಿದ್ದು ಇದರಲ್ಲಿ ಬಡವರು ಹಿಂದುಳಿದ ವರ್ಗದವರು, ಕಷ್ಟದಲ್ಲಿರುವವರು ಮತ್ತು ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವಂಥ ಕೆಲಸವನ್ನು ಕಾಂಗ್ರೆಸ್‌‍ ಸರ್ಕಾರ ಕಲ್ಪಿಸಿದೆ ಎಂದು ತಿಳಿಸಿದರು.

ಈ ಹಿಂದೆ 13ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು ಮತ್ತೆ 13 ಸಾವಿರ ಶಿಕ್ಷಕರನ್ನು ನೇಮಕಮಾಡಿಕೊಳ್ಳಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಎ.ಆರ್‌ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್‌‍ ಪಕ್ಷದ ಮುಖಂಡರು, ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರುಗಳು ಇದ್ದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2025)

ನಿತ್ಯ ನೀತಿ : ಮನುಷ್ಯ ನಿಜವಾದ ಬದಲಾವಣೆ ಆಗುವುದು, ಅವನಿಗೆ ಅವಮಾನ ಅಪಮಾನ ಆದಾಗ ಅಲ್ಲದೆ ಆತನ ಮನಸ್ಸಿಗೆ ಸಹಿಸಿಕೊಳ್ಳಲಾಗದ ಪೆಟ್ಟು ಬಿದ್ದಾಗ ಮಾತ್ರ ಮನುಷ್ಯ ಬದಲಾವಣೆ ದಾರಿಯನ್ನು ಹಿಡಿಯುತ್ತಾನೆ.

ಪಂಚಾಂಗ : ಶನಿವಾರ, 01-11-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ದಶಮಿ / ನಕ್ಷತ್ರ: ಶತಭಿಷಾ / ಯೋಗ: ಧ್ರುವ / ಕರಣ: ವಣಿಜ
ಸೂರ್ಯೋದಯ – ಬೆ.06.13
ಸೂರ್ಯಾಸ್ತ – 5.53
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಆರೋಗ್ಯದಲ್ಲಿ ಏರುಪೇರು.
ವೃಷಭ: ಹಣ ಕಳೆದುಕೊಳ್ಳುವ ಸಂಭವವಿದೆ.
ಮಿಥುನ: ಕುಟುಂಬದ ಅಗತ್ಯಗಳನ್ನು ಪೂರೈಸುವುದರಲ್ಲಿ ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.

ಕಟಕ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಶಾಶ್ವತ ಸಿಗಲಿದೆ.
ಸಿಂಹ: ತಾವು ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ: ಮಾತನಾಡುವಾಗ ಎಚ್ಚರಿಕೆ ಇರಲಿ.

ತುಲಾ: ಕಿರಿಯ ಸಹೋದರ ರೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವಿರಿ.
ವೃಶ್ಚಿಕ: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.
ಧನುಸ್ಸು: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ- ವ್ಯವಹಾರಗಳಿಗೆ ಅನುಕೂಲವಾಗಲಿದೆ.

ಮಕರ: ಪತ್ನಿಯ ಬೆಂಬಲದೊಂದಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಿರಿ.
ಕುಂಭ: ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದರೆ ಅವರ ಗೌರವಕ್ಕೆ ಚ್ಯುತಿ ಬರಬಹುದು.
ಮೀನ: ವೈಯಕ್ತಿಕವಾಗಿ ಉನ್ನತಿ ಸಾಧಿಸುವಿರಿ.