Home Blog Page 1810

ರಾಹುಲ್ ವಿರುದ್ಧ ಮಾನನಷ್ಟ ದಾಖಲಿಸಿದ್ದ ಪೂರ್ಣೇಶ್ ಮೋದಿಗೆ ಖುಲಾಯಿಸಿದ ಲಕ್

ನವದೆಹಲಿ,ನ.18- ಮೋದಿ ಉಪನಾಮೆಗೆ ಸಂಬಂಧಿಸಿದಂತೆ ರಾಹುಲ್‍ಗಾಂಧಿ ವಿರುದ್ಧ ಗುಜರಾತ್‍ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದ ಪೂರ್ಣೇಶ್ ಮೋದಿಗೆ ಲಕ್ ಖುಲಾಯಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಪೂರ್ಣೇಶ್ ಮೋದಿ ಅವರನ್ನು ದಾದ್ರಾ ನಗರ ಹವೇಲಿ ಮತ್ತು ದಿಯು ದಮನ್‍ನಲ್ಲಿ ಬಿಜೆಪಿ ಪಕ್ಷದ ರಾಜಕೀಯ ವ್ಯವಹಾರಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪೂರ್ಣೇಶ್ ಮೋದಿಯನ್ನು ದಾದ್ರಾ ನಗರ ಹವೇಲಿ ಮತ್ತು ದಮನ್ ದಿಯು ಉಸ್ತುವಾರಿ ಮತ್ತು ದುಶ್ಯಂತ್ ಪಟೇಲ್ ಸಹ-ಪ್ರಭಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ ಎಂದು ಪಕ್ಷವು ಅಸೂಚನೆಯಲ್ಲಿ ತಿಳಿಸಿದೆ.

2019 ರ ಏಪ್ರಿಲ್‍ನಲ್ಲಿ ಕರ್ನಾಟಕದ ಕೊಲಾರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಹೇಳಿಕೆ ನೀಡಿದ ನಂತರ ಬಿಜೆಪಿಯ ಸೂರತ್ ಪಶ್ಚಿಮ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಸೂರತ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಮಧ್ಯಪ್ರದೇಶದಲ್ಲಿ 340 ಕೋಟಿ ರೂ.ಮೌಲ್ಯದ ಮಾದಕ ವಸ್ತು, ನಗದು ಜಪ್ತಿ

ಮಾರ್ಚ್‍ನಲ್ಲಿ, ಸೂರತ್ ನ್ಯಾಯಾಲಯವು ಗಾಂಯನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು, ನಂತರ ಅವರನ್ನು ವಯನಾಡ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಅನರ್ಹಗೊಳಿಸಲಾಗಿತ್ತು.

ಆಗಸ್ಟ್‍ನಲ್ಲಿ ಸುಪ್ರೀಂ ಕೋರ್ಟ್ ಅವರ ಅಪರಾಧವನ್ನು ತಡೆಹಿಡಿದ ನಂತರ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಲಾಯಿತು.

ಎಸ್‍ಯುವಿ ಮರಕ್ಕೆ ಅಪ್ಪಳಿಸ ಐವರ ಸಾವು

ಗಿರಿದಿಹ್,ನ.18- ಜಾರ್ಖಂಡ್‍ನ ಗಿರಿದಿಹ್ ಜಿಲ್ಲೆಯಲ್ಲಿ ಎಸ್‍ಯುವಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿ, ಮತ್ತು ಇಬ್ಬರು ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಫಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗ್ಮಾರಾದಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ವಾಹನದಲ್ಲಿ 10 ಜನರು ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಿರಿದಿಹ್ ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅನಿಲ್ ಸಿಂಗ್ ಮಾತನಾಡಿ, ಕಾರಿನಲ್ಲಿದ್ದವರು ಬಿರ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಥೋರಿಯಾ ಗ್ರಾಮದಿಂದ ಸುಮಾರು 40 ಕಿಮೀ ದೂರದಲ್ಲಿರುವ ಟಿಕೋಡಿಹ್‍ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು ಮತ್ತು ಅಪಘಾತ ಸಂಭವಿಸಿದಾಗ ಮನೆಗೆ ಹಿಂದಿರುಗುತ್ತಿದ್ದರು ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ 340 ಕೋಟಿ ರೂ.ಮೌಲ್ಯದ ಮಾದಕ ವಸ್ತು, ನಗದು ಜಪ್ತಿ

ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಉಳಿದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಚಾಲಕ ಕಾರು ಚಾಲನೆ ಮಾಡುತ್ತಿದ್ದಾಗಲೇ ನಿದ್ರಿಸಿದ ಪರಿಣಾಮ ಈ ಅಪಘಾತವಾಗಿದೆ.

ಮಧ್ಯಪ್ರದೇಶದಲ್ಲಿ 340 ಕೋಟಿ ರೂ.ಮೌಲ್ಯದ ಮಾದಕ ವಸ್ತು, ನಗದು ಜಪ್ತಿ

ಭೋಪಾಲ್,ನ.18- ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಅಕ್ಟೋಬರ್ 9 ರಿಂದ ಜಾರಿಗೆ ಬಂದ ನಂತರ ಇದುವರೆಗೂ 40.18 ಕೋಟಿ ಮೌಲ್ಯದ ನಗದು ಮತ್ತು ಸುಮಾರು 300 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತುಗಳು, ಆಭರಣಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ 230 ವಿಧಾನಸಭಾ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಸುಮಾರು ಶೇ.76 ರಷ್ಟು ಮತದಾನವಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನುಪಮ್ ರಾಜನ್ ಅವರು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ನೀತಿ ಸಂಹಿತೆ ಜಾರಿಯಾದಾಗಿನಿಂದ ರಾಜ್ಯಾದ್ಯಂತ ಜಾರಿ ಸಂಸ್ಥೆಗಳು ನಿರಂತರ ಕ್ರಮ ಕೈಗೊಂಡಿವೆ.

ಸೈಬರ್ ಪ್ರಕರಣ ಭೇದಿಸಲು 4 ವಿಶೇಷ ತಂಡ ರಚನೆ

ಫ್ಲೈಯಿಂಗ್ ಸರ್ವೆಲೆನ್ಸ್ ಟೀಮ್ (ಎಫ್‍ಎಸ್‍ಟಿ), ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ (ಎಸ್‍ಎಸ್‍ಟಿ) ಮತ್ತು ಪೊಲೀಸರ ಜಂಟಿ ತಂಡವು ಸುಮಾರು 339.95 ಕೋಟಿ ಮೌಲ್ಯದ ಅಕ್ರಮ ಮದ್ಯ, ಮಾದಕ ದ್ರವ್ಯಗಳು, ನಗದು, ಅಮೂಲ್ಯವಾದ ಲೋಹಗಳು, ಚಿನ್ನ, ಬೆಳ್ಳಿ, ಆಭರಣಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 9ರಿಂದ ನವೆಂಬರ್ 16ರವರೆಗೆ ಈ ಜಂಟಿ ತಂಡಗಳು 40.18 ಕೋಟಿ ನಗದು, 65.56 ಕೋಟಿ ಮೌಲ್ಯದ 34.68 ಲಕ್ಷ ಲೀಟರ್ ಅಕ್ರಮ ಮದ್ಯ, 17.25 ಕೋಟಿ ಮೌಲ್ಯದ ಮಾದಕ ವಸ್ತು, 92.76 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತಿತರ ಅಮೂಲ್ಯ ಲೋಹಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. 124.18 ಕೋಟಿ ಎಂದು ರಾಜನ್ ಹೇಳಿದರು.

2018 ರ ಚುನಾವಣೆಯಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಯಲ್ಲಿ ಇಂತಹ ಕ್ರಮದಲ್ಲಿ 72.93 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸೂಚಿಸಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-11-2023)

ನಿತ್ಯ ನೀತಿ : ವ್ಯಕ್ತಿಯು ತನ್ನ ಪ್ರದೇಶ, ಭಾಷೆ, ನಾಡು, ರಾಷ್ಟ್ರ, ಧರ್ಮಗಳ ಬಗ್ಗೆ ನಿಜವಾದ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳದಿದ್ದರೆ ಅವನಿಗೂ ಪಶುವಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ.

ಪಂಚಾಂಗ ಶನಿವಾರ 18-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಉತ್ತರಾಷಾಢ / ಯೋಗ: ಗಂಡ / ಕರಣ: ಕೌಲವ

ಸೂರ್ಯೋದಯ : ಬೆ.06.19
ಸೂರ್ಯಾಸ್ತ : 05.50
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಪೀಠೋಪಕರಣಗಳ ವ್ಯವಹಾರದಲ್ಲಿ ಲಾಭ ಸಿಗಲಿದೆ. ಹಳೆ ಸ್ನೇಹಿತರಿಂದ ಧನಾಗಮ.
ವೃಷಭ: ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಮಾಲೀಕರಿಂದ ಕಿರಿಕಿರಿಯಾಗಬಹುದು.
ಮಿಥುನ: ಯಾವುದೇ ಕೆಲಸ ಮಾಡಬೇಕಾದರೂ ಎಚ್ಚರಿಕೆಯಿಂದ ಮಾಡುವುದು ಸೂಕ್ತ.

ಕಟಕ: ಕುಟುಂಬದವ ರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಸಿಂಹ: ಮಹಿಳೆಯರಿಗೆ ಧನನಷ್ಟ. ವಾಹನ ಚಾಲನೆ ಯಲ್ಲಿ ಎಚ್ಚರ ವಹಿಸಿ.
ಕನ್ಯಾ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಮಾಡಬಹುದು.

ತುಲಾ: ಉದ್ಯೋಗ ಬದಲಾವಣೆ ದೊಡ್ಡ ಸಮಸ್ಯೆ ಯಾಗಬಹುದು. ಸಾಲಬಾಧೆ ಕಾಡಲಿದೆ.
ವೃಶ್ಚಿಕ: ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.
ಧನುಸ್ಸು: ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು.

ಮಕರ: ಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿರೀಕ್ಷೆಗೂ ಮೀರಿ ಖರ್ಚು ಹೆಚ್ಚಾಗಲಿದೆ.
ಕುಂಭ: ಸಹೋದರರು ಆರ್ಥಿಕ ಸಹಾಯ ಮಾಡು ವರು. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಮೀನ: ಬರುವ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳಿ. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ.

ಸೈಬರ್ ಪ್ರಕರಣ ಭೇದಿಸಲು 4 ವಿಶೇಷ ತಂಡ ರಚನೆ

ಬೆಂಗಳೂರು, ನ.17- ನಗರದಲ್ಲಿ ಹೆಚ್ಚುತ್ತಿರುವ ಸೈಬರ್ ಪ್ರಕರಣಗಳನ್ನು ಭೇದಿಸಲು ಡಿಸಿಪಿ ಮಟ್ಟದ ನಾಲ್ಕು ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚಾಗುತ್ತಿರುವ ಸೈಬರ್ ಪ್ರಕರಣಗಳನ್ನು ವ್ಯವಸ್ಥಿತವಾಗಿ ಭೇದಿಸಲು ನಗರದ ಎಲ್ಲಾ ಠಾಣೆಗಳಲ್ಲಿ ಸಮನ್ವಯ ಹಾಗೂ ಕೇಂದ್ರಸರ್ಕಾರ ಮತ್ತು ಬ್ಯಾಂಕ್‍ನ ನೋಡಲ್ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲು ಡಿಸಿಪಿ ಮಟ್ಟದ ಅಧಿಕಾರಿಗಳ ನಾಲ್ಕು ತಂಡವನ್ನು ರಚಿಸಲಾಗಿದೆ.

ನಗರದಲ್ಲಿ ಹೆಚ್ಚು ಸೈಬರ್ ವಂಚನೆ ದೂರುಗಳು ಆಧಾರ್ ಎನೇಬಲ್ ಪೇಮೆಂಟ್ (ಬೆರಳಚ್ಚು) ನಿಂದ ಆಗುತ್ತಿದೆ. ಇವರಿಗೂ 116 ಪ್ರಕರಣಗಳು ದಾಖಲಾಗಿದ್ದು, ಈ ವಂಚನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ವಿಚಾರಣೆ ನಡೆಸಲು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಆನ್‍ಲೈನ್ ಜಾಬ್‍ಗೆ ಸಂಬಂಧಿಸಿದಂತೆ 4000 ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇವುಗಳ ಸಮಗ್ರ ತನಿಖೆಯ ಜವಾಬ್ದಾರಿಯನ್ನು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರಿಗೆ ನೀಡಲಾಗಿದೆ.

ಡಿಸಿಎಂ ಭೇಟಿ ರಾಜಕೀಯ ಬಣ್ಣ ಬೇಡ: ಜಿ.ಟಿ.ದೇವೇಗೌಡ

ಮತ್ತೊಂದು ರೀತಿಯ ಸೈಬರ್ ವಂಚನೆ ಕೊರಿಯರ್ ಮೂಲಕ ನಡೆಯುತ್ತಿದ್ದು, ಜನರಿಗೆ ಕೊರಿಯರ್ ಬಂದಿದೆ ಎಂದು ಕರೆ ಮಾಡಿ ಹಣ ಕಟ್ಟುವಂತೆ ಕೇಳಿ ವಂಚನೆ ಮಾಡಲಾಗುತ್ತದೆ. ಇಂತಹ ಪ್ರಕರಣಗಳನ್ನು ಭೇದಿಸಲು ಪೂರ್ವ ವಿಭಾಗದ ಸಂಚಾರಿ ಪೊಲೀಸ್ ಡಿಸಿಪಿ ಕುಲದೀಪ್ ಜೈನ ರವರು ನೀಡಲಾಗಿದೆ. ಇತೀಚಿಗೆ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾಮ ಪ್ರಚೋದಿತ ವಂಚನೆ ಜಾಲ ಬೆಳಿದಿದ್ದು, ಇಂತಹ ಪ್ರಕರಣಗಳನ್ನೂ ಭೇದಿಸಲು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡವತ್ ಅವರನ್ನು ನೇಮಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಸೈಬರ್ ಪ್ರಕರಣಗಲ್ಲಿ ಒಂದೇ ಆರೋಪಿಯಿಂದ ಬೇರೆ ಬೇರೆ ಕಡೆ ವಂಚನೆ ಆಗಿರುತ್ತದೆ ಹಾಗೂ ಒಂದೇ ಸ್ಥಳ ಅಥವಾ ತಂಡ ಭಾಗಿಯಾಗಿರುತ್ತಾರೆ. ಇಂತಹ ಪ್ರಕರಣಗಳನ್ನು ಭೇದಿಸಲು ಎಲ್ಲಾ ಪೊಲೀಸ್ ಠಾಣೆಗಲ್ಲಿ ದಾಖಲಾಗುವ ಸೈಬರ್ ಪ್ರಕರಣ ವರದಿಯನ್ನು ಪಡೆದು ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ಸಹಾಯವಾಗುತ್ತದೆ ಎಂದು ಆಯುಕ್ತರು ಹೇಳಿದರು.

ಬೇನಾಮಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚನೆಯಲ್ಲಿ ಬಳಸಿರುವ ತಂಡವನ್ನು ಬಂಧಿಸಿದ್ದು, ಇವರು ಹೋಟಲ್, ಪೆಟ್ರೋಲ್ ಬಂಕ್, ಬ್ಯಾಂಕ್‍ನಲ್ಲಿ ಕೆಲಸ ಮಾಡುವ ಅಮಾಯಕರಿಗೆ ಐದು – ಹತ್ತು ಸಾವಿರದ ಆಮಿಷವೊಡ್ಡಿ ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್, ಬ್ಯಾಂಕ್ ಕೆವೈಸಿ ಪಡೆದು ವಂಚನೆ ಮಾಡುವಾಗ ಈ ಖಾತೆಗಳನ್ನು ಬಳಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಒಬ್ಬ ಆರೋಪಿಯು ದುಬೈಗೆ ಹೋಗಿ ಅಲ್ಲಿ ತರಬೇತಿ ಪಡೆದುಬಂದಿದ್ದಾಗಿ ಹೇಳಿದ್ದಾನೆ. ವಂಚಿಸಿದ ಹಣವನ್ನು ಅಂತಾರಾಜ್ಯ ಮತ್ತು ಬೇರೆ ರಾಷ್ಟ್ರಗಳಿಗೂ ವರ್ಗಾವಣೆ ಮಾಡುತ್ತಿದ್ದರು. ದುಬೈನಲ್ಲಿ ಇಂತಹ ವಂಚನೆ ಮಾಡುವ ಬಗ್ಗೆ ತರಬೇತಿ ನೀಡುವ ಕಾರ್ಯಾಗಾರ ಮಾಡುತ್ತಾರೆ ಎಂದು ಹೇಳಿದ್ದಾನೆ. ಈ ಪ್ರಕರಣ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಎಂಪಿ ಪುತ್ರನ ವಿರುದ್ಧ ದೂರು ದಾಖಲು

ಬೆಂಗಳೂರು, ನ.17- ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿ ಇದೀಗ ಮೋಸ ಮಾಡಿದ್ದಾನೆಂದು ಸಂಸದರೊಬ್ಬರ ಪುತ್ರನ ವಿರುದ್ಧ ನಗರದ ಯುವತಿಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೈಸೂರಿನ ಪಿಯು ಕಾಲೇಜಿನ ಉಪನ್ಯಾಸಕ, ಸಂಸದರೊಬ್ಬರ ಪುತ್ರ ರಂಗನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ವಿಜಯನಗರದ ನಿವಾಸಿ 24 ವರ್ಷದ ಯುವತಿಗೆ ರಂಗನಾಥ್ ಸ್ನೇಹಿತರ ಮೂಲಕ ಪರಿಚಯವಾಗಿದ್ದು, ಆಗಾಗ ಫೋನ್ ಮಾಡಿ ಮಾತನಾಡಿಸುತ್ತಿದ್ದನು.

ಸ್ವಲ್ಪ ದಿನಗಳ ನಂತರ ಯುವತಿಗೆ ರಂಗನಾಥ್ ಕರೆ ಮಾಡಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಾನು ಮೈಸೂರಿನ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ಕೈ ತುಂಬಾ ಸಂಬಳ ಬರುತ್ತದೆ ಎಂದು ಹೇಳಿದ್ದಾನೆ. ಅಲ್ಲದೆ, ನೀನು ನನ್ನನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿದ್ದರಿಂದ ಆ ಯುವತಿ ಸ್ನೇಹ ಮುಂದುವರೆಸಿದ್ದಾರೆ.

ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಕಳೆದ ಜ.23ರಂದು ರಂಗನಾಥ್ ಕರೆ ಮಾಡಿ, ಬೆಂಗಳೂರಿನಲ್ಲಿ ಕೆಲಸವಿದೆ, ನಾನು ಬರುತ್ತಿದ್ದೇನೆಂದು ಹೇಳಿ 24ರಂದು ಬಂದು ಕೊಡಿಗೇಹಳ್ಳಿಯ ಸ್ವಾತಿ ಹೊಟೇಲ್‍ಗೆ ಯುವತಿಯನ್ನು ಕರೆಸಿಕೊಂಡಿದ್ದಾನೆ. ನಂತರ ಅಲ್ಲಿಂದ ಮೈಸೂರಿಗೆ ಹೋಗಿ ಅಲ್ಲಿನ ಲಲಿತ ಮಹಲ್ ಪ್ಯಾಲೆಸ್ ಹೊಟೇಲ್‍ಗೆ ಕರೆದುಕೊಂಡು ಹೋಗಿ ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಇವತ್ತು ಇಲ್ಲಿಯೇ ಇದ್ದು, ಬೆಳಗ್ಗೆ ನಮ್ಮ ಮನೆಗೆ ಹೋಗೋಣವೆಂದು ನಂಬಿಸಿ ಹೊಟೇಲ್‍ನಲ್ಲೇ ಉಳಿಸಿಕೊಂಡಿದ್ದಾಗ ರಾತ್ರಿ ಮದ್ಯ ಸೇವಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿ ಮಾರನೆ ದಿನ ಬೆಳಗ್ಗೆ ನನ್ನನ್ನು ಬೆಂಗಳೂರಿಗೆ ಕಳುಹಿಸಿದ್ದಾನೆಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.

ನಂತರದ ದಿನಗಳಲ್ಲಿ ರಂಗನಾಥ್ ನನ್ನ ಜತೆ ಮೊದಲಿನ ಹಾಗೆ ಮಾತನಾಡದೆ ನಿರ್ಲಕ್ಷ್ಯ ಮಾಡಿ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾನೆ. ಮದುವೆಯಾಗುವಂತೆ ಕೇಳಿದಾಗ ಕೊಲೆ ಬೆದರಿಕೆ ಹಾಕಿರುತ್ತಾನೆಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.

ನೋಟಿಸ್: ಯುವತಿ ನೀಡಿರುವ ದೂರಿನನ್ವಯ ಬಸವನಗುಡಿ ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಅವರು ರಂಗನಾಥ್‍ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ದೂರಿನನ್ವಯ ಯುವತಿಗೆ ಸೂಕ್ತ ದಾಖಲೆಯೊಂದಿಗೆ ಠಾಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.

ಯುವತಿ ವಿರುದ್ಧ ದೂರು: ರಂಗನಾಥ್ ಸಹ ಯುವತಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿಯು ಸ್ನೇಹಿತರ ಮೂಲಕ ಪರಿಯಚವಾಗಿದ್ದು, ಆಕೆ ಜತೆ ನಾನು ಇರುವ ಫೋಟೋಗಳನ್ನು ನನ್ನ ಪತ್ನಿಗೆ ಕಳುಹಿಸಿ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿ, ಮಾನಸಿಕ ಹಿಂಸೆ ನೀಡಿರುತ್ತಾರೆ. ಪದೇ ಪದೇ ಕರೆ ಮಾಡಿ ಹಣಕ್ಕೆ ಬೇಡಿಕೆ ನೀಡಿದ್ದು, 32,500ರೂ. ಆಕೆ ಖಾತೆಗೆ ವರ್ಗಾವಣೆ ಮಾಡಿದ್ದೆನು.

ಯಾರೇ ಕಾನೂನು ಉಲ್ಲಂಘಿಸಿದರೂ ಕಠಿಣ ಕ್ರಮ: ಪರಮೇಶ್ವರ್

ನಂತರದ ದಿನಗಳಲ್ಲಿ 15 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದು, ಹಣ ನೀಡಲು ನಿರಾಕರಿಸಿದಾಗ ಕೊಲೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ರಂಗನಾಥ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಯುವತಿ ಹಾಗೂ ರಂಗನಾಥ್ ಪರಸ್ಪರ ದೂರು ದಾಖಲಿಸಿದ್ದು, ಈ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಯಾರೇ ಕಾನೂನು ಉಲ್ಲಂಘಿಸಿದರೂ ಕಠಿಣ ಕ್ರಮ: ಪರಮೇಶ್ವರ್

ಬೆಂಗಳೂರು, ನ.17- ಕಾನೂನನ್ನು ಯಾರೇ ಉಲ್ಲಂಘನೆ ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು. ಇದರಲ್ಲಿ ವ್ಯಕ್ತಿಗತ ದ್ವೇಷ ಅಥವಾ ರಾಜಕೀಯ ಕಾರಣಗಳಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಬಜರಂಗದಳದ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ ನೀಡಿರುವುದಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಇರುವುದೇ ಕಾನೂನು ಪರಿಪಾಲನೆ ಮಾಡಲಿಕ್ಕೆ.
ಕಾನೂನು ಮೀರಿದರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹೇಳಿದರು.

ಕಾನೂನನ್ನು ಹೊರತು ಪಡಿಸಿ ಪೊಲೀಸ್ ಇಲಾಖೆ ಕೆಲಸ ಮಾಡಲಾಗುವುದಿಲ್ಲ. ಬಜರಂಗದಳವಾಗಲಿ, ಸಂಘ ಸಂಸ್ಥೆಯಾಗಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಮ್ಮ ಸಹಕಾರ ಇರುತ್ತದೆ. ಕಾನೂನು ಮೀರಿದರೆ ಏನು ಮಾಡಬೇಕು. ಪೊಲೀಸ್ ಇಲಾಖೆ ಇರುವುದೇ ಕಾನೂನು ಪಾಲನೆಗೆ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಈ ಹಂತದಲ್ಲಿ ಯಾವುದೇ ವ್ಯಕ್ತಿಗತ ದ್ವೇಷ, ಮತ್ತೊಬ್ಬರನ್ನು ಹತ್ತಿಕ್ಕವ ಉದ್ದೇಶ ಅಥವಾ ರಾಜಕೀಯ ಕಾರಣಗಳು ಇರುವುದಿಲ್ಲ ಎಂದರು.

ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬ್ಲಾಕ್‍ಮೇಲ್‍ಗೆಲ್ಲ ಹೆದರುವುದಿಲ್ಲ: ಡಿಸಿಎಂ

ಬಜರಂಗದಳದವರು ಕಾನೂನು ವ್ಯಾಪ್ತಿಯಲ್ಲಿದ್ದರೆ ನಾವು ಅವರ ಜೊತೆಯಲ್ಲಿ ಇರುತ್ತೇವೆ. ಅವರು ಕಾನೂನು ಮೀರಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನಸಾಮಾನ್ಯರಿಗೆ ಭರವಸೆ ನೀಡಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್‍ಗೆ ಬರುವುದಾದರೆ ನನ್ನ ಅಭ್ಯಂತರ ಇಲ್ಲ. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತ ಮಾಡುತ್ತೇನೆ. ಈಗೀನ್ನೂ ಅವರು ಇನ್ನೂ ಬಿಜೆಪಿಯ ಮುಖಂಡರಾಗಿದ್ದಾರೆ. ಈ ಹಂತದಲ್ಲಿ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದರು.

ಸೋಮಣ್ಣ ವಿಷಯದಲ್ಲಿ ಏನಾಗುತ್ತಿದೆ ಎಂದು ಗೋತ್ತಿಲ್ಲ. ತುಮಕೂರು ಲೋಕಸಭೆ ಕ್ಷೇತ್ರಕ್ಕೆ ಅವರು ಅಭ್ಯರ್ಥಿ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅಧ್ಯಕ್ಷರ ಜೊತೆ ಚರ್ಚೆ ಮಾಡಿರಬಹುದು, ಆದರೆ ತಮಗೆ ಮಾಹಿತಿ ಇಲ್ಲ ಎಂದರು.

ರಾಜಕೀಯದಲ್ಲಿ ಎಲ್ಲರಿಗೂ ತಮ್ಮದೆ ಆದ ಶಕ್ತಿ ಇದೆ, ಹಿಂಬಾಲಕರಾಗಿರುತ್ತಾರೆ. ನಾಯಕರು ಬರುವುದರಿಂದ ಅದು ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು. ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್‍ಖಾನ್ ನೀಡಿರುವ ಹೇಳಿಕೆಯ ಬಗ್ಗೆ ತಮಗೆ ಮಾಹಿತಿ ಇಲ್ಲ. ಅವರ ಹೇಳಿಕೆಯನ್ನು ಗಮನಿಸಿಲ್ಲ, ಗೋತ್ತಿಲ್ಲದೆ ಪ್ರತಿಕ್ರಿಯಿಸಲ್ಲ. ವಿಷಯ ಗೋತ್ತಿಲ್ಲದೆ ಹೇಳಿಕೆ ನೀಡುವುದಿಲ್ಲ ಎಂದರು.

ಡಿಸಿಎಂ ಭೇಟಿ ರಾಜಕೀಯ ಬಣ್ಣ ಬೇಡ: ಜಿ.ಟಿ.ದೇವೇಗೌಡ

ಬೆಂಗಳೂರು,ನ.17- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು. ಲೋಕೋಭಿರಾಮವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಭೇಟಿಯಾಗಿರಲಿಲ್ಲ. ವಯಸ್ಸಾದ ಸಂದರ್ಭದಲ್ಲಿ ನೀವು ತಪ್ಪು ಮಾಡಿದ್ದೀರಿ ಅನಿಸುತ್ತೆ ಎಂದು ಶಿವಕುಮಾರ್ ಹೇಳಿದರು. ಆದರೆ ನಾನು ಜೆಡಿಎಸ್‍ನಲ್ಲೇ ಚೆನ್ನಾಗಿದ್ದೇನೆ ಎಂದು ಹೇಳಿದ್ದೇನೆ.

ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಜೆಡಿಎಸ್ ಬಿಜೆಪಿ ಜೊತೆ ಸದ್ಯಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದೇ ರೀತಿ ಮುಂದುವರೆಯಲಿದೆ ಎಂದು ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿ ಯವರನ್ನು ಪದೇ ಪದೇ ಆಕ್ಷೇಪಾರ್ಹವಾಗಿ ಮಾತನಾಡುವುದು ಸರಿಯಲ್ಲ. ನಾವು ಅದೇ ರೀತಿ ಅವರಿಗೆ ಹೇಳಿದರೆ ಸರಿಯಾಗುತ್ತದೆಯೇ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ಭೇಟಿಯಾಗಿರುವುದಕ್ಕೆ ಏಕೆ ಬೇರೆ ಅರ್ಥ ಕಲ್ಪಿಸಬೇಕು ಎಂದು ಪ್ರಶ್ನಿಸಿದರು. ಜಿ.ಟಿ.ದೇವೇಗೌಡರು ಶಾಸಕರಾಗಿದ್ದು, ಅವರು ಯಾವುದೋ ಕೆಲಸಕ್ಕೆ ಭೇಟಿಯಾಗಿರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಕುಟುಂಬದ ಒತ್ತಡಕ್ಕೆ ಮಣಿಯದೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿ: ಯತ್ನಾಳ್

ಬೆಂಗಳೂರು,ನ.17- ಯಾವುದೋ ಒಂದು ಕುಟುಂಬದ ಒತ್ತಡಕ್ಕೆ ಮಣಿಯದೆ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ವಿಪಕ್ಷ ನಾಯಕನ ಆಯ್ಕೆ ನಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಬ್ಲಾಕ್‍ಮೇಲ್ ಮಾಡಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ. ಅಂಥವರ ಬಗ್ಗೆ ಹೈಕಮಾಂಡ್ ಎಚ್ಚರಿಕೆ ಇಡಬೇಕು. ಬಿಜೆಪಿ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ. ಕಾರ್ಯಕರ್ತರೇ ಈ ಪಕ್ಷದ ಆಸ್ತಿ. ಹೀಗಾಗಿ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಉತ್ತರಕರ್ನಾಟಕ ಭಾಗಕ್ಕೆ ಪ್ರತಿ ಹಂತದಲ್ಲೂ ಅನ್ಯಾಯವಾಗಿದೆ. ಹೀಗಾಗಿ ನಮ್ಮ ಭಾಗಕ್ಕೆ ಕೊಟ್ಟರೆ ಪಕ್ಷದ ಬಲವರ್ಧನೆಗೆ ಸಹಾಯವಾಗಲಿದೆ. ಎಲ್ಲ ಭಾಗಕ್ಕೂ ಅವಕಾಶ ಕಲ್ಪಿಸಿರುವಾಗ ನಮ್ಮ ಭಾಗವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ನಾನು ಏನೇ ಮಾತನಾಡಿದರೂ ಅದು ವಿರೋಧವಾಗಬಹುದು. ಏನು ಹೇಳಬೇಕೋ ಅದನ್ನು ವೀಕ್ಷಕರಿಗೆ ಹೇಳಿದ್ದೇನೆ.

ಸ್ಥಳೀಯ ವಿಷಯಗಳು ದೆಹಲಿ ನಾಯಕರಿಗೆ ಗೊತ್ತಿರುವುದಿಲ್ಲ. ಇದೆಲ್ಲವನ್ನೂ ಗಮನಕ್ಕೆ ತಂದಿದ್ದೇನೆ. ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಮ್ಮ ಭಾಗಕ್ಕೆ ಅನ್ಯಾಯ ಮಾಡಿದರೆ ಅಲ್ಲಿನ ಜನ ಸುಮ್ಮನಿರುವುದಿಲ್ಲ. ಪಕ್ಷ ಬಲವರ್ಧನೆಯಾಗಬೇಕಾದರೆ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಲೇಬೇಕು. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.

ನನ್ನನ್ನು ನಿನ್ನೆ ಒಬ್ಬ ಏಜೆಂಟ್ ಖರೀದಿಸಲು ಬಂದಿದ್ದ.ನಾನು ಅಷ್ಟು ಸುಲಭವಾಗಿ ಖರೀದಿಯಾಗುವುದಿಲ್ಲ ಎಂದು ಅವನಿಗೆ ಗೊತ್ತಾಗಿ ಜಾಗ ಖಾಲಿ ಮಾಡಿದ ಎಂದು ಯತ್ನಾಳ್ ಹೇಳಿದರಾದರೂ ಆತನ ಹೆಸರನ್ನು ಬಹಿರಂಗಪಡಿಸಲಿಲ್ಲ.

ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬ್ಲಾಕ್‍ಮೇಲ್‍ಗೆಲ್ಲ ಹೆದರುವುದಿಲ್ಲ: ಡಿಸಿಎಂ

ಈ ಯತ್ನಾಳ್ ಯಾರಿಗೂ ಹೆದರುವವನೂ ಅಲ್ಲ, ಜಗ್ಗುವವನೂ ಅಲ್ಲ. ಇದನ್ನು ನಾನು ವೀಕ್ಷಕರ ಗಮನಕ್ಕೂ ತಂದಿದ್ದೇನೆ. ಅವರು ಕೂಡ ನೀವು ಯಾರಿಗೂ ಹೆದರುವುದಿಲ್ಲ ಎಂಬುದು ಗೊತ್ತಿದೆ ಎಂದರು. ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಿದರೆ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ವಿಧಾನಸಭೆ ಚುನಾವಣೆಯ ಫಲಿತಾಂಶವೇಶ ಸಾಕ್ಷಿ. ಎಲ್ಲದಕ್ಕೂ ನಾವು ಇನ್ನೊಬ್ಬರ ಮನೆ ಬಾಗಿಲಿಗೆ ಸಾರ್ ಸಾರ್ ಎಂದು ಹಿಂದೆ ಹೋಗಲು ಸಾಧ್ಯವೇ. ಪ್ರತಿಯೊಂದು ದಕ್ಷಿಣ ಕರ್ನಾಟಕಕ್ಕೆ ಕೊಟ್ಟರೆ ಉತ್ತರ ಕರ್ನಾಟಕದವರು ಏನು ಮಾಡಬೇಕೆಂದು ಪ್ರಶ್ನಿಸಿದರು.

ನಾನು ಹೆಚ್ಚು ಮಾತನಾಡುವುದಿಲ್ಲ. ವಿಪಕ್ಷ ನಾಯಕನ ಆಯ್ಕೆಯಾದ ಬಳಿಕ ಮಾತನಾಡುತ್ತೇನೆ ಎನ್ನುವ ಮೂಲಕ ಯತ್ನಾಳ್ ಕುತೂಹಲ ಕೆರಳಿಸಿದರು.

ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬ್ಲಾಕ್‍ಮೇಲ್‍ಗೆಲ್ಲ ಹೆದರುವುದಿಲ್ಲ: ಡಿಸಿಎಂ

ಬೆಂಗಳೂರು, ನ.17- ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಈ ಪೊಗರು, ಬ್ಲಾಕ್‍ಮೆಲ್‍ಗೆಲ್ಲಾ ಹೆದರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರ ಆರೋಪಗಳಿಗೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿ ದರು. ಅವರು ಏನೇನು ಕೇಳುತ್ತಾರೆ ಎಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ. ಅವರ ಮಾತುಗಳಿಗೆ, ಆಚಾರ ವಿಚಾರ ಎಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ. ಇನ್ನೂ ಬೇಕಾದರೂ ನಾವು ಉತ್ತರ ಕೊಡುತ್ತೇವೆ. ಪಟ್ಟಿ ಕೇಳುತ್ತಿದ್ದಾರೆ ಕೊಡೋಣ ಎಂದರು.

ಬೆಂಗಳೂರಿನಲ್ಲಿ ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಸಂಸ್ಥೆಯದು. ದಾಖಲೆ ಮಾಡಿ ಟೆಂಡರ್ ಹಾಕಿದ್ದರು. ಅದನ್ನು ನನ್ನ ಸ್ನೇಹಿತರು ತೆಗೆದುಕೊಂಡಿದ್ದರು. ನಾನು ಅವರಿಂದ ತೆಗೆದುಕೊಂಡು, ಸಹಭಾಗಿತ್ವದಲ್ಲಿ ಮಾಲ್ ಕಟ್ಟಿದ್ದೇನೆ. ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ಎಂದರು.

ಕೆಲಸಕ್ಕಿದ್ದ ಅಂಗಡಿಯಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರ ಬಂಧನ

ಹಿಂದೆ ಎಲ್ಲಾ ಪ್ರಯತ್ನಗಳಾಗಿವೆ. ಬಹುಶಃ ಕುಮಾರಸ್ವಾಮಿಯವರು ಮರೆತಿರಬಹುದು, ಅವರ ತಂದೆ 10-15 ವರ್ಷದ ಹಿಂದೆಯೇ ಜೈರಾಜ್ ಎಂಬ ಅಧಿಕಾರಿಗೆ ಹೇಳಿ ಖಾತೆ ನಿಲ್ಲಿಸಿದ್ದರು. ಏನು ತನಿಖೆ ಮಾಡಿಸಬೇಕೋ ಎಲ್ಲಾ ಮಾಡಿಸಿದ್ದಾರೆ. ಈಗಲೂ ಏನು ಬೇಕಾದರೂ ತನಿಖೆ ಮಾಡಿಸಿ. ನಾನೇನಾದರೂ ತಪ್ಪು ಮಾಡಿದ್ದರೆ ಗಲ್ಲಿಗೆ ಬೇಕಾದರೆ ಹಾಕಿ ಬಿಡಿ. ಅದಕ್ಕೆಲ್ಲಾ ನಾನು ರೆಡಿ ಇದ್ದೇನೆ. ಈ ಪೊಗರು, ಬ್ಲಾಕ್‍ಮೇಲ್‍ಗೆ ಹೆದರಲ್ಲ. ಸಾರ್ವಜನಿಕ ವ್ಯಕ್ತಿ ಯಾಗಿದ್ದೇನೆ. ಏನು ಬೇಕಾದರೂ ದಾಖಲೆ ಕೊಡುತ್ತೇನೆ ಎಂದರು.

ಮಾಲ್ ಕಟ್ಟಿದ್ದು ನಾನನ್ನಲ್ಲ ಜಾಯಿಂಟ್ ವೆಂಚರ್‍ನಲ್ಲಿ ಶೋಭಾ ಡೆವಲಪರ್ಸ್ ಕಟ್ಟಿದ್ದಾರೆ. ಅವರಿಗೆ ಹೇಳುತ್ತೇನೆ ಯಾವ ವಿದ್ಯುತ್ ಕದ್ದಿದ್ದಾರೆ ದಾಖಲೆ ಬಿಡುಗಡೆ ಮಾಡಿ ಎಂದು ಎಂದ ಅವರು, ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.