Friday, November 7, 2025
Home Blog Page 1801

ರಾಜಕೀಯ ಪರಿಹಾರದಿಂದ ಮಣಿಪುರ ಸಮಸ್ಯೆ ನಿವಾರಣೆ: ಸೇನೆ

ಗುವಾಹಟಿ,ನ.22- ಮಣಿಪುರದ ಸದ್ಯದ ಪರಿಸ್ಥಿತಿ ನಿವಾರಣೆಗೆ ರಾಜಕೀಯ ಪರಿಹಾರದ ಅಗತ್ಯವಿದೆ ಎಂದು ಸೇನೆಯ ಪೂರ್ವ ಕಮಾಂಡ್ ಮುಖ್ಯಸ್ಥರು ಹೇಳಿದ್ದಾರೆ. ಈಸ್ಟರ್ನ್ ಕಮಾಂಡ್‍ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್ -ಚೀಫ್ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಲಿತಾ ಅವರು, ಸಮುದಾಯಗಳ ನಡುವಿನ ತೀಕ್ಷ್ಣವಾದ ಧ್ರುವೀಕರಣದಿಂದಾಗಿ ಈಶಾನ್ಯ ರಾಜ್ಯದಲ್ಲಿ ವಿರಳ ಹಿಂಸಾಚಾರದ ಘಟನೆಗಳು ಮುಂದುವರೆದಿದೆ ಎಂದಿದ್ದಾರೆ.

ರಾಜ್ಯದಲ್ಲಿ ಎರಡು ಸಮುದಾಯಗಳಾದ ಕುಕಿಗಳು ಮತ್ತು ಮೇಟಿಗಳು ಧ್ರುವೀಕರಣಗೊಂಡಿರುವ ರಾಜಕೀಯ ಸಮಸ್ಯೆಯಾಗಿದೆ. ಮಣಿಪುರದ ಪರಿಸ್ಥಿತಿಗೆ ರಾಜಕೀಯ ಪರಿಹಾರವಾಗಬೇಕಿದೆ ಎಂದು ಅವರು ಹೇಳಿದರು. 4,000 ಲೂಟಿ ಮಾಡಿದ ಶಸ್ತ್ರಾಸ್ತ್ರಗಳು ಜನರ ಕೈಯಲ್ಲಿ ಮುಂದುವರಿದಿವೆ ಮತ್ತು ಈ ಶಸ್ತ್ರಾಸ್ತ್ರಗಳನ್ನು ಹಿಂಸಾಚಾರದ ಘಟನೆಗಳಲ್ಲಿ ಬಳಸಲಾಗುತ್ತಿದೆ ಎಂದು ಉನ್ನತ ಸೇನಾ ಅಧಿಕಾರಿ ತಿಳಿಸಿದ್ದಾರೆ.

ಜಸ್ಟ್‍ಇನ್ | ಶಂಕಿತ ಬಂಡುಕೋರರಿಂದ ಇಬ್ಬರು ವ್ಯಕ್ತಿಗಳನ್ನು ಕೊಂದ ನಂತರ ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ 48 ಗಂಟೆಗಳ ಸ್ಥಗಿತ; ಹೆಚ್ಚಿನ ವಿವರಗಳೊಂದಿಗೆ ಮಣಿಪುರದ ಜೀವಸೆಲೆ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಲಾಗಿದೆ.

ಮಹಿಳೆ ಮೇಲೆ ಕ್ರೌರ್ಯ: ಕುಟುಂಬದವರ ವಿರುದ್ಧ ಎಫ್‍ಐಆರ್

ಭದ್ರತಾ ಸಿಬ್ಬಂದಿ ಮತ್ತು ಅವರ ಚಾಲಕನ ಹತ್ಯೆಯನ್ನು ವಿರೋಸಿ ಮಣಿಪುರದ ಕಾಂಗ್‍ಪೆಪೋಕ್ಪಿ ಜಿಲ್ಲೆಯಲ್ಲಿ 48 ಗಂಟೆಗಳ ಕಾಲ ಬಂದ್‍ನ ನಡುವೆ ಮಹತ್ವದ ಹೇಳಿಕೆಗಳು ಬಂದಿವೆ.

ಹೊಂಚುದಾಳಿಯಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ ಸಿಬ್ಬಂದಿ ಮತ್ತು ಅವರ ಚಾಲಕ ಸಾವನ್ನಪ್ಪಿದ್ದಾರೆ. ಸ್ಥಗಿತಗೊಳಿಸುವ ಕರೆ ನೀಡಿದ ಬುಡಕಟ್ಟು ಏಕತೆಯ ಸಮಿತಿ, ಬಲಿಪಶುಗಳು ಕುಕಿ-ಜೋ ಸಮುದಾಯಕ್ಕೆ ಸೇರಿದವರು ಮತ್ತು ಕಣಿವೆ ಮೂಲದ ದಂಗೆಕೋರ ಗುಂಪುಗಳು ಅವರನ್ನು ಕೊಂದಿದ್ದಾರೆ ಎಂದು ಆರೋಪಿಸಿದೆ.

ಮಹಿಳೆ ಮೇಲೆ ಕ್ರೌರ್ಯ: ಕುಟುಂಬದವರ ವಿರುದ್ಧ ಎಫ್‍ಐಆರ್

ಥಾಣೆ, ನ.22 (ಪಿಟಿಐ) ಮಹಾರಾಷ್ಟ್ರದ ಥಾಣೆ ನಗರದಲ್ಲಿ ತನ್ನ ಪತ್ನಿಯನ್ನು ಕ್ರೌರ್ಯಕ್ಕೆ ಒಳಪಡಿಸಿದ ಆರೋಪದ ಮೇಲೆ ಪುರುಷ ಮತ್ತು ಆತನ ನಾಲ್ವರು ಕುಟುಂಬ ಸದಸ್ಯರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಸಂತ್ರಸ್ತೆ ತನ್ನ ದೂರಿನಲ್ಲಿ ತಾನು 2018 ರಲ್ಲಿ ವ್ಯಕ್ತಿಯನ್ನು ವಿವಾಹವಾದೆ ಮತ್ತು ಅವನ ಕುಟುಂಬದೊಂದಿಗೆ ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿಗೆ ಕುಡಿತದ ಚಟವಿದ್ದು, ಆತ ಕುಡಿದು ಮನೆಗೆ ಬಂದು ಹಣ ಕೇಳುತ್ತಿದ್ದ. ಹಣ ಕೊಡಲು ನಿರಾಕರಿಸಿದರೆ ಥಳಿಸುತ್ತಾನೆ.

ಅತ್ತೆಯೂ ಆಕೆಯನ್ನು ದೂಷಿಸಿದ್ದರು. ಆಕೆಯ ಪತಿಯ ಕುಡಿತದ ಚಟ, ಆಕೆಯ ಅತ್ತಿಗೆ ಮತ್ತು ಇತರ ಕುಟುಂಬದ ಸದಸ್ಯರು ಆಕೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಪೆÇಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ. ಚಿತ್ರಹಿಂಸೆಯಿಂದ ಬೇಸತ್ತು ಮಹಿಳೆ ಪೆÇಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ.
ಆರೋಪಿಗಳನ್ನು ಗಣೇಶ ಧೋಂಡಿರಾಮ್ ಕಾಂಬಳೆ, ಲಕ್ಷ್ಮೀಬಾಯಿ ಧೋಂಡಿರಾಮ್ ಕಾಂಬಳೆ, ಜ್ಯೋತಿ ಗಾಯಕವಾಡ, ಸ್ವಾತಿ ರೂಕೆ ಮತ್ತು ಪ್ರೀತಿ ಮೋರೆ ಎಂದು ಗುರುತಿಸಲಾಗಿದೆ.

ಪಿಜಿಗಳಲ್ಲಿ ವಾಸಿಸುವವರ ಮಾಹಿತಿ ಸಂಗ್ರಹಕ್ಕೆ ವೆಬ್ ಪೋರ್ಟಲ್: ದಯಾನಂದ

ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 498ಎ (ಗಂಡ ಅಥವಾ ಮಹಿಳೆಯ ಪತಿ ಅಥವಾ ಸಂಬಂ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು), 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕದನ ವಿರಾಮಕ್ಕೆ ಇಸ್ರೇಲ್ ಸಮ್ಮತಿ

ಜೆರುಸಲೇಂ, ನ 22- ಇಸ್ರೇಲ್ ಕ್ಯಾಬಿನೆಟ್ ಹಮಾಸ್ ಉಗ್ರಗಾಮಿ ಗುಂಪಿನೊಂದಿಗೆ ತಾತ್ಕಾಲಿಕ ಕದನ ವಿರಾಮವನ್ನು ಅನುಮೋದಿಸಿದೆ, ಇದು ಆರು ವಾರಗಳ ವಿನಾಶಕಾರಿ ಯುದ್ಧದಲ್ಲಿ ಹೋರಾಟವನ್ನು ಮೊದಲ ನಿಲುಗಡೆಗೆ ತರುವ ಮತ್ತು ಬಂಧಿತರಾಗಿರುವ ಡಜನ್‍ಟ್ಟಲೆ ಒತ್ತೆಯಾಳುಗಳಿಗೆ ಸ್ವಾತಂತ್ರ್ಯವನ್ನು ಗೆಲ್ಲುವ ನಿರೀಕ್ಷೆಯಿದೆ.

ಒಪ್ಪಂದವು ನಾಲ್ಕು ದಿನಗಳ ಕದನ ವಿರಾಮಕ್ಕೆ ಕರೆ ನೀಡುತ್ತದೆ, ಈ ಸಮಯದಲ್ಲಿ ಇಸ್ರೇಲ್ ಗಾಜಾದಲ್ಲಿ ತನ್ನ ಮಿಲಿಟರಿ ಆಕ್ರಮಣವನ್ನು ನಿಲ್ಲಿಸುತ್ತದೆ ಮತ್ತು ಹಮಾಸ್ ಸುಮಾರು 240 ಒತ್ತೆಯಾಳುಗಳಲ್ಲಿ ಕನಿಷ್ಠ 50 ಜನರನ್ನು ಬಿಡುಗಡೆ ಮಾಡುತ್ತದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಬಿಡುಗಡೆಯಾದ ಮೊದಲ ಒತ್ತೆಯಾಳುಗಳು ಮಹಿಳೆಯರು ಮತ್ತು ಮಕ್ಕಳು ಸೇರಿರುತ್ತಾರೆ.

ಇಸ್ರೇಲ್ ಸರ್ಕಾರವು ಎಲ್ಲಾ ಒತ್ತೆಯಾಳುಗಳನ್ನು ಮನೆಗೆ ಕರೆತರಲು ಬದ್ಧವಾಗಿದೆ. ಇಂದು ರಾತ್ರಿ, ಈ ಗುರಿಯನ್ನು ಸಾಧಿಸುವ ಮೊದಲ ಹಂತದ ರೂಪರೇಖೆಯನ್ನು ಸರ್ಕಾರ ಅನುಮೋದಿಸಿದೆ, ಎಂದು ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಸತ್ತು ಹೋಗಿದ್ದಾನೆಂದು ನಂಬಿಸಿದ್ದ ರೌಡಿ ಪೊಲೀಸ್ ಬಲೆಗೆ

ಹಮಾಸ್‍ನೊಂದಿಗೆ ಮಧ್ಯಸ್ಥಿಕೆ ವಹಿಸುವ ಕತಾರ್ ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಹೇಳಿಕೆಯು ಒಪ್ಪಂದವು ಇಸ್ರೇಲಿ ಜೈಲುಗಳಲ್ಲಿ ಬಂಧಿತರಾಗಿರುವ ಹಲವಾರು ಪ್ಯಾಲೇಸ್ಟಿನಿಯನ್ ಮಹಿಳೆಯರು ಮತ್ತು ಮಕ್ಕಳ ಬಿಡುಗಡೆಯನ್ನು ಒಳಗೊಂಡಿದೆ, ಒಪ್ಪಂದದ ಅನುಷ್ಠಾನದ ನಂತರದ ಹಂತಗಳಲ್ಲಿ ಬಿಡುಗಡೆಯಾದವರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದೆ. ಮತ್ತು ಇದು ಗಾಜಾಕ್ಕೆ ಹೆಚ್ಚುವರಿ ಮಾನವೀಯ ಸಹಾಯವನ್ನು ಅನುಮತಿಸುತ್ತದೆ, ಆದರೆ ಇಸ್ರೇಲಿ ಹೇಳಿಕೆಯು ಈ ಎರಡೂ ಅಂಶಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-11-2023)

ನಿತ್ಯ ನೀತಿ : ಯಾವ ವ್ಯಕ್ತಿಯಲ್ಲಿ ಆಶೋತ್ತರ ಭಾವನೆಗಳು ಅಧಿಕವಾಗಿರುವುದೋ ಅವನು ಕಾಲ ಮೃತ್ಯುವಿಗೆ ಹೆದರುವುದು ಸಹಜ.

ಪಂಚಾಂಗ ಬುಧವಾರ 22-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಹರ್ಷಣ / ಕರಣ: ತೈತಿಲ

ಸೂರ್ಯೋದಯ : ಬೆ.06.21
ಸೂರ್ಯಾಸ್ತ : 05.50
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ತಾಯಿಗೆ ಆರೋಗ್ಯ ಸಮಸ್ಯೆಯಿಂದಾಗಿ ಸ್ವಲ್ಪ ತೊಂದರೆ ಅನುಭವಿಸಬೇಕಾಗುತ್ತದೆ.
ವೃಷಭ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಸಿಗಲಿದೆ.
ಮಿಥುನ: ಮನೆಯ ಎಲ್ಲ ಸದಸ್ಯರೊಂದಿಗೆ ಸಂಯಮದಿಂದ ಕಾಲ ಕಳೆಯಲು ಪ್ರಯತ್ನಿಸುವಿರಿ.

ಕಟಕ: ಕಠಿಣ ಪರಿಶ್ರಮ ದಿಂದ ಮಾತ್ರ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.
ಸಿಂಹ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಒಳ್ಳೆಯದು.
ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ.

ತುಲಾ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ವೃಶ್ಚಿಕ: ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ಬರವ ನಿರೀಕ್ಷೆಯಿದೆ.
ಧನುಸ್ಸು: ನೀವು ಮಾಡುವ ಕೆಲಸಗಳಿಂದ ಸಮಾಜ ದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ.

ಮಕರ: ನಿಮ್ಮ ಶಕ್ತಿ-ಸಾಮಥ್ರ್ಯವನ್ನು ನೋಡಿ ಶತ್ರುಗಳು ದೂರ ಉಳಿಯುತ್ತಾರೆ.
ಕುಂಭ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸಿ.
ಮೀನ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಿರಿ. ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ.

ಪಿಜಿಗಳಲ್ಲಿ ವಾಸಿಸುವವರ ಮಾಹಿತಿ ಸಂಗ್ರಹಕ್ಕೆ ವೆಬ್ ಪೋರ್ಟಲ್: ದಯಾನಂದ

ಬೆಂಗಳೂರು,ನ.21- ನಗರದ ಪಿಜಿಗಳಲ್ಲಿ ವಾಸಿಸುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ವೆಬ್ ಪೋರ್ಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರ ಬಗ್ಗೆ ನಿಗಾ ಇಡಲು ಪ್ರಾಯೋಗಿಕವಾಗಿ ವೆಬ್ ಪೋರ್ಟಲ್‍ನ್ನು ಜಾರಿಗೊಳಿಸಲು ಸಿದ್ದತೆ ಮಾಡಿಕೊಡಲಾಗಿದೆ. ಇದರಿಂದ ಪಿಜಿ ಮಾಲೀಕರಿಗೆ ಅನುಕೂಲವಾಗಲಿದ್ದು, ಯಾರು ಎಲ್ಲಿಂದ ಬಂದಿದ್ದಾರೆ? ಮತ್ತವರ ಹಿನ್ನಲೆ ಬಗ್ಗೆ ದಾಖಲಿಸಲು ಸುಲಭವಾಗುತ್ತದೆ ಎಂದರು.

ಇದರಿಂದ ಪೊಲೀಸರಿಗೂ ಯಾರಾದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಅಂಥವರ ಪತ್ತೆ ಕಾರ್ಯಕ್ಕೂ ಅನುಕೂಲವಾಗಲಿದೆ ಎಂದು ಆಯುಕ್ತರು ಹೇಳಿದರು. ಇದನ್ನು ಪ್ರಾಯೋಗಿಕವಾಗಿ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ 167 ಪಿಜಿ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ವ್ಯವಸ್ಥೆ ಕಡ್ಡಾಯವಾಗಲಿಲ್ಲದಿದ್ದರೂ ಪಿಜಿ ಮಾಲೀಕರಿಗೂ ಅನುಕೂಲವಾಗುವುದರಿಂದ ಅವರೇ ಸ್ವಯಂಪ್ರೇರಿತವಾಗಿ ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಪಿಜಿಗಳಿದ್ದು, ಅಂದಾಜು ನಾಲ್ಕುವರೆ ಲಕ್ಷ ಮಂದಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಾಗಿ ಪೂರ್ವ, ಆಗ್ನೇಯ ಹಾಗೂ ವೈಟ್‍ಫೀಲ್ಡ್ ವಿಭಾಗಗಳಲ್ಲಿ ಪಿಜಿ ಕೇಂದ್ರಗಳು ಇವೆ. ಇವುಗಳಲ್ಲಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಂಗಿರುತ್ತಾರೆ ಎಂದು ದಯಾನಂದ ಅವರು ವಿವರಿಸಿದರು.

ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ: 1.15 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

ಪಿಜಿಗಳಲ್ಲಿನ ಸುರಕ್ಷತೆ ಕ್ರಮಗಳ ಬಗ್ಗೆ ಬಿಬಿಎಂಪಿ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅನ್ವಯ ಕಡ್ಡಾಯ ಸಿಸಿಟಿವಿ, ಭದ್ರತಾ ಸುರಕ್ಷತೆಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಹೇಳಿದರು.

ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಖಚಿತ..!

ಬೆಳಗಾವಿ,ನ.21- ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯಎಂದು ಶಾಸಕ ವಿಶ್ವಾಸ್ ವೈದ್ಯ ಹೊಸ ಬಾಂಬ್ ಸಿಡಿಸಿದ್ದು ,ಇದು ಹೊಸ ಸಂಚಲನ ಸೃಷ್ಠಿಸಿದೆ.

ಯರಗಟ್ಟಿಯಲ್ಲಿ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ ಮುಂದೆ ಸಿಎಂ ಆಗುತ್ತಾರೆ ಅವರನ್ನು ಆ ಸ್ಥಾನದಲ್ಲಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ.

ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ: 1.15 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ ಸತೀಶ್ ಜಾರಕಿಹೊಳಿ ಅಣ್ಣ ಸಿಎಂ ಆಗುವುದು ಕೂಡ ಅಷ್ಟೇ ಸತ್ಯಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಈ ಭಾಗದಲ್ಲಿ ಭಾರಿ ಸದ್ದು ಮಾಡಿದೆ.

ಈ ಮೊದಲೇ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನಗೊಂಡು ತಮ್ಮ ರಾಜಕೀಯ ದಾಳ ಉರುಳಿಸಿದ್ದರು.
ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು ಆದರೆ ಈಗ ಬೆಂಬಲಿಗ ಶಾಸಕರು ನೀಡುತ್ತಿರುವ ಹೇಳಿಕೆ ಹೊಸ ಗೊಂದಲ ಸೃಷ್ಠಿಸುತ್ತಿದೆ.

ಸತ್ತು ಹೋಗಿದ್ದಾನೆಂದು ನಂಬಿಸಿದ್ದ ರೌಡಿ ಪೊಲೀಸ್ ಬಲೆಗೆ

ಬೆಂಗಳೂರು, ನ.21- ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಸತ್ತು ಹೋಗಿರುವುದಾಗಿ ನಂಬಿಸಿ ಸುಳ್ಳು ಹೇಳಿ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ರೌಡಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈಟ್‍ಫೀಲ್ಡ್ ಪೊಲೀಸ್ ಠಾಣೆಯ ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ. ಈತ ರಾಜಾನುಕುಂಟೆ ಠಾಣೆಯ ಕೊಲೆ ಪ್ರಕರಣ ಹಾಗೂ ಕಾಡು ಬೀಸನಹಳ್ಳಿ ಡ್ರೈವರ್ ಸೋಮನ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ವಿದ್ಯುತ್ ಅವಘಡದಿಂದ ತಾಯಿ-ಮಗು ಸಾವು ಪ್ರಕರಣ 4 ಮಾದರಿಯ ತನಿಖೆ: ಕೆ.ಜೆ.ಜಾರ್ಜ್

ಆರೋಪಿ ರೌಡಿಯು ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದನು. ಸ್ನೇಹಿತರಿಗೂ ಮಲ್ಲಿಕಾರ್ಜುನ ಸತ್ತಿದ್ದಾನೆಂದು ನಂಬಿಸಲಾಗಿದೆ. ಅಲ್ಲದೆ, ಪೆಪೊಲೀಸರು ಕಾರ್ಯಾಚರಣೆ ವೇಳೆ ಮಲ್ಲಿಯ ಬಗ್ಗೆ ಮಾಹಿತಿ ಕಲೆ ಹಾಕಲು ಆತನ ಮನೆ ಬಳಿ ಹೋದಾಗ ಕುಟುಂಬಸ್ಥರು ಆತ ಸತ್ತಿದ್ದಾನೆಂದು ಹೇಳಿ ನಂಬಿಸಿದ್ದಾರೆ.

ಆದರೂ ಪೊಲೀಸರು ಈತನ ಸಾವಿನ ಬಗ್ಗೆ ಅನುಮಾನಗೊಂಡು ಬಂಧನ ಕಾರ್ಯ ಮುಂದುವರೆಸಿದಾಗ ರೌಡಿ ಮಲ್ಲಿ ಅಮೃತಳ್ಳಿ ಬಳಿ ಸುತ್ತಾಡುತ್ತಿದ್ದಾನೆಂಬ ಹೆಚ್ಚಿನ ಮಾಹಿತಿ ಕಲೆ ಹಾಕಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ: 1.15 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

ಬೆಂಗಳೂರು, ನ.21- ಪಶ್ಚಿಮ ವಿಭಾಗದ ವಿಜಯನಗರದ ಉಪವಿಭಾಗದ ಪೊಲೀಸರು 13 ಪ್ರಕರಣಗಳನ್ನು ಭೇದಿಸಿ ನಗದೂ ಸೇರಿದಂತೆ 1.15 ಕೋಟಿ ರೂ. ಮೌಲ್ಯದ ಚಿನ್ನಾಭರಣ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ಒಟ್ಟಾರೆ 1,11,88,900 ರೂ. ಮೌಲ್ಯದ ಒಂದು ಕೆಜಿ 993 ಗ್ರಾಂ. ಚಿನ್ನಾಭರಣಗಳು 2.45 ಲಕ್ಷ ರೂ. ಮೌಲ್ಯದ 3 ಕೆಜಿ 500 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 1.14 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಎಸ್ಕೇಪ್ ಕಾರ್ತಿಕ್ ಸೇರಿ ಮೂವರ ಬಂಧನ:
ಗೋವಿಂದರಾಜನಗರ ಪೊಲೀಸ್ ಠಾಣೆಯ ಸ್ವತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ(33), ದಿಲೀಪ್(24) ಮತ್ತು ಅರ್ಜುನ್(23) ನನ್ನು ಬಂಧಿಸಿ 70 ಲಕ್ಷ ರೂ. ಮೌಲ್ಯದ 1 ಕೆಜಿ 215 ಗ್ರಾಂ ತೂಕದ ಚಿನ್ನಾಭರಣ ಮತ್ತು 3 ಕೆಜಿ 500 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ 14 ಪ್ರಕರಣಗಳು ಬೆಳಕಿಗೆ ಬಂದಿವೆ.

ಆರೋಪಿಗಳು ಹಲವು ತಿಂಗಳುಗಳಿಂದ ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಮಾಗಡಿರಸ್ತೆ, ಅನ್ನಪೂರ್ಣೇಶ್ವರ ನಗರ, ಕೊತ್ತನೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನಕಳವು ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿ ಎಸ್ಕೇಪ್ ಕಾರ್ತಿಕ್ ಹಳೇ ಆರೋಪಿಯಾಗಿದ್ದು ಈತ 2005ರಿಂದ ಇಲ್ಲಿಯವರೆಗೆ ಬೆಂಗಳೂರು ನಗರ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ತಮಿಳುನಾಡು ರಾಜ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕನ್ನಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಗೋವಿಂದರಾಜನಗರ ಪೊಲೀಸ್ ಠಾಣೆಯ ಮತ್ತೊಂದು ಸ್ವತ್ತು ಕಳವು ಪ್ರಕರಣದ ಪೈಕಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು, 7.65 ಲಕ್ಷ ರೂ. ಮೌಲ್ಯದ 107 ಗ್ರಾಂ ಚಿನ್ನಾಭರಣಗಳು ಹಾಗೂ 1.14 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸ್ವತ್ತು ಕಳವು ಪ್ರಕರಣದ ಪೈಕಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ 20.60 ಲಕ್ಷ ರೂ. ಮೌಲ್ಯದ 374.7 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೆಡಿಎಸ್ ನಾಯಕರ ತೇಜೋವಧೆ ನಿಲ್ಲಿಸದಿದ್ದರೆ ಉಗ್ರ ಹೋರಾಟ..

ಇದೇ ಠಾಣೆಯ ಸ್ವತ್ತು ಕಳವು ಪ್ರಕರಣದ ಪೈಕಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ಆತ ನೀಡಿದ ಮಾಹಿತಿ ಮೇರೆಗೆ 11.96 ಲಕ್ಷ ರೂ. ಮೌಲ್ಯದ 199.4 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
ಬಸವೇಶ್ವರ ನಗರ ಪೊಲೀಸ್ ಠಾಣೆಯ ಸ್ವತ್ತು ಕಳವು ಪ್ರಕರಣದ ಪೈಕಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ಆತ ನೀಡಿದ ಮಾಹಿತಿ ಮೇರೆಗೆ 4. 85 ಲಕ್ಷ ರೂ. ಮೌಲ್ಯದ 97 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಗಿರೀಶ್ ಅವರ ನೇತೃತ್ವದಲ್ಲಿ ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಚಂದನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‍ಪೆಕ್ಟರ್ ನಾಗೇಶ್, ಗೋವಿಂದರಾಜನಗರ ಠಾಣೆ ಇನ್ಸ್‍ಪೆಕ್ಟರ್ ಸುಬ್ರಮಣಿ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದರು.

ಪೋಷಕರ ಒತ್ತಡವೇ ಮಕ್ಕಳ ಆತ್ಮಹತ್ಯೆಗೆ ಕಾರಣ : ಸುಪ್ರೀಂ

ನವದೆಹಲಿ,ನ.21- ಆತ್ಮಹತ್ಯೆ ಪ್ರಕರಣದಲ್ಲಿ ಮಕ್ಕಳ ಪೋಷಕರೇ ಹೊಣೆಗಾರರೆಂದು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಪ್ರಬಲ ಪೈಪೋಟಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಮಕ್ಕಳ ಮೇಲೆ ಪಾಲಕರು ಹೇರುವ ಒತ್ತಡವೇ ಪ್ರಮುಖ ಕಾರಣ ಎಂದು ಕಳವಳ ವ್ಯಕ್ತಪಡಿಸಿದೆ.

ರಾಜಸ್ಥಾನದ ಕೋಟಾದಲ್ಲಿ ಮಕ್ಕಳ ಆತ್ಮಹತ್ಯೆ ಪ್ರಮಾಣಕ್ಕೆ ಪೋಷಕರು ಮಾತ್ರ ಕಾರಣ ಎಂದು ಅರ್ಜಿಯೊಂದರ ವಿಚಾರಣೆ ವೇಳೆ, ಇಂತಹ ಸನ್ನಿವೇಶಗಳಲ್ಲಿ ನ್ಯಾಯಾಂಗ ಯಾವುದೇ ಸೂಚನೆ ನೀಡುವುದು ಸಾಧ್ಯವಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.

ದೇಶದ ಹಲವು ನಗರಗಳಲ್ಲಿ ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಕೋಚಿಂಗ್ ಸೆಂಟರ್ಗಳ ಮೇಲೆ ನಿಗಾ ವಹಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮುಂಬಯಿ ಮೂಲದ ವೈದ್ಯ ಅನಿರುದ್ಧ ನಾರಾಯಣ ಮಾಲ್ಪನಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್ ಭಟ್ಟಿ ಅವರನ್ನು ಒಳಗೊಂಡ ಪೀಠ ಹೇಳಿದೆ.

ಇದರೊಂದಿಗೆ ಕೋಚಿಂಗ್ ಸೆಂಟರ್‍ಗಳಿಗೆ ಲಗಾಮು ಹಾಕಲು ಕೋರ್ಟ್ ನಿರಾಕರಿಸಿದೆ. ಕೋಟಾದಲ್ಲಿ ಈ ವರ್ಷ ಇಲ್ಲಿಯವರೆಗೆ 24 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳಿಂದ ತಮ್ಮ ಸಾಮಥ್ರ್ಯಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಇದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ಹೆಜ್ಜೆ ಇಡುತ್ತಾರೆ. ಮಕ್ಕಳ ಆತ್ಮಹತ್ಯೆಗೆ ಕೋಚಿಂಗ್ ಸೆಂಟರ್‍ಗಳೇ ಕಾರಣ ಎಂದು ಮುಂಬೈ ಮೂಲದ ವೈದ್ಯ ಅನಿರುದ್ಧ್ ನಾರಾಯಣ್ ಮಲ್ಪಾನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ಕೋಚಿಂಗ್ ಇನ್‍ಸ್ಟಿಟ್ಯೂಟ್‍ಗಳಲ್ಲಿ ಕನಿಷ್ಠ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆಯೂ ಅವರು ತಮ್ಮ ಅರ್ಜಿಯಲ್ಲಿ ಮಾತನಾಡಿದ್ದಾರೆ. ಈ ಕುರಿತು ಕಾನೂನು ರೂಪಿಸಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು, ತಪ್ಪು ಮಕ್ಕಳ ಪೋಷಕರಲ್ಲಿದೆಯೇ ಹೊರತು ಕೋಚಿಂಗ್ ಸಂಸ್ಥೆಗಳದ್ದಲ್ಲ ಎಂದು ಹೇಳಿದೆ.

ಜೆಡಿಎಸ್ ನಾಯಕರ ತೇಜೋವಧೆ ನಿಲ್ಲಿಸದಿದ್ದರೆ ಉಗ್ರ ಹೋರಾಟ..

ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ವಯಸ್ಸು 14-16 ವರ್ಷಗಳು. ಈ ವರ್ಷ ರಾಜಸ್ಥಾನದ ಕೋಟಾದಲ್ಲಿ ನೀಟ್ ಮತ್ತು ಜೆಇಇ ಕೋಚಿಂಗ್‍ಗೆ ಬಂದ 24 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಅಂಕಿ ಅಂಶವು ಕಳೆದ 8 ವರ್ಷಗಳಲ್ಲಿಯೇ ಅತ್ಯಕವಾಗಿದೆ. ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ತರಬೇತಿ ಸಂಸ್ಥೆಗಳಿಗೆ ವಿಶೇಷ ಶಿಫಾರಸುಗಳನ್ನು ಸಹ ಮಾಡಲಾಗಿದೆ. ಇಷ್ಟೆಲ್ಲಾ ಇದ್ದರೂ ಆತ್ಮಹತ್ಯೆ ಪ್ರಕರಣಗಳಲ್ಲಿ ಇಳಿಮುಖವಾಗಿಲ್ಲ.

ದೇಶದಲ್ಲಿ ಕೋಚಿಂಗ್ ಸೆಂಟರ್‍ಗಳೇ ಇರಬಾರದು ಎಂದು ನಮ್ಮಲ್ಲಿ ಹೆಚ್ಚಿನವರು ಬಯಸುವುದುಂಟು. ಆದರೆ, ಶಾಲೆಗಳ ಸ್ಥಿತಿ ಎಲ್ಲ ರೀತಿಯಿಂದಲೂ ಉತ್ತಮವಾಗಿಲ್ಲ. ಮತ್ತೊಂದು ಕಡೆ ತೀವ್ರತರದ ಸ್ಪರ್ಧೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳ ಮೊರೆ ಹೋಗದೆ ಬೇರೆ ಆಯ್ಕೆ ಇಲ್ಲದಂತಾಗಿದೆ. ಎಂದು ನ್ಯಾ.ಖನ್ನಾ ಹೇಳಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊದ (ಎನ್‍ಸಿಆರ್ಬಿ) 2020ನೇ ಸಾಲಿನ ದತ್ತಾಂಶಗಳ ಪ್ರಕಾರ ದೇಶದಲ್ಲಿ ಸಂಭವಿಸಿದ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳ ಪೈಕಿ ಸುಮಾರು ಶೇ 8.2ರಷ್ಟು ಆತ್ಮಹತ್ಯೆ ಪ್ರಕರಣಗಳಾಗಿವೆ ಎಂದು ವಕೀಲೆ ಪ್ರಿಯಾ ತಿಳಿಸಿದರು.

ತನಗೆ ಪರಿಸ್ಥಿತಿಯ ಅರಿವು ಇದೆ. ಆದರೆ ಕೋರ್ಟ್ ನಿರ್ದೇಶನ ನೀಡುವುದು ಸಾಧ್ಯವಿಲ್ಲ. ಇದರ ಬದಲು ಅರ್ಜಿದಾರರು ತಮ್ಮ ಸಲಹೆಗಳೊಂದಿಗೆ ಸರ್ಕಾರವನ್ನು ಸಂಪರ್ಕಿಸಲಿ ಎಂದು ನ್ಯಾಯಪೀಠ ಸಲಹೆ ನೀಡಿತು. ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಿಯಾ ಹೇಳಿದರು. ಅದಕ್ಕೆ ಕೋರ್ಟ್ ಅನುಮತಿ ನೀಡಿತು.

ಐಐಟಿ- ಜೆಇಇ ಮತ್ತು ನೀಟ್‍ನಂತಹ ವಿವಿಧ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತರಬೇತಿ ನೀಡಲು ದೇಶಾದ್ಯಂತ ನಾಯಿ ಕೊಡೆಗಳಂತೆ ಖಾಸಗಿ ಕೋಚಿಂಗ್ ಕೇಂದ್ರಗಳು ತಲೆ ಎತ್ತುತ್ತಿವೆ. ಇವೆಲ್ಲವೂ ಲಾಭಕ್ಕಾಗಿ ಹವಣಿಸುತ್ತಿವೆ ಎಂದು ಅರ್ಜಿದಾರ ಮಾಲ್ಪನಿ ಹೇಳಿದ್ದರು.

ಹೆಚ್‌ಡಿಕೆ ಆರೋಪ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತನಾಗುತ್ತೇನೆ: ಡಿಸಿಎಂ

14 ವರ್ಷ ತಲುಪುತ್ತಿದ್ದಂತೆಯೇ ಮಕ್ಕಳು ಈ ಕೋಚಿಂಗ್ ಫ್ಯಾಕ್ಟರಿಗಳ ಪ್ರವೇಶ ಪಡೆಯುತ್ತಾರೆ. ಅವರು ಹೆಚ್ಚಾಗಿ ತಮ್ಮ ಮನೆಗಳಿಂದ ದೂರವೇ ಇರುತ್ತಾರೆ. ಒಳ್ಳೆಯ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪಡೆಯುವ ಗುರಿಯೊಂದಿಗೆ ಕಠಿಣ ಸಿದ್ಧತೆಗೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಅತ್ತೆ ಮನೆಗೇ ಕನ್ನ ಹಾಕಿದ್ದ ಅಳಿಯ ಸೆರೆ..

ಬೆಂಗಳೂರು, ನ.21- ಮಗಳನ್ನು ಪ್ರೀತಿಸಿ ಆಕೆಯೊಂದಿಗೆ ಓಡಿ ಹೋಗಿದ್ದ ಅಳಿಯನೇ ಅತ್ತೆ ಮನೆಗೆ ಕನ್ನ ಹಾಕಿ 2.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಹಲಸೂರಿನ ಎಂವಿ ಗಾರ್ಡನ್ ನಿವಾಸಿ ಪ್ರದೀಪ್ ಕುಮಾರ್(23) ಬಂಧಿತ ಅಳಿಯ. ಈತ ಅತ್ತೆ ಮನೆಗೆ ಕನ್ನ ಹಾಕಿದ್ದ ದೃಶ್ಯ ನೆರೆಮನೆಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರೆಜಿನಾ ಎಂಬುವರ ಚಿಕ್ಕ ಮಗಳನ್ನು ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಈ ನಡುವೆ ರೆಜಿನಾ ಅವರು ಕನ್ಯಾಕುಮಾರಿಗೆ ಹೋಗಿದ್ದಾಗ ಅಳಿಯ ಪ್ರದೀಪ್ ಕುಮಾರ್ ಇವರ ಮನೆ ಬಳಿ ಬಂದು ಬಾಗಿಲು ಒಡೆದು ಒಳನುಗ್ಗಿ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ನೆರೆಮನೆ ನಿವಾಸಿಗಳು ಗಮನಿಸಿ ಆತನನ್ನು ಪ್ರಶ್ನಿಸಿದಾಗ ನಾನು ಅವರ ಸಂಬಂಧಿಕ ಎಂದು ಹೇಳಿದ್ದಾನೆ.

ಅನುಮಾನಗೊಂಡ ನೆರೆಮನೆ ನಿವಾಸಿಯೊಬ್ಬರು ಆತನ ಫೋಟೋ ವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ನಂತರ ರೆಜಿನಾ ಅವರ ಮೊಬೈಲ್‍ಗೆ ಕರೆ ಮಾಡಿ ವಿಷಯ ತಿಳಿಸಲು ಯತ್ನಿಸಿದರಾದರೂ ಅವರ ಮೊಬೈಲ್ ನಾಟ್‍ರೀಚಬಲ್ ಆದ ಹಿನ್ನೆಲೆಯಲ್ಲಿ ಸಂಪರ್ಕ ಸಾಧ್ಯವಾಗಿರಲಿಲ್ಲ. ರೆಜಿನಾ ಅವರು ಕನ್ಯಾಕುಮಾರಿಯಿಂದ ಮನೆಗೆ ವಾಪಸ್ ಆದಾಗ ಬಾಗಿಲು ಒಡೆದಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ಆಭರಣ ಕಳ್ಳತನವಾಗಿರುವುದು ಕಂಡು ಬಂದಿದೆ.

ಬೆಂಗಳೂರು ಕಂಬಳ ಉತ್ಸವದಿಂದ ಬ್ರಿಜ್ ಭೂಷಣ್‍ಗೆ ಕೋಕ್

ಈ ಬಗ್ಗೆ ನೆರೆಹೊರೆಯವರನ್ನು ವಿಚಾರಿಸಿದಾಗ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದ ಫೋಟೋ ತೋರಿಸಿದಾಗ ಆ ವ್ಯಕ್ತಿ ತಮ್ಮ ಅಳಿಯ ಎಂಬುವುದು ಗೊತ್ತಾಗಿದೆ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಗೆ ರೆಜಿನಾ ಅವರು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಪ್ರದೀಪ್ ಕುಮಾರನನ್ನು ಬಂಧಿಸಿ 47 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಬಂಧನದಿಂದ ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಹಗಲು ಕನ್ನಕಳವು ಪ್ರಕರಣ ಪತ್ತೆಯಾಗಿರುತ್ತದೆ.
ಇನ್ಸ್‍ಪೆಕ್ಟರ್ ಶಿವರಾಜ್ ಗಸಂಗಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.