Home Blog Page 1843

ಝೀಕಾ ವೈರಸ್ ಗೈಡ್‍ಲೈನ್ಸ್ ಪಾಲಿಸುವಂತೆ ಆರೋಗ್ಯ ಇಲಾಖೆ ಕರೆ

ಬೆಂಗಳೂರು,ನ.3- ಝೀಕಾ ವೈರಸ್‍ನಿಂದ ಪಾರಾಗಲು ಜನ ಕೆಲ ಗೈಡ್‍ಲೈನ್ಸ್‍ಗಳನ್ನು ಫಾಲೋ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ. ವೈರಸ್ ಬಗ್ಗೆ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಎದುರಾಗುವ ಸಾಧ್ಯತೆ ಇರುವುದರಿಂದ ಜನ ರೋಗ ಲಕ್ಷಣ ಕಂಡು ಬಂದ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಯೇಳುವುದು ಹಾಗೂ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸೋಂಕಿನ ಲಕ್ಷಣವಾಗಿದ್ದು, ಇಂತಹ ಲಕ್ಷಣಗಳು ಕಾಣಿಸಿಕೊಂಡವರು ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಲಾಗಿದೆ.

ಝೀಕಾ ವೈರಸ್ ತಡೆಗಟ್ಟಲು ನೀರು ಶೇಖರಣಾ ಪರಿಕರಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು ಮತ್ತು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ದರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಎಂದು ಸಲಹೆ ನೀಡಲಾಗಿದೆ.

ಮೂವರು ಮುಖ್ಯನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕ ಮಾಡಲು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.

ಆಹಾರ ಕ್ಷೇತ್ರಕ್ಕೆ ಹರಿದುಬಂದಿದೆ 50 ಸಾವಿರ ಕೋಟಿ ಎಫ್‍ಡಿಐ : ಮೋದಿ

ನವದೆಹಲಿ, ನ.3 (ಪಿಟಿಐ) ಭಾರತದ ಆಹಾರ ಸಂಸ್ಕರಣಾ ಕ್ಷೇತ್ರವು ಸೂರ್ಯೋದಯ ಉದ್ಯಮವಾಗಿ ಹೊರಹೊಮ್ಮಿದೆ ಮತ್ತು ಕಳೆದ ಒಂಬತ್ತು ವರ್ಷಗಳಲ್ಲಿ 50,000 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್‍ಡಿಐ) ಆಕರ್ಷಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆದ ವಲ್ಡರ್ ಫುಡ್ ಇಂಡಿಯಾದ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಮೂರು ದಿನಗಳ ಈ ಕಾರ್ಯಕ್ರಮ ನ.5 ರಂದು ಮುಕ್ತಾಯಗೊಳ್ಳಲಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ಆಹಾರ ಸಂಸ್ಕರಣಾ ವಲಯಕ್ಕೆ 50,000 ಕೋಟಿ ರೂಪಾಯಿಗಳ ಎಫ್‍ಡಿಐ ಬಂದಿದೆ. ಇದು ಸರ್ಕಾರದ ಕೈಗಾರಿಕೆ ಮತ್ತು ರೈತರ ಪರವಾದ ನೀತಿಗಳ ಪರಿಣಾಮವಾಗಿದೆ ಎಂದು ಮೋದಿ ಹೇಳಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ಸಂಸ್ಕರಿಸಿದ ಆಹಾರದ ರಫ್ತು ಶೇ. 150 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ಸಂಸ್ಕರಣಾ ಸಾಮಥ್ರ್ಯವು ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿಗಳು ಒಂದು ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಬೀಜ ಬಂಡವಾಳ ಸಹಾಯವನ್ನು ವಿತರಿಸಿದರು ಮತ್ತು ವಿಶ್ವ ಆಹಾರ ಭಾರತ 2023 ಭಾಗವಾಗಿ ಆಹಾರ ಬೀದಿಯನ್ನು ಉದ್ಘಾಟಿಸಿದರು.

ವೈಯಕ್ತಿಕ ಮೈಲಿಗಲ್ಲಿಗೆ ಆದ್ಯತೆ ನೀಡಲ್ಲ : ಶ್ರೇಯಸ್ ಆಯ್ಯರ್

ಈ ಕಾರ್ಯಕ್ರಮ ಭಾರತವನ್ನು ವಿಶ್ವದ ಆಹಾರದ ಬುಟ್ಟಿ ಎಂದು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಮತ್ತು 2023 ಅನ್ನು ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ಆಚರಿಸುತ್ತದೆ. ಮೊದಲ ಆವೃತ್ತಿಯನ್ನು 2017 ರಲ್ಲಿ ನಡೆಸಲಾಯಿತು, ಆದರೆ ಸತತ ವರ್ಷಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲಾಗಲಿಲ್ಲ.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪಶುಪತಿ ಕುಮಾರ್ ಪಾರಸ್ ಅವರು ವಿದೇಶಿ ಹೂಡಿಕೆದಾರರು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿಕೊಂಡರು.

ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದಾಗ ಸಿಕ್ಕಿಬಿದ್ದ 96 ಸಾವಿರ ಭಾರತೀಯರು

ವಾಷಿಂಗ್ಟನ್, ನ. 3 (ಪಿಟಿಐ) ಕಳೆದ ಒಂದು ವರ್ಷದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ 96 ಸಾವಿರ ಭಾರತೀಯರನ್ನ ಬಂಧಿಸಲಾಗಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ದತ್ತಾಂಶದಲ್ಲಿ ಬಹಿರಂಗಗೊಂಡಿದೆ. ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಸಿಬಿಪಿ) ದತ್ತಾಂಶದ ಪ್ರಕಾರ 2022 ರ ಅಕ್ಟೋಬರ್ ಮತ್ತು 2023 ರ ಸೆಪ್ಟೆಂಬರ್‍ವರೆಗೆ ದಾಖಲೆಯ 96,917 ಭಾರತೀಯರನ್ನು ಅಕ್ರಮವಾಗಿ ಯುಎಸ್‍ಗೆ ದಾಟುವಾಗ ಬಂಧಿಸಲಾಗಿದೆಯಂತೆ.

ಕಾನೂನುಬಾಹಿರವಾಗಿ ಯುಎಸ್ ಗಡಿಯನ್ನು ದಾಟುತ್ತಿದ್ದಾಗ ಬಂಧಿತರಾದ ಭಾರತೀಯರು ಕಳೆದ ವರ್ಷಗಳಲ್ಲಿ ಐದು ಪಟ್ಟು ಹೆಚ್ಚಳವನ್ನು ಕಂಡಿದೆ ಎಂದು ವರದಿಯಾಗಿದೆ. 2019-20ರಲ್ಲಿ 19,883 ಭಾರತೀಯರನ್ನು ಬಂಧಿಸಲಾಗಿದೆ. 2020-21ರಲ್ಲಿ 30,662 ಭಾರತೀಯರನ್ನು ಬಂಧಿಸಲಾಗಿದ್ದು, 2021-22ರಲ್ಲಿ ಈ ಸಂಖ್ಯೆ 63,927 ಆಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.

ಹಿಂದೂ ದೇವರುಗಳ ಆಶ್ಲೀಲ ಚಿತ್ರ ಮಾರಾಟ ಮಾಡುತ್ತಿದ್ದವನ ಬಂಧನ

ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ 30,010 ಕೆನಡಾದ ಗಡಿಯಲ್ಲಿ ಮತ್ತು 41,770 ಮೆಕ್ಸಿಕೊ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ನಾಲ್ಕು ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ – ಜೊತೆಗಿರುವ ಅಪ್ರಾಪ್ತ ವಯಸ್ಕರು, ಕುಟುಂಬ ಘಟಕದಲ್ಲಿರುವ ವ್ಯಕ್ತಿಗಳು, ಒಂಟಿ ವಯಸ್ಕರು ಮತ್ತು ಜೊತೆಯಲ್ಲಿಲ್ಲದ ಮಕ್ಕಳು ಎಂದು ಗುರುತಿಸಲಾಗಿದೆ.

ಒಂಟಿ ವಯಸ್ಕರು ದೊಡ್ಡ ವರ್ಗವನ್ನು ಮಾಡುತ್ತಾರೆ. 2023 ರ ಆರ್ಥಿಕ ವರ್ಷದಲ್ಲಿ, 84,000 ಭಾರತೀಯ ವಯಸ್ಕರು ಅಕ್ರಮವಾಗಿ ಯುಎಸ್ ಅನ್ನು ದಾಟಿದ್ದಾರೆ. ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ.

ಬಂಡೆಗೆ ಉಂಡೆ ನಾಮ ಗ್ಯಾರಂಟಿ : ಯತ್ನಾಳ್ ವ್ಯಂಗ್ಯ

ಬೆಂಗಳೂರು,ನ.3- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಉಂಡೆನಾಮ ಗ್ಯಾರಂಟಿ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಫೋಸ್ಟ್ ಮಾಡಿರುವ ಅವರು, ನಾನೇ ಮುಖ್ಯಮಂತ್ರಿ, ನಾನೇ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇದು ಸ್ವಾಗತಾರ್ಹ! ಏನಂತಾರೆ ನಿಮ್ಮ ಹೀರೊ ಈಗ? ಎಂದು ವ್ಯಂಗ್ಯಭರಿತವಾಗಿ ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಚುಂಬಿಸಿ ಪರಾರಿಯಾದ ಕಿಡಿಗೇಡಿಗಳು

ಸಿದ್ದರಾಮಯ್ಯನವರ ಈ ಮಾತಿಗೆ ಬಂಡೆ ಅಲುಗಾಡಲಿಲ್ಲವಾ? ಬಂಡೆಗೆ ಉಂಡೆ ನಾಮ ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಡಿಎಂಕೆ ಸಚಿವ ವೇಲು ಮನೆ ಮೇಲೆ ಐಟಿ ದಾಳಿ

ಚೆನ್ನೈ,ನ.3- ಆಡಳಿತಾರೂಢ ಡಿಎಂಕೆಯ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಇ.ವಿ.ವೇಲು ಅವರಿಗೆ ಸೇರಿದ ನಿವಾಸ ಮತ್ತು ಶಿಕ್ಷಣ ಸಂಸ್ಥೆ ಸೇರಿದಂತೆ ರಾಜ್ಯಾದ್ಯಂತ ನಲವತ್ತು ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚೆನ್ನೈ, ತಿರುವನ್ನಮಲೈ, ಕೊಯಮತ್ತೂರು ಸೇರಿದಂತೆ ಒಟ್ಟು ರಾಜ್ಯದ 40 ಕಡೆ ವೇಲು ಅವರ ನಿವಾಸ, ಕಚೇರಿ, ಶಿಕ್ಷಣ ಸಂಸ್ಥೆಗಳು, ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ಡಿಎಂಕೆಯಲ್ಲಿ ಅತ್ಯಂತ ಪ್ರಭಾವಿ ನಾಯಕನಾಗಿರುವ ವೇಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‍ರವರ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಎನಿಸಿದ ಲೋಕೋಪಯೋಗಿ ಖಾತೆಯ ಸಚಿವರಾಗಿದ್ದಾರೆ.

ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಚುಂಬಿಸಿ ಪರಾರಿಯಾದ ಕಿಡಿಗೇಡಿಗಳು

ತಿರುವನ್ನಮಲೈಯಲ್ಲಿ ಅವರ ಒಡೆತನಕ್ಕೆ ಸೇರಿದ ಇಂಜಿನಿಯರಿಂಗ್ ಕಾಲೇಜು ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತೆರಿಗೆ ವಂಚನೆ ಸಂಬಂಧ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ ಕಾಲೇಜುಗಳ ಮೇಲೂ ದಾಳಿ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲೇ ಇದು ಅತಿದೊಡ್ಡ ದಾಳಿ ಎನಿಸಿದೆ.

ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿರುವ ಇ.ವಿ.ವೇಲು ಅವರು ಹಲವಾರು ವರ್ಷಗಳಿಂದ ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚನೆ ಮಾಡಿದ್ದಾರೆ ಎಂಬ ಆರೋಪವಿದೆ. ಕಳೆದವಾರವಷ್ಟೇ ಐಟಿ ಅಧಿಕಾರಿಗಳು ಡಿಎಂಕೆಯ ಮತ್ತೊಬ್ಬ ನಾಯಕ ಜಗತ್‍ರಕ್ಷನ್ ಎಂಬುವರ ಮನೆ ಮೇಲೂ ದಾಳಿ ನಡೆಸಿತ್ತು.

ಕಾಂತರಾಜು ವರದಿ ತಿರಸ್ಕಾರಕ್ಕೆ ಒತ್ತಾಯ

ಬೆಂಗಳೂರು, ನ.3- ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ಅನುಷ್ಠಾನಗೊಳಿಸಬಾರದು. ಒಂದು ವೇಳೆ ಸಮೀಕ್ಷೆಯ ಅಗತ್ಯವಿದ್ದರೆ ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಒಕ್ಕಲಿಗರ ಸಮುದಾಯ ಮಾಡಿದೆ.

ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಚಿಂತನ-ಮಂಥನ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸುದೀರ್ಘ ಚರ್ಚೆ ನಡೆಸಿ ಕಾಂತರಾಜು ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನಿಸಲಾಗಿದೆ.ವರದಿಯೂ ಅವೈಜ್ಞಾನಿಕವಾಗಿದ್ದು, ದೋಷ ಪೂರಿತವಾಗಿದೆ. ವರದಿ ಅನುಷ್ಠಾನವಾದರೆ ಕೇವಲ ಒಕ್ಕಲಿಗ ಸಮುದಾಯ ಅಷ್ಟೇ ಅಲ್ಲ, ಇತರೆ ಸಮುದಾಯಗಳಿಗೂ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಸಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅಲ್ಲದೆ, ಮೀಸಲಾತಿಯಿಂದ ಸಮುದಾಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂಘ- ಸಂಸ್ಥೆಗಳ ಜತೆಗೂಡಿ ಪಕ್ಷಾತೀತವಾಗಿ ಒಟ್ಟಾಗಿ ಒಕ್ಕಲಿಗ ಸಮುದಾಯದ ಹಿತರಕ್ಷಣೆಗೆ ಶ್ರಮಿಸಲು ನಿರ್ಧರಿಸಲಾಗಿದೆ.

ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಚುಂಬಿಸಿ ಪರಾರಿಯಾದ ಕಿಡಿಗೇಡಿಗಳು

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ ಅವರು ಕಾಂತರಾಜು ಅಧ್ಯಕ್ಷರಾಗಿದ್ದ ಅವಯಲ್ಲಿ ತಯಾರಿಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯೂ ದೋಷಪೂರಿತವಾಗಿದೆ. ಈ ವರದಿಯನ್ನು ಸರ್ಕಾರ ಸ್ವೀಕರಿಸಬಾರದು, ಸ್ವೀಕರಿಸಿದರೂ ಅನುಷ್ಠಾನಗೊಳಿಸಬಾರದು. 8 ವರ್ಷಗಳ ಹಿಂದೆ ತಯಾರಿಸಿದ ವರದಿ ಅವೈಜ್ಞಾನಿಕವಾಗಿದೆ. ಒಂದು ವೇಳೆ ವರದಿ ಅನುಷ್ಠಾನಗೊಳಿಸಬೇಕೆಂದಾದರೆ, ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ಪಡೆಯಲಿ. ಅಲ್ಲದೆ, ಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕು. ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸೌಜನ್ಯವಾಗಿ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಶ್ರೀ ನಂಜಾವಧೂತ ಸ್ವಾಮೀಜಿ ಅವರು ಮಾತನಾಡಿ, ಕಾಂತರಾಜು ವರದಿ ಅವೈಜ್ಞಾನಿಕವಾಗಿದ್ದು, ಅದನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು. ಒಕ್ಕಲಿಗ ಸಮುದಾಯಕ್ಕಿರುವ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.16ಕ್ಕೆ ಹೆಚ್ಚಿಸಬೇಕು. ಹಿಂದಿನ ಸರ್ಕಾರದ ಅವಯಲ್ಲಿ ಪರಿಷ್ಕರಿಸಲಾಗಿದ್ದ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡು ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಎಸ್.ಟಿ.ಸೋಮಶೇಖರ್, ಆರಗಜ್ಞಾನೇಂದ್ರ, ಶಾಸಕರಾದ ರವಿಕುಮಾರ( ಗಣಿಗ), ಶರತ್ ಬಚ್ಚೇಗೌಡ, ಡಾ.ರಂಗನಾಥ, ಡಾ.ಮಂತರ್ ಗೌಡ, ಹೆಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಅ.ದೇವೇಗೌಡ, ದಿನೇಶ್ ಗೂಳಿಗೌಡ, ವೈ.ಎ.ನಾರಾಯಣಸ್ವಾಮಿ, ಕೆ.ಗೋವಿಂದರಾಜು,

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡರು, ಉಪಾಧ್ಯಕ್ಷರಾದ ಸಿ.ದೇವರಾಜು, ಎಲ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಜಯಮುತ್ತು, ಸಹಾಯಕ ಕಾರ್ಯದರ್ಶಿ ವೆಂಕಟರಾಮೇಗೌಡರು, ಖಜಾಂಚಿ ಸಿ.ಎಂ.ಮಾರೇಗೌಡರು ಸೇರಿದಂತೆ ಸಂಘದ ನಿರ್ದೇಶಕರು, ಗಣ್ಯರು ಚಿಂತನ-ಮಂಥನ ಸಭೆಯಲ್ಲಿ ಭಾಗವಹಿಸಿದ್ದರು.

ಹೀನಾಯ ಸ್ಥಿತಿಗೆ ತಲುಪಿದ ದೆಹಲಿಗಾಳಿ ಗುಣಮಟ್ಟ, ಜೀವನ ದುಸ್ತರ

ನವದೆಹಲಿ,ನ.3- ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 346 ಎಕ್ಯೂಐಗೆ ಕುಸಿದಿದೆ. ಅಲ್ಲಿ ಜೀವನ ಸಾಗಿಸುವುದೇ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯ ಲೋ ರಸ್ತೆ, ಜಹಾಂಗೀರ್‍ಪುರಿ, ಆರ್‍ಕೆ ಪುರಂ ಮತ್ತು ಐಜಿಐ ಏರ್‍ಪೆಪೋರ್ಟ್ (ಟಿ3) ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿದಿದ್ದು, ಎಕ್ಯೂಐ ರೀಡಿಂಗ್‍ಗಳು ಕ್ರಮವಾಗಿ 438, 491, 486 ಮತ್ತು 473ಗಳಾಗಿದೆ.

ದೆಹಲಿಯ ಮುನ್ಸಿಪಲ್ ಕಾಪೆರ್ರೇಷನ್ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಲೋ ರಸ್ತೆ ಪ್ರದೇಶದಲ್ಲಿ ನೀರನ್ನು ಚಿಮುಕಿಸುತ್ತಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೆಕ್ಟರ್ 62, ಸೆಕ್ಟರ್ 1 ಮತ್ತು ಸೆಕ್ಟರ್ 116 ರಲ್ಲಿನ ಎಕ್ಯೂಐ ಕೂಡ ಕುಸಿತ ಕಂಡಿದೆ. ಹದಗೆಡುತ್ತಿರುವ ಗಾಳಿಯ ಗುಣಮಟ್ಟವು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಮೂಲಭೂತವಲ್ಲದ ನಿರ್ಮಾಣ ಕಾರ್ಯಗಳನ್ನು ತ್ವರಿತವಾಗಿ ನಿಷೇಧಿಸಲು ಮತ್ತು ರಾಜಧಾನಿಯಲ್ಲಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಅಧಿಕಾರಿಗಳನ್ನು ಪ್ರೇರೇಪಿಸಿದೆ.

ನಾವು 5 ವರ್ಷ ಆಡಳಿತ ನಡೆಸುತ್ತೇವೆ : ಸಿದ್ದರಾಮಯ್ಯ

ಮಾಲಿನ್ಯವು ಮತ್ತೆ ಹೆಚ್ಚಾಗಲು ಪ್ರಾರಂಭಿಸಿದ ವರ್ಷದ ಆ ಸಮಯದಲ್ಲಿ ನಾವಿದ್ದೇವೆ. ಉಸಿರಾಟದ ತೊಂದರೆ ಇರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ, ಹೆಚ್ಚಿನ ಜನರು ಕೆಮ್ಮು, ನೆಗಡಿ, ನೀರು ಮತ್ತು ಕಿರಿಕಿರಿಯುಂಟುಮಾಡುವ ಕಣ್ಣುಗಳು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದಾರೆ. ಎಲ್ಲಾ ವಯಸ್ಸಿನ ಜನರು ಇದರಿಂದ ಬಳಲುತ್ತಿದ್ದಾರೆ. ಇದು ನಾವು ಮಾಸ್ಕ್ ಧರಿಸಲು ಮತ್ತು ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಲು ಸಮಯವಾಗಿದೆ ಎಂದು ಅಪೋಲೋ ಆಸ್ಪತ್ರೆಯ ಡಾ ನಿಖಿಲ್ ಮೋದಿ ಮನವಿ ಮಾಡಿಕೊಂಡಿದ್ದಾರೆ.

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು 400 ಕ್ಕಿಂತ ಹೆಚ್ಚು ಎಕ್ಯೂಐ ಹೊಂದಿರುವ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯವನ್ನು ಐದು ದಿನಗಳ ನಿಷೇಧವನ್ನು ಘೋಷಿಸಿದರು. ವಾಹನ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಸರ್ಕಾರವು ರೆಡ್ ಲೈಟ್ ಆನ್ ಗಾಡಿ ಆಫ್ ಅಭಿಯಾನವನ್ನು ಪ್ರಾರಂಭಿಸಿದೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು 1,000 ಖಾಸಗಿ ಬಸ್‍ಗಳನ್ನು ಬಾಡಿಗೆಗೆ ಪಡೆಯಲಿದೆ.

ಟೀಮ್‍ಇಂಡಿಯಾ ನಾಯಕತ್ವ ಹೆಮ್ಮೆ ತಂದಿದೆ : ರೋಹಿತ್

ಪ್ರತಿಕೂಲವಾದ ಹವಾಮಾನವು ಮುಂದುವರಿದಂತೆ, ವಿಜ್ಞಾನಿಗಳು ಮುಂದಿನ ಎರಡು ವಾರಗಳಲ್ಲಿ ದೆಹಲಿ-ಎನ್‍ಸಿಆರ್ ಪ್ರದೇಶದಲ್ಲಿ ಮಾಲಿನ್ಯದ ಮಟ್ಟದಲ್ಲಿ ತೀವ್ರ ಏರಿಕೆಯಾಗುವ ಭಯವನ್ನು ಹೊಂದಿದ್ದಾರೆ. ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವು ಮಕ್ಕಳು ಮತ್ತು ಹಿರಿಯರಲ್ಲಿ ಆಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ ಎಂದು ವೈದ್ಯಕೀಯ ವೃತ್ತಿಪರರು ಎಚ್ಚರಿಸಿದ್ದಾರೆ.

ವೈಯಕ್ತಿಕ ಮೈಲಿಗಲ್ಲಿಗೆ ಆದ್ಯತೆ ನೀಡಲ್ಲ : ಶ್ರೇಯಸ್ ಆಯ್ಯರ್

ಮುಂಬೈ, ನ.3 (ಪಿಟಿಐ) ವಿಶ್ವಕಪ್‍ನಂತಹ ಪಂದ್ಯಾವಳಿಯಲ್ಲಿ ವೈಯಕ್ತಿಕ ಮೈಲಿಗಲ್ಲುಗಳಿಗೆ ಆದ್ಯತೆ ನೀಡುವುದಿಲ್ಲ ಎಂದು ಖ್ಯಾತ ಕ್ರಿಕೆಟ್ ಆಟಗಾರ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ 56 ಎಸೆತಗಳಲ್ಲಿ 82 ರನ್ ಗಳಿಸಿದ ನಂತರ ಮುಂಬರುವ ಪಂದ್ಯಗಳಲ್ಲಿ ಭಾರತಕ್ಕೆ ಶತಕ ಗಳಿಸುವ ಭರವಸೆಯಲಿದ್ದೇನೆ ಎಂದು ಅವರು ವಿವರಿಸಿದ್ದಾರೆ.

ಶ್ರೀಲಂಕಾ ವಿರುದ್ಧ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ ಭಾರತದ ಬೃಹತ್ ಮೊತ್ತವು ಮೂರು ಪ್ರಮುಖ ಬ್ಯಾಟರ್‍ಗಳಾದ ಶುಭಮನ್ ಗಿಲ್ (92), ವಿರಾಟ್ ಕೊಹ್ಲಿ (88) ಮತ್ತು ಅಯ್ಯರ್ (82) ಅವರಿಂದ ಬಂದಿತ್ತು. ಮೊಹಮ್ಮದ್ ಶಮಿ (5-1-18-5), ಮೊಹಮ್ಮದ್ ಸಿರಾಜ್ (7-2-16-3) ಮತ್ತು ಜಸ್ಪ್ರೀತ್ ಬುಮ್ರಾ (5-1) ಅವರ ಸಂವೇದನಾಶೀಲ ಬೌಲಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ಹೀನಾಯ ಸೋಲು ಕಂಡಿತ್ತು.

ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಚುಂಬಿಸಿ ಪರಾರಿಯಾದ ಕಿಡಿಗೇಡಿಗಳು

ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ವಿಶ್ವಕಪ್ ಸೆಮಿಫೈನಲ್‍ಗೆ ಅರ್ಹತೆ ಪಡೆದ ನಂತರ ಅಯ್ಯರ್ ಮಾಧ್ಯಮಗಳಿಗೆ ಇದು ನೀವು ತಂಡಕ್ಕಾಗಿ ಆಡುವ ಹಂತವಾಗಿದೆ. ನಾವು ವೈಯಕ್ತಿಕ ಪ್ರದರ್ಶನಕ್ಕಾಗಿ ಪಂದ್ಯ ಆಡುವುದಿಲ್ಲ ಎಂದು ಹೇಳಿದರು.

ನಾವು ಖಂಡಿತವಾಗಿಯೂ ಶತಕಗಳು ಅಥವಾ ಅರ್ಧ ಶತಕಗಳನ್ನು ಕಳೆದುಕೊಳ್ಳುವ ಬಗ್ಗೆ ಚರ್ಚಿಸುತ್ತೇವೆ, ಆದರೆ ಮುಂದೆ ಹೋಗುವುದು, ಅದೇ ಪರಿಸ್ಥಿತಿಯಲ್ಲಿ ನಮ್ಮನ್ನು ಇರಿಸಿದರೆ, ನಾನು ಬೌಲರ್‍ಗಳ ವಿರುದ್ಧ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮೂವರು ಮುಖ್ಯನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ನವದೆಹಲಿ,ನ.3- ಉತ್ತರಾಖಂಡ, ಒರಿಸ್ಸಾ ಮತ್ತು ಮೇಘಾಲಯ ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಮೂವರು ನ್ಯಾಯಮೂರ್ತಿಗಳ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಕೊಲಿಜಿಯಂ ತನ್ನ ನಿರ್ಣಯದಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ರಿತು ಬಹ್ರಿ ಅವರನ್ನು ಉತ್ತರಾಖಂಡ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.

ಪ್ರಸ್ತುತ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿರುವ ಜಸ್ಟಿಸ್ ಬಹ್ರಿ ಅವರು ಉನ್ನತ ಮಟ್ಟದ ಸಮಗ್ರತೆ, ನಡವಳಿಕೆ ಮತ್ತು ಚಾರಿತ್ರ್ಯವನ್ನು ಹೊಂದಿರುವ ಸಮರ್ಥ ನ್ಯಾಯಾೀಧಿಶರು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ನಾವು 5 ವರ್ಷ ಆಡಳಿತ ನಡೆಸುತ್ತೇವೆ : ಸಿದ್ದರಾಮಯ್ಯ

ಪ್ರಸ್ತುತ, ಒಬ್ಬ ಮಹಿಳಾ ಮುಖ್ಯ ನ್ಯಾಯಾೀಧಿಶರಿದ್ದಾರೆ ಮತ್ತು ಅವರ ಉನ್ನತಿಯು ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುತ್ತದೆ. ಎಲ್ಲಾ ಸಂಬಂಧಿತ ಅಂಶಗಳನ್ನು ಪರಿಗಣಿಸಿ, ನ್ಯಾಯಮೂರ್ತಿ ರಿತು ಬಹ್ರಿ ಅವರು ಯೋಗ್ಯರಾಗಿದ್ದಾರೆ ಎಂದು ಕೊಲಿಜಿಯಂ ಪರಿಗಣಿಸಿದೆ ಮತ್ತು ಉತ್ತರಾಖಂಡದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಎಲ್ಲಾ ರೀತಿಯಲ್ಲೂ ಸೂಕ್ತವಾಗಿದೆ ಎಂದು ಅದು ಸೇರಿಸಿದೆ.

ಮತ್ತೊಂದು ನಿರ್ಣಯದಲ್ಲಿ, ಕೊಲಿಜಿಯಂ ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ, ನ್ಯಾಯಮೂರ್ತಿ ಚಕ್ರಧಾರಿ ಶರಣ್ ಸಿಂಗ್ ಅವರನ್ನು ಒರಿಸ್ಸಾ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲು ಶಿಫಾರಸು ಮಾಡಿದೆ.

ಕೊಲಿಜಿಯಂ ಮದ್ರಾಸ್ ಹೈಕೋರ್ಟ್‍ನ ನ್ಯಾಯಮೂರ್ತಿ ಎಸ್ ವೈದ್ಯನಾಥನ್ ಅವರನ್ನು ಮೇಘಾಲಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲು ಶಿಫಾರಸು ಮಾಡಿದೆ. ನಿರ್ಣಯದಲ್ಲಿ, ನ್ಯಾಯಮೂರ್ತಿ ವೈದ್ಯನಾಥನ್ ಅವರು ನ್ಯಾಯವನ್ನು ವಿತರಿಸುವಲ್ಲಿ ಗಣನೀಯ ಅನುಭವವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದೆ.

ಹಿಂದೂ ದೇವರುಗಳ ಆಶ್ಲೀಲ ಚಿತ್ರ ಮಾರಾಟ ಮಾಡುತ್ತಿದ್ದವನ ಬಂಧನ

ನವದೆಹಲಿ, ನ.3 (ಪಿಟಿಐ) ಆನ್‍ಲೈನ್‍ನಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡುವ ಮೂಲಕ ನಿಂದನೆ ಮತ್ತು ಅಗೌರವ ತೋರಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 67ಅ ಅಡಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಕೋಶದ ಘಟಕವು ಕಳೆದ ವಾರ ದೆಹಲಿ ಮಹಿಳಾ ಆಯೋಗದಿಂದ ದೂರು ಪಡೆದ ನಂತರ ಪ್ರಕರಣವನ್ನು ದಾಖಲಿಸಿದೆ.

ನಾವು 5 ವರ್ಷ ಆಡಳಿತ ನಡೆಸುತ್ತೇವೆ : ಸಿದ್ದರಾಮಯ್ಯ

ಅಂತರ್ಜಾಲದಲ್ಲಿ ಆಕ್ಷೇಪಾರ್ಹ ಚಿತ್ರಗಳು ಮಾರಾಟವಾಗುತ್ತಿರುವ ಬಗ್ಗೆ ದೂರನ್ನು ಸ್ವೀಕರಿಸಿದ ನಂತರ ಡಿಸಿಡಬ್ಲ್ಯು ನೋಟಿಸ್ ನೀಡಿದೆ. ಓರ್ವ ವ್ಯಕ್ತಿಯನ್ನು ಬಂಸಲಾಗಿದ್ದು, ಇನ್ನೂ ಕೆಲವರನ್ನು ಬಂಧಿಸಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.