Friday, November 7, 2025
Home Blog Page 15

ಭಾರತವನ್ನು ಒಗ್ಗೂಡಿಸಿದ ಸರ್ದಾರ್‌ ಪಟೇಲ್‌ ಅವರನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು, ಅ.31– ಸ್ವಾತಂತ್ರ್ಯದ ನಂತರ ಭಾರತವನ್ನು ಒಟ್ಟುಗೂಡಿಸುವಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ತೋರಿಸಿದ ಕೌಶಲ್ಯ ಮತ್ತು ದೃಢಸಂಕಲ್ಪವನ್ನು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಶ್ಲಾಘಿಸಿದ್ದಾರೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150 ನೇ ಜನ ದಿನಾಚರಣೆಯಾದ ಇಂದು ನನ್ನ ಗೌರವಗಳನ್ನು ಸಲ್ಲಿಸುತ್ತೇನೆ ಎಂದು ಗೌಡರು ಹೇಳಿದ್ದಾರೆ. ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಅವರ ಪಾತ್ರ ಮತ್ತು ತ್ಯಾಗವು ಅವರನ್ನು ನಮ ರಾಷ್ಟ್ರದ ಶ್ರೇಷ್ಠ ಪುತ್ರರಲ್ಲಿ ಒಬ್ಬರನ್ನಾಗಿ ಮಾಡಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಶತ್ರು ದೇಶಗಳಿಗೆ ನುಗ್ಗಿ ಹೊಡೆಯುವ ಸಾಮರ್ಥ್ಯ ಭಾರತಕ್ಕಿದೆ : ಪ್ರಧಾನಿ ಮೋದಿ

ಅಹಮದಾಬಾದ್‌, ಅ.31– ಶತ್ರುಗಳಿಗೆ ಭಾರತದ ಪ್ರತಿಕ್ರಿಯೆ ಈಗ ನಿರ್ಣಾಯಕವಾಗಿದೆ. ನಾವೀಗ ಬಲಿಷ್ಠರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಕೆಲವು ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150 ನೇ ಜನ್ಮ ದಿನಾಚರಣೆಯ ಸಂದರ್ಭವನ್ನು ಬಳಸಿಕೊಂಡು, ಭಾರತದ ಶತ್ರುಗಳಿಗೆ ಭಾರತದ ಪ್ರತಿಕ್ರಿಯೆ ಈಗ ನಿರ್ಣಾಯಕ, ಬಲಿಷ್ಠ ಮತ್ತು ಜಗತ್ತಿಗೆ ಗೋಚರಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಆಪರೇಷನ್‌ ಸಿಂಧೂರ್‌ ಕಾರ್ಯಚರಣೆ ನಮ ಸೇನೆ ಶತ್ರು ಪ್ರದೇಶವನ್ನು ಪ್ರವೇಶಿಸಿ ದಾಳಿ ಮಾಡಬಹುದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಹೇಳಿದರು.ಆಪರೇಷನ್‌ ಸಿಂಧೂರ್‌ ಸಮಯದಲ್ಲಿ,

ಇಡೀ ಜಗತ್ತು ಭಾರತದ ಕಡೆಗೆ ಕಣ್ಣು ಎತ್ತಲು ಧೈರ್ಯ ಮಾಡಿದರೆ, ಭಾರತ್‌ ಘರ್‌ ಮೇ ಘುಸ್‌‍ ಕರ್‌ ಮಾರ್ತಾ ಹೈ (ಭಾರತ ಶತ್ರುಗಳ ಪ್ರದೇಶಕ್ಕೆ ನುಗ್ಗಿ ಹೊಡೆಯುತ್ತದೆ) ಎಂದು ಹೇಳಿದರು.
ಇಂದು, ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ನಿರ್ವಹಿಸುವವರಿಗೆ ಭಾರತದ ನಿಜವಾದ ಶಕ್ತಿ ಏನೆಂದು ತಿಳಿದಿದೆ ಎಂದು ಪ್ರಧಾನಿ ಹೇಳಿದರು, ದೇಶದ ದೃಢವಾದ ಭದ್ರತಾ ನಿಲುವನ್ನು ಸರ್ದಾರ್‌ ಪಟೇಲ್‌ ಅವರ ಸ್ವಾಭಿಮಾನಿ ಮತ್ತು ಏಕೀಕೃತ ಭಾರತದ ದೃಷ್ಟಿಕೋನಕ್ಕೆ ಜೋಡಿಸಿದರು.

ಕಾಂಗ್ರೆಸ್‌‍ ಪಕ್ಷ ಪಟೇಲ್‌ ಅವರ ದೃಷ್ಟಿಕೋನವನ್ನು ಮರೆತಿದೆ ಎಂದು ಅವರು ಆರೋಪಿಸಿದರು. ಪಟೇಲ್‌ ಅವರ ಆದರ್ಶಗಳು ಬಾಹ್ಯ ಬೆದರಿಕೆಗಳಿಗೆ ಮಾತ್ರವಲ್ಲದೆ ನಕ್ಸಲಿಸಂ ಮತ್ತು ಒಳನುಸುಳುವಿಕೆಯಂತಹ ಆಂತರಿಕ ಸವಾಲುಗಳಿಗೂ ಸರ್ಕಾರದ ವಿಧಾನವನ್ನು ಮಾರ್ಗದರ್ಶಿಸಿದವು ಎಂದು ಪ್ರಧಾನಿ ಮೋದಿ ಹೇಳಿದರು.

2014 ರ ಮೊದಲು, ನಕ್ಸಲರು ದೇಶದ ದೊಡ್ಡ ಭಾಗಗಳಲ್ಲಿ ತಮ್ಮದೇ ಆದ ಆಡಳಿತವನ್ನು ನಡೆಸುತ್ತಿದ್ದರು. ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಸ್ಫೋಟಿಸಲಾಯಿತು ಮತ್ತು ಆಡಳಿತವು ಅಸಹಾಯಕವಾಗಿ ಕಾಣುತ್ತಿತ್ತು. ನಾವು ನಗರ ನಕ್ಸಲರ ವಿರುದ್ಧ ದೃಢವಾಗಿ ಕಾರ್ಯನಿರ್ವಹಿಸಿದೆವು, ಮತ್ತು ಇಂದು, ಫಲಿತಾಂಶಗಳು ಗೋಚರಿಸುತ್ತಿವೆ – ಈ ಹಿಂದೆ 125 ಪೀಡಿತ ಜಿಲ್ಲೆಗಳಲ್ಲಿ ಕೇವಲ 11 ಮಾತ್ರ ಉಳಿದಿವೆ ಮತ್ತು ನಕ್ಸಲ್‌ ಪ್ರಾಬಲ್ಯ ಮೂರಕ್ಕೆ ಸೀಮಿತವಾಗಿದೆ ಎಂದು ಅವರು ಹೇಳಿದರು.

ಒಳನುಸುಳುವಿಕೆ ಭಾರತದ ಏಕತೆಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದರು. ಮತ ಬ್ಯಾಂಕ್‌ಗಳಿಗಾಗಿ, ಹಿಂದಿನ ಸರ್ಕಾರಗಳು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡಿದವು. ನುಸುಳುಕೋರರಿಗಾಗಿ ಹೋರಾಡುತ್ತಿರುವವರಿಗೆ ರಾಷ್ಟ್ರ ದುರ್ಬಲಗೊಂಡರೂ ಚಿಂತೆಯಿಲ್ಲ. ಆದರೆ ದೇಶದ ಭದ್ರತೆ ಮತ್ತು ಗುರುತು ಅಪಾಯದಲ್ಲಿದ್ದರೆ, ಪ್ರತಿಯೊಬ್ಬ ನಾಗರಿಕನೂ ಅಪಾಯದಲ್ಲಿದ್ದಾನೆ ಎಂದು ಅವರು ಹೇಳಿದರು.

ತಮ್ಮ ಸರ್ಕಾರದ ನಿಲುವನ್ನು ಪುನರುಚ್ಚರಿಸುತ್ತಾ, ಭಾರತದಲ್ಲಿ ಅಕ್ರಮವಾಗಿ ವಾಸಿಸುವ ಪ್ರತಿಯೊಬ್ಬ ನುಸುಳುಕೋರನನ್ನು ತೆಗೆದುಹಾಕಲು ನಾವು ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.

ಅಖಿಲ ಭಾರತದಲ್ಲಿ, ವಿಚಾರಗಳ ವೈವಿಧ್ಯತೆಯನ್ನು ಗೌರವಿಸಬೇಕು. ಅಭಿಪ್ರಾಯ ವ್ಯತ್ಯಾಸಗಳಿರಬಹುದು, ಆದರೆ ಹೃದಯ ವ್ಯತ್ಯಾಸಗಳಲ್ಲ ಎಂದು ಅವರು ಹೇಳಿದರು.ತಮ್ಮ ಭಾಷಣಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಸರ್ದಾರ್‌ ಪಟೇಲ್‌ ಅವರ 182 ಮೀಟರ್‌ ಎತ್ತರದ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ಸಭೆಗೆ ಏಕತಾ ದಿವಸ್‌‍ ಪ್ರತಿಜ್ಞೆಯನ್ನು ಬೋಧಿಸಿದರು. ಸ್ವಾತಂತ್ರ್ಯದ ನಂತರ ಭಾರತವನ್ನು ಏಕೀಕರಿಸುವಲ್ಲಿ ಪಟೇಲ್‌ ಅವರ ಪಾತ್ರವನ್ನು ಸ್ಮರಿಸಲು 2014 ರಿಂದ ಪ್ರತಿ ಅಕ್ಟೋಬರ್‌ 31 ರಂದು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತಿದೆ.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ : ಅಪ್ಪ-ಮಗ ಸಾವು, ಬದುಕುಳಿದ ತಾಯಿ ಮತ್ತೊಬ್ಬ ಮಗ

ಬೆಂಗಳೂರು,ಅ.31-ಕಿರುಕುಳದಿಂದಾಗಿ ಒಂದೇ ಕುಟುಂಬದ ನಾಲ್ವರು ಆತಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಅಪ್ಪ-ಮಗ ಮೃತಪಟ್ಟು , ತಾಯಿ ಹಾಗೂ ಮತ್ತೊಬ್ಬ ಮಗ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದ ಕುಮಾರಪ್ಪ (60) ಅವರು ರಿಯಲ್‌ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದರು.

ಇತ್ತೀಚೆಗೆ ಉದ್ಯಮದಲ್ಲಿ ನಷ್ಟ ಉಂಟಾಗಿದ್ದರಿಂದ ಕೆಲವರಿಂದ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸುವಂತೆ ಒತ್ತಡ, ಕಿರುಕುಳ ಹೆಚ್ಚಾದಾಗ ಮುಂದೇನು ಮಾಡುವುದೆಂಬುವುದು ತಿಳಿಯದೆ ಪತ್ನಿ ರಮಾ (55) ಹಾಗೂ ಮಕ್ಕಳಾದ ಅರುಣ್‌ಕುಮಾರ್‌(30) ಮತ್ತೊಬ್ಬ ಮಗ ಅಕ್ಷಯ್‌ಕುಮಾರ್‌ (25) ಜೊತೆ ಚರ್ಚಿಸಿ ಎಲ್ಲರೂ ಆತಹತ್ಯೆಗೆ ನಿರ್ಧರಿಸಿದ್ದಾರೆ.

ನಿನ್ನೆ ಸಂಜೆ ಅರುಣ್‌ ನೇಣಿಗೆ ಶರಣಾದರೆ ಉಳಿದ ಮೂವರು ವಿಷ ಸೇವಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚಿಕ್ಕಜಾಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಅಪ್ಪ-ಮಗ ಮೃತಪಟ್ಟಿದ್ದು, ತಾಯಿ -ಮಗ ಒದ್ದಾಡುತ್ತಿರುವುದು ಕಂಡು ಬಂದಿದೆ.

ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪೊಲೀಸರು ಮನೆಯನ್ನು ಶೋಧಿಸಿದಾಗ ಡೆತ್‌ನೋಟ್‌ ಪತ್ತೆಯಾಗಿದ್ದು, ಅದರಲ್ಲಿ ಕೆಲವರು ನಮಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಮನೆಯವರೆಲ್ಲಾ ಆತಹತ್ಯೆ ಮಾಡಿಕೊಳ್ಳುತ್ತಿದ್ದೇವೆಂದು ಬರೆಯಲಾಗಿದೆ. ಆ ಪತ್ರವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ರೋಸಿಹೋಗಿ ಪಕ್ಷದಿಂದ ದೂರವಾಗುತ್ತಿರುವ ಕಾರ್ಯಕರ್ತರು

ಬೆಂಗಳೂರು,ಅ.31- ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಪ್ರತಿಪಕ್ಷ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಕೊಂಡೊಯ್ಯುವಲ್ಲಿ ವಿಫಲವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮನೆಯೊಂದು ಮೂರು ಬಾಗಿಲು ಎಂಬಂತಿರುವ ಬಿಜೆಪಿಯ ಬಣ ರಾಜಕೀಯದಿಂದ ಸ್ವತಃ ಕಾರ್ಯಕರ್ತರೇ ಬೇಸರಗೊಂಡಿದ್ದು, ಪಕ್ಷದ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಇದು ಸಹಜವಾಗಿ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಎಷ್ಟೇ ಅಸಮಾಧಾನ ಆರೋಪ, ಕುಟುಂಬ ಪ್ರೇಮ ಇದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಅಧ್ಯಕ್ಷರು ಇಲ್ಲವೇ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಇದ್ದಾಗ ಕಾರ್ಯಕರ್ತರನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು.

ಇದರಿಂದ ಬಿಎಸ್‌‍ವೈ ಬಗ್ಗೆ ಎಷ್ಟೇ ಅಸಮಾಧಾನ ಇದ್ದರೂ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈಗ ಕಾಲ ಬದಲಾದಂತೆ ನಿಷ್ಠಾವಂತರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಬದಲಿಗೆ ತಮ ಹಿಂಬಾಲಕರಿಗೆ ಮಾತ್ರ ಆಯಾಕಟ್ಟಿನ ಜಾಗದಲ್ಲಿ ಮಣೆ ಹಾಕಲಾಗುತ್ತದೆ ಎಂಬ ನೋವು ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ನಾಯಕರು ಎಷ್ಟೇ ಹೇಳಿಕೊಂಡರೂ ವಾಸ್ತವ ಬೇರೆ ಇದೆ ಎಂದು ಪಕ್ಷದವರೇ ಹೇಳುತ್ತಾರೆ. ದೇಶದಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೂ ಇಲ್ಲಿ ಮಾತ್ರ ಅದಕ್ಕೆ ವಿರುದ್ದವಾದ ಪರಿಸ್ಥಿತಿ ಇದೆ. ಯಡಿಯೂರಪ್ಪನವರಂಥ ಬಲಿಷ್ಠ ನಾಯಕ ಇಲ್ಲದಿರುವುದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಪಕ್ಷದ ಈ ಸ್ಥಿತಿಗೆ ಕಾರಣ ಎಂಬುದು ಬಹುತೇಕರ ಆಳಲು.

ಬಿಜೆಪಿ ಅಧ್ಯಕ್ಷ ಸ್ಥಾನ ಘೋಷಣೆಗೆ ಕ್ಷಣಗಣನೆ ಎಂಬ ಚರ್ಚೆಗಳು ನಡೆಯುತ್ತಿದ್ದರೂ, ಹೈಕಮಾಂಡ್‌ ನಾಯಕರು ಅಧಿಕೃತ ಘೋಷಣೆಗೆ ಮುಂದಾಗುತ್ತಿಲ್ಲ. ರಾಜ್ಯ ಮಟ್ಟದ ಬಣ ರಾಜಕೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೈಕಮಾಂಡ್‌ ನಾಯಕರ ಅಂಗಳಕ್ಕೆ ತಲುಪುತ್ತಿರುವ ಆರೋಪಗಳ ಸುರಿಮಳೆ ಇದಕ್ಕೆ ಕಾರಣವಾಗುತ್ತಿದೆ.

ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆಯ ಬಳಿಕ ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಅಧ್ಯಕ್ಷರ ಬಣ ಇತ್ತು. ಆದರೆ ಅಂದುಕೊಂಡಂತೆ ಆಗುತ್ತಿಲ್ಲ. ಯತಾಳ್‌ ಬಣದ ಅತೃಪ್ತರು ತಮ ತಗಾದೆ ಎತ್ತುತ್ತಲೇ ಇದ್ದಾರೆ. ಪ್ರತ್ಯೇಕ ಸಭೆಗಳ ಮೂಲಕ ಆಂತರಿಕ ಬಂಡಾಯದ ಸುಳಿವು ನೀಡುತ್ತಾ ಬಂದಿದ್ದಾರೆ.

ಬಿಜೆಪಿ ರಾಜ್ಯಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇದ್ದಾರೆ. ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಆದರೆ ಬಿಜೆಪಿ ಅಧ್ಯಕ್ಷರ ನೇಮಕ ಪ್ರಕ್ರಿಯೆಯಂತೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸಾಕಷ್ಟು ತಡವಾಗುತ್ತಿದೆ. ಅಧಿಕೃತವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಏಕೆ ಘೋಷಣೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಬಿಜೆಪಿಯಲ್ಲಿರುವ ಆಂತರಿಕ ಗೊಂದಲಕ್ಕೆ ತಡೆ ಬಿದ್ದಿಲ್ಲ. ಒಂದು ಕಡೆಯಲ್ಲಿ ಅತೃಪ್ತ ಬಣ ಹಾಗೂ ವಿಜಯೇಂದ್ರ ಬಣದ ನಡುವೆ ಸಮಸ್ಯೆ ಬಿಗಡಾಯಿಸುತ್ತಿದೆ. ಮತ್ತೊಂದು ಕಡೆ ವಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಎಲ್ಲಾ ಗೊಂದಲಗಳ ನೇರ ಪರಿಣಾಮ ಬಿಜೆಪಿ ಪಕ್ಷದ ಚಟುವಟಿಕೆಗಳ ಮೇಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ 2023 ಚುನಾವಣೆಯ ಹಿನ್ನಡೆ ಅನುಭವಿಸಿದ ನಂತರದಲ್ಲಿ ಎದ್ದೇಳಲಿಲ್ಲ. ವಿಜಯೇಂದ್ರರ ಕೈಗೆ ಅಧಿಕಾರ ಹಸ್ತಾಂತರ ಮಾಡಿದ್ದರೂ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವಲ್ಲೂ ಬಿಜೆಪಿ ಹಿನ್ನಡೆ ಅನುಭವಿಸುತ್ತಿದೆ.

ಸದ್ಯ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಕೇಳಿ ಬರುತ್ತಿರುವ ಬಹುದೊಡ್ಡ ಆರೋಪವಾಗಿದೆ. ರಾಜ್ಯ ಬಿಜೆಪಿ ಆಡಳಿತಾರೂಢ ಪಕ್ಷದ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂಬ ಆರೋಪವಿದೆ. ಅತೃಪ್ತ ಬಣ ಈ ಆರೋಪವನ್ನು ನಿರಂತರವಾಗಿ ಮಾಡುತ್ತಿದೆ. ಈ ಹಿಂದೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಈ ಆರೋಪ ಮಾಡುತ್ತಿದ್ದರು. ಇದೀಗ ಅತೃಪ್ತ ಬಣದ ಇತರರಿಂದಲೂ ಇದೇ ಆರೋಪ ಕೇಳಿಬರುತ್ತಿದೆ.

ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಕೆಲವರು ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಉಸ್ತುವಾರಿ ಡಾ.ರಾಧಮೋಹನ್‌ ಅವರು ಹೇಳಿಕೆ ನೀಡಿದ್ದರು. ಆದರೆ ಸದ್ಯಕ್ಕೆ ಯಾವುದೇ ಕ್ರಮಗಳು ಜರುಗಲಿಲ್ಲ. ಸಹಜವಾಗಿ ಇವೆಲ್ಲವೂ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸದ್ಯ ಬಿಜೆಪಿಯ ಭಿನ್ನಮತಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ. ರಾಜ್ಯ ಸರ್ಕಾರ 2 ವರ್ಷವನ್ನು ಈಗಾಗಲೇ ಪೂರೈಸಿದೆ. ಅದರೆ ವಿರೋಧಪಕ್ಷವಾಗಿ ಬಿಜೆಪಿ ವಿಫಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಯಾವ ರೀತಿಯಲ್ಲಿ ಹೋರಾಟ ನಡೆಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ನಡೆ ಏನು ಎಂಬುವುದು ಕಾದುನೋಡಬೇಕು.

ದುರ್ಬಲಗೊಂಡ ಹಿಂಗಾರು, ಸದ್ಯಕ್ಕಿಲ್ಲ ಮಳೆ

ಬೆಂಗಳೂರು, ಅ.31- ಮೊಂತಾ ಚಂಡಮಾರುತದ ಬಳಿಕ ರಾಜ್ಯದಲ್ಲಿ ಹಿಂಗಾರು ಮಳೆ ದುರ್ಬಲಗೊಂಡಿದ್ದು, ನವೆಂಬರ್ ಮೂರರವರೆಗೆ ರಾಜ್ಯದಲ್ಲಿ ಒಣಹವೆ ಕಂಡುಬರಲಿದೆ. ಹಗಲಿನ ವೇಳೆ ಬಿಸಿಲು ಇರಲಿದ್ದು, ರಾತ್ರಿ ವೇಳೆ ಚಳಿಯ ಪ್ರಮಾಣ ಹೆಚ್ಚಾಗಲಿದೆ.

ನಿನ್ನೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ಉಳಿದೆಡೆ ಕೆಲವೆಡೆ ಮಾತ್ರ ಮಳೆಯಾಗಿದೆ. ಮೈಸೂರು, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ, ಆದರೆ, ಕೆಲವೆಡೆ ಮಾತ್ರ ಹಗುರದಿಂದ ಸಾಧಾರಣ ಮಳೆ ಮುಂದುವರೆಯಬಹುದು. ಇಂದಿನಿಂದ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಲಿದ್ದು, ನವೆಂಬರ್ ಮೂರರವರೆಗೂ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ನವೆಂಬರ್ 3ರವರೆಗೂ ಒಣ ಹವೆ ಮುಂದುವರೆಯಲಿದೆ. ಆನಂತರ ನವೆಂಬರ್ 6ರವರೆಗೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಮಲೆನಾಡು, ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೆಂಬರ್ ಮೂರರಿಂದ 6ರವರೆಗೆ ಕೆಲವೆಡೆ ಮಳೆಯಾಗುವ ಮುನ್ಸೂಚನೆಗಳಿವೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ನವೆಂಬರ್ 4ರಿಂದ 6ರವರೆಗೆ ಕೆಲವೆಡೆ ಸಾಧಾರಣ ಮಳೆ ಪ್ರಮಾಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಬಾರಿ ಜಲಾನಯನ ಭಾಗದಲ್ಲಿ ಉತ್ತಮ ಮುಂಗಾರು ಮಳೆ ಬಿದ್ದ ಪರಿಣಾಮ ಅಕ್ಟೋಬರ್ ಅಂತ್ಯದ ವೇಳೆಗೂ ಕೆಆರ್‌ಎಸ್, ಕಬಿನಿ, ಹೇಮಾವತಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ವಾಣಿವಿಲಾಸ ಸಾಗರ ಜಲಾಶಯಗಳು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಿವೆ. ಉಳಿದ ಜಲಾಶಯಗಳಲ್ಲೂ ಉತ್ತಮ ನೀರಿನ ಸಂಗ್ರಹವಿದೆ. ಹಿಂಗಾರು ಮಳೆಯ ಅವಧಿಯಲ್ಲೂ ಇನ್ನೂ ರಾಜ್ಯದ ಪ್ರಮುಖ ಜಲಾಶಯಗಳಿಗೆ ಸಾಕಷ್ಟು ಪ್ರಮಾಣದ ಒಳಹರಿವು ಇರುವುದರಿಂದ ಜಲಾಶಯಗಳಿಂದ ನೀರಾವರಿ ಬೆಳೆಗಳಿಗೆ ನೀರು ಹರಿಸಿದರೂ ಭರ್ತಿಯಾಗಿಯೇ ಇವೆ.

ಶವ ಪರೀಕ್ಷೆಗೂ ಲಂಚ, ರಾಜ್ಯದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜು : ಶೋಭಾ ಕರಂದ್ಲಾಜೆ

ಬೆಂಗಳೂರು, ಅ.31- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಲಂಚ ಪಡೆದುಕೊಂಡ ಕೆಲಸ ಮಾಡಿಕೊಡುತ್ತಿದ್ದಾರೆ. ಸಿಎಂ ಮನೆಯನ್ನೇ ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಮಗಳ ಶವ ಪರೀಕ್ಷೆಗೂ ಲಂಚ ಪಡೆದ ಪ್ರಕರಣದಿಂದ ಕರ್ನಾಟಕದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ರಾಜ್ಯದಲ್ಲಿ ಚಾವತಾರ ತಾಂಡವವಾಡುತ್ತಿದೆ. ಅಧಿಕಾರಿಗಳು ಹಣ ಕೊಟ್ಟು ಪೋಸ್ಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ಲಂಚವಿಲ್ಲದೆ ಈ ಸರ್ಕಾರದಲ್ಲಿ ಏನೂ ನಡೆಯುವುದಿಲ್ಲ ಎಂದು ದೂರಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಲಂಚಿ ಸಿದ್ದರಾಮಯ್ಯನವರ ಮೂಗಿನ ನೇರಕ್ಕೆ ನಡೆಯುತ್ತಿದೆ. ಇಂದು ಸಿಎಂ ಮನೆಗೆ ನೀವು ಹಣವಿಲ್ಲದೆ ಹೋದರೆ ಯಾವ ಕೆಲಸವೂ ನಡೆಯುವುದಿಲ್ಲ. ಅವರ ಮಗ ಲಂಚ ಪಡೆದುಕೊಂಡು ಯಾವ ಕೆಲಸವನ್ನಾದರೂ ಮಾಡಿಕೊಡುತ್ತಾರೆ. ಇದು ಲಂಚಾವತಾರ ಸರ್ಕಾರ ಎಂದು ಆರೋಪ ಮಾಡಿದರು.

ಸಹಾರ ವಿಧಾನಸಭಾ ಚುನಾವಣೆಗೆ ರಾಜ್ಯದ ಜನರಿಂದ ಲೂಟಿ ಮಾಡುವ ಕೆಲಸವಾಗುತ್ತಿದೆ. ಇದರ ಬಗ್ಗೆ ನಾವು ಮಾತನಾಡಿದರೆ ಕೆಲವರು ನಮ್ಮ ಮೇಲೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಇದ್ದುದ್ದನ್ನು ಇದ್ದಂಗೆ ಹೇಳಿದರೆ ಇವರಿಗೇಕೆ ಕಷ್ಟ ಎಂದು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಗೃಹ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ ಅವರಿಗೆ ಏನೇ ಕೇಳಿದರೂ ಗೊತ್ತಿಲ್ಲ. ಗೊತ್ತಿಲ್ಲ ಅನ್ನೋ ಅವರ ಸಿದ್ದ ಉತ್ತರ ನೀಡುತ್ತಾರೆ. ಪೊಲೀಸರ ಟೋಪಿ ಬದಲಾಯಿಸುವ ಯೋಚನೆ ಮಾಡುತ್ತಾರೆ. ಕಾನೂನು ಕಾಪಾಡುವ ಯೋಚನೆ ಇಲ್ಲ ಎಂದು ಕಿಡಿಕಾರಿದರು.

ಸಿಎಂ ಆಕಾಶದಲ್ಲಿ ಓಡಾಡುತ್ತಿದ್ದಾಎರೆ, ನೆಲದಲ್ಲಿ ಏನಾಗುತ್ತಿದೆ ಎಂಬುದು ಅವರಿಗೂ ಗೊತ್ತಿಲ್ಲ. ಇದರ ಪರಿಣಾಮ ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಹೆಚ್ಚಾಗಿದೆ. ಅಧಿಕಾರಿಗಳು ವರ್ಗಾವಣೆಗೆ ಹಣ ಕೊಡುತ್ತಿದ್ದಾರೆ. ಹಣ ಎಲ್ಲಿ ಸಿಗುತ್ತದೆ ಟ್ರಾನ್ಸ್ಫರ್ ಮಾಡಲು ಎಂದು
ಪ್ರಶ್ನಿಸಿದರು.

ಸಿಎಂ ಅವರ ತವರು ಜಿಲ್ಲೆ ಮೈಸೂರಿನಲ್ಲೇ ಬಾಲಕಿ ಅತ್ಯಾಚಾರ, ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಆಗಿದೆ. ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ಉಪನ್ಯಾಸಕರು ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ ಮಾಡುತ್ತಾರೆ. ಮಲತಂದೆ ಮಗಳ ಮೇಲೆಯೇ ಅತ್ಯಾಚಾರ ಮಾಡುತ್ತಾನೆ, ಬಿಹಾರದ ಕುಟುಂಬ, ಒರಿಸ್ಸಾದ ಕುಟುಂಬಗಳ ಮಕ್ಕಳನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡುತ್ತಾರೆ. ದುರುಳರಿಗೆ ಇಷ್ಟು ಧೈರ್ಯ ಹೇಗೆ ಬಂತು ಅಲ್ಲಿನ ಸರ್ಕಾರ ಸತ್ತಿದೆ, ಅದಕ್ಕೆ ಅತ್ಯಾಚಾರಿಗಳಿಗೆ ಅಷ್ಟೊಂದು ಧೈರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿದೆ. ಗುತ್ತಿಗೆದಾರರು ಕಮೀಷನ್ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹೆಣ್ಣುಮಕ್ಕಳ ಪ್ರಾಣ, ಮಾನಕ್ಕೆ ಗ್ಯಾರಂಟಿ.ಯಾರು ಇಷ್ಟು ದುರ್ಬಲ ಗೃಹಮಂತ್ರಿ ಇಟ್ಟುಕೊಂಡು ಹೇಗೆ ರಾಜ್ಯ ನಡೆಸುತ್ತಿದ್ದಾರೆ ಎಂದು ಗುಡುಗಿದರು.

ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಆಯಿತು. ಎನ್ ಐಎ ವರದಿ ಬಂದಿದೆ. ಧರ್ಮ, ಜಾತಿ ಹೆಸರಲ್ಲಿ ಕೊಲೆಗಡುಕರ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಹಿಳೆಯರಿಗೆ ರಕ್ಷಣೆ ಕೊಡಿ. ನಿಮ್ಮ ಕುರ್ಚಿ ಕಲಹ ದೂರ ಇಡಿ. ಯಾರನ್ನು ಸಿಎಂ ಮಾಡುತ್ತೀರೋ ನಮಗೆ ಗೊತ್ತಿಲ್ಲ. ಯಾರಾದರೂ ಸಿಎಂ ಆಗಿ ಮೊದಲು ಮಹಿಳೆಯರಿಗೆ ರಕ್ಷಣೆ ಕೊಡಿ ಎಂದು ಕರಂದ್ಲಾಜೆ ಆಗ್ರಹಿಸಿದರು.

ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಕುಲಸಚಿವ ಪ್ರೊ. ಮೈಲಾರಪ್ಪ ಬಂಧನ

ಬೆಂಗಳೂರು, ಅ.31 – ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಬಿ.ಸಿ. ಮೈಲಾರಪ್ಪ ಅವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೈಲಾರಪ್ಪ ಅವರು ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಸಾವನ್ನಪ್ಪಿದ್ದರು.

ಮಗನ ಸಾವಿಗೆ ಆಕೆಯೇ ಕಾರಣವೆಂದು ಆಕೆಯ ಅತ್ತೆ, ಮಾವ ಮಹಾಲಕ್ಷ್ಮೀ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ವಿಷಯ ತಿಳಿದ ಮೈಲಾರಪ್ಪ ಇಸ್ಕಾನ್ ಹತ್ತಿರವಿರುವ ಹೋಟೆಲ್ ಬಳಿ ಸಂತ್ರಸ್ತೆಯನ್ನು ಮಾತನಾಡಬೇಕೆಂದು ಕರೆಸಿಕೊಂಡಿದ್ದರು. ಕೆಲವು ಪತ್ರಗಳಿಗೆ ಸಹಿ ಹಾಕುವಂತೆ ಮೈಲಾರಪ್ಪ ಅವರು ಹೇಳಿದಾಗ ಸಂತ್ರಸ್ತೆ ನಿರಾಕರಿಸಿದ್ದರು. ಅದರಿಂದ ಕೋಪಗೊಂಡು ಮೈಲಾರಪ್ಪ ಅವರು ನಡುರಸ್ತೆಯಲ್ಲಿಯೇ ನಿಂದಿಸಿ, ಆಕೆಯ ಜುಟ್ಟನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.

ಅಲ್ಲದೇ ಸಂತ್ರಸ್ತೆ ಮನೆ ಬಳಿ ಹೋಗಿ ಬೆದರಿಕೆ ಹಾಕಿ ಲೈಗಿಂಕ ಕಿರುಕುಳ ನೀಡಿದ್ದರಿಂದ ಆಕೆ ಬಸವೇಶ್ವರನಗರ ಠಾಣೆ ಪೊಲೀಸರಿಗೆ ಮೈಲಾರಪ್ಪ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೈಲಾರಪ್ಪ ಅವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್‌ಐಆರ್: ಮೈಲಾರಪ್ಪ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಈ ಸಂತ್ರಸ್ತೆ ಮಹಿಳೆ ದೂರು ನೀಡಿದ್ದು, ಎಫ್‌ಐಆ‌ದಾಖಲಾಗಿದೆ. ವಕೀಲನ ಜೊತೆ ಸಂತ್ರಸ್ತೆ ಮಹಿಳೆಯು ಅನೈತಿಕ ಸಂಬಂಧ ಹೊಂದಿದ್ದಾಳೆ. ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿ ಆಕೆಯ ಮಾವ -ಅತ್ತೆಯನ್ನು ಜ್ಞಾನಭಾರತಿ ಕ್ಯಾಂಪಸ್‌ಗೆ ಕರೆಸಿಕೊಂಡು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಮೈಲಾರಪ್ಪ ಧಮ್ಮಿ ಹಾಕಿದ್ದರಿಂದ ಆಕೆ ದೂರು ನೀಡಿದ್ದಾರೆ.

ಸಿಎಂ ತವರಿನಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್ ಕಂಪನಿಗಳು, ಸಾಲದ ಕಂತು ಕಟ್ಟದಿದ್ದಕ್ಕೆ ಮನೆ ಜಪ್ತಿ

ಮೈಸೂರು, ಅ. 31-ಸಿಎಂ ತವರಿನಲ್ಲಿ ಮೈಕ್ರೋ ಫೈನಾನ್ಸ್ ಮತ್ತೆ ಬಾಲ ಬಿಚ್ಚಿದೆ. ಸಾಲದ ಕಂತು ಕಟ್ಟಿಲ್ಲ ಎಂದು ಮನೆ ಜಪ್ತಿ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಘಟನೆ ನಡೆದಿದೆ.ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದಿಂದ ಆದೇಶ ತಂದು ಜಪ್ತಿ ಮಾಡಿದ್ದಾರೆ. ಇದೀಗ ಸಾಲ ಪಡೆದ ಕುಟುಂಬ ಬೀದಿಪಾಲಾಗಿದೆ.

ಮನೆ ನಿರ್ಮಾಣ ಸಂಬಂಧ ಇಸ್ವೀಟಾಸ್ ಸ್ಟಾಲ್ ಫೈನಾನ್ಸ್ ನಲ್ಲಿ ಚಿನ್ನಸ್ವಾಮಿ 2023ರಲ್ಲಿ 2,70,000 ರೂ. ಸಾಲ ಪಡೆದಿದ್ದರು.ನಂತರ ಚಿನ್ನಸ್ವಾಮಿ.ಈಗಾಗಲೆ 19 ಕಂತುಗಳ 18,9000 ಸಾಲ ಮರುಪಾವತಿಸಿದ್ದಾರೆ. ಚಿನ್ನಸ್ವಾಮಿ ಪತ್ನಿ ಸಹ ಇಸ್ವೀಟಾಸ್ ಫೈನಾನ್ಸ್‌ನಲ್ಲಿ ಗಂಪು ಸಾಲ ಪಡೆದಿದ್ದರು.

ಮನೆ ಸಾಲಮರುಪಾವತಿ ಕಂತಿನ ಹಣವನ್ನು ಗುಂಪು ಸಾಲಕ್ಕೆ ಜಮೆ ಮಾಡಿಕೊಂಡಿದೆ ಎಂದು ಚಿನ್ನಸ್ವಾಮಿ ಆರೋಪವಾಗಿದೆ.ತಮ್ಮ ಅನುಮತಿ ಪಡೆಯೆದೆ ಸುಮಾರು 60 ಸಾವಿರಕ್ಕೂ ಹೆಚ್ಚು ಹಣ ಗುಂಪು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ. ಇದೀಗ ಏಕಾಏಕಿ ಮನೆ ಸಾಲದ ಕಂತು ಕಟ್ಟಿಲ್ಲವೆಂದು ಮನೆ ಜಪ್ತಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಾಲ ಮರುಪಾವತಿಗಾಗಿ ಚಿನ್ನಸ್ವಾಮಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಲಾವಕಾಶ ಕೇಳಿದ್ದರು.ಯಾವುದಕ್ಕು ತಲೆಕೆಡೆಸಿಕೊಳ್ಳದ ಫೈನಾನ್ಸ್ ಸಾಲ ಮರುಪಾವತಿ ಮಾಡುವಂತೆ ತಾಕೀತು ಮಾಡಿತ್ತು.

ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಜಪ್ತಿ ಮಾಡಿ ನೋಟಿಸ್‌ ಅಂಟಿಸಿದ್ದಾರೆ. ಇದೀಗ ಮನೆ ಜಪ್ತಿ ಕಾರಣ ಚಿನ್ನಸ್ವಾಮಿ ಮತ್ತು ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮನೆ ಜಪ್ತಿ ತೆರವು ಗೊಳಿಸುವಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರದಲ್ಲೇ ಮತ್ತೆ ಮೈಕ್ರೋ ಫೈನಾನ್ಸ್ ಬಾಲ ಬಿಚ್ಚಿದೆ.

ಪಟೇಲ್ ಅವರ ಏಕೀಕೃತ ಭಾರತದ ಕನನು ಸನನಾಗಿಸಿದ್ದು ಪ್ರಧಾನಿ ಮೋದಿ : ಅಮಿತ್ ಶಾ

ನವದೆಹಲಿ, ಆ. 31 (ಪಿಟಿಐ) ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕೀಕೃತ ಭಾರತದ ಕನಸನ್ನು ನನನಾಗಿಸಿದವರು ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ದೇಶದ ಮೊದಲ ಗೃಹ ಸಚಿವ ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯಂದು ಇಲ್ಲಿನ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಕತಾ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಶಾ. ಭಾರತದ ಸ್ಥಾತಂತ್ರ್ಯದ ನಂತರ, ಬ್ರಿಟಿಷರು ದೇಶವನ್ನು 562 ರಾಜಪ್ರಭುತ್ವದ ರಾಜ್ಯಗಳಾಗಿ ವಿಂಗಡಿಸಲು ನಿರ್ಧರಿಸಿದರು ಎಂದು ಹೇಳಿದರು.

ಅ ಸಮಯದಲ್ಲಿ, ಈ 502 ರಾಜಪ್ರಭುತ್ವದ ರಾಜ್ಯಗಳನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸುವುದು ಅಸಾಧ್ಯವೆಂದು ಇಡೀ ಜಗತ್ತು ಭಾದಿಸಿತ್ತು. ಅದಾಗ್ಯೂ ಅಲ್ಪಾವಧಿಯಲ್ಲಿಯೇ ಸರ್ದಾರ್ ಪಟೇಲ್ ಎಲ್ಲಾ 502 ರಾಜಪ್ರಭುತ್ವದ ರಾಜ್ಯಗಳನ್ನು ಮತ್ತು ಇಂದು ನಾವು ನೋಡುತ್ತಿರುವ ಆಧುನಿಕ ಭಾರತದ ನಕ್ಷೆಯನ್ನು ಸಂಯೋಜಿಸುವ ಮಹತ್ವದ ಕಾರ್ಯವನ್ನು ಸಾಧಿಸಿದರು. ಎಂದು ಅವರು ಹೇಳಿದರು.

ಕೆಲವು ಪ್ರಾಂತ್ಯಗಳು ಏಕೀಕರಣಗೊಳ್ಳಲು ಹಿಂಜರಿಯುತ್ತಿದ್ದವು ಅದರ ಸರ್ದಾರ್ ಪಟೇಲ್ ಪ್ರತಿಯೊಂದು ಸಮಸ್ಯೆಯನ್ನು ದೃಢನಿಶ್ಚಯದಿಂದ ಪರಿಹರಿಸಿದರು ಎಂದು ಗೃಹ ಸಚಿವರು ಹೇಳಿದರು.370 ವಿಧಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಸಂಪೂರ್ಣವಾಗಿ ಭಾರತಕ್ಕೆ ಸೇರಲಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ಅವರ ಕೆಲಸವನ್ನುಈ ವಿಧಿಯನ್ನು ರದ್ದುಗೊಳಿಸುವ ಮೂಲಕ ಸಾಧಿಸಿದ್ದಾರೆ ಮತ್ತುಈಗ ನಮ್ಮೊಂದಿಗೆ ಅಖಂಡ ಭಾರತ ಇದೆ ಎಂದು ಶಾ ಹೇಳಿದರು.

ಕಾಂಗ್ರೆಸ್ ಸರ್ಕಾರಗಳು ಏಕೀಕೃತ ಭಾರತದ ಶಿಲ್ಪಿ ಸರ್ದಾರ್ ಪಟೇಲ್ ಅವರಿಗೆ ನಾಕಷ್ಟು ಗೌರವ ನೀಡಲಿಲ್ಲ ಮತ್ತು ಸರ್ದಾರ್ ಪಟೇಲ್ ಅವರಂತಹ ಮಹಾನ್ ವ್ಯಕ್ತಿಗೆ ಸಹ 41 ವರ್ಷಗಳ ವಿಳಂಬದ ಸಂತರ ಭಾರತ ರತ್ನವನ್ನು ನೀಡಲಾಯಿತು ಎಂದು ಅವರು ಹೇಳಿದರು.ದೇಶದಲ್ಲಿ ಎಲ್ಲಿಯೂ ಸ್ಮಾರಕ ಅಥವಾ ಸ್ಮಾರಕವನ್ನು ನಿರ್ಮಿಸಲಾಗಿಲ್ಲ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ಮಾತ್ರ ಅವರು ಏರತಾ ಪ್ರತಿಮೆಯ ಪರಿಕಲ್ಪನೆಯನ್ನು ರೂಪಿಸಿದರು ಮತ್ತು ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ಭವ್ಯ ಸ್ಮಾರಕವನ್ನು ನಿರ್ಮಿಸಿದರು. ಅಕ್ಟೋಬರ್ 31, 2013 ರಂದು ಏಕತಾ ಪ್ರತಿಮೆಯ ಅಡಿಪಾಯವನ್ನು ಹಾಕಲಾಯಿತು ಎಂದು ಅವರು ಹೇಳಿದರು.

182 ಮೀಟರ್ ಎತ್ತರದ ಪ್ರತಿಮೆಯನ್ನು ದೇಶಾದ್ಯಂತ ಸಂಗ್ರಹಿಸಿದ ರೈತರ ಉಪಕರಣಗಳಿಂದ ಕಬ್ಬಿಣವನ್ನು ಬಳಸಿ ಕೇವಲ 57 ತಿಂಗಳಲ್ಲಿ ಪೂರ್ಣಗೊಳಿಸಲಾಯಿತು ಎಂದು ಅವರು ಹೇಳಿದರು.ಈ ಉಪಕರಣಗಳನ್ನು ಒಟ್ಟುಗೂಡಿಸಿ ಕರಗಿಸಿ ಪ್ರತಿಮೆಯ ನಿರ್ಮಾಣದಲ್ಲಿ ಬಳಸಲಾದ ಸುಮಾರು 25,000 ಟನ್ ಕಬ್ಬಿಣವನ್ನು ಉತ್ಪಾದಿಸಲಾಗಿದೆ ಎಂದು ಅವರು ಹೇಳಿದರು.90,000 ಘನ ಮೀಟರ್ ಕಾಂಕ್ರೀಟ್ ಮತ್ತು 1,700 ಟನ್ಗಳಿಗೂ ಹೆಚ್ಚು ಕಂಚನ್ನು ಬಳಸಿ. ಈ ಅವಿಸ್ಮರಣೀಯ ಸ್ಮಾರಕವನ್ನು ರಚಿಸಲಾಗಿದೆ. ಇದು ಈಗ ಸರ್ದಾರ್ ಪಟೇಲ್‌ಗೆ ಗೌರವ ನಲ್ಲಿಸುವ ಒಂದು ಸಾಂಪ್ರದಾಯಿಕ ತಾಣವಾಗಿದೆ ಎಂದು ಅವರು ಹೇಳಿದರು.

ಸರ್ದಾರ್ ಪಟೇಲ್ 150ನೇ ಜನ್ಮ ದಿನಾಚರಣೆ : ಏಕತಾ ಪ್ರತಿಜ್ಞೆ ಬೋಧಿಸಿದ ಪ್ರಧಾನಿ ಮೋದಿ

ವಿಕ್ತಾ ನಗರ, ಆ. 31 (ಪಿಟಿಐ) ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಂದು ಗುಬರಾಜ್ ನ ವಿಕತಾ ಪ್ರತಿಮೆಯಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆತರಣೆಯಲ್ಲಿ ಭಾಗವಹಿಸಿದವರಿಗೆ ಪ್ರಧಾನಿ ನರೇಂದ್ರ ಮೋದಿ ಏಕತಾ ಪ್ರತಿಜ್ಞೆ ಬೋಧಿಸಿದರು.

ಪ್ರಧಾನಿ ಮೋದಿ ಅವರು ಬೆಳಿಗ್ಗೆ ಗುಜರಾತ್ ಸರ್ಮದಾ ಜಿಲ್ಲೆಯ ಏಕಕಾ ನಗರ ಬಳಿ ಅರುವ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ಸ್ಥಳಕ್ಕೆ ಆಗಮಿಸಿ ಭಾರತದ ಉಕ್ಕಿನ ಮನುಷ್ಯನಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ನಲ್ಲಿಸಿದರು.

ಸಂತರ ಅವರು ನಡೆಯಲ್ಲಿ ಏಕತಾ ದಿವನ್ ಪ್ರತಿಜ್ಞೆ ಬೋಧಿಸಿದರು ಮತ್ತು ರಾಷ್ಟ್ರೀಯ ಏಕತಾ ದಿವಸ್ ಮೆರವಣಿಗೆಯನ್ನು ವೀಕ್ಷಿಸಿದರು.ಈ ಪ್ರತಿಜ್ಞೆಯ ಮೂಲಕ, ಭಾಗವಹಿಸುವವರು ರಾಷ್ಟ್ರದ ಏಕತೆ, ನಮಗ್ರತೆ ಮತ್ತು ಭದ್ರತೆಯನ್ನು ಕಾವಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಸಂದೇಶವನ್ನು ನಹ ದೇಶವಾಸಿಗಳಲ್ಲಿ ಹರಡುವ ಮಹತ್ವವನ್ನು ಪ್ರತಿಜ್ಞೆಯು ಒತ್ತಿಹೇಳಿತು.ಈ ವರ್ಷದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ನಾಂಸ್ಕೃತಿಕ ಉತ್ಸ ವ ಮತ್ತು ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಂದ ರಾಷ್ಟ್ರೀಯ ಏಕತಾ ದಿವನ್ ಮೆರವಣಿಗೆ ಸೇರಿದೆ.ಈ ವರ್ಷದ ಆಚರಣೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಣರಾಜ್ಯೋತ್ಸವ ಶೈಲಿಯ ನಶನ್ನ ಪಡೆಗಳ ಮೆರವಣಿಗೆ ಅಲಂಕಾರಿಕ ಬ್ಯಾಡ್‌ಗಳೊಂದಿಗೆ ಅತ್ತು

ಪರೇಜ್ ನಲ್ಲಿ (ರಾಷ್ಟ್ರೀಯ ಭದ್ರತಾ ವರ), (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ), ಗುಜರಾತ್, ಅಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮಣಿಪುರ ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರಾಖಂಡ ಮತ್ತು ಪುದುಚೇರಿಗಳಿಂದ 10 ಫೋಟ್ ಗಳು ವೈವಿಧ್ಯತೆಯಲ್ಲಿ ಏಕತೆ ಎಂಬ ವಿಷಯವನ್ನು ಚಿತ್ರಿಸಿದ್ದವು.

ಪರೇಡ್ ಮಾರ್ಗದಲ್ಲಿ 900 ಕಲಾವಿದರನ್ನು ಒಳಗೊಂಡ ನಾಂಸ್ಕೃತಿಕ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುವ ಭಾರತದ ಶಾಸ್ತ್ರೀಯ ನೃತ್ಯಗಳನ್ನು ಪ್ರದರ್ಶಿಸಿತು ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಅಂಡೋ ಟಿಬೆಟಿಯನ್ ಗಡಿ ಪೊಲೀಸ್ ಮತ್ತು ನೆಶನ್ನ ಸೀಮಾ ಬಲ್ ತುಕಡಿಗಳು ಸಹ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಭದ್ರತಾ ಪಡೆಗಳಲ್ಲಿ ಮಹಿಳಾ ನಟಲೀಕರಣದ ಪ್ರದರ್ಶನವಾಗಿ, ಪ್ರಧಾನಿ ಮೋದಿ ಪೊಲೀಸ್ ಮತ್ತು ಅರೆನೈನಿಕ ಪಡೆಗಳ ತುಕಡಿಗಳಿಂದ ವಿದ್ಯುಕ್ತ ವಂದನೆ ಸ್ವೀಕರಿಸಿದರು. ಅವೆಲ್ಲವೂ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಈ ವರ್ಷದ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ರಾಂಪುರ ಚೌಂಟ್ಸ್, ಗುಜರಾತ್ ಪೊಲೀಸರ ಕುದುರೆ ತುಕಡಿ, ಅನ್ಸಾ ೦ ಪೊಲೀಸರ ಮೋಟಾರ್ ಸೈಕಲ್ ಡೇರ್‌ಡೆವಿಲ್ ಪ್ರದರ್ಶನ, ಮತ್ತು ಬಿಎಸ್ ಎಫ್ ಸ ಒಂಜೆ ತುಕಡಿ ಮತ್ತು ಒಂಜೆ ಮೇಲೆ ಸವಾರಿ ಮಾಡಿದ ಬ್ಯಾಂಡ್ ಸಂತಹ ಭಾರತೀಯ ಕಳೆಯ ಸಾಯಗಳನ್ನು ಒಳಗೊಂಡ ಡಿಎನ್ ಎಫ್ ಮೆರವಣಿಗೆ ತುಕಡಿ ಸೇರಿತ್ತು ಮೆರವಣಿಗೆಯಲ್ಲಿ ಸಿಆರ್ ಪಿಎಫ್ ಐದು ಶೌರ್ಯ ತಕ್ರ ಪ್ರಶಸ್ತಿ ಪುರಸ್ಕೃತರು ಮತ್ತು ಜಾರ್ಖಂಡ್ ನಲ್ಲಿ ಸಕ್ಸ ಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅನಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಬಿಎನ್ ಎಲ್ 16 ಶೌರ್ಯ ಪದಕ ವಿಜೇತರನ್ನು ಗೌರವಿಸಲಾಯಿತು. ಭಾರತೀಯ ವಾಯುಪಡೆಯು ಅಪರೇಷನ್ ಸೂರ್ಯ ಕಿರಣ ಅಡಿಯಲ್ಲಿ ಫೈ- ಪಾಸ್ಟ್ ಅನ್ನು ಪ್ರದರ್ಶಿಸಿತು.