ನಾಗಮಂಗಲ, ಅ.31– ನೂತನ ರಾಘವೇಂದ್ರ ಭವನ ಹೋಟೆಲ್‌ನಲ್ಲಿ ಸಿಕ್ಕಿದ 7 ಲಕ್ಷ ಮೌಲ್ಯದ ಚಿನ್ನದ ಸರವನ್ನು ಸಪ್ಲೇಯರ್ ಗಮನಿಸಿ ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಹೋಟೇಲ್‌ಗೆ ಬಂದಿದ್ದ ತಮ್ಮಣ್ಣ ಎಂಬುವವರು 60ಗ್ರಾಂ ಚಿನ್ನದ ಸರವನ್ನು ಕಳೆದು ಕೊಂಡಿದ್ದಾರೆ. ಅದೇ ಹೋಟೆಲ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜ್ ಅವರಿಗೆ ಸರ ಸಿಕ್ಕಿದೆ.
ಸಪ್ಲೇಯರ್ ಆ ಸರವನ್ನು ತೆಗೆದುಕೊಂಡು ಹೋಟೇಲ್ ಮಾಲೀಕರಿಗೆ ಕೊಟ್ಟಿದ್ದಾರೆ. ಮಾಲೀಕರು ಸರ ಕಳೆದುಕೊಂಡಿದ್ದವರನ್ನು ಪತ್ತೆ ಹಚ್ಚಿ ಸುಮಾರು 7 ಲಕ್ಷ ಮೌಲ್ಯದ ಸರವನ್ನು ಸಂಬಂಧಪಟ್ಟವರಿಗೆ ತಲುಪಿಸಿದ್ದಾರೆ. ಹೋಟೇಲ್ ಸಪ್ಲೇಯರ್ ಹಾಗೂ ಮಾಲೀಕರಿಗೆ ಸಾರ್ವಜನಿಕರು, ಹೋಟೆಲ್ ಗ್ರಾಹಕರು ಅಭಿನಂದಿಸಿದ್ದಾರೆ.
ಟ್ಯಾಂಪಾ, ಅ.31– ಮೆಕ್ಸಿಕೋದಿಂದ ಬಂದ ಜೆಟ್‌ಬ್ಲೂ ವಿಮಾನ ಇಲ್ಲಿ ತುರ್ತು ಭೂಸ್ಪರ್ಶ ಮಾಡಿ ಹಠಾತ್ ಅಸ್ವಸ್ಥಗೊಂಡ ಹಲವು ಪ್ರಯಾಣಿಕರನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ.
ಕ್ಯಾನ್‌ಕನ್‌ನಿಂದ ಬಂದ ವಿಮಾನವು ನ್ಯೂಜೆರ್ಸಿಯ ನ್ಯೂವಾರ್ಕ್‌ಗೆ ಪ್ರಯಾಣಿಸುತ್ತಿದ್ದಾಗ ತಾಂತ್ರಿಕ ದೋಷದಿಂದ ಎತ್ತರದಿಂದ ದಿಢೀರ್ ಕುಸಿತ ಕಂಡಿದೆ ಎಂದು ಫೆಡರಲ್ ಏವಿಯೇಷನ್ ಅಡಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.
ಎಫ್‌ಎಎ ಪ್ರಕಾರ, ಏರ್‌ಬಸ್ ಎ 320 ಅನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಟ್ಯಾಂಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಎಷ್ಟು ಜನರಿದ್ದರು ಮತ್ತು ಎಷ್ಟು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ.
ಏರ್ ಟ್ರಾಫಿಕ್ ಆಡಿಯೋ ಗಾಯಗಳ ಬಗ್ಗೆ ವರದಿ ಮಾಡುವ ರೇಡಿಯೋ ಕರೆಯನ್ನು ಸೆರೆಹಿಡಿದಿದೆ: ಕನಿಷ್ಠ ಮೂರು ಜನರು ಗಾಯಗೊಂಡಿದ್ದಾರೆ. ಕೆಲವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಮೊದಲು ವೈದ್ಯಕೀಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರನ್ನು ಪರಿಶೀಲಿಸಿದ್ದಾರೆ ಎಂದು ಜೆಟ್‌ಬ್ಲೂ ವರದಿ ಮಾಡಿದೆ.
ನಮ ತಂಡವು ವಿಮಾನವನ್ನು ತಪಾಸಣೆ ನಡೆಸುತ್ತಿದೆ, ಕಾರಣವನ್ನು ನಿರ್ಧರಿಸಲು ನಾವು ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ಜೆಟ್‌ಬ್ಲೂ ಹೇಳಿಕೆ ತಿಳಿಸಿದೆ. ನಮ ಗ್ರಾಹಕರು ಮತ್ತು ಸಿಬ್ಬಂದಿ ಸದಸ್ಯರ ಸುರಕ್ಷತೆಯು ಯಾವಾಗಲೂ ನಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದೆ.
ನವದೆಹಲಿ, ಅ. 31 (ಪಿಟಿಐ) ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ಬಿಜೆಪಿ-ಆರ್‌ಎಸ್‌ಎಸ್ ಅನ್ನು ಟೀಕಿಸಿದ ಕಾಂಗ್ರೆಸ್, ಪಟೇಲರ ಮಾತಿನಲ್ಲಿ ಹೇಳುವುದಾದರೆ, ಮಹಾತ್ಮ ಗಾಂಧಿಯವರ ಹತ್ಯೆಯ ಭೀಕರ ದುರಂತವನ್ನು ಸಾಧ್ಯವಾಗಿಸಿದ ವಾತಾವರಣವನ್ನು ಸೃಷ್ಟಿಸಿದ ಸಿದ್ಧಾಂತದಿಂದ ನಿಸ್ವಾರ್ಥ ಐಕಾನ್‌ಗಳು ಭಯಭೀತರಾಗುತ್ತಿದ್ದರು ಎಂದು ಹೇಳಿದೆ.
ಕಾಂಗ್ರೆಸ್ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು 2014 ರಿಂದ ವಿಶೇಷವಾಗಿ, ಇತಿಹಾಸವು ಜಿ 2 ಮತ್ತು ಅವರ ಪರಿಸರ ವ್ಯವಸ್ಥೆಯಿಂದ ಲಜ್ಜೆಗೆಟ್ಟ ತಪ್ಪು ನಿರೂಪಣೆ ಮತ್ತು ವಿರೂಪಕ್ಕೆ ಒಳಪಟ್ಟಿದೆ ಎಂದು ಹೇಳಿದ್ದಾರೆ.
ಇಂದು ಕೃತಜ್ಞತಾಪೂರ್ವಕ ರಾಷ್ಟ್ರವಾದ ಸರ್ದಾರ್ ಪಟೇಲ್ 150ನೇ ವರ್ಷಾಚರಣೆ ಸಮಯದಲ್ಲಿ, ಫೆಬ್ರವರಿ 13, 1949 ರಂದು, ಭಾರತದ ಉಕ್ಕಿನ ಮನುಷ್ಯ ತಮ್ಮ ಕಾನೂನು ವೃತ್ತಿಯನ್ನು ಪ್ರಾರಂಭಿಸಿದ ಗೋಧ್ರಾದಲ್ಲಿ ಜವಾಹರಲಾಲ್ ನೆಹರು ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು ಎಂದಿದ್ದಾರೆ. ಆ ಸಂದರ್ಭದಲ್ಲಿ ನೆಹರು ಮಾಡಿದ ಭಾಷಣವನ್ನು ಮೂರು ದಶಕಗಳಿಗೂ ಹೆಚ್ಚಿನ ಕಾಲದ ಅವರ ಪ್ರಬಲ ಮತ್ತು ಆಳವಾದ ಪಾಲುದಾರಿಕೆಯ ಒಳನೋಟವನ್ನು ಪಡೆಯಲು ಓದಬೇಕು ಮತ್ತು ಪುನಃ ಓದಬೇಕು ಎಂದು ರಮೇಶ್ ಎಕ್‌್ಸನಲ್ಲಿ ಹೇಳಿದರು.
ಸರ್ದಾರ್ ಪಟೇಲ್ ಅವರ 75 ನೇ ಜನ್ಮ ವಾರ್ಷಿಕೋತ್ಸವದ ಮುನ್ನಾದಿನದಂದು ನೀಡಿದ ಸಂದೇಶದಲ್ಲಿ, ನೆಹರು ಸರ್ದಾರ್ ಪಟೇಲ್ ಅವರಂತಹ ದೀರ್ಘ ಮತ್ತು ಗಮನಾರ್ಹ ಸೇವೆಯ ದಾಖಲೆಯನ್ನು ಹೊಂದಲು ಸಾಧ್ಯವಿಲ್ಲ. ಹಾಗಿದ್ದರೂ, ಅವರು ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾರೆ, ರಾಷ್ಟ್ರಕ್ಕೆ ಪ್ರಮುಖ ಮತ್ತು ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ… ರಾಷ್ಟ್ರೀಯ ಚಟುವಟಿಕೆಗಳಲ್ಲಿ ಅವರೊಂದಿಗಿನ ಮೂವತ್ತು ವರ್ಷಗಳ ಒಡನಾಟ ಮತ್ತು ನಿಕಟ ಸಂಪರ್ಕವನ್ನು ನಾನು ಹಿಂತಿರುಗಿ ನೋಡುತ್ತೇನೆ.
ಇದು ಏರಿಳಿತಗಳು ಮತ್ತು ದೊಡ್ಡ ಘಟನೆಗಳಿಂದ ತುಂಬಿದ ಅವಧಿಯಾಗಿದೆ ಮತ್ತು ನಾವೆಲ್ಲರೂ ಅತ್ಯಂತ ಪರೀಕ್ಷೆಗೆ ಒಳಗಾಗಿದ್ದೇವೆ. ಸರ್ದಾರ್ ಪಟೇಲ್ ಈ ಅಗ್ನಿಪರೀಕ್ಷೆಗಳಿಂದ ಭಾರತೀಯ ರಂಗದಲ್ಲಿ ಪ್ರಬಲ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ, ಅವರ ಮಾರ್ಗದರ್ಶನಕ್ಕಾಗಿ ಅಪಾರ ಸಂಖ್ಯೆಯ ಜನರು ಎದುರು ನೋಡುತ್ತಿದ್ದಾರೆ. ಅವರನ್ನು ದೀರ್ಘಕಾಲ ಉಳಿಸಲಿ. ನಮಗೆ ಮತ್ತು ದೇಶಕ್ಕೆ ಎಂದು ಅವರು ಹೇಳಿದರು.
ಸೆಪ್ಟೆಂಬರ್ 19, 1963 ರಂದು, ಆಗಿನ ಭಾರತದ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರು ನವದೆಹಲಿಯ ಪ್ರಮುಖ ವೃತ್ತದಲ್ಲಿ, ಸಂಸತ್ ಭವನ ಮತ್ತು ಚುನಾವಣಾ ಆಯೋಗದ ಕಚೇರಿಗೆ ಹತ್ತಿರದಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು ಎಂದು ರಮೇಶ್ ಗಮನಸೆಳೆದರು.
ಆಗ ನೆಹರು ಕೂಡ ಹಾಜರಿದ್ದರು ಮತ್ತು ಪ್ರತಿಮೆಗೆ ಸರಳವಾದ ಆದರೆ ಶಕ್ತಿಯುತವಾದ ಶಾಸನವನ್ನು ಭಾರತದ ಏಕತೆಯ ವಾಸ್ತುಶಿಲ್ಪಿ ಎಂದು ಆಯ್ಕೆ ಮಾಡಿದ್ದರು ಎಂದು ಅವರು ಹೇಳಿದರು.ಅಕ್ಟೋಬರ್ 31, 1975 ರಂದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ಶತಮಾನೋತ್ಸವ ವರ್ಷದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಮತ್ತು ಅವರ ಅನೇಕ ವಿಶಿಷ್ಟ ಸಾಧನೆಗಳು ಮತ್ತು ಕೊಡುಗೆಗಳನ್ನು ಹೊರತಂದ ಪೂರ್ಣ ಗೌರವವನ್ನು ಸಲ್ಲಿಸಿದ್ದರು ಎಂದು ರಮೇಶ್ ನೆನಪಿಸಿಕೊಂಡರು.
1875 ರಲ್ಲಿ ಗುಜರಾತ್‌ನ ನಾಡಿಯಾಡ್‌ನಲ್ಲಿ ಜನಿಸಿದ ಪಟೇಲ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು.ಅಸಾಧಾರಣ ನಾಯಕತ್ವ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಅಚಲ ಬದ್ಧತೆಗೆ ಹೆಸರುವಾಸಿಯಾದ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಪ್ರೀತಿಯಿಂದ ಸ್ಮರಿಸಲಾಗುತ್ತದೆ. ಅವರು 1950 ರಲ್ಲಿ ನಿಧನರಾದರು.
ರಾಶಿಭವಿಷ್ಯ : ಮೇಷ: ಮಿತ್ರರಿಂದ ಸಹಾಯ ಸಿಗಲಿದೆ. ವೃಷಭ: ಆಸ್ತಿ, ಅಪಾರ್ಟ್‌ಮೆಂಟ್ ಖರೀದಿಯಲ್ಲಿ ಹೆಚ್ಚು ಹಣ ಹೂಡಿಕೆ ಮಾಡುವಿರಿ. ಮಿಥುನ: ಆತ್ಮೀಯರ ಸಹಾಯ ಸಿಗಲಿದೆ.
ಕಟಕ: ವ್ಯಾಪಾರದಲ್ಲಿ ನಷ್ಟ. ಸಿಂಹ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆ ಯಿಂದ ನಡೆಯಲಿವೆ. ಕನ್ಯಾ: ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ.
ತುಲಾ: ಮನೆ ಬಗ್ಗೆ ಉದಾ ಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ. ವೃಶ್ಚಿಕ: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ. ಧನುಸ್ಸು: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡದಿರುವುದು ಒಳಿತು.
ಮಕರ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಂಭ: ಹಣದ ಒಳಹರಿವು ಉತ್ತಮವಾಗಿರುತ್ತದೆ. ಮೀನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.
ಬೆಂಗಳೂರು- ಹಿರಿಯ ಸ್ವತಂತ್ರ ಹೋರಾಟಗಾರ ಕೋಣಂದೂರು ಲಿಂಗಪ್ಪ, ಚಿತ್ರನಟ ,ಪ್ರಕಾಶ್ ರಾಜ್,ಹಿರಿಯ ಪತ್ರಕರ್ತ ಮೈಸೂರಿನ ಅಂಶಿ ಪ್ರಸನ್ನ ಕುಮಾರ್ , ಸಾಹಿತಿಗಳಾದ ರಾಜೇಂದ್ರ ಚಿನ್ನಿ, ರಹಮತ ತರೀಕೆರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಸಕ್ತ 2025 ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 70 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು ಐದು ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ.ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 50 ಸದಸ್ಯರಿರುವ ಆಯ್ಕೆ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿತ್ತು.
ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪ್ರಶಸ್ತಿಯಲ್ಲಿ ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಕೆಲವರು ಸ್ವಯಂ ಮನವಿ ನೀಡಿದ್ದರು. ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದ್ದು, ನಾಲ್ಕೈದು ಬಾರಿ ಸಭೆ ನಡೆಸಿದ ಸದಸ್ಯರು ಅರ್ಹರನ್ನು ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತೇನೆ ಎಂದರು.
ಪ್ರಶಸ್ತಿ ನೀಡಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 13 ಮಂದಿ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ.ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು
ಪ್ರಶಸ್ತಿ ವಿಜೇತರ ಪಟ್ಟಿ
ಸಾಹಿತ್ಯ ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ ಶ್ರೀ ತುಂಬಾಡಿ ರಾಮಯ್ಯ ತುಮಕೂರು ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ ಡಾ.ಎಚ್.ಎಲ್ ಪುಷ್ಪ ತುಮಕೂರು ಶ್ರೀ ರಹಮತ್ ತರೀಕೆರೆ ಚಿಕ್ಕಮಗಳೂರು ಶ್ರೀ ಹ.ಮ. ಪೂಜಾರ ವಿಜಯಪುರ
ಜಾನಪದ ಶ್ರೀ ಬಸಪ್ಪ ಭರಮಪ್ಪ ಚೌಡ್ಕಿ ಕೊಪ್ಪಳ ಶ್ರೀ ಬಿ. ಟಾಕಪ್ಪ ಕಣ್ಣೂರು ಶಿವಮೊಗ್ಗ ಶ್ರೀ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಬೆಳಗಾವಿ ಶ್ರೀ ಹನುಮಂತಪ್ಪ, ಮಾರಪ್ಪ, ಚೀಳಂಗಿ ಚಿತ್ರದುರ್ಗ ಶ್ರೀ ಎಂ. ತೋಪಣ್ಣ ಕೋಲಾರ ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ ವಿಜಯಪುರ ಶ್ರೀಮತಿ ಸಿಂಧು ಗುಜರನ್ ದಕ್ಷಿಣ ಕನ್ನಡ ಶ್ರೀ ಎಲ್. ಮಹದೇವಪ್ಪ ಉಡಿಗಾಲ ಮೈಸೂರು
ಸಂಗೀತ ಶ್ರೀ ದೇವೆಂದ್ರಕುಮಾರ ಪತ್ತಾರ್ ಕೊಪ್ಪಳ ಶ್ರೀ ಮಡಿವಾಳಯ್ಯ ಸಾಲಿ ಬೀದರ್ ನೃತ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಮೈಸೂರು
ಚಲನಚಿತ್ರ /ಕಿರುತೆರೆ ಶ್ರೀ ಪ್ರಕಾಶ್ ರಾಜ್ ದಕ್ಷಿಣ ಕನ್ನಡ ಶ್ರೀಮತಿ ವಿಜಯಲಕ್ಷ್ಮೀ ಸಿಂಗ್ ಕೊಡಗು
ಆಡಳಿತ ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)
ಆಡಳಿತ ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ) ವೈದ್ಯಕೀಯ ಡಾ. ಆಲಮ್ಮ ಮಾರಣ್ಣ ತುಮಕೂರು ಡಾ. ಜಯರಂಗನಾಥ್ ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ ಶ್ರೀಮತಿ ಸೂಲಗಿತ್ತಿ ಈರಮ್ಮ ವಿಜಯನಗರ ಶ್ರೀಮತಿ ಫಕ್ಕೀರಿ ಬೆಂಗಳೂರು ಗ್ರಾಮಾಂತರ ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ ದಕ್ಷಿಣ ಕನ್ನಡ ಡಾ. ಎನ್. ಸೀತಾರಾಮ ಶೆಟ್ಟಿ ಉಡುಪಿ ಶ್ರೀ ಕೋಣಂದೂರು ಲಿಂಗಪ್ಪ ಶಿವಮೊಗ್ಗ
ಶ್ರೀ ಉಮೇಶ ಪಂಬದ ದಕ್ಷಿಣ ಕನ್ನಡ ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ ಶ್ರೀ ಕೆ.ದಿನೇಶ್ ಬೆಂಗಳೂರು ಶ್ರೀ ಶಾಂತರಾಜು ತುಮಕೂರು ಶ್ರೀ ಜಾಫರ್ ಮೊಹಿಯುದ್ದೀನ್ ರಾಯಚೂರು ಶ್ರೀ ಪೆನ್ನ ಓಬಳಯ್ಯ ಬೆಂಗಳೂರು ಗ್ರಾಮಾಂತರ ಶ್ರೀ ಶಾಂತಿ ಬಾಯಿ ಬಳ್ಳಾರಿ ಶ್ರೀ ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ
ಹೊರನಾಡು/ ಹೊರದೇಶ ಶ್ರೀ ಜಕರಿಯ ಬಜಪೆ (ಸೌದಿ) ಹೊರನಾಡು/ ಹೊರದೇಶ ಶ್ರೀ ಪಿ ವಿ ಶೆಟ್ಟಿ (ಮುಂಬೈ) ಹೊರನಾಡು/ ಹೊರದೇಶ
ಪರಿಸರ ಶ್ರೀ ರಾಮೇಗೌಡ ಚಾಮರಾಜನಗರ ಶ್ರೀ ಮಲ್ಲಿಕಾರ್ಜುನ ನಿಂಗಪ್ಪ ಯಾದಗಿರಿ
ಕೃಷಿ ಡಾ.ಎಸ್.ವಿ.ಹಿತ್ತಲಮನಿ ಹಾವೇರಿ ಶ್ರೀ ಎಂ ಸಿ ರಂಗಸ್ವಾಮಿ ಹಾಸನ
ಮಾಧ್ಯಮ ಶ್ರೀ ಕೆ.ಸುಬ್ರಮಣ್ಯ ಬೆಂಗಳೂರು ಶ್ರೀ ಅಂಶಿ ಪ್ರಸನ್ನಕುಮಾರ್ ಮೈಸೂರು ಶ್ರೀ ಬಿ.ಎಂ ಹನೀಫ್ ದಕ್ಷಿಣ ಕನ್ನಡ ಶ್ರೀ ಎಂ ಸಿದ್ಧರಾಜು ಮಂಡ್ಯ
ವಿಜ್ಞಾನ ಮತ್ತು ತಂತ್ರಜ್ಞಾನ ಶ್ರೀ ರಾಮಯ್ಯ ಚಿಕ್ಕಬಳ್ಳಾಪುರ ಶ್ರೀ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ ಡಾ. ಆರ್. ವಿ ನಾಡಗೌಡ ಗದಗ
ಸಹಕಾರ ಶ್ರೀ ಶೇಖರಗೌಡ ವಿ ಮಾಲಿಪಾಟೀಲ್ ಕೊಪ್ಪಳ
ಯಕ್ಷಗಾನ ಶ್ರೀ ಕೋಟ ಸುರೇಶ ಬಂಗೇರ ಉಡುಪಿ ಶ್ರೀ ಐರಬೈಲ್‌ಆನಂದ ಶೆಟ್ಟಿ ಉಡುಪಿ ಶ್ರೀ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) ಉತ್ತರ ಕನ್ನಡ
ಬಯಲಾಟ ಶ್ರೀ ಗುಂಡೂರಾಜ್ ಹಾಸನ
ರಂಗಭೂಮಿ ಶ್ರೀ ಹೆಚ್.ಎಂ. ಪರಮಶಿವಯ್ಯ ಬೆಂಗಳೂರು ದಕ್ಷಿಣ (ರಾಮನಗರ) ಶ್ರೀ ಎಲ್.ಬಿ.ಶೇಖ್ (ಮಾಸ್ತರ್) ವಿಜಯಪುರ ಶ್ರೀ ಬಂಗಾರಪ್ಪ ಖುದಾನ್‌ಪುರ ಬೆಂಗಳೂರು ಶ್ರೀ ಮೈಮ್ ರಮೇಶ್ ದಕ್ಷಿಣ ಕನ್ನಡ ಶ್ರೀಮತಿ ಡಿ.ರತ್ನಮ್ಮ ದೇಸಾಯಿ ರಾಯಚೂರು
ಶಿಕ್ಷಣ ಡಾ. ಎಂ.ಆರ್. ಜಯರಾಮ್ ಬೆಂಗಳೂರು ಡಾ. ಎನ್ ಎಸ್ ರಾಮೇಗೌಡ ಮೈಸೂರು ಶ್ರೀ. ಎಸ್. ಬಿ. ಹೊಸಮನಿ ಕಲಬುರಗಿ ಶ್ರೀಮತಿ ರಾಜ್ ಶ್ರೀ ನಾಗರಾಜು ಬೆಳಗಾವಿ
ಕ್ರೀಡೆ ಶ್ರೀ ಆಶೀಶ್ ಕುಮಾರ್ ಬಲ್ಲಾಳ್ ಬೆಂಗಳೂರು ಶ್ರೀ ಎಂ ಯೋಗೇಂದ್ರ ಮೈಸೂರು ಡಾ. ಬಬಿನಾ ಎನ್.ಎಂ (ಯೋಗ) ಕೊಡಗು
ನ್ಯಾಯಾಂಗ ನ್ಯಾ. ಶ್ರೀ ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) ಬಾಗಲಕೋಟೆ
ಶಿಲ್ಪಕಲೆ ಶ್ರೀ ಬಸಣ್ಣ ಮೋನಪ್ಪ ಬಡಿಗೇರ ಯಾದಗಿರಿ ಶ್ರೀ ನಾಗಲಿಂಗಪ್ಪ ಜಿ ಗಂಗೂರ ಬಾಗಲಕೋಟೆ
ಬೆಂಗಳೂರು,ಅ.30– ಡೇಟಿಂಗ್ ಸೇವೆ ಹೆಸರಿನಲ್ಲಿ ಮಹಿಳೆಯ ಅಂದಕ್ಕೆ ಮಾರುಹೋದ ವೃದ್ಧರೊಬ್ಬರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ.ನಗರದ ಹೊರಮಾವು ನಿವಾಸಿಯಾಗಿರುವ 63 ವರ್ಷದ ವೃದ್ಧರೊಬ್ಬರಿಗೆ ಮಹಿಳೆಯೊಂದಿಗೆ ಡೇಟಿಂಗ್ ಸೇವೆ ಒದಗಿಸುವುದಾಗಿ ಆಸೆ ಹುಟ್ಟಿಸಿ ವಂಚಕರು 32 ಲಕ್ಷ ಹಣ ದೋಚಿರುವುದು ಬೆಳಕಿಗೆ ಬಂದಿದೆ.
ಈ ವೃದ್ಧ ಸೆ.5 ರಿಂದ ಅ.18 ರ ಅವಧಿ ನಡುವೆ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ವಾಟ್ಸಪ್‌ನಲ್ಲಿ ಈ ವೃದ್ಧಗೆ ಮೂವರು ಮಹಿಳೆಯರ ಫೋಟೋ ಕಳುಹಿಸಿದ ವಂಚಕರು ಅವರ ಜೊತೆ ಡೇಟಿಂಗ್ ಸೇವೆ ಕೊಡಿಸುವುದಾಗಿ ಹೇಳಿದ್ದಾರೆ.
ಆ ವೃದ್ಧಗೆ ರಿತಿಕಾ ಎಂಬ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಕಳುಹಿಸಿದ್ದು, ನಂತರ ಅವರಿಬ್ಬರು ಆತೀಯತೆ ಬೆಳೆಸಿಕೊಂಡಿದ್ದರು. ತದ ನಂತರ ಶೀಘ್ರದಲ್ಲಿ ಭೇಟಿಯಾಗುವುದಾಗಿ ನಂಬಿಸಿ ಆಗಾಗ್ಗೆ ಬೇರೆ ಬೇರೆ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದಾರೆ.
ಹಣ ಹಾಕಿದ ನಂತರವೂ ಮತ್ತೆ ಮತ್ತೆ ಹಣ ಕೇಳುತ್ತಿದ್ದಾಗ ಆತ ನಿರಾಕರಿಸಿದಾಗ ಆಕೆ ಬೆದರಿಕೆ ಹಾಕಿದ್ದಾಳೆ.ಇದೀಗ ವೃದ್ಧನಿಗೆ ಜ್ಞಾನೋದಯವಾಗಿ ಪೂರ್ವವಿಭಾಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಯಾರು, ಯಾವ ಖಾತೆಗಳಿಗೆ ಹಣ ಹೋಗಿದೆ ಎಂಬುವುದನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು,ಅ.30-ಕೆಲಸ ನೀಡಿ ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದ ಮಾಲೀಕರಿಗೆ ಮಂಕುಬೂದಿ ಎರಚಿ ಕಳ್ಳತನ ಮಾಡಿದ್ದ ಮನೆಗೆಲಸದಾಕೆ ಆನ್‌ಲೈನ್ ಚಟಕ್ಕೆ ಬಿದ್ದು ಈ ಕೃತ್ಯವೆಸಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಮನೆಗೆಲಸದಾಕೆ ಮಂಗಳ (32) ಟಿ.ನರಸೀಪುರ ತಾಲ್ಲೂಕಿನವರಾಗಿದ್ದು, ಆನ್‌ಲೈನ್ ಬೆಟ್ಟಿಂಗ್‌ಗಾಗಿ ಹಣ ಹೊಂದಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಮಾಲೀಕರ ಕಣ್ತಪ್ಪಿಸಿ ಆಗಾಗ್ಗೆ ಆಭರಣಗಳನ್ನು ಕಳ್ಳತನ ಮಾಡತ್ತಿದ್ದಳು.
ಈಕೆಯನ್ನು ಮನೆ ಮಾಲೀಕರಾದ ಆಶಾ ಅವರು ತುಂಬ ನಂಬಿದ್ದರು. ಆಕೇಗಾಗಿ ಕೋಟಿ ಮೌಲ್ಯದ ಮನೆಯನ್ನು ಆಕೆ ಹೆಸರಿಗೆ ವಿಲ್ ಮಾಡಿದ್ದರು. ಹೀಗಿದ್ದರೂ ತನ್ನ ದುರಾಸೆಗಾಗಿ ಆಭರಣ ಕದ್ದು ಇದೀಗ ಜೈಲು ಪಾಲಾಗಿದ್ದಾಳೆ.
ವಿವರ:ಜೆಪಿನಗರ 2ನೇ ಹಂತದಲ್ಲಿ ಆಶಾ ಜಾಧವ್ ಎಂಬುವವರು ವಾಸವಾಗಿದ್ದು, ಅವರ ತಾಯಿಗೆ ಅನಾರೋಗ್ಯ ಕಾರಣ ಅವರನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಕೇರ್‌ಟೇಕರ್ ಆಗಿ ಟಿ.ನರಸೀಪುರ ತಾಲ್ಲೂಕಿನವರಾದ ಮಂಗಳ (32) ಳನ್ನು ನೇಮಿಸಿಕೊಂಡಿದ್ದರು. ಆಶಾ ಅವರಿಗೆ ಮಕ್ಕಳಿರಲಿಲ್ಲ. ಅವರ ಪತಿಯೂ ಮೃತಪಟ್ಟಿದ್ದಾರೆ. ಜೆಪಿ ನಗರದಲ್ಲಿ ಆಶಾ ಅವರು ಕೋಟ್ಯಾಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಇತ್ತೀಚೆಗೆ ಆಶಾ ಅವರ ತಾಯಿಯೂ ಮೃತಪಟ್ಟಿದ್ದಾರೆ. ಹಾಗಾಗಿ ಮಂಗಳಾಳನ್ನು ಮನೆ ಮಗಳಂತೆ ನೋಡಿಕೊಳ್ಳುತ್ತಿದ್ದರು. ಆದರೆ ಆಕೆ ಆ ವಿಶ್ವಾಸವನ್ನು ಉಳಸಿಕೊಳ್ಳದೆ ಬಾಯ್‌ಫ್ರೆಂಡ್ ಜೊತೆ ಪಬ್, ಪಾರ್ಟಿಯೆಂದು ಸುತ್ತಾಡುತ್ತಾ ಅದಕ್ಕಾಗಿ ಲಕ್ಷಾಂತರ ಹಣ ಸಾಲ ಮಾಡಿಕೊಂಡಿದ್ದಳು.ಸಾಲದ ವಿಷಯ ತಿಳಿದು ಮನೆ ಮಾಲೀಕರಾದ ಆಶಾ ಅವರು 40 ಲಕ್ಷ ರೂ. ಸಾಲವನ್ನು ತೀರಿಸಿದ್ದರು.
ಅಲ್ಲದೇ ಕೋಟಿ ಮೌಲ್ಯದ ಮನೆಯನ್ನು ಆಕೆಯ ಹೆಸರಿಗೆ ಬರೆದಿದ್ದರು. ಆನ್‌ಲೈನ್ ಬೆಟ್ಟಿಂಗ್‌ಗಾಗಿ ಆ ಮನೆಯನ್ನೂ ಸಹ ಮಾರಿ ಮಂಗಳ ಹಣ ಕಳೆದುಕೊಂಡಿದ್ದರೂ ಆಶಾ ಅವರು ತಮ ಮನೆಯಲ್ಲಿಯೇ ಆಕೆಯನ್ನು ಸಾಕಿಕೊಂಡಿದ್ದರು.
ಪ್ರತಿವರ್ಷ ಆಕೆಯ ಹುಟ್ಟುಹಬ್ಬಕ್ಕೆ ಆಶಾ ಅವರು ವಿದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಕೆಯ ಮದುವೆ ಮಾಡಲು ಸಹ ಹುಡುಗನನ್ನು ಹುಡುಕುತ್ತಿದ್ದರು.ಇಷ್ಟೆಲ್ಲಾ ಸಹಾಯ ಮಾಡಿದ್ದರೂ ಸಹ ಆನ್‌ಲೈನ್ ಬೆಟ್ಟಿಂಗ್ ಬಿಟ್ಟಿರಲಿಲ್ಲ. ಅದಕ್ಕಾಗಿ ಆಭರಣ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾಳೆ.
ಬೆಂಗಳೂರು, ಅ.30- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ವಿಘ್ನ ಎದುರಾಗಿದೆ. 17 ಕಿ.ಮೀ ಉದ್ದದ ಸುರಂಗ ಮಾರ್ಗದ ಬದಲಿಗೆ ಕೇವಲ ಒಂದು ಕಿ.ಮೀ ಉದ್ದದ ಸುರಂಗ ಮಾತ್ರ ನಿರ್ಮಾಣ ಮಾಡಲು ಬಿ ಸೈಲ್ ಸಂಸ್ಥೆ ನಿರ್ಧರಿಸಿದೆ.
17 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಪರಿಸರವಾದಿಗಳು, ತಜ್ಞರು ಹಾಗೂ ನಾಗರಿಕರು ಭಾರಿ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೇವಲ ಒಂದು ಕಿ.ಮೀ ಉದ್ದದ ಸುರಂಗ ಮಾರ್ಗ ಮಾತ್ರ ನಿರ್ಮಿಸಿ ಉಳಿದ ಕಡೆಗಳಲ್ಲಿ ಮಾಮೂಲು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಆರಂಭದಲ್ಲಿ ಹೆಬ್ಬಾಳದಿಂದ ಸಿಲ್‌್ಕ ಬೋರ್ಡ ಜಂಕ್ಷನ್‌ವರೆಗಿನ ಒಂದು ಕಿಲೋಮೀಟರ್ ಉದ್ದದ ಸುರಂಗ ಕೊರೆಯಲು ಯೋಜನೆ ರೂಪಿಸಲಾಗಿದೆ.ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಪಶುವೈದ್ಯಕೀಯ ಆಸ್ಪತ್ರೆ ವರೆಗೆ ಮಾತ್ರ ಸುರಂಗ ನಿರ್ಮಿಸಲಾಗುತ್ತಿದೆ.
ಒಂದು ಕಿ.ಮೀ ಉದ್ದದ ಸುರಂಗ ಮಾರ್ಗ ಕಾಮಗಾರಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.
ಮುಂಬೈ, ಅ.30- ಇಂದು ಆರಂಭಿಕ ವಹಿ ವಾಟಿನಲ್ಲಿ ಡಾಲರ್ ಎದುರು ರೂಪಾಯಿ 21 ಪೈಸೆ ಕುಸಿದು, 88.43 ಕ್ಕೆ ತಲುಪಿದೆ. ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಯುಎಸ್ ಡಾಲರ್ ಎದುರು ರೂಪಾಯಿ 88.37 ಕ್ಕೆ ತೆರೆದು 88.43 ಕ್ಕೆ ಇಳಿದು ಹಿಂದಿನ ದಿನದ ಮುಕ್ತಾಯಕ್ಕಿಂತ 21 ಪೈಸೆ ಕುಸಿತ ಕಂಡಿತು.ಬುಧವಾರ, ಯುಎಸ್ ಡಾಲರ್ ಎದುರು ರೂಪಾಯಿ 88.22 ಕ್ಕೆ ಸ್ಥಿರವಾಗಿತ್ತು.
ಈ ವರ್ಷ ಮತ್ತೊಂದು ದರ ಕಡಿತವು ಪೂರ್ವಭಾವಿ ತೀರ್ಮಾನವಲ್ಲ ಎಂದು ಅಧ್ಯಕ್ಷರು ಘೋಷಿಸಿದ ನಂತರ ಡಾಲರ್ ಸೂಚ್ಯಂಕವು ಏರಿತು,ಮಾರುಕಟ್ಟೆ ವ್ಯತ್ಯಯ ,ಮಿಶ್ರ ಆರ್ಥಿಕತೆ ಪರಿಣಾಮ ಬೀರಿದೆ ಎಂದು ಖಜಾನೆ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಬನ್ಸಾಲಿ ಹೇಳಿದರು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಭವಿಷ್ಯದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್‌ಗೆ 64.75 ಕ್ಕೆ ಶೇ. 0.25 ರಷ್ಟು ಕಡಿಮೆಯಾಗಿ ವಹಿವಾಟು ನಡೆಸುತ್ತಿದೆ.
ಪಾಟ್ನಾ, ಅ. 30 (ಪಿಟಿಐ)- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆ ಪ್ರಯುಕ್ತ ಹದಿನೈದು ದಿನಗಳ ಕಾಲ ಭಾರತ್ ಪರ್ವ-2025 ಕಾರ್ಯಕ್ರಮ ಹಮಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ.
ನ. 1 ರಿಂದ 15 ರವರೆಗೆ ಭಾರತ್ ಪರ್ವ್ 2025 ಅನ್ನು ಆಚರಿಸಲಾಗುವುದು ಎಂದು ತಿಳಿಸಿರುವ ಅವರು, ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಗುರುತಿಸಲು ಇಂದಿನಿಂದ ಪ್ರತಿ ಅಕ್ಟೋಬರ್ 31 ರಂದು ಗುಜರಾತ್‌ನ ಏಕ್ತಾ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದು ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ 7.55 ರಿಂದ ಮೊದಲ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಮಹಾತ್ಮ ಗಾಂಧಿಯವರ ಜೊತೆಗೆ, ಸರ್ದಾರ್ ಪಟೇಲ್ ಭಾರತದ ಸ್ವಾತಂತ್ರ್ಯ ಹೋರಾಟದ ಬೆನ್ನೆಲುಬಾಗಿದ್ದರು. ರಾಷ್ಟ್ರದ ಅಡಿಪಾಯವನ್ನು ನಿರ್ಮಿಸುವಲ್ಲಿ ಅವರ ಕೊಡುಗೆ ಅಪಾರ ಎಂದರು.
ಆದರೂ, ಕಾಂಗ್ರೆಸ್ ಪಕ್ಷವೂ ಸರ್ದಾರ್ ಪಟೇಲ್ ಅವರನ್ನು ಮರೆಯುವಂತೆ ಮಾಡಲು ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿತು ಮತ್ತು ಅವರ ಹೆಸರಿನಲ್ಲಿ ಯಾವುದೇ ಪ್ರತಿಮೆ ಅಥವಾ ಸ್ಮಾರಕವನ್ನು ನಿರ್ಮಿಸಲಿಲ್ಲ ಎಂದು ಅವರು ಹೇಳಿದ್ದಾರೆ.ಮತ್ತೊಂದೆಡೆ, ಎನ್‌ಡಿಎ ಏಕತಾ ಪ್ರತಿಮೆಯನ್ನು ನಿರ್ಮಿಸಿತು, ಆ ಪ್ರತಿಮೆ ಇಂದು ವಿಶ್ವದ ಗಮನ ಸೆಳೆದಿದೆ ಎಂದು ಅವರು ತಿಳಿಸಿದರು.