Home Blog Page 1812

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವಾನ ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ, ನ.17- ನಾಲ್ವರ ಹತ್ಯೆ ಪ್ರಕರಣದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬದ ಸದಸ್ಯರನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಹಾಗೂ ಮಹಿಳಾ-ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.

ಈ ವೇಳೆ ಕುಟುಂಬದ ಸದಸ್ಯರು ಸಚಿವರಿಗೆ ಮನವಿ ನೀಡಿ ಪ್ರಕರಣವನ್ನು ತ್ವರಿತ ನ್ಯಾಯಾಲಯದಿಂದ ವಿಚಾರಣೆ ನಡೆಸಬೇಕು, ಸರ್ಕಾರಿ ಅಭಿಯೋಜಕರನ್ನಾಗಿ ಶಿವಪ್ರಸಾದ್ ಆಳ್ವರನ್ನು ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಜನನಿಭೀಡ ಪ್ರದೇಶದಲ್ಲಿ ನಡೆದ ಹತ್ಯೆ ಪ್ರಕರಣ ಜನ ಸಾಮಾನ್ಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಆಘಾತಕ್ಕೆ ಒಳದ ಸ್ಥಳೀಯರು ಕುಟುಂಬದ ಸದಸ್ಯರ ಜೊತೆಗೆ ಬೆಂಬಲವಾಗಿ ನಿಂತರು. ಸಂತ್ರಸ್ಥರಿಗೆ ನೀರು, ಶರಬತ್ತು ನೀಡಿ ಸಂತೈಸಲಾಯಿತು. ಪರಸ್ಪರ ಸೌಹಾರ್ದತೆಯಿಂದ ಘಟನೆಯನ್ನು ಜನ ನಿಭಾಯಿಸಿದ್ದಾರೆ. ಹಿಂದುಗಳು ದೀಪಾವಳಿಯನ್ನು ಆಚರಿಸದೆ ಶೋಕಾಚರಣೆ ಮಾಡಿದ್ದಾರೆ ಎಂದು ಸಚಿವರಿಗೆ ಸ್ಥಳಿಯ ಮುಖಂಡರು ವಿವರಿಸಿದರು.

ಮುಖ್ಯಮಂತ್ರಿ ಕಚೇರಿಯಿಂದ ಅಧಿಕಾರಿಗಳು ಹಾಗೂ ಗೃಹಸಚಿವರು ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಈಗ ಸರ್ಕಾರದ ಪ್ರತಿನಿಧಿಯಾಗಿ ನೀವು ಬಂದಿದ್ದೀರಿ, ಸಮಾಧಾನವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಂತೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರ ನಿಮ್ಮ ಜೊತೆಗಿದೆ ಎಂದು ಕುಟುಂಬದ ಸದಸ್ಯರಿಗೆ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ ಜಿಲ್ಲೆ ಬೆಚ್ಚಿ ಬೀಳುವಂತಹ ಘಟನೆ ಆಗಿದೆ. ಕುಟುಂಬದ ನಾಲ್ಕು ಸದಸ್ಯರನ್ನು ಅಮಾನುಶವಾಗಿ ರಾಕ್ಷಸ ಪ್ರವೃತ್ತಿಯಿಂದ ಕೊಲೆ ಮಾಡಲಾಗಿದೆ. ಸರ್ಕಾರ ಕುಟುಂಬದವರ ಜೊತೆಯಲ್ಲಿದೆ. ಪೊಲೀಸರು 60 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕುಟುಂಬದ ಸದಸ್ಯರಿಗೆ ಆದಷ್ಟು ಬೇಗ ನ್ಯಾಯ ದೊರಕಿಸಲು ಸಾಧ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.

ಆರೋಪಿಯನ್ನು ನೋಡಿದರೆ ಸೈಕೋ ಥರಾ ಇದ್ದಾನೆ. ಮೊದಲನೇ ಮದುವೆಯಾಗಿದ್ದ ಆತನಿಗೆ ಎರಡು ಮಕ್ಕಳಿವೆ. ಸೈಕೋ ಕ್ಲಿಲರ್ ಥರಾ ಬಂದು 20 ನಿಮಿಷದಲ್ಲಿ ಕೊಲೆ ಮಾಡಿದ್ದಾನೆ ಎಂದರೆ ಆತನ ಮಾನಸಿಕ ಸ್ಥಿತಿ ಎಷ್ಟು ಕ್ರೋರವಾಗಿತ್ತು ಎಂದು ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಆರೋಪಿ ಕೊಲೆ ಮಾಡಿ ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿನ ನೀರಾವರಿ ಇಲಾಖೆಯ ಮಾಜಿ ಅಧಿಕಾರಿ ಮನೆಯಲ್ಲಿ ಅಡಗಿಕೊಂಡಿದ್ದ. ಕೃತ್ಯದ ಬಗ್ಗೆ ಆಶ್ರಯ ನೀಡಿದ ಮನೆಯವರಿಗೆ ತಿಳಿದಿರಲಿಲ್ಲ. ಆತನ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ ಎಂದು ಹೇಳಿದರು. ಪ್ರಕರಣವನ್ನು ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಸರ್ಕಾರಿ ಅಭಿಯೋಜಕರ ನೇಮಕ ಕುರಿತಂತೆ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ. ಸರ್ಕಾರ ಕಾನೂನಾತ್ಮಕ ನೆಲೆಯಲ್ಲಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.

ಮುಸ್ಲಿಂ ಖಾದರ್‌ಗೆ ಬಿಜೆಪಿಯ ದೊಡ್ಡ ನಾಯಕರು ನಮಸ್ಕರಿಸುತ್ತಾರೆ : ಸಚಿವ ಜಮೀರ್

ಉಡುಪಿ ಜಿಲ್ಲೆಯ ಜನ ಶಾಂತಿ ಪ್ರಿಯರು, ಜನವಸತಿ ಪ್ರದೇಶದಲ್ಲಿ ಘಟನೆ ನಡೆದಿರುವುದು ಆಘಾತ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇಂತಹದ್ದಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಅಳವಡಿಕೆ ಸೇರಿದಂತೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ, ಎಸ್‍ಪಿ ಅವರಿಗೆ ಸೂಚಿಸುತ್ತೇನೆ. ಘಟನೆಯಾದ ತಕ್ಷಣ ನಾನು ಸ್ಥಳಕ್ಕೆ ಬರಲಿಲ್ಲ ಎಂಬುದಕ್ಕೆ ಹೆಚ್ಚಿನ ಮಹತ್ವ ನೀಡಬಾರದು. ನಾನು ಅಂದು ಬೆಳಗಾವಿಯಲ್ಲಿ ಇದ್ದೆ, ಬೆಳಗಾವಿಯಿಂದ ಉಡುಪಿಗೆ ರೈಲು ಅಥವಾ ವಿಮಾನದ ಸೌಲಭ್ಯ ಇಲ್ಲ. ನಾನು ಎಲ್ಲೇ ಇದ್ದರೂ ಜಿಲ್ಲಾಡಳಿತ ಹಾಗೂ ಕುಟುಂಬದ ಸದಸ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಜವಾಬ್ದಾರಿ ನಿಭಾಯಿಸಿದ್ದೇನೆ. ನಿನ್ನೆ ಸಚಿವ ಸಂಪುಟ ಸಭೆ ಮುಗಿಸಿದ ಬಳಿಕ ಇಂದು ಇಲ್ಲಿಗೆ ಆಗಮಿಸಿದ್ದೇನೆ ಎಂದರು.

ಬಳಿಕ ಸಚಿವರು ಉಡುಪಿಯ ಗಂಗೊಳ್ಳಿಯ ಬಂದರಿನಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಆಕಸ್ಮಿಕ ನಡೆದಲ್ಲೇ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಚರ್ಚೆ ನಡೆಸಿದರು.

9 ಬೋಟ್‍ಗಳು, ಎರಡು ದೋಣಿಗಳು ಸಂಪೂರ್ಣ ಸುಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು. ಅಗ್ನಿ ದುರಂತದಿಂದ ಸುಮಾರು 13 ರಿಂದ 15 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಇನ್ನು 15 ದಿನಗಳಲ್ಲಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ

ಮುಂದೆ ಇಂತಹ ದುರ್ಘಟನೆ ಮರುಕಳಿಸಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ಬಂದರಿನಲ್ಲಿ ಅಗ್ನಿ ಶಾಮಕ ದಳ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಜಿಲ್ಲಾಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಮುಖಂಡರಾದ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

ಪ್ರೀತಿಸುತ್ತಿದ್ದ ಯುವತಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

ಹಾಸನ,ನ.17- ಪ್ರೀತಿಸುತ್ತಿದ್ದ ಯುವತಿಯನ್ನೇ ಕತ್ತು ಸೀಳಿ ಕ್ರೂರಿ ಪ್ರಿಯಕರ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರ ಹೊರವಲಯದ ಕುಂತಿಬೆಟ್ಟದಲ್ಲಿ ನಡೆದಿದೆ. ಸುಚಿತ್ರಾ(21)ಕೊಲೆಯಾದ ದುರ್ದೈವಿಯಾಗಿದ್ದು, ಶಂಕರನಹಳ್ಳಿ ಗ್ರಾಮ ನಿವಾಸಿ ಆರೋಪಿ ತೇಜಸ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಮೊಸಳೆ ಹೊಸಳ್ಳಿ ಬಳಿಯ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಾಗಿದ್ದಾಗ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಪದವಿ ಪೂರ್ಣಗೊಳಿಸಿದ ನಂತರ ಉದ್ಯೋಗ ಹುಡುಕುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗಿ ಸುಮಾರು 1 ತಿಂಗಳು ಪರಸ್ಪರ ಮಾತುಕತೆ ಬಿಟ್ಟಿದ್ದರು ,ಪ್ರೀತಿ ಬ್ರೇಕ್‍ಅಪ್ ಆಗಿತ್ತು ಮೊನ್ನೆ ಸುಚಿತ್ರಾಗೆ ಕರೆ ಮಾಡಿ ಮಾತನಾಡಬೇಕು ಬಾ ಎಂದು ಆರೋಪಿ ತೇಜಸ್ ಕರೆದಿದ್ದಾನೆ.

ಇಸ್ರೇಲ್-ಹಮಾಸ್ ಯುದ್ದದ ಸಾವು-ನೋವುಗಳಿಗೆ ಮೋದಿ ಖಂಡನೆ

ಗುರುವಾರ ಮುಂಜಾನೆ ಭೇಟಿಯಾದ ಇಬ್ಬರು ಮಾತುಕತೆ ನಡೆಸಿದ್ದಾರೆ, ನಂತರ ತೇಜಸ್ ಬಲವಂತ ಮಾಡಿ ಸುಚಿತ್ರಾಳನ್ನು ಕುಂತಿಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದಾನೆ .ಅಲ್ಲಿ ಮತ್ತೆ ಜಗಳ ನಡೆದು ಪೂರ್ವ ಯೋಜನೆಯಂತೆ ತನ್ನ ಜೊತೆ ತಂದಿದ್ದ ಚಾಕುವಿನಿಂದ ಗೆಳತಿಯನ್ನೇ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳದಲ್ಲಿ ಸಿಕ್ಕ ಮೊಬೈಲ್ ಆಧಾರದ ಮೇಲೆ ಆರೋಪಿಯನ್ನಿ ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ,ತನಿಖೆ ಮುಂದುವರೆದಿದೆ.

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಅಶೋಕ್-ಅಶ್ವತ್ಥ್ ಪೈಪೋಟಿ

ಬೆಂಗಳೂರು,ನ.17- ವಿಧಾನಸಭೆ ಚುನಾವಣೆ ಮುಗಿದು ಆರು ತಿಂಗಳ ಬಳಿಕ ವಿಧಾನಮಂಡಲದ ಉಭಯ ಸದನಗಳಿಗೆ ಪ್ರತಿಪಕ್ಷದ ನಾಯಕನ ಆಯ್ಕೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದು, ಅಂತಿಮವಾಗಿ ನಾಯಕ ಯಾರು ಎಂಬುದನ್ನು ಹೈಕಮಾಂಡ್ ಘೋಷಣೆ ಮಾಡಲಿದೆ.

ಖಾಸಗಿ ಹೋಟೆಲ್‍ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕೇಂದ್ರದಿಂದ ಚುನಾವಣಾವೀಕ್ಷಕರಾಗಿ ಆಗಮಿಸಿದ್ದ ಹಾಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್‍ಕುಮಾರ್ ಗೌತಮ್ ಅವರುಗಳು ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.

ವಿಧಾನಸಭೆ ಮತ್ತು ವಿಧಾನಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿರುವುದರಿಂದ ಶಾಸಕರ ಅಭಿಪ್ರಾಯವನ್ನು ಪಡೆದಿರುವ ವೀಕ್ಷಕರು ಪಕ್ಷದ ವರಿಷ್ಠರಿಗೆ ವರದಿ ನೀಡಿದ ಬಳಿಕ ಒಂದೆರಡು ದಿನಗಳಲ್ಲಿ ಅಂತಿಮ ಹೆಸರು ಘೋಷಣೆಯಾಗಲಿದೆ.

ಪ್ರತಿಪಕ್ಷದ ನಾಯಕನ ರೇಸ್‍ನಲ್ಲಿ ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಮತ್ತು ಹಾಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಆರ್.ಅಶೋಕ್ ಹೆಸರು ಮುಂಚೂಣಿಯಲ್ಲಿದೆ.
ಇದರ ಜೊತೆಗೆ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ, ಕಾರ್ಕಳದ ವಿ.ಸುನೀಲ್‍ಕುಮಾರ್, ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ, ವಿಜಾಪುರದ ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ಕೂಡ ಪ್ರಸ್ತಾಪವಾಗಿದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ವೀರಶೈವ ಲಿಂಗಾಯಿತ ಸಮುದಾಯಕ್ಕೆ ನೀಡಿರುವುದರಿಂದ ಒಕ್ಕಲಿಗ ಸಮುದಾಯಕ್ಕೆ ಪ್ರತಿಪಕ್ಷದ ನಾಯಕನ ಸ್ಥಾನ ಕೊಡಬೇಕೆಂಬ ಕೂಗು ಕೇಳಿಬಂದಿತ್ತು. ಮೂಲಗಳ ಪ್ರಕಾರ ಅಶೋಕ್‍ಗೆ ಕೆಲ ಹೆಚ್ಚಿನ ಶಾಸಕರು ಬೆಂಬಲವನ್ನು ಸೂಚಿಸಿದ್ದು, ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬೆಂಬಲವೂ ಸಿಕ್ಕಿದೆ ಎನ್ನಲಾಗುತ್ತಿದೆ.

ಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ

ಈ ಮೊದಲು ಪ್ರತಿಪಕ್ಷದ ನಾಯಕನ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲವೇ ಯತ್ನಾಳ್ ಅವರಿಗೆ ನೀಡುವ ಬಗ್ಗೆ ಚಿಂತನೆ ಇತ್ತು. ಆದರೆ ವಿಜಯೇಂದ್ರ ಬಿಜೆಪಿ ಸಾರಥ್ಯ ವಹಿಸಿದ ಮೇಲೆ ಈ ಇಬ್ಬರ ಹೆಸರುಗಳು ಪಟ್ಟಿಯಿಂದ ಹೊರಗುಳಿದವು.ಆರ್.ಅಶೋಕ್ ಪ್ರತಿಪಕ್ಷದ ನಾಯಕನಾದರೆ ಹಿಂದುಳಿದ ಸಮುದಾಯದ ವಿ.ಸುನೀಲ್‍ಕುಮಾರ್ ಉಪನಾಯಕನಾಗುವ ಸಂಭವವಿದೆ.

ಒಂದು ಹೈಕಮಾಂಡ್ ಕಳಿಸಿರುವ ಹೆಸರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಕಟಿಸುವುದು ಅಥವಾ ಎರಡನೆಯದ್ದಾಗಿ ಶಾಸಕರ ಅಭಿಪ್ರಾಯ ಆಲಿಸಿ ಹೈಕಮಾಂಡ್ ನಾಯಕರ ಜೊತೆ ಸಂಪರ್ಕ ಮಾಡಿ ಹೆಸರನ್ನು ಅಂತಿಮಗೊಳಿಸಿ ಶಾಸಕಾಂಗ ಪಕ್ಷದ ಸಭೆಯಲ್ಲೇ ಹೆಸರು ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದು ಸಾಧ್ಯವಾಗದಿದ್ದರೆ ವರಿಷ್ಠರೇ ಹೆಸರನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಡಾ.ಅಶ್ವತ್ಥನಾರಾಯಣ್ ನೇರ ಪ್ರತಿಪಕ್ಷ ಸ್ಥಾನ ಕೇಳದಿದ್ದರೂ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಯಾವ ಸ್ಥಾನ ಸಿಕ್ಕರೂ ನಿಭಾಯಿಸಲು ಸಿದ್ದವಾಗಿ ಕುಳಿತಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷರ ಆಯ್ಕೆ ಮುಗಿದಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಕ್ಷ ನಾಯಕ ಸ್ಥಾನವನ್ನು ನೇರವಾಗಿ ಕೇಳದಿದ್ದರೂ ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇನೆ. ಪ್ರತಿಪಕ್ಷ ನಾಯಕನ ಸ್ಥಾನ ನೀಡಿದರೂ ನಿರ್ವಹಿಸುವ ಅರ್ಹತೆ ನನಗಿದೆ ಎಂದು ತಮ್ಮ ಅಪೇಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಇನ್ನುಳಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಅಧಿವೇಶನದಲ್ಲಿಯೇ ಪ್ರತಿಪಕ್ಷ ನಾಯಕನ ರೀತಿಯಲ್ಲಿ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದರು, ಸದನದಲ್ಲಿ ಸಾಮಥ್ರ್ಯ ಪ್ರದರ್ಶಿಸಿ ಪ್ರತಿಪಕ್ಷ ನಾಯಕನ ಸ್ಥಾನದ ರೇಸ್‍ಗೆ ಬಂದಿದ್ದಾರೆ. ಹೈಕಮಾಂಡ್ ನಾಯಕರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.

ಇವರ ಜೊತೆ ಮಾಜಿ ಸಚಿವ ಸುನೀಲ್‍ಕುಮಾರ್ ಕೂಡ ರೇಸ್‍ನಲ್ಲಿದ್ದಾರೆ. ಹಿಂದುಳಿದ ವರ್ಗದ ನಾಯಕ, ಉತ್ತಮ ವಾಗ್ಮಿಯೂ ಆಗಿರುವ ಸುನೀಲ್‍ಕುಮಾರ್ ಯಾವ ಬಣದಲ್ಲಿಯೂ ಗುರುತಿಸಿಕೊಳ್ಳದೇ ಪಕ್ಷದ ಪರವಾಗಿ ದನಿ ಎತ್ತುತ್ತಾ ಬಂದಿದ್ದು, ಈ ಬಾರಿ ಪ್ರತಿಪಕ್ಷ ನಾಯಕನ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಆರ್.ಅಶೋಕ್‍ಗೆ ಅವಕಾಶ ನೀಡಿದರೆ ರಾಜ್ಯಾಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರ ನಡುವೆ ಸಮನ್ವಯತೆ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಅಶೋಕ್‍ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಹಾಗಂತ ಅಶ್ವತ್ಥನಾರಾಯಣ್ ಅವರನ್ನು ಕಡೆಗಣಿಸಲೂ ಸಾಧ್ಯವಿಲ್ಲ. ಡಿಸಿಎಂ ಡಿಕೆ.ಶಿವಕುಮಾರ್‍ಗೆ ಠಕ್ಕರ್ ಕೊಡುತ್ತಲೇ ಬಂದಿರುವ ಅಶ್ವತ್ಥನಾರಾಯಣ್‍ಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ ಎನ್ನುವುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ಪರಿಷತ್‍ಗೆ ಕೋಟಾ?:
ವಿಧಾನಪರಿಷತ್ ಪ್ರತಿಪಕ್ಷ ನಾಯಕರ ಸ್ಥಾನಕ್ಕೂ ಹೆಸರನ್ನು ಪ್ರಕಟಿಸಲಾಗುತ್ತದೆ. ಒಮ್ಮೆ ಪ್ರತಿಪಕ್ಷ ನಾಯಕರಾಗಿ ಸಭಾ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ಕೆಲಸ ಮಾಡಿರುವ ಹಿನ್ನೆಲೆ ಈ ಬಾರಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ಅಷ್ಟಾಗಿ ರಾಜಕೀಯ ಲೆಕ್ಕಾಚಾರ ಹಾಕುವುದಿಲ್ಲ, ಪಕ್ಷದ ಮೂಲಗಳ ಪ್ರಕಾರ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅಥವಾ ಮಹಿಳೆಗೆ ಅವಕಾಶ ನೀಡಲು ನಿರ್ಧರಿಸಿದರೆ ತೇಜಸ್ವಿನಿಗೌಡ ಅವರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ನಾಳೆ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸುವಂತೆ ಪಕ್ಷದ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಆಹ್ವಾನ ಕಳಿಸಿದ್ದು, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ನಿಕಟಪೂರ್ವ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಮುಸ್ಲಿಂ ಖಾದರ್‌ಗೆ ಬಿಜೆಪಿಯ ದೊಡ್ಡ ನಾಯಕರು ನಮಸ್ಕರಿಸುತ್ತಾರೆ : ಸಚಿವ ಜಮೀರ್

ಬೆಂಗಳೂರು,ನ.17-ತೆಲಂಗಾಣದಲ್ಲಿ ಚುನಾವಣಾ ಭಾಷಣದ ವೇಳೆ ಸಚಿವ ಜಮೀರ್ ಅಹಮದ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮುಸ್ಲಿಂ ಸ್ಪೀಕರ್ ಯು.ಟಿ.ಖಾದರ್‌ಗೆ ಈಗ ಬಿಜೆಪಿಯವರೂ ನಮಸ್ಕರಿಸುತ್ತಾರೆ ಎನ್ನುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿರುವ ಜಮೀರ್ ಅಹಮ್ಮದ್ ಖಾನ್, ಹೈದರಾಬಾದ್‍ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಜ್ಯ ಕಾಂಗ್ರೆಸ್‍ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳನ್ನು ಒತ್ತಿ ಹೇಳಿದ್ದಾರೆ.

ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿರಲಿಲ್ಲ. ಈಗ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೂಡಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ನಮಸ್ಕಾರ ಎನ್ನುತ್ತಾರೆ. ಇದನ್ನು ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಮುಸ್ಲಿಮರಲ್ಲಿ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರಲ್ಲಿ 5 ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನಗೆ 3 ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಪ್ ಆಗಿದ್ದಾರೆ. ನಸೀರ್ ಅಹ್ಮದ್ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ

ಕಳೆದ ಕೆಲ ದಿನಗಳ ಹಿಂದಷ್ಟೇ ಜಮೀರ್ ರಾಜಸ್ಥಾನದಲ್ಲಿ ಮಾತನಾಡುತ್ತಾ ಕರ್ನಾಟಕದಲ್ಲಿ ಕಾಂಗ್ರೆಸ್ ಮುಸ್ಲಿಂ ಮತಗಳಿಂದಲೇ ಅಧಿಕಾರಕ್ಕೆ ಬಂದಿದೆ ಎಂದಿದ್ದರು. ಈ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಕರ್ನಾಟಕದ ಮಸೀದಿಗಳಲ್ಲಿ ನಾವು ಸಭೆ ಮಾಡಿ ಒಗ್ಗಟ್ಟು ಪ್ರದರ್ಶನಕ್ಕೆ ಮನವಿ ಮಾಡಿದ್ದೆವು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಜಸ್ಥಾನದಲ್ಲೂ ಇದೇ ಸೂತ್ರ ಅನುಸರಿಸಿ ಎಂದು ಕರೆ ನೀಡಿದ್ದರು.

ಕಣಿವೆಯಲ್ಲಿ ಮುಂದುವರೆದ ಉಗ್ರ ಬೇಟೆ

ಮುಸ್ಲಿಮರಲ್ಲಿ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರಲ್ಲಿ 5 ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನಗೆ 3 ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಪ್ ಆಗಿದ್ದಾರೆ. ನಸೀರ್ ಅಹ್ಮದ್ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ ಎಂದು ಹೇಳಿದರು.

ಇಸ್ರೇಲ್-ಹಮಾಸ್ ಯುದ್ದದ ಸಾವು-ನೋವುಗಳಿಗೆ ಮೋದಿ ಖಂಡನೆ

ನವದೆಹಲಿ,ನ.17- ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸಂಭವಿಸಿರುವ ನಾಗರಿಕರ ಸಾವು-ನೋವುಗಳನ್ನು ಖಂಡಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಇಂದು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸುತ್ತಿರುವ ಜಾಗತಿಕ ದಕ್ಷಿಣದ ನಡುವೆ ಏಕತೆ ಮತ್ತು ಸಹಕಾರದ ತುರ್ತು ಅಗತ್ಯವಿದೆ ಎಂದಿದ್ದಾರೆ.

2ನೇ ವಾಯ್ಸ್ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಇ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಸೇರಿದಂತೆ ಹಿಂಸೆ ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ನಿಲುವನ್ನು ಒತ್ತಿ ಹೇಳಿದರು. ಸಂಘರ್ಷ ಪರಿಹಾರದ ಮೂಲಾಧಾರವಾಗಿ ಸಂಯಮ ಮತ್ತು ಸಂವಾದಕ್ಕೆ ಆದ್ಯತೆ ನೀಡುವ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ

ಪಶ್ಚಿಮ ಏಷ್ಯಾ ಪ್ರದೇಶದ ಘಟನೆಗಳಿಂದ ಹೊಸ ಸವಾಲುಗಳು ಹೊರಹೊಮ್ಮುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅಕ್ಟೋಬರ್ 7 ರಂದು ಇಸ್ರೇಲ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸಿದೆ. ಎಂದು ಪ್ರಧಾನಿ ಮೋದಿ ಹೇಳಿದರು. ನಾವು ಸಂಯಮವನ್ನೂ ಅನುಸರಿಸಿದ್ದೇವೆ. ನಾವು ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ.

ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ ನಂತರ, ನಾವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವನ್ನು ಸಹ ಕಳುಹಿಸಿದ್ದೇವೆ. ಜಾಗತಿಕ ದಕ್ಷಿಣದ ದೇಶಗಳು ಹೆಚ್ಚಿನ ಜಾಗತಿಕ ಒಳಿತಿಗಾಗಿ ಒಂದಾಗಬೇಕಾದ ಸಮಯ ಇದು ಎಂದು ಅವರು ಹೇಳಿದರು.

ಇಂದೋರ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಮತಕೇಂದ್ರ

ಅಕ್ಟೋಬರ್ 7 ರಂದು ಪ್ಯಾಲೇಸ್ಟಿನಿಯನ್ ಗುಂಪು ಹಮಾಸ್ ಸಂವೇದನಾಶೀಲ ಭೂ-ಸಮುದ್ರ-ವಾಯು ದಾಳಿಯನ್ನು ಪ್ರಾರಂಭಿಸಿದ ನಂತರ 1,200 ಕ್ಕೂ ಹೆಚ್ಚು ಇಸ್ರೇಲಿಗಳು, ಹೆಚ್ಚಾಗಿ ನಾಗರಿಕರು ಕೊಲ್ಲಲ್ಪಟ್ಟರು. ಪ್ರತೀಕಾರವಾಗಿ, ಇಸ್ರೇಲ್ ಗಾಜಾ ಪಟ್ಟಿಯನ್ನು – ಹಮಾಸ್ ಭದ್ರಕೋಟೆ – ವೈಮಾನಿಕ ದಾಳಿಯೊಂದಿಗೆ ಹೊಡೆದು 9,000 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು.

ಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ

ಬೆಂಗಳೂರು,ನ.17-ಸ್ಪೀಕರ್ ಸ್ಥಾನದ ಘನತೆಯನ್ನು ಹಾಳು ಮಾಡಿರುವ ವಸತಿ ಸಚಿವ ಜಮೀರ್ ಅಹಮ್ಮದ್ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಸ್ಥಾನ ಎನ್ನುವುದು ಅತ್ಯಂತ ಗೌರವ ಮತ್ತು ಸಾಂವಿಧಾನಿಕ ಹುದ್ದೆ. ಈ ಸ್ಥಾನವನ್ನು ಯಾರೊಬ್ಬರೂ ಜಾತಿ-ಧರ್ಮ ನೋಡಿ ಗೌರವ ಕೊಡುವುದಿಲ್ಲ. ಸ್ಥಾನಕ್ಕೆ ಗೌರವ ಕೊಡುತ್ತಾರೆ. ಜಮೀರ್ ಅಹಮ್ಮದ್ ಇದರಲ್ಲಿ ಕೂಡ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಸ್ಪೀಕರ್ ಕುರ್ಚಿಯಲ್ಲಿ ಯಾವ ಜಾತಿಯವರು ಇಲ್ಲವೇ ಯಾವ ಧರ್ಮದವರು ಕುಳಿತಿದ್ದಾರೆ ಎಂಬುದು ಮುಖ್ಯವಲ್ಲ. ಆ ಸ್ಥಾನಕ್ಕೆ ಯಾರೇ ಕುಳಿತರೂ ಸದಸ್ಯರು ಎದ್ದು ನಿಂತು ಗೌರವಿಸುವುದು ಶಿಷ್ಟಾಚಾರ. ಕೇವಲ ಮುಸ್ಲಿಂ ಎನ್ನುವ ಕಾರಣಕ್ಕೆ ಬಿಜೆಪಿಯವರು ಗೌರವ ಕೊಡುವುದಿಲ್ಲ. ಅವರೊಬ್ಬ ಗೌರವಾನ್ವಿತ ವಿಧಾನಸಭೆಯ ಸ್ಪೀಕರ್ ಇದನ್ನು ಸಚಿವ ಜಮೀರ್ ಅರ್ಥ ಮಾಡಿಕೊಳ್ಳಬೇಕೆಂದು ಟೀಕಿಸಿದರು.

ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಏರ್​ಶೋ

ಮತ ಗಳಿಸುವ ಒಂದೇ ಕಾರಣಕ್ಕಾಗಿ ಒಂದು ಸಮುದಾಯದ ಮತಗಳ ಧೃವೀಕರಣಕ್ಕಾಗಿ ಸ್ಪೀಕರ್ ಸ್ಥಾನವನ್ನೇ ದುರ್ಬಳಕೆ ಮಾಡಿಕೊಂಡಿರುವ ಜಮೀರ್ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿಯವರು ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸ್ಪೀಕರ್ ಸ್ಥಾನದ ಬಗ್ಗೆ ನಾಳೆ ಯಾರು ಏನೂ ಬೇಕಾದರೂ ಮಾತನಾಡುತ್ತಾರೆ. ಇದರ ಗೌರವ ಉಳಿಯಲಿದೆಯೇ ಎಂದು ಪ್ರಶ್ನೆ ಮಾಡಿದರು.
ಜಮೀರ್ ಯಾವಾಗಲು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸವನ್ನೇ ಮಾಡುತ್ತಿದ್ದಾರೆ. ಅವರಿಗೆ ಸಾಂವಿಧಾನಿಕ ಹುದ್ದೆ ಯಾವುದು, ಸ್ಪೀಕರ್ ಹುದ್ದೆ ಘನತೆಯೇ ಗೊತ್ತಿಲ್ಲ. ಇಂಥವರು ಸಂಪುಟದಲ್ಲಿ ಮುಂದುವರೆಯಲೂ ಬಾರದು.

ತಕ್ಷಣವೇ ರಾಜ್ಯದ ಜನತೆಯ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಚುನಾವಣೆ ಸಂದರ್ಭದಲ್ಲಿ ಮತ ಕೇಳುವುದು ಪ್ರತಿಯೊಬ್ಬರ ಹಕ್ಕು. ಹಾಗಂತ ಒಂದು ಸಮುದಾಯವನ್ನು ಓಲೈಕೆ ಮಾಡಿ ಮತ್ತೊಂದು ರಾಜಕೀಯ ಪಕ್ಷಕ್ಕೆ ಇಲ್ಲವೇ ಆ ಪಕ್ಷದ ಮುಖಂಡರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು. ಈ ಹಿಂದೆಯೇ ಇಂತಹ ಹೇಳಿಕೆಯನ್ನೇ ಕೊಟ್ಟಿದ್ದರು. ಈಗಲಾದರೂ ಎಚ್ಚೆತ್ತುಕೊಂಡು ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ರಿವಿಲ್ ಆಯ್ತು ಕಾಜೋಲ್ ಡೀಪ್‍ಫೇಕ್ ವಿಡಿಯೋ

ನವದೆಹಲಿ,ನ.17- ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಆಯ್ತು ಇದೀಗ ಬಾಲಿವುಡ್ ನಟಿ ಕಾಜೋಲ್ ಅವರ ದೀಪ್‍ಫೇಕ್ ವಿಡಿಯೋ ಮತ್ತು ಫೋಟೊಗಳು ಆನ್‍ಲೈನ್‍ನಲ್ಲಿ ಪ್ರಸಾರವಾಗತೊಡಗಿದೆ. ಕ್ಲಿಪ್‍ನಲ್ಲಿ ಕಾಜೋಲ್‍ನ ಮುಖವನ್ನು ತನ್ನ ದೇಹದ ಮೇಲೆ ಮಾರ್ಫ್ ಮಾಡಿದ ಮಹಿಳೆಯೊಬ್ಬರು ಕ್ಯಾಮೆರಾದಲ್ಲಿ ಬಟ್ಟೆ ಬದಲಾಯಿಸುತ್ತಿರುವುದನ್ನು ಕಾಣಬಹುದು.

ಆದಾಗ್ಯೂ, ಬೂಮ್‍ಲೈವ್‍ನಂತಹ ಹಲವಾರು ಸತ್ಯ-ಪರಿಶೀಲನಾ ಪ್ಲಾಟ್‍ಫಾರ್ಮ್‍ಗಳ ಪ್ರಕಾರ, ವೀಡಿಯೊವು ವಾಸ್ತವವಾಗಿ ಇಂಗ್ಲಿಷ್ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿಯಾಗಿದೆ, ಅವರು ಮೂಲತಃ ಕ್ಲಿಪ್ ಅನ್ನು ಗೆಟ್ ರೆಡಿ ವಿತ್ ಮಿ ಟ್ರೆಂಡ್‍ನ ಭಾಗವಾಗಿ ಟಿಕ್‍ಟಾಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡೀಪ್‍ಫೇಕ್ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಎಡಿಟ್ ಮಾಡಿದ ವೀಡಿಯೊದಲ್ಲಿ ಬಟ್ಟೆಗಳನ್ನು ಬದಲಾಯಿಸುವ ಮಹಿಳೆ ಸ್ವತಃ ಕುಚ್ ಕುಚ್ ಹೋತಾ ಹೈ ತಾರೆ ಎಂದು ನಂಬುವಂತೆ ಇದು ಹಲವಾರು ಬಳಕೆದಾರರನ್ನು ಮೋಸಗೊಳಿಸಿದೆ.

ಇಂದೋರ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಮತಕೇಂದ್ರ

ಆದಾಗ್ಯೂ, ಬೂಮ್‍ಲೈವ್ ಮತ್ತು ಇತರ ವೆಬ್‍ಸೈಟ್‍ಗಳು ಕೃತಕ ಬುದ್ಧಿಮತ್ತೆ ಉಪಕರಣಗಳನ್ನು ಬಳಸಿಕೊಂಡು ವೀಡಿಯೊವನ್ನು ಬದಲಾಯಿಸಲಾಗಿದೆ ಎಂದು ನಂಬಲಾಗಿದೆ. ಇದು ವೀಡಿಯೊಗಳು ಮತ್ತು ಚಿತ್ರಗಳಲ್ಲಿ ವ್ಯಕ್ತಿಯ ಮುಖವನ್ನು ಕುಶಲತೆಯಿಂದ ಮತ್ತು ಬದಲಾಯಿಸುವ ಸಾಮಥ್ರ್ಯವನ್ನು ಹೊಂದಿದೆ, ಇದು ಸಾಮಾನ್ಯವಾಗಿ ಫ್ಯಾಬ್ರಿಕೇಟೆಡ್ ವಿಷಯಕ್ಕೆ ಕಾರಣವಾಗುತ್ತದೆ.

ಆದರೆ ಈಗ ಆನ್‍ಲೈನ್‍ನಲ್ಲಿ ವೈರಲ್ ಆಗುತ್ತಿರುವ ಎಡಿಟ್ ಮಾಡಿದ ವೀಡಿಯೊದಲ್ಲಿ, ಬ್ರೀನ್ ಅವರ ಮುಖವನ್ನು ಕಾಜೋಲ್ ಅವರ ಮುಖಕ್ಕೆ ಬದಲಾಯಿಸಲಾಗಿದೆ ಮತ್ತು ನಟಿ ಬಟ್ಟೆಗಳನ್ನು ಬದಲಾಯಿಸುತ್ತಿರುವಂತೆ ಮತ್ತು ಕ್ಯಾಮೆರಾದಲ್ಲಿ ತನ್ನ ದೇಹವನ್ನು ತೋರಿಸುತ್ತಿರುವಂತೆ ಕಾಣುವಂತೆ ಮಾಡಲಾಗಿದೆ.

ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಏರ್​ಶೋ

ಅಹಮದಾಬಾದ್,ನ.17- ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನ.19ರಂದು ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ್ ವಿಮಾನ ವೈಮಾನಿಕ ಪ್ರದರ್ಶನ ನೀಡಲಿದೆ.

ಮೊಟೆರಾ ಪ್ರದೇಶದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಹತ್ತು ನಿಮಿಷಗಳ ಕಾಲ ಜನರನ್ನು ಆಕರ್ಷಿಸಲಿದೆ.
ಇಂದು ಮತ್ತು ಶನಿವಾರ ವೈಮಾನಿಕ ಪ್ರದರ್ಶನದ ತಾಲೀಮು ನಡೆಯಲಿದೆ ಎಂದು ಪಿಆರ್‍ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬುಧವಾರ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಈಗಾಗಲೇ ಏಕದಿನ ವಿಶ್ವಕಪ್ ಫೈನಲ್ ತಲುಪಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿರುವ ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್ ಪಂದ್ಯವನ್ನು ಆಡಲಿವೆ.

ಇಂದೋರ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಮತಕೇಂದ್ರ

ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಸಾಮಾನ್ಯವಾಗಿ ಒಂಬತ್ತು ವಿಮಾನಗಳನ್ನು ಒಳಗೊಂಡಿರುತ್ತದೆ ಮತ್ತು ಇದು ದೇಶಾದ್ಯಂತ ಹಲವಾರು ಏರ್ ಶೋಗಳನ್ನು ಪ್ರದರ್ಶಿಸಿದೆ. ವಿಜಯ ರಚನೆ, ಬ್ಯಾರೆಲ್ ರೋಲ್ ಕುಶಲತೆ ಮತ್ತು ಆಕಾಶದಲ್ಲಿ ವಿವಿಧ ಆಕಾರಗಳ ರಚನೆಯಲ್ಲಿ ಕುಣಿಕೆ ಕುಶಲತೆ ಅದರ ಪ್ರದರ್ಶನದ ವಿಶಿಷ್ಟ ಲಕ್ಷಣವಾಗಿದೆ.

ಕಣಿವೆಯಲ್ಲಿ ಮುಂದುವರೆದ ಉಗ್ರ ಬೇಟೆ

ಶ್ರೀನಗರ, ನ.17 (ಪಿಟಿಐ) – ಕಣಿವೆ ರಾಜ್ಯದಲ್ಲಿ ನಿನ್ನೆಯಿಂದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆಗಳು ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡುತ್ತಿವೆ.

ಕುಲ್ಗಾಮ್‍ನ ನೆಹಮಾ ಪ್ರದೇಶದ ಸಾಮ್ನೋದಲ್ಲಿ ರಾತ್ರಿಯಿಡೀ ವಿರಾಮದ ನಂತರ ಇಂದು ಮುಂಜಾನೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಲ್ಗಾಮ್‍ನ ನೆಹಮಾ ಗ್ರಾಮದಲ್ಲಿ ನಿನ್ನೆ ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದೋರ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಮತಕೇಂದ್ರ

ಭದ್ರತಾ ಸಿಬ್ಬಂದಿಯತ್ತ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ ಶೋಧ ಕಾರ್ಯಾಚರಣೆಯು ಗುಂಡಿನ ಚಕಮಕಿಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಭಯೋತ್ಪಾದಕರು ಸಿಕ್ಕಿಬಿದ್ದಿರುವ ಪ್ರದೇಶದ ಸುತ್ತಲೂ ಭದ್ರತಾ ಪಡೆಗಳು ಬಿಗಿಯಾದ ಬಂದೋಬಸ್ತ್ ಅನ್ನು ನಿರ್ವಹಿಸುತ್ತಿದ್ದರೆ, ರಾತ್ರಿಯಿಡೀ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಯಾವುದೇ ವರದಿ ಬಂದಿಲ್ಲ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಷ್ಕರ್-ಎ-ತೊಯ್ಬಾದ ಮೂವರು ಭಯೋತ್ಪಾದಕರು – ಇಬ್ಬರು ಸ್ಥಳೀಯರು ಮತ್ತು ಒಬ್ಬ ವಿದೇಶಿ ಉಗ್ರ ಸುತ್ತುವರಿದ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಅಧಿಕಾರಿಗಳು ಅದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ನಿರಾಕರಿಸಿದರು.

ಇಂದೋರ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಮತಕೇಂದ್ರ

ಇಂದೋರ್, ನ. 17 (ಪಿಟಿಐ) ಮಧ್ಯಪ್ರದೇಶದ ಇಂದೋರ್‌ನಲ್ಲಿ ಕೃತಕ ಬುದ್ಧಿಮತ್ತೆ ಹೊಂದಿದ ಕ್ಯಾಮೆರಾದ ಸಹಾಯದಿಂದ ಜನರು ಸರತಿ ಸಾಲಿನಲ್ಲಿ ನಿಂತು ಇಂಕ್ಡ್ ಫಿಂಗರ್ ಸೆಲ್ಫಿ ತೆಗೆದುಕೊಳ್ಳದೆಯೇ ಮತ ಚಲಾಯಿಸಲು ಸ್ಮಾರ್ಟ್ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಇಂದೋರ್ ವಿಧಾನಸಭಾ ಕ್ಷೇತ್ರ ಸಂಖ್ಯೆ 2 ರ ನಂದಾ ನಗರದ ಮಾ ಕನಕೇಶ್ವರಿ ದೇವಿ ಸರ್ಕಾರಿ ಕಾಲೇಜಿನಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸ್ಮಾರ್ಟ್ ಪೋಲಿಂಗ್ ಸ್ಟೇಷನ್ ಕ್ಯೂ-ಕಡಿಮೆ ಇರಿಸಲು, ನಾವು ಆನ್‍ಲೈನ್ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ. ಮತದಾನಕ್ಕೆ ಆಗಮಿಸುವ ಜನರಿಗೆ ಟೋಕನ್ ಸಂಖ್ಯೆಗಳನ್ನು ನೀಡಲಾಗುವುದು ಮತ್ತು ಅವರು ತಮ್ಮ ಸರದಿ ಬರುವವರೆಗೆ ಆರಾಮವಾಗಿ ಮತದಾನ ಕೇಂದ್ರದಲ್ಲಿ ಕುಳಿತುಕೊಳ್ಳಬಹುದು ಎಂದು ಇಂದೋರ್ ಸ್ಮಾರ್ಟ್ ಸಿಟಿ ಡೆವಲಪ್‍ಮೆಂಟ್ ಲಿಮಿಟೆಡ್‍ನ ಸಹಾಯಕ ಯೋಜಕ ರೂಪಲ್ ಚೋಪ್ರಾ ಪಿಟಿಐಗೆ ತಿಳಿಸಿದರು.

ವಾಮಾಚಾರ ಶಂಕೆಯಲ್ಲಿ ದಂಪತಿ ಕೊಂದಿದ್ದ 17 ಮಂದಿಗೆ ಜೀವಾವಧಿ ಶಿಕ್ಷೆ

ಮತಗಟ್ಟೆಯಲ್ಲಿ ಡಿಜಿಟಲ್ ಸೆಲ್ಫಿ ಪಾಯಿಂಟ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ, ಅಲ್ಲಿ ಎಐ-ಸಜ್ಜಿತ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮತದಾನದ ನಂತರ, ಒಬ್ಬ ವ್ಯಕ್ತಿಯು ಈ ಸ್ಥಳದಲ್ಲಿ ನಿಂತು, ಅಳಿಸಲಾಗದ ಶಾಯಿಯನ್ನು ಹೊಂದಿರುವ ತನ್ನ ಬೆರಳನ್ನು ಕ್ಯಾಮರಾಗೆ ತೋರಿಸಿದರೆ, ತಕ್ಷಣವೇ ಸೆಲ್ಫಿ ಕ್ಲಿಕ್ ಮಾಡಲಾಗುವುದು, ಎಂದು ಅವರು ಹೇಳಿದರು.

ಸೆಲ್ಫಿ ಪಾಯಿಂಟ್‍ನಲ್ಲಿ ಪರದೆಯ ಮೇಲೆ ಬಾರ್ ಕೋಡ್ ಕಾಣಿಸಿಕೊಳ್ಳುತ್ತದೆ ಮತ್ತು ಅದನ್ನು ಸ್ಕ್ಯಾನ್ ಮಾಡುವುದರಿಂದ ಛಾಯಾಚಿತ್ರವು ಮತದಾರರ ಮೊಬೈಲ್ ಫೋನ್‍ಗೆ ರವಾನೆಯಾಗುವುದನ್ನು ಖಚಿತಪಡಿಸುತ್ತದೆ, ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಹುದು ಎಂದು ಅಧಿಕಾರಿ ವಿವರಿಸಿದರು.

ಇಂದೋರ್ (ನಗರ) ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಒಟ್ಟು 15.55 ಲಕ್ಷ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಡಿಸೆಂಬರ್ 3 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.