Thursday, November 6, 2025
Home Blog Page 14

ನ.2ಕ್ಕೆ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ, ಕ್ಯಾಮರಾ ಕಣ್ಗಾವಲು

ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ (ನ.2) ನಡೆಸಲಿದ್ದು, ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಈ ಬಾರಿಯೂ ಮುಖಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುತ್ತದೆ. ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಒಟ್ಟು 33 ವಿಷಯಗಳಿಗೆ ನಡೆಯುವ ಕೆ-ಸೆಟ್ ಪರೀಕ್ಷೆಯನ್ನು 1.36 ಲಕ್ಷ ಮಂದಿ ತೆಗೆದುಕೊಂಡಿದ್ದಾರೆ. 11 ಜಿಲ್ಲೆಗಳ (ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ) 316 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಅವರು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲ 33 ವಿಷಯಗಳ ಪರೀಕ್ಷೆ ನಡೆದರೆ, ಉಳಿದ ಜಿಲ್ಲೆಗಳಲ್ಲಿ 11 ವಿಷಯಗಳ ಪರೀಕ್ಷೆ ಗಳು ಮಾತ್ರ ನಡೆಯಲಿವೆ. ಈ ಪರೀಕ್ಷೆಗಳಿಗೆ ನೆಗೆಟಿವ್ ಮೌಲ್ಯಮಾಪನ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಪರೀಕ್ಷೆಗಳು ನಡೆಯಲಿದ್ದು, ಒಮ್ಮೆಗೇ ಎರಡೂ ಪತ್ರಿಕೆಗಳ (ಪತ್ರಿಕೆ 1 & 2) ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೂರು ಗಂಟೆ ಅವಧಿಯಲ್ಲಿ 100 ಅಂಕಗಳ ಸಾಮಾನ್ಯ ಜ್ಞಾನ ಮತ್ತು 200 ಅಂಕಗಳ ವಿಷಯವಾರು ಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ. ಎರಡೂ ಪತ್ರಿಕೆಗಳಿಗೆ ಪ್ರತ್ಯೇಕ ಓಎಂಆರ್‌ ನೀಡುತ್ತಿದ್ದು, ಆಯಾಯ ಓಎಂಆರ್‌ ನಲ್ಲೇ ಅದರ ಉತ್ತರಗಳನ್ನು ಎಚ್ಚರಿಕೆಯಿಂದ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ಹಿಂದಿನ ಎಲ್ಲ ಪರೀಕ್ಷೆಗಳ ಹಾಗೆಯೇ ಈ ಪರೀಕ್ಷೆಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳನ್ನು ಮುಖ ಚಹರೆ ಪತ್ತೆ ಮೂಲಕ ತೀವ್ರ ಶೋಧ ನಡೆಸಿಯೇ ಒಳ ಬಿಡಲಾಗುತ್ತದೆ. ಇದಕ್ಕೆ ಅಗತ್ಯ ಪೊಲೀಸ್‌ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿ ಇಬ್ಬರು ಬಲಿ

ಚಿಕ್ಕಮಗಳೂರು,ಅ.31- ಹಸುವಿಗೆ ಸೊಪ್ಪು ತರಲು ಇಂದು ಮುಂಜಾನೆ ವ್ಯಕ್ತಿಗಳಿಬ್ಬರು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆಯೊಂದು ಇವರ ಮೇಲೆ ದಾಳಿ ಮಾಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕೆರೆ ಗದ್ದೆ ಗ್ರಾಮದ ನಿವಾಸಿಗಳಾದ ಹರೀಶ್‌ ಮತ್ತು ಉಮೇಶ್‌ ಮೃತಪಟ್ಟವರು. ಇಂದು ಮುಂಜಾನೆ 6.30 ರ ಸುಮಾರಿನಲ್ಲಿ ಇವರಿಬ್ಬರೂ ಹಸುವಿಗೆ ಸೊಪ್ಪು ತರಲು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹೋಗುತ್ತಿದ್ದಾಗ ಕೆರೆ ಗ್ರಾಪಂ ವ್ಯಾಪ್ತಿಯ ಮುಡುಬಾ ಎಲ್ಸಾರ ಬಳಿ ಕಾಡಾನೆಯೊಂದು ಏಕಾಏಕಿ ಇವರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಶೃಂಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಸರಗೂರಿನಲ್ಲಿ ಹುಲಿಯೊಂದು ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಸಾಯಿಸಿತು. ಈ ಘಟನೆ ಮಾಸುವ ಮುನ್ನವೇ ಇಂದು ಆನೆ ದಾಳಿಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದು, ಅರಣ್ಯ ಭಾಗದ ನಿವಾಸಿಗಳು ಆತಂಕಗೊಂಡಿದ್ದಾರೆ.

ವಿಮೆ ಹಣಕ್ಕಾಗಿ ಮಗನನ್ನೇ ಹತ್ಯೆ ಮಾಡಿಸಿದ ತಾಯಿ

ಕಾನ್ಪುರ, ಅ.31- ವಿಮೆ ಹಣಕ್ಕಾಗಿ ಹೆತ್ತ ತಾಯಿಯೇ ತನ್ನ ಪ್ರಿಯಕರನ ಸಹಕಾರದೊಂದಿಗೆ ಮಗನನ್ನು ಕೊಂದು ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಮುಂದಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ತನ್ನ ಅಕ್ರಮ ಸಂಬಂಧವನ್ನು ವಿರೋಧಿಸಿದ್ದ 23 ವರ್ಷದ ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶವವನ್ನು ರಸ್ತೆಯಲ್ಲಿ ಬಿಸಾಡಿ ಪರಾರಿಯಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅ. 26 ರಂದು ಕಾರಿನೊಳಗೆ ಮಗನನ್ನು ಕೊಲೆ ಮಾಡಲು ತಾಯಿಯ ಸಂಗಾತಿಯ ಸಹೋದರ ಕೂಡ ಸಹಾಯ ಮಾಡಿದ್ದಾನೆ. ಇಲ್ಲಿಯವರೆಗೆ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿಯಿಂದಲೇ ಕೊಲೆಯಾದ ಪುತ್ರವನ್ನು ಪ್ರದೀಪ್‌ ಶರ್ಮಾ ಎಂದು ಗುರುತಿಸಲಾಗಿದೆ. ಅವರ ಶವ ಕಾನ್ಪುರ-ಇಟಾವಾ ಹೆದ್ದಾರಿಯಲ್ಲಿ ಪತ್ತೆಯಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಇದರ ಬಗ್ಗೆ ವಿವರವಾದ ತನಿಖೆ ನಡೆಸುವವರೆಗೆ ಈ ವಿಷಯವನ್ನು ಆರಂಭದಲ್ಲಿ ಅಪಘಾತವೆಂದು ನೋಡಲಾಗಿತ್ತು.

ಪ್ರದೀಪ್‌ ಅವರ ತಂದೆಯ ಮರಣದ ನಂತರ, ಅವರ ತಾಯಿ ಪ್ರಮುಖ ಆರೋಪಿ ಮಾಯಾಂಕ್‌ ಅಲಿಯಾಸ್‌‍ ಇಶು ಕಟಿಯಾರ್‌ ಜೊತೆ ಸಂಬಂಧವನ್ನು ಪ್ರಾರಂಭಿಸಿದರು ಎಂದು ದೇರಾಪುರ ವೃತ್ತ ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ಪ್ರದೀಪ್‌ ಅವರ ಸಂಬಂಧವನ್ನು ವಿರೋಧಿಸಿದರು ಮತ್ತು ಕ್ರಮೇಣ ತಾಯಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.

ನಂತರ ಆತ ಆಂಧ್ರಪ್ರದೇಶದಲ್ಲಿ ಸ್ವತಃ ಕೆಲಸವನ್ನೂ ಪಡೆದರು.ಇದರಿಂದ ಕೋಪಗೊಂಡ ಪ್ರದೀಪ್‌ನ ತಾಯಿ ಮಾಯಾಂಕ್‌ ಮತ್ತು ಅವನ ಸಹೋದರ ರಿಷಿ ಕಟಿಯಾರ್‌ ಅವರೊಂದಿಗೆ ಸಂಚು ರೂಪಿಸಿ ಮಗನನ್ನೇ ಕೊಲ್ಲಲು ಯೋಜನೆ ರೂಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಯಾಂಕ್‌ ಮತ್ತು ರಿಷಿ ಉದ್ದೇಶಪೂರ್ವಕವಾಗಿ ಪ್ರದೀಪ್‌ನ ಹೆಸರಿನಲ್ಲಿ ಹಲವಾರು ವಿಮಾ ಪಾಲಿಸಿಗಳನ್ನು ಖರೀದಿಸಿದರು.ದೀಪಾವಳಿ ರಜೆಗಾಗಿ ಪ್ರದೀಪ್‌ ಮನೆಗೆ ಹಿಂದಿರುಗಿದಾಗ, ಅಕ್ಟೋಬರ್‌ 26 ರಂದು ಭೋಜನಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಮಾಯಾಂಕ್‌ ಮತ್ತು ರಿಷಿ ಪ್ರದೀಪ್‌ನನ್ನು ತಮ ಕಾರಿನಲ್ಲಿ ಕರೆದೊಯ್ದರು. ಕಾರಿನಲ್ಲಿ, ಪ್ರದೀಪ್‌ನ ತಲೆಗೆ ಸುತ್ತಿಗೆಯಿಂದ ಹಲವು ಬಾರಿ ಹೊಡೆದು ಹತ್ಯೆ ಮಾಡಿದರು.ರಸ್ತೆ ಅಪಘಾತದಂತೆ ಕಾಣುವಂತೆ ಮಾಡಲು, ಆರೋಪಿಗಳು ಶವವನ್ನು ಡೆರಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಬಲ್ಹರಾಮೌ ಗ್ರಾಮದ ಬಳಿಯ ಕಾನ್ಪುರ-ಇಟಾವಾ ಹೆದ್ದಾರಿಯಲ್ಲಿ ಎಸೆದರು.

ಪ್ರದೀಪ್‌ನ ಶವವನ್ನು ಪೊಲೀಸರು ವಶಪಡಿಸಿಕೊಂಡ ನಂತರ ಮತ್ತು ಅವನ ಕುಟುಂಬವನ್ನು ಪತ್ತೆಹಚ್ಚಿದ ನಂತರ, ಅವನ ಚಿಕ್ಕಪ್ಪ ಮತ್ತು ಅಜ್ಜ ರಿಷಿ ಮತ್ತು ಮಾಯಾಂಕ್‌ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಆದಾಗ್ಯೂ, ಪ್ರದೀಪ್‌ನ ತಾಯಿ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಲೇ ಇದ್ದರು. ಘಟನೆಯ ವಿವರವಾದ ತನಿಖೆಯಲ್ಲಿ ಪ್ರದೀಪ್‌ ಕೊಲೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಅಪರಾಧಕ್ಕೆ ಬಳಸಿದ ಸುತ್ತಿಗೆ, ಅಕ್ರಮ ಬಂದೂಕು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಕೌಂಟರ್‌ ನಂತರ ಮಾಯಾಂಕ್‌ ಮತ್ತು ರಿಷಿ ಇಬ್ಬರನ್ನೂ ಬಂಧಿಸ ಲಾಗಿದೆ ಎಂದು ವೃತ್ತ ಅಧಿಕಾರಿ ಹೇಳಿದರು.

ರಿಷಿ ಪೊಲೀಸ್‌‍ ತಂಡದ ಮೇಲೆ ಗುಂಡು ಹಾರಿಸಿದ ನಂತರ ಎನ್‌ಕೌಂಟರ್‌ ನಡೆಯಿತು. ಪೊಲೀಸರು ಪ್ರತಿದಾಳಿ ನಡೆಸಿದರು ಮತ್ತು ಅವರ ಮೇಲೆ ಗುಂಡು ಹಾರಿಸಲಾಯಿತು. ಅವರು ಆಸ್ಪತ್ರೆಯಲ್ಲಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಾಟಾಳ್ ಸಿದ್ಧತೆ

ಬೆಂಗಳೂರು, ಅ.31– ಕರ್ನಾಟಕ ರಾಜ್ಯೋತ್ಸವ ಸಮಿತಿ (ರಿ) ವತಿಯಿಂದ ನಾಳೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.

ನಾಳೆ (ನ.1) ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮೈಸೂರು ಬ್ಯಾಂಕ್‌ ಹತ್ತಿರ ಕನ್ನಡ ತಾಯಿ ಭುವನೇಶ್ವರಿ ಪೂಜೆ ಹಾಗೂ ನಗರ ದೇವತೆ ಶ್ರೀ ಅಣ್ಣಮ ದೇವಿಯ ವೈಭವದ ಮೆರವಣಿಗೆಯನ್ನು ಹಮಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಾಂಬೆ ಭುವನೇಶ್ವರಿ ಗೆೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರೆ, ವಾಟಾಳ್‌ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್‌ ರಾವ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಗಾಲ್‌ ಆಟಗಾರ್ತಿ ಅನುಪಮ ವಾಟಾಳ್‌ ನಾಗರಾಜ್‌ ಅವರು ಆಗಮಿಸಲಿದ್ದಾರೆ.

ಇದೇ ವೇಳೆ ಕನ್ನಡ ಹೋರಾಟಗಾರರಾದ ಸಾ.ರಾ.ಗೋವಿಂದ್‌, ಆ.ತಿ.ರಂಗನಾಥ್‌, ಶಿವರಾಮೇಗೌಡ, ಪ್ರವೀಣ್‌ ಕುಮಾರ್‌ ಶೆಟ್ಟಿ, ಕೆ.ಆರ್‌.ಕುಮಾರ್‌, ಮಂಜುನಾಥ್‌ದೇವ್‌, ಹೆಚ್‌.ವಿ.ಗಿರೀಶ್‌ಗೌಡ ಮುಂತಾದವರನ್ನು ಸನಾನಿಸಲಾಗುವುದು.ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕು ಎಂದು ವಾಟಾಳ್‌ ನಾಗರಾಜ್‌ ಅಭಿಮಾನಿ ಸಂಘದ ಅಧ್ಯಕ್ಷ ವಾಟಾಳ್‌ ಎನ್‌.ವೆಂಕಟೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪ ವಿಭಾಗಾಧಿಕಾರಿಗೆ ಕೃಷ್ಣಬೈರೇಗೌಡ ತರಾಟೆ

ಬೆಂಗಳೂರು, ಅ.31-ನಿಮಗೆ ಎಷ್ಟು ಜನ ಏಜೆಂಟ್‌ ಇದ್ದಾರೆ, ಆ ಪೈಕಿ ಅಧಿಕೃತ ಏಜೆಂಟ್‌ ಯಾರೆಂಬ ಬೋರ್ಡ್‌ ಹಾಕಿಬಿಡಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಉಪ ವಿಭಾಗಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಕಾಸಸೌಧದಲ್ಲಿಂದು ನಡೆದ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ವಿಲೇವಾರಿ ಸಂಬಂಧ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು, ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಕಿರಣ್‌ ಅವರನ್ನು ತರಾಟೆಗೆ ತೆಗೆದುಕೊಂಡರು,

ಸಭೆಯಲ್ಲಿ ಉಪ ವಿಭಾಗಾಧಿಕಾರಿಯವರ ಬೆವರಿಳಿಸಿದ ಅವರು, ಜನರು ತಮ ಕೆಲಸಗಳಿಗೆ ಏಜೆಂಟರನ್ನೇ ಭೇಟಿಯಾಗಿಬಿಡಲಿ. ನೀವೂ ನನಗೇ ಸಿಗಲ್ಲ ಅಂದರೆ ಇನ್ನೂ ಜನರ ಕಥೆ ಏನು? ಎಂದು ಪ್ರಶ್ನಿಸಿದರು. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಅನಗತ್ಯವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡದೇ ವಿಳಂಬ ಮಾಡಬಾರದು ಎಂದು ಸಚಿವರು ಸೂಚಿಸಿದರು.

ಪೊಲೀಸರು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಅ.31- ಪೊಲೀಸ್‌‍ ಇಲಾಖೆಯ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾ ಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭ್ರಷ್ಟಚಾರವನ್ನು ತಮ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕೆ. ಶಿವಕುಮಾರ್‌ ಎಂಬುವರು ತಮ ಮಗಳ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ಕೆಲಸಗಳಿಗೆ ಯಾವ ರೀತಿ ಲಂಚ ವಸೂಲಿ ಮಾಡಲಾಯಿತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಬೆಳಂದೂರು ಪೊಲೀಸ್‌‍ಠಾಣೆಯ ಸಬ್‌ ಇನ್‌್ಸಪೆಕ್ಟರ್‌ ಮತ್ತು ಕಾನ್‌್ಸಟೆಬಲ್‌ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್‌, ಪೊಲೀಸ್‌‍ ಇಲಾಖೆ ಮಾತ್ರವಲ್ಲದೆ ಸರ್ಕಾರದ ಯಾವುದೇ ಇಲಾಖೆಯಲ್ಲಾದರೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿದ್ದರೆ ಅದನ್ನು ಸಹಿಸುವುದಿಲ್ಲ. ಕಠಿಣಕ್ರಮ ಕೈಗೊಳ್ಳುತ್ತೇವೆ ಎಂದರು.

ಅದರಲ್ಲೂ ಪ್ರಮುಖವಾಗಿ ಪೊಲೀಸ್‌‍ ಇಲಾಖೆಯಲ್ಲಿ ಲಂಚ ಪಡೆದಿದ್ದರೆ ಅದು ಸಾವಿರ ಇರಲಿ, ಐದುನೂರೆ ಇರಲಿ ತಕ್ಷಣವೇ ಅಮಾನತಿನಂತಹ ಕ್ರಮ ಕೈಗೊಂಡು ಇಲಾಖೆಯ ವಿಚಾರಣೆ ನಡೆಸಲಾಗುವುದು. ತನಿಖೆಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾಗುತ್ತದೆ ಎಂದರು.

ಇಂತಹ ಪ್ರಕರಣಗಳು ನಮಗಾಗಲೀ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದರೆ ತಕ್ಷಣವೇ ನಿರ್ಧಾಕ್ಷೀಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್‌‍ ಸಮಾವೇಶ ಹಾಗೂ ಇತರ ಸಭೆಗಳಲ್ಲಿ ಸೂಚನೆ ನೀಡಿದ್ದೇವೆ. ಮುಖ್ಯಮಂತ್ರಿ ಕೂಡ ಸ್ಪಷ್ಟ ಆದೇಶ ನೀಡಿದ್ದಾರೆ. ಭ್ರಷ್ಟಚಾರವನ್ನು ಯಾವುದೇ ಹಂತದಲ್ಲೂ ತಾವು ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಒಳ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಗೊಂದಲ ಮೂಡಿಸಿತ್ತು. ಅದನ್ನು ಸರಿಪಡಿಸಿ, ಕಾನೂನಿಗೆ ಬಲ ನೀಡಲು ನಮ ಸರ್ಕಾರ ಮುಂದಾಗಿದೆ. ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ನಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಎ,ಬಿ,ಸಿ,ಡಿ ಎಂಬ ವರ್ಗೀಕರಣ ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ನಂತರ ಕಾನೂನು ರೂಪಿಸಿ, ಜಾರಿಗೊಳಿಸಲು ಚರ್ಚಿಸಲಾಗಿತ್ತು. ಆದರೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಾಗಿ ಕಾನೂನು ರೂಪಿಸಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕಾನೂನು ಸಚಿವರಿಗೆ ಸೂಚನೆ ನೀಡಲಾಗಿದೆೆ ಎಂದರು.

ಬಿಜೆಪಿಯ ಸಂಸದ ಗೋವಿಂದ ಕಾರಜೋಳ ಅವರಿಗೆ ಒಳ ಮೀಸಲಾತಿ ವಿಚಾರ ಅರ್ಥವಾಗಿಲ್ಲ. ಅವರ ಸರ್ಕಾರ ಆಡಳಿತದಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು. ನಾವು ಅದನ್ನು ಸರಿಪಡಿಸಿ ಮತ್ತು ಕಾನೂನಿನ ಶಕ್ತಿ ನೀಡಲು ಮುಂದಾಗಿದ್ದೇವೆ ಎಂದರು.

ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌‍ಐಟಿ ತನಿಖೆಗೆ ಹೈಕೋರ್ಟ್‌ ತಡೆ ನೀಡಿರುವ ಆದೇಶವನ್ನು ತಾವು ಓದಿಲ್ಲ. ಈ ಬಗ್ಗೆ ಕಾನೂನು ಇಲಾಖೆ ಅಡ್ವೊಕೇಟ್‌ ಜನರಲ್‌ ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಹೈಕೋರ್ಟ್‌ ಆದೇಶಕ್ಕೆ ಮೇಲನವಿ ಸಲ್ಲಿಸಬೇಕೇ? ಅಥವಾ ಸುಪ್ರೀಂಕೋರ್ಟ್‌ ಮೊರೆ ಹೋಗಬೇಕೆ? ಯಾವ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸಿ ನಿರ್ಧರಿಸುತ್ತೇವೆ. ಎಸ್‌‍ಐಟಿ ತಂಡ ತನಿಖೆಯ ವರದಿಯನ್ನು ಒಂದೆರಡು ದಿನಗಳಲ್ಲಿ ಸಲ್ಲಿಸುವ ಸಾಧ್ಯತೆಯಿದೆ ಎಂದರು.

ಖಾಸಗಿ ಹೋಟೆಲ್‌ನಲ್ಲಿ ಮಿಡ್‌ನೈಟ್‌ ಮೀಟಿಂಗ್‌ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಬಾಸ್ಕೆಟ್‌ಬಾಲ್‌ ಅಂತಾರಾಷ್ಟ್ರೀಯ ಸಂಸ್ಥೆ ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ತಾವು ಹೋಗಿದ್ದು, ಯಾವುದೇ ರಾಜಕೀಯ ವಿಚಾರಗಳ ಕುರಿತು ಚರ್ಚೆ ಮಾಡಿಲ್ಲ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಇಂದು ತೆರೆ, ನ.10ರ ವರೆಗೆ ಆನ್‌ಲೈನ್‌ನಲ್ಲಿ ಅವಕಾಶ

ಬೆಂಗಳೂರು, ಅ.31– ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಇಂದು ಸಂಜೆ ತೆರೆ ಬೀಳಲಿದೆ. ಆದರೆ, ಆನ್‌ಲೈನ್‌ ಮೂಲಕ ಮಾಹಿತಿ ನೀಡುವವರಿಗೆ ನವೆಂಬರ್‌ 10ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಸೆಪ್ಟೆಂಬರ್‌ 22ರಿಂದ ಪ್ರಾರಂಭವಾದ ಈ ಸಮೀಕ್ಷೆಯು ಅಕ್ಟೋಬರ್‌ 7ರಂದು ಮುಗಿಯಬೇಕಿತ್ತು. ಆದರೆ, ಜಿಬಿಎ ವ್ಯಾಪ್ತಿಯಲ್ಲಿ ತಡವಾಗಿ ಸಮೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಸಮೀಕ್ಷೆಯ ಅಂತಿಮ ಗಡುವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಇಂದಿಗೆ ಆ ಗಡುವು ಮುಗಿಯುತ್ತಿದ್ದು, ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿದೆ.

ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಆನ್‌ಲೈನ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳುವವರಿಗೆ ಅವಧಿಯನ್ನು ನವೆಂಬರ್‌ 10ರವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

http://kscbcselfdeclaration.karnataka.gov.in ಈ ಲಿಂಕ್‌ ಮೂಲಕ ಆನ್‌ಲೈನ್‌ನಲ್ಲಿ ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.ನಿನ್ನೆಯವರೆಗೆ ರಾಜ್ಯದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) 1,46,53,638 ಮನೆಗಳು ಮತ್ತು 5,52,57,205 ಜನರ ಸಮೀಕ್ಷೆ ಮುಗಿದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ತಿಳಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದಿದೆ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳು ಕಂಡುಬಂದಿದೆ. ಬೆಂಗಳೂರಿನಲ್ಲಿ ವಾಸವಾಗಿರುವರು ಬಹುತೇಕರು ಹೊರ ಜಿಲ್ಲೆಯಿಂದ ಬಂದವರು ಇರುತ್ತಾರೆ. ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದು, ಬಾಡಿಗೆ ಮನೆಯಲ್ಲಿ ಮಾಹಿತಿ ಕೊಡಲು ನಿರಾಕರಿಸಿರುವುದು ಕಂಡು ಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್‌ ಮೀಟರ್‌ಗಳು ಸಹ ಹೆಚ್ಚಿಗೆ ಇರುವ ಪರಿಣಾಮ ಶೇಕಡಾವಾರು ಪ್ರಮಾಣ ಕಡಿಮೆ ತೋರಿಸುತ್ತಿದೆ. ಏಕೆ? ಸಮೀಕ್ಷೆ ಕಡಿಮೆಯಾಗಿದೆ ಎಂಬುದರ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಂತ್ಯ ಸಂಸ್ಕಾರಕ್ಕೂ ಲಂಚ : ಅಶೋಕ್‌ ಆಕ್ರೋಶ

ಬೆಂಗಳೂರು,ಅ.31– ಕಾಂಗ್ರೆಸ್‌‍ ಹೈಕಮಾಂಡ್‌ ಮತ್ತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಜೋಳಿಗೆ ತುಂಬಿಸಿ, ಸಿಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಪಾಲಿಕೆ ಅಧಿಕಾರಿ ಗಳಿಗೆ ಎಷ್ಟು ಸುಲಿಗೆ ಟಾರ್ಗೆಟ್‌ ಕೊಟ್ಟಿದ್ದೀರಿ? ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮರಣೋತ್ತರ ಪರೀಕ್ಷೆ ವರದಿ ಪಡೆಯಲು ಲಂಚ, ಮರಣ ಪ್ರಮಾಣಪತ್ರ ಪಡೆಯಲು ಲಂಚ, ಅಂತ್ಯಸಂಸ್ಕಾರ ಮಾಡೋದಕ್ಕೆ ಲಂಚ.ನಿಮ ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ ಉಪಮುಖ್ಯಮಂತ್ರಿಗಳೇ? ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಡಿ.ಕೆ ಶಿವಕುಮಾರ್‌ ಅವರೇ, ಪಾಲಿಕೆ ಶಿಕ್ಷಕರಿಗೆ 6 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಪಾಲಿಕೆಯ ಸಶಾನ ಸಿಬ್ಬಂದಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಪಾಲಿಕೆಯ ಕಿರಿಯ ಆರೋಗ್ಯಾಧಿಕರಿಗಳಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ವಾಗ್ದಳಿ ನಡೆಸಿದ್ದಾರೆ.

ಮಾತೆತ್ತಿದರೆ ಟನಲ್‌ ರೋಡು, ಸ್ಕೈ ಡೆಕ್ಕು, ಬ್ರ್ಯಾಂಡ್‌ ಬೆಂಗಳೂರು ಎಂದು ದೊಡ್ಡ ದೊಡ್ಡ ಮಾತು ಅಡಿ ಬೊಗಳೆ ಬಿಡುವುದಲ್ಲ ಸ್ವಾಮಿ, ಮೊದಲು ಪಾಲಿಕೆ ನೌಕರರಿಗೆ ಸರಿಯಾಗಿ ಸಾಲ ಕೊಡಿ. ನಿಮ ಘನಂದಾರಿ ಆಡಳಿತದಲ್ಲಿ ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ , ಟಿವಿಗಳಲ್ಲಿ ಬೆಂಗಳೂರಿನ ಎಡವಟ್ಟುಗಳ ಬಗ್ಗೆ ಒಂದಲ್ಲ ಒಂದು ನಕಾರಾತಕ ಸುದ್ದಿ ಬಂದು ನಗರದ ಹೆಸರು ಹಾಳಾಗುತ್ತಿದೆ. ಒಳ್ಳೆಯ ಆಡಳಿತ ಕೊಡಲು ಸಾಧ್ಯವಾದರೆ ಮುಂದುವರೆಯಿರಿ, ಇಲ್ಲವಾದರೆ ಯಾರಾದರೂ ಸಮರ್ಥರಿಗೆ ದಾರಿ ಮಾಡಿಕೊಡಿ ಎಂದು ಅಶೋಕ್‌ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಭಾರತದಲ್ಲಿ ನೇಮಕಾತಿ ಆರಂಭಿಸಿದ ಸ್ಪೇಸ್‌‍ ಎಕ್ಸ್

ಮುಂಬೈ, ಅ.31-ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌‍ X ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಸುತ್ತಿನ ನೇಮಕಾತಿಯನ್ನು ಪ್ರಾರಂಭಿಸಿದೆ.ಭಾರತದಲ್ಲಿ ತನ್ನ ಬಹುನಿರೀಕ್ಷಿತ ಉಪ ಗ್ರಹ ಬ್ರಾಡ್‌ಬ್ಯಾಂಡ್‌‍ ಬಿಡುಗಡೆಯತ್ತ ಮಹತ್ವದ ಹೆಜ್ಜೆಯಾಗಿ, ಸ್ಪೇಸ್‌‍X ಒಡೆತನದ ಸ್ಟಾರ್‌ಲಿಂಕ್‌ ದೇಶದಲ್ಲಿ ತನ್ನ ಮೊದಲ ಸುತ್ತಿನ ನೇಮಕಾತಿಯನ್ನು ಪ್ರಾರಂಭಿಸಿದೆ.ತನ್ನ ನೇಮಕಾತಿ ಅಭಿಯಾನದ ಭಾಗವಾಗಿ, ಎಲೋನ್‌ ಮಸ್ಕ್‌ ನಡೆಸುವ ಕಂಪನಿಯು ತನ್ನ ಲಿಂಕ್ಡ್ ಇನ್‌ ಮತ್ತು ಸ್ಪೇಸ್‌‍ಎಕ್‌್ಸ ವೃತ್ತಿಜೀವನದ ಪೋರ್ಟಲ್‌ನಲ್ಲಿ ಹಲವಾರು ಹುದ್ದೆಗಳನ್ನು ಪೋಸ್ಟ್‌ ಮಾಡಿದೆ.

ಕಂಪನಿಯು ಅರ್ಜಿಗಳನ್ನು ಆಹ್ವಾನಿಸುತ್ತಿರುವ ಹುದ್ದೆಗಳು ತೆರಿಗೆ ವ್ಯವಸ್ಥಾಪಕ, ಲೆಕ್ಕಪತ್ರ ವ್ಯವಸ್ಥಾಪಕ, ಪಾವತಿ ವ್ಯವಸ್ಥಾಪಕ ಮತ್ತು ಭಾರತದಲ್ಲಿ ಸ್ಟಾರ್‌ಲಿಂಕ್‌ನ ಕಾರ್ಯಾಚರಣಾ ಕೇಂದ್ರವಾದ ಬೆಂಗಳೂರಿನಲ್ಲಿ ಹಿರಿಯ ಖಜಾನೆ ವಿಶ್ಲೇಷಕ ಸೇರಿದಂತೆ ಹಣಕಾಸು ಮತ್ತು ಲೆಕ್ಕಪತ್ರ ಪಾತ್ರಗಳಾಗಿವೆ.

ಸ್ಟಾರ್‌ಲಿಂಕ್‌‍ ವಿಶ್ವಾದ್ಯಂತ ಕಡಿಮೆ-ಲೇಟೆನ್ಸಿ ಉಪಗ್ರಹ ಬ್ರಾಡ್‌ಬ್ಯಾಂಡ್‌‍ ಸೇವೆಗಳನ್ನು ನೀಡಲು ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತಿದ್ದಂತೆ, ಅದರ ಭಾರತೀಯ ಅಂಗಸಂಸ್ಥೆಯು ಹಣಕಾಸು ವರದಿ ಮತ್ತು ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಲೆಕ್ಕಪತ್ರ ವ್ಯವಸ್ಥಾಪಕರನ್ನು ನೇಮಿಸಿಕೊಳ್ಳಲು ನೋಡುತ್ತಿದೆ ಎಂದು ಕಂಪನಿಯು ತನ್ನ ಉದ್ಯೋಗ ಪೋಸ್ಟ್‌ನಲ್ಲಿ ತಿಳಿಸಿದೆ.

ಭಾರತದಲ್ಲಿ ಸ್ಟಾರ್‌ಲಿಂಕ್‌ನ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಲುವಾಗಿ, ಈ ಹುದ್ದೆಯು ಲೆಕ್ಕಪತ್ರ ನಿರ್ವಹಣೆ, ವರದಿ ಮಾಡುವಿಕೆ ಮತ್ತು ಶಾಸನಬದ್ಧ ಅನುಸರಣೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿಸ್ತರಿಸುವುದನ್ನು ಒಳಗೊಂಡಿರುತ್ತದೆ. ಯಾವುದೇ ದೂರಸ್ಥ ಅಥವಾ ಹೈಬ್ರಿಡ್‌ ಆಯ್ಕೆಗಳು ಲಭ್ಯವಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ; ಕಾನೂನುಬದ್ಧ ಕೆಲಸದ ಅಧಿಕಾರ ಹೊಂದಿರುವ ಸ್ಥಳೀಯವಾಗಿ ಆಧಾರಿತ ಅರ್ಜಿದಾರರನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

2025 ರ ಕೊನೆಯಲ್ಲಿ ಅಥವಾ 2026 ರ ಆರಂಭದಲ್ಲಿ ಭಾರತದಲ್ಲಿ ತನ್ನ ಉಪಗ್ರಹ ಇಂಟರ್ನೆಟ್‌ ಸೇವೆಗಳ ವಾಣಿಜ್ಯ ಉಡಾವಣೆಗೆ ಸಿದ್ಧತೆಯಾಗಿ ಸ್ಟಾರ್‌ಲಿಂಕ್‌‍ ನೇಮಕಾತಿ ಮಾಡಿಕೊಳ್ಳುತ್ತಿದೆ. ಸರ್ಕಾರಿ ನಿಯಮಗಳಿಗೆ ಅನುಸಾರವಾಗಿ, ಕಂಪನಿಯು ಈಗ ನೆಲದ ಮೂಲಸೌಕರ್ಯವನ್ನು ಸ್ಥಾಪಿಸುತ್ತಿದೆ ಮತ್ತು ಅಗತ್ಯವಿರುವ ಭದ್ರತಾ ಪ್ರಯೋಗಗಳನ್ನು ನಡೆಸುತ್ತಿದೆ.

ಸ್ಪೆಕ್ಟ್ರಮ್‌ ಹಂಚಿಕೆಗೆ ಮೊದಲು ಕಾನೂನುಬದ್ಧ ಪ್ರತಿಬಂಧ ಮತ್ತು ಭದ್ರತಾ ಅನುಸರಣೆಗಾಗಿ ದೂರಸಂಪರ್ಕ ಇಲಾಖೆಯ ಅವಶ್ಯಕತೆಗಳನ್ನು ಅನುಸರಿಸಲು, ಸ್ಟಾರ್‌ಲಿಂಕ್‌‍ ಮುಂಬೈನಲ್ಲಿ ಅಧಿಕಾರಿಗಳಿಗೆ ತನ್ನ ಬ್ರಾಡ್‌ಬ್ಯಾಂಡ್‌‍ ಸೇವೆಯ ಪ್ರದರ್ಶನವನ್ನು ಮೊದಲೇ ನೀಡಿತು.ವರದಿಗಳ ಪ್ರಕಾರ, ಕಂಪನಿಯು ಮುಂಬೈ, ಚೆನ್ನೈ ಮತ್ತು ನೋಯ್ಡಾದಲ್ಲಿ ಮೂರು ಗೇಟ್‌ವೇ ಕೇಂದ್ರಗಳನ್ನು ತೆರೆಯಲು ಅನುಮತಿಗಾಗಿ ಅರ್ಜಿ ಸಲ್ಲಿಸಿದೆ.

ನಂತರ, ಚಂಡೀಗಢ, ಕೋಲ್ಕತ್ತಾ ಮತ್ತು ಲಕ್ನೋ ಸೇರಿದಂತೆ ಒಂಬತ್ತರಿಂದ ಹತ್ತು ಗೇಟ್‌ವೇ ಸ್ಥಳಗಳನ್ನು ತೆರೆಯಲು ಉದ್ದೇಶಿಸಿದೆ.ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ, ಸ್ಟಾರ್‌ಲಿಂಕ್‌‍ ಜಿಯೋ ಸ್ಯಾಟಲೈಟ್‌ ಮತ್ತು ಯುಟೆಲ್‌ಸ್ಯಾಟ್‌‍ ಒನ್‌ವೆಬ್‌ನಿಂದ ಸ್ಪರ್ಧೆಯನ್ನು ಎದುರಿಸಲಿದೆ, ಇವೆರಡೂ ನಿಯಂತ್ರಕ ಅನುಮತಿಗಳನ್ನು ಪಡೆದಿವೆ ಆದರೆ ಅಂತಿಮ ಸ್ಪೆಕ್ಟ್ರಮ್‌ ಹಂಚಿಕೆಗಾಗಿ ಕಾಯುತ್ತಿವೆ.ಉಪಗ್ರಹ ಬ್ರಾಡ್‌ಬ್ಯಾಂಡ್‌‍ ಸ್ಪೆಕ್ಟ್ರಮ್‌ ಬೆಲೆ ಮತ್ತು ಹಂಚಿಕೆಗಾಗಿ ಚೌಕಟ್ಟುಗಳನ್ನು ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇನ್ನೂ ಅಂತಿಮಗೊಳಿಸುತ್ತಿದೆ.

ಸುಹಾಸ್‌‍ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್‌ಐಎ

ಬೆಂಗಳೂರು,ಅ.31– ಬರ್ಬರವಾಗಿ ಕೊಲೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗದಳದ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ರಾಷ್ಟ್ರೀಯ ತನಿಖಾ ದಳ( ಎನ್‌ ಐಎ) ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ (ಚಾರ್ಚ್‌ಶೀಟ್‌) ಸಲ್ಲಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ 1967, ಭಾರತೀಯ ನ್ಯಾಯಸಂಹಿತಾ 2023 ಮತ್ತು ಶಸಾ್ತ್ರಸ್ತ್ರ ಕಾಯಿದೆ, 1959ರ ವಿವಿಧ ವಿಭಾಗಗಳಡಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 2025ರ ಮೇ ತಿಂಗಳಿನಲ್ಲಿ ಸುಹಾಸ್‌‍ ಶೆಟ್ಟಿಯನ್ನು ಮಾರಕಾಯುಧಗಳಿಂದ ಶಸ್ತ್ರಸಜ್ಜಿತವಾದ ಏಳು ಮಂದಿ ಬರ್ಭರವಾಗಿ ಹತ್ಯೆ ಮಾಡಿದ್ದರು. ಇದೊಂದು ವ್ಯವಸ್ಥಿತ ಹಾಗೂ ಪೂರ್ವ ನಿಯೋಜಿತ ಕೊಲೆಯಾಗಿದ್ದು, ಸುಹಾಸ್‌‍ ಶೆಟ್ಟಿಯನ್ನು ಹತ್ಯೆ ಮಾಡಲು , ಮೊದಲೇ ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಆತನನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಲಾಗಿದೆ.

ಹಲ್ಲೆ ನಡೆಸಿದಾಗ ಸುಹಾಸ್‌‍ ಶೆಟ್ಟಿ ಪ್ರಾಣ ಉಳಿಸಿಕೊಳ್ಳಲು ಓಡಿದ್ದರು. ಈ ವೇಳೆ ಅವರನ್ನು ಅಟ್ಟಾಡಿಸಿಕೊಂಡರೂ ಕೊಲೆಗಾರರು ಯಾವುದೇ ದಯೆ ತೋರಿಲ್ಲ ಎಂದು ದಾಖಲೆಗಳು ಹೇಳುತ್ತವೆ. ಆರೋಪಿಗಳು ಉದ್ದೇಶಪೂರ್ವಕವಾಗಿ ಸುಹಾಸ್‌‍ ಶೆಟ್ಟಿ ಚಲಾಯಿಸುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂಬುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಂಗಳೂರು ಮೂಲದ ಸುಹಾಸ್‌‍ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿಸಲಾದ 11 ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಬಜರಂಗದಳದ ಸದಸ್ಯ ಶೆಟ್ಟಿ ಅವರನ್ನು ಈ ವರ್ಷದ ಮೇ 1ರಂದು ಏಳು ಜನರು ಹತ್ಯೆಗೈದಿದ್ದರು. ಸಮಾಜದಲ್ಲಿ ಭೀತಿ ಹುಟ್ಟಿಸಲು ಮತ್ತು ಭಯೋತ್ಪಾದನೆಯನ್ನು ಹರಡಲು ಗುರಿಯಿಟ್ಟು ಈ ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಸಂಸ್ಥೆ, ಹತ್ಯೆ ಹಿಂದೆ ದೊಡ್ಡ ಪಿತೂರಿಯಿದೆ. ಸುಹಾಸ್‌‍ ಶೆಟ್ಟಿ ಅವರ ಚಟುವಟಿಕೆ, ಚಲನವಲನಗಳನ್ನು ಹಲವಾರು ತಿಂಗಳುಗಳ ಕಾಲ ಸೂಕ್ಷ್ಮವಾಗಿ ಪತ್ತೆಹಚ್ಚಿ ಈ ಏಳು ಆರೋಪಿಗಳು, ಅವರ ಟೊಯೋಟಾ ಇನ್ನೋವಾ ಕಾರನ್ನು ಎರಡು ಕಾರುಗಳಲ್ಲಿ ಹಿಂಬಾಲಿಸಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಮಾಜಿ ಸದಸ್ಯನಾಗಿರುವ ಆರೋಪಿ ಅಬ್ದುಲ್‌ ಸಫ್ವಾನ್‌ ಅಲಿಯಾಸ್‌‍ ಕಲವಾರು ಸಫ್ವಾನ್‌ ಅಲಿಯಾಸ್‌‍ ಚೋಪು ಸಫ್ವಾನ್‌, ನಿಯಾಜ್‌ ಅಲಿಯಾಸ್‌‍ ನಿಯಾ, ಮೊಹಮದ್‌ ಮುಸಮಿರ್‌ ಅಲಿಯಾಸ್‌‍ ಮೊಹಮದ್‌ ಅಲಿಯಾಸ್‌‍ ಮುಜಮಿಲಸ್ತ್‌ ನೊವಾಸ್‌‍ ಅಲಿಯಾಸ್‌‍ ನೊವಾಸ್‌‍ಅಲಿಸ್ತ್‌, ವಮನದ್‌ ಅಲಿಯಾಸ್‌‍ ನೊವಾಸ್‌‍ ಅಲಿಸ್ತ್‌, ನೌಶಾದ್‌ ಅಲಿಯಾಸ್‌‍ ಚೋಟು ಎಂಬಾತನೊಂದಿಗೆ ಭಯೋತ್ಪಾದನಾ ಸಂಚು ರೂಪಿಸಿದ್ದನು.

ಅಬ್ದುಲ್‌ ಸಫ್ವಾನ್‌ ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ ಮತ್ತು ಪಿಎಫ್‌ಐನ ಮಾಜಿ ಸದಸ್ಯನಾಗಿದ್ದಾನೆ. ಆರೋಪಿ ಆದಿಲ್‌ ಮಹರೂಫ್‌ ಅಲಿಯಾಸ್‌‍ ಆದಿಲ್‌ ಹಣ ಪಾವತಿಸುವ ಭರವಸೆ ಮೇಲೆ ಇತರ ಆರೋಪಿಗಳನ್ನು ನೇಮಿಸಿಕೊಳ್ಳಲು ಹಣ ನೀಡಿದ್ದ ಎಂದು ಎನ್‌ಐಎ ಹೇಳಿದೆ.

ಕಲಂದರ್‌ ಶಫಿ ಅಲಿಯಾಸ್‌‍ ಮಂದೆ ಶಫಿ, ಎಂ.ನಾಗರಾಜ ಅಲಿಯಾಸ್‌‍ ನಾಗ ಅಲಿಯಾಸ್‌‍ ಅಪ್ಪು, ರಂಜಿತ್‌, ಮಹಮದ್‌ ರಿಜ್ವಾನ್‌ ಅಲಿಯಾಸ್‌‍ ರಿಜ್ಜು, ಅಜರುದ್ದೀನ್‌ ಅಲಿಯಾಸ್‌‍ ಅಜರ್‌ ಅಲಿಯಾಸ್‌‍ ಅಜ್ಜು ಮತ್ತು ಅಬ್ದುಲ್‌ ಖಾದರ್‌ ಅಲಿಯಾಸ್‌‍ ನೌಫಲ್‌ ಸೇರಿದಂತೆ ಐವರು ಆರೋಪಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಬಂಧಿತ ಮತ್ತೊಬ್ಬ ಆರೋಪಿ ಅಬ್ದುಲ್‌ ರಜಾಕ್‌ ವಿರುದ್ಧ ತನಿಖೆ ನಡೆಯುತ್ತಿದೆ.

ದಕ್ಷಿಣ ಕನ್ನಡದ ಬಜ್ಪೆಯ ಕಿನ್ನಿಪದವು ಜಂಕ್ಷನ್‌ ಬಳಿ 2025ರ ಮೇ 1ರಂದು ಸುಹಾಸ್‌‍ ಶೆಟ್ಟಿ ಹತ್ಯೆಯಾಗಿತ್ತು. ಹಿಂದೂ ಕಾರ್ಯಕರ್ತ, ಬಜರಂಗ ದಳದ ಸದಸ್ಯ ಸುಹಾಸ್‌‍ ಶೆಟ್ಟಿ ಕಾರನ್ನು ಪಿಕಪ್‌ ಟ್ರಕ್‌ನಿಂದ ಹೊಡೆದು ಅಟ್ಟಿಸಿಕೊಂಡು ಹೋದ ದುಷ್ಕರ್ಮಿಗಳು, ಚೂರಿ, ಕತ್ತಿ ಸಹಿತ ಬರ್ಬರವಾಗಿ ಕೊಂದಿದ್ದರು. ಇತರೇ 5 ಸಹಚರರಲ್ಲಿ ಒಬ್ಬರು ಗಾಯಗೊಂಡಿದ್ದರು.

ಬಜರಂಗ ದಳದ ಜಾತ್ಯತೀತ ಕಾರ್ಯಕರ್ತರಾಗಿ ಗೋರಕ್ಷಣೆ, ಲವ್‌ ಜಿಹಾದ ವಿರುದ್ಧ ಹೋರಾಗಳನ್ನು ಮಾಡಿಕೊಂಡ ಸುಹಾಸ್‌‍, 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ಮೊಹಮದ್‌ ಫಝಿಲ್‌ ಕೊಲೆಯ ಮುಖ್ಯ ಆರೋಪಿಯಾಗಿ ಜೈಲಿನಿಂದ ಬೇಲ್‌ ಮೇಲೆ ಬಿಡುಗಡೆಯಾಗಿದ್ದರು. ಫಝಿಲ್‌ ಕೊಲೆಯು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್‌ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿತ್ತು. ಈ ಸುದೀರ್ಘ ಸಂಘರ್ಷದಲ್ಲಿ ಗುರಿಯಾಗಿದ್ದು ಸುಹಾಸ್‌‍.
ಈ ಪ್ರಕರಣ ಸಂಬಂಧ ಎನ್‌ಐಎ ಈವರೆಗೂ ಅಬ್ದುಲ್‌ ಸಫ್ವಾನ್‌, ನಿಯಾಜ್‌, ಮೊಹಮದ್‌ ಮುಝಮಿಲ್‌, ಕಲಂದರ್‌ ಶಾಫಿ, ಮೊಹಮದ್‌ ರಿಜ್ವಾನ್‌, ರಂಜಿತ್‌ ಹಾಗೂ ನಾಗರಾಜ್ನನ್ನ ಬಂಧಿಸಿದ್ದಾರೆ. ಈ ವೇಳೆ ಸುಹಾಸ್‌‍ ಕೊಲೆಯಲ್ಲಿ ಒಂಬತ್ತು ಜನ ಶಾಮೀಲಾಗಿರುವುದು ಗೊತ್ತಾಗಿದೆ.

ತನಿಖೆ ಆರಂಭಿಸಿದ ಪೊಲೀಸರಿಗೆ 2023ರ ಪ್ರಕರಣವೊಂದರ ಲಿಂಕ್‌ ಇರುವುದು ಗೊತ್ತಾಗಿತ್ತು. ಅದುವೇ ಸಫ್ವಾನ್‌ ಹಾಗೂ ಸುಹಾಸ್‌‍ ಶೆಟ್ಟಿಯ ಆಪ್ತನ ನಡುವಿನ ಗಲಾಟೆ. ಸಫ್ವಾನ್‌ ಎಂಬಾತನ ಜತೆಗೆ ಸುಹಾಸ್‌‍ ಶೆಟ್ಟಿ ಆಪ್ತ ಪ್ರಶಾಂತ್‌ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವಿಚಾರಕ್ಕೆ ಮಾತುಕತೆ ನಡೆಸೋದಕ್ಕೆ ಸಫ್ವಾನ್ನನ್ನು ಕರೆದಿದ್ದ. ಮಾತಾನಾಡುವುದಕ್ಕೆ ಎಂದು ಕರೆದ ಪ್ರಶಾಂತ್‌ ಹಾಗೂ ಗ್ಯಾಂಗ್‌ 2023ರ ಸೆಪ್ಟೆಂಬರ್ನಲ್ಲಿ ಸಫ್ವಾನ್ಗೆ ಡ್ರ್ಯಾಗನರ್ನಿಂದ ಇರಿದಿತ್ತು. ಬಳಿಕ ಚೂರಿ ಇರಿತಕ್ಕೆ ಒಳಗಾದ ಸಫ್ವಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಚೂರಿ ಇರಿತ ಪ್ರಕರಣ ಬಳಿಕ ಸಫ್ವಾನ್‌ ಹಾಗೂ ಪ್ರಶಾಂತ್‌ ನಡುವೆ ದ್ವೇಷ ಹುಟ್ಟಿಸಿತ್ತು.

ಪ್ರಶಾಂತ್‌ ಬದಲು ಸುಹಾಸ್‌‍ ಹತ್ಯೆ!
ಹಲ್ಲೆಗೆ ಪ್ರತಿಯಾಗಿ ಪ್ರಶಾಂತ್‌ ಮೇಲೆ ದಾಳಿ ಮಾಡುವುದಕ್ಕೆ ಸಫ್ವಾನ್‌ ಅನೇಕ ಬಾರಿ ಸಂಚು ಹೂಡಿದ್ದ. ಈ ವೇಳೆ ಪ್ರಶಾಂತ್ಗೆ ಬೆಂಬಲವಾಗಿ ನಿಂತಿದ್ದು ಸುಹಾಸ್‌‍ ಶೆಟ್ಟಿ. ಇದೇ ವಿಚಾರಕ್ಕೆ ಪ್ರಶಾಂತ್‌ ಮೇಲಿನ ಸಫ್ವಾನ್‌ ಸಂಘರ್ಷ, ಸುಹಾಸ್‌‍ ಶೆಟ್ಟಿ ಕಡೆಗೆ ತಿರುಗಿತ್ತು. ಹೀಗಾಗಿಯೇ ಪ್ರಶಾಂತ್ನನ್ನು ಬಿಟ್ಟ ಸಫ್ವಾನ್‌, ಸುಹಾಸ್‌‍ ಹತ್ಯೆಗೆ ಸ್ಕೆಚ್‌ ಹಾಕಿದ್ದ. ಒಂದಷ್ಟು ಕ್ರಿಮಿನಲ್‌ಗಳ ಜೊತೆ ಸೇರಿ ಸಂಚು ರೂಪಿಸಿದ್ದ. ಅದರಂತೆ ಮಿನಿ ಕಂಟೇನರ್‌ ಚಲಾಯಿಸಿದ್ದ ಸಫ್ವಾನ್‌, ಸುಹಾಸ್‌‍ ಕಾರಿಗೆ ಗುದ್ದಿದ್ದ. ಬಲಿಕ ಮುಝಮಿಲ್‌ ಎಂಬಾತ ಚಲಾಯಿಸಿಕೊಂಡು ಬಂದ ಸ್ವಿಫ್ಟ್ ಕಾರಿನಲ್ಲಿದ್ದ ಹಂತಕರು, ನಟ್ಟ ನಡುರಸ್ತೆಯಲ್ಲೇ ಸುಹಾಸ್‌‍ನನ್ನು ಕೊ ೆಮಾಡಿದ್ದರು.