Home Blog Page 1850

ಪೋರ್ಚಗೀಸ್ ಪ್ರಧಾನಿಯನ್ನು ಭೇಟಿಯಾದ ಜೈಶಂಕರ್

ಲಿಸ್ಬನ್, ನ.1 (ಪಿಟಿಐ) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪೋರ್ಚುಗೀಸ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಸಮಕಾಲೀನ ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ ಮತ್ತು ಭಾರತ-ಪೋರ್ಚುಗಲ್ ಬಾಂಧವ್ಯದ ಮತ್ತಷ್ಟು ಅಭಿವೃದ್ಧಿಗೆ ಅವರ ಮಾರ್ಗದರ್ಶನವನ್ನು ಶ್ಲಾಘಿಸಿದ್ದಾರೆ.

ಎರಡು ಪ್ರಮುಖ ಯುರೋಪಿಯನ್ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಪೋರ್ಚುಗಲ್ ಮತ್ತು ಇಟಲಿಗೆ ನಾಲ್ಕು ದಿನಗಳ ಭೇಟಿಯ ಮೊದಲ ಹಂತದಲ್ಲಿ ಇಲ್ಲಿಗೆ ಆಗಮಿಸಿದ ಜೈಶಂಕರ್ ಅವರು ಭಾರತ-ಯೂರೋಪ್ ಸಂಬಂಧಗಳಿಗೆ ಪೋರ್ಚುಗಲ್‍ನ ಬೆಂಬಲವನ್ನು ಶ್ಲಾಘಿಸಿದರು.

ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಹೈಕೋರ್ಟ್ ಹಸಿರು ನಿಶಾನೆ

ಪ್ರಧಾನಮಂತ್ರಿ ಆಂಟೋನಿಯೋ ಕೋಸ್ಟಾ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಅವರ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಸಮಕಾಲೀನ ಸವಾಲುಗಳನ್ನು ಚರ್ಚಿಸಿದರು ಮತ್ತು ನಮ್ಮ ಬಾಂಧವ್ಯಗಳ ಮತ್ತಷ್ಟು ಅಭಿವೃದ್ಧಿಗಾಗಿ ಅವರ ಮಾರ್ಗದರ್ಶನವನ್ನು ಶ್ಲಾಘಿಸಿದರು ಎಂದು ಜೈಶಂಕರ್ ಎಕ್ಸ್ ನಲ್ಲಿ ಹೇಳಿದರು.

ಇದಕ್ಕೂ ಮೊದಲು, ವಿದೇಶಾಂಗ ಸಚಿವರು ತಮ್ಮ ಪೋರ್ಚುಗೀಸ್ ಸಹವರ್ತಿ ಜೋವೊ ಕ್ರಾವಿನ್ಹೋ ಅವರೊಂದಿಗೆ ಉತ್ಪಾದಕ ಮಾತುಕತೆ ನಡೆಸಿದರು, ಈ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ ಆರ್ಥಿಕ ಸಹಕಾರದ ಪ್ರಗತಿಯನ್ನು ಚರ್ಚಿಸಿದರು ಮತ್ತು ಪಶ್ಚಿಮ ಏಷ್ಯಾ, ಉಕ್ರೇನ್, ಮಧ್ಯ ಏಷ್ಯಾ ಮತ್ತು ಇಂಡೋ-ಪೆಸಿಫಿಕ್ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಅವರು ಪೋರ್ಚುಗೀಸ್ ಗಣರಾಜ್ಯದ ಅಸೆಂಬ್ಲಿಯ ಅಧ್ಯಕ್ಷ ಆಗಸ್ಟೋ ಸ್ಯಾಂಟೋಸ್ ಸಿಲ್ವಾ ಅವರನ್ನು ಭೇಟಿ ಮಾಡಿದರು ಮತ್ತು ಅಸ್ಥಿರ ಜಗತ್ತಿನಲ್ಲಿ ಎರಡು ಪ್ರಜಾಪ್ರಭುತ್ವಗಳು ನಿಕಟವಾಗಿ ಸಹಕರಿಸುವ ಪ್ರಾಮುಖ್ಯತೆಯನ್ನು ಚರ್ಚಿಸಿದರು.

ದೆಹಲಿ ಮತ್ತು ಮುಂಬೈನಲ್ಲಿ ನಡೆಯುವ ವಿಶ್ವಕಪ್ ಪಂದ್ಯದ ವೇಳೆ ಪಟಾಕಿ ಸಿಡಿಸುವಂತಿಲ್ಲ

ನವದೆಹಲಿ, ನ.1 (ಪಿಟಿಐ)-ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವ ಹಿನ್ನೆಲೆಯ ಆ ಎರಡು ಮಹಾನಗರಗಳಲ್ಲಿ ನಡೆಯಲಿರುವ ವಿಶ್ವಕಪ್‍ನ ಉಳಿದ ಪಂದ್ಯಗಳಲ್ಲಿ ಪಟಾಕಿ ಸಿಡಿಸುವುದನ್ನು ಬಿಸಿಸಿಐ ನಿಷೇಧಿಸಿದೆ.

ನ 6 ರಂದು ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯವನ್ನು ಆಯೋಜಿಸಲು ದೆಹಲಿಯು ಕೇವಲ ಒಂದು ಪಂದ್ಯವನ್ನು ಮಾತ್ರ ಹೊಂದಿದೆ, ಆದರೆ ಮುಂಬೈನಲ್ಲಿ ನ 2 ಮತ್ತು 7 ರಂದು ಇನ್ನೂ ಎರಡು ಲೀಗ್ ಪಂದ್ಯಗಳು ಹಾಗು ನ. 15 ರಂದು ಸೆಮಿಫೈನಲ್ ಅನ್ನು ಪಂದ್ಯಗಳು ನಡೆಯಲಿವೆ.

ಬಿಸಿಸಿಐ ಪರಿಸರ ಕಾಳಜಿಗೆ ಸಂವೇದನಾಶೀಲವಾಗಿದೆ. ನಾನು ಈ ವಿಷಯವನ್ನು ಐಸಿಸಿಯೊಂದಿಗೆ ಔಪಚಾರಿಕವಾಗಿ ಮಾತನಾಡಿದ್ದೇವೆ ಮತ್ತು ಮುಂಬೈನಲ್ಲಿ ಯಾವುದೇ ಪಟಾಕಿ ಪ್ರದರ್ಶನವಿಲ್ಲ, ಇದು ಮಾಲಿನ್ಯದ ಮಟ್ಟವನ್ನು ಹೆಚ್ಚಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಹೇಳಿದ ತಕ್ಷಣ ಸರ್ಕಾರ ಬೀಳಲ್ಲ : ಸಿಎಂ ಸಿದ್ದರಾಮಯ್ಯ

ಮಂಡಳಿಯು ಪರಿಸರ ಸಮಸ್ಯೆಗಳನ್ನು ಎದುರಿಸಲು ಬದ್ಧವಾಗಿದೆ ಮತ್ತು ಯಾವಾಗಲೂ ನಮ್ಮ ಅಭಿಮಾನಿಗಳು ಮತ್ತು ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ಮುಂಚೂಣಿಯಲ್ಲಿ ಇರಿಸುತ್ತದೆ. ಮುಂಬೈ ಮತ್ತು ನವದೆಹಲಿ ಎರಡರಲ್ಲೂ ಗಾಳಿಯ ಗುಣಮಟ್ಟದ ಸುತ್ತಲಿನ ತುರ್ತು ಕಾಳಜಿಯನ್ನು ಬಿಸಿಸಿಐ ಒಪ್ಪಿಕೊಂಡಿದೆ.

ಕ್ರಿಕೆಟ್‍ನ ಆಚರಣೆಗೆ ಸೂಕ್ತವಾದ ರೀತಿಯಲ್ಲಿ ನಾವು ಐಸಿಸಿ ವಿಶ್ವಕಪ್ ಅನ್ನು ಆಯೋಜಿಸಲು ಪ್ರಯತ್ನಿಸುತ್ತಿರುವಾಗ, ನಮ್ಮ ಎಲ್ಲಾ ಪಾಲುದಾರರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿರುತ್ತೇವೆ.

ದೆಹಲಿಯ ಗಾಳಿಯ ಗುಣಮಟ್ಟವು 372 ರ ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ ಬುಧವಾರ ಸತತ ಐದನೇ ದಿನ ಅತ್ಯಂತ ಕಳಪೆ ವಿಭಾಗದಲ್ಲಿ ಉಳಿದಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2023)

ನಿತ್ಯ ನೀತಿ : ಪ್ರಪಂಚದ ಅತೀ ದೊಡ್ಡ ಗುರು ಎಂದರೆ ಸಮಯ. ಏಕೆಂದರೆ ಅದು ಎಲ್ಲವನ್ನೂ ಕಲಿಸುತ್ತದೆ.

ಪಂಚಾಂಗ ಬುಧವಾರ 01-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಮೃಗಶಿರಾ / ಯೋಗ: ಪರಿಘ / ಕರಣ: ಭವ

ಸೂರ್ಯೋದಯ : ಬೆ.06.13
ಸೂರ್ಯಾಸ್ತ ; 05.53
ರಾಹುಕಾಲ : 12.00-1.30
ಯಮಗಂಡ ಕಾಲ ; 7.30-9.00
ಗುಳಿಕ ಕಾಲ : 10.30-12.00

ಬಿಜೆಪಿ ಹೇಳಿದ ತಕ್ಷಣ ಸರ್ಕಾರ ಬೀಳಲ್ಲ : ಸಿಎಂ ಸಿದ್ದರಾಮಯ್ಯ

ರಾಶಿ ಭವಿಷ್ಯ
ಮೇಷ
: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ಅನು ಕೂಲವಾಗಲಿದೆ. ಮಿತ್ರರಿಂದ ಸಹಾಯ ಸಿಗಲಿದೆ.
ವೃಷಭ: ಆಸ್ತಿ, ಅಪಾರ್ಟ್‍ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ಮಿಥುನ: ಆತ್ಮೀಯರ ಸಹಾಯ ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಅಧಿಕ ಲಾಭ ದೊರೆಯಲಿದೆ.

ಕಟಕ: ಹಳೆ ವಾಹನ ಖರೀದಿಸುವುದರಿಂದ ರಿಪೇರಿ ವೆಚ್ಚ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಷ್ಟ.
ಸಿಂಹ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆ ಯಿಂದ ನಡೆಯಲಿವೆ.
ಕನ್ಯಾ: ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ. ಆಹಾರ ಪದ್ಧತಿಯಲ್ಲಿ ಸರಿಯಾದ ನಿಯಮ ಪಾಲಿಸಿ.

ತುಲಾ: ಮನೆ ಬಗ್ಗೆ ಉದಾ ಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ವೃಶ್ಚಿಕ: ಸಣ್ಣ ಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.
ಧನುಸ್ಸು: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡದರಿರುವುದು ಒಳಿತು.

ಮಕರ: ಉನ್ನತ ಸ್ಥಾನಮಾನ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕುಂಭ: ಹಣದ ಒಳಹರಿವು ಉತ್ತಮವಾಗಿರುತ್ತದೆ.
ಮೀನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತೀರಿ.

ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು, ಅ.31- ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಾಡಧ್ವಜ ಹಾರಾಟಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಬೇಕೆಂದು ಕೋರಿ ಚಾಮರಾಜಪೇಟೆ ನಾಗರಿಕ ಒಕ್ಕೂಟಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮೈದಾನದಲ್ಲಿ ನಾಡಧ್ವಜ ಹಾರಾಟಕ್ಕೆ ಹಸಿರು ನಿಶಾನೆ ತೋರಿ ಮೂರು ದಿನಗಳ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿದ್ದಾರೆ.

ಗಡಿ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ
ಬೆಂಗಳೂರು, ಅ.31- ರಾಜ್ಯದ ಗಡಿ ಹಾಗೂ ನೆರೆಯ ರಾಜ್ಯಗಳಲ್ಲಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕೆಎಸ್‍ಆರ್‍ಟಿಸಿ ಬಸ್ಸ್‍ಗೆ ಬೆಂಕಿ ಹಚ್ಚಿರುವುದು ತಪ್ಪು. ಯಾರೇ ಆಗಲಿ ಅಂತಹ ಕೆಲಸ ಮಾಡಬಾರದು. ರಾಜ್ಯದ ಹಿತ ಕಾಪಾಡಲು ನಾವು ಬದ್ಧವಾಗಿದ್ದೇವೆ.

ರಾಜ್ಯದ ಒಳಗಡೆ ಮತ್ತು ನೆರೆಯ ರಾಜ್ಯಗಳಲ್ಲಿ ಕನ್ನಡಿಗರ ರಕ್ಷಣೆಗೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಪೆÇಲೀಸ್ ಅಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಆದೇಶಿಸಲಾಗಿದೆ ಎಂದರು.

ಬಿಜೆಪಿ ಬರ ಅಧ್ಯಯನ ಮಾಡಲಿ:
ಬಿಜೆಪಿಯವರು ರಾಜ್ಯದಲ್ಲಿ ಬರ ಅಧ್ಯಯನ ಮಾಡಲಿ ತಪ್ಪೇನಿಲ್ಲ, ಬರ ಪರಿಸ್ಥಿತಿಯನ್ನು ನೋಡಿದ ಬಳಿಕವಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದುಡ್ಡು ಕೊಡಿಸಲಿ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರಕ್ಕೆ ನಮ್ಮ ಕೃಷಿ ಮತ್ತು ಕಂದಾಯ ಸಚಿವರು ಮನವಿ ನೀಡಿದಂತೆ ಪರಿಹಾರ ಕೊಡಿಸಲಿ. ರಾಜ್ಯ ಸರ್ಕಾರ ಮಾನದಂಡಗಳ ಆಧಾರದ ಮೇಲೆಯೇ ಬರ ಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವೂ ರಾಜ್ಯಕ್ಕೆ ಆಗಮಿಸಿ ಅಧ್ಯಯನ ವರದಿ ನೀಡಿದೆ. ಕೇಂದ್ರ ಸರ್ಕಾರ ಸ್ವಲ್ಪ ಲಿಬರಲ್ ಆಗಿ ಪರಿಹಾರ ನೀಡಲಿ. ಬಿಜೆಪಿಯವರು ಬರ ಅಧ್ಯಯನ ಬಳಿಕವಾದರೂ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದರು.

ಬಿಜೆಪಿ ಹೇಳಿದ ತಕ್ಷಣ ಸರ್ಕಾರ ಬೀಳಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅ.31- ಬಿಜೆಪಿಯವರು ಹೇಳಿದ ತಕ್ಷಣ ನಮ್ಮ ಸರ್ಕಾರ ಬಿದ್ದು ಹೋಗುವುದಿಲ್ಲ. ಸ್ಥಿರತೆಯಿಂದ ಕೂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿ ನಿನ್ನೆ ಬೆಳಗಾವಿ ಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮುಂದಿನ ಮೂರು ತಿಂಗಳಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಜಿಯಾಗಲಿದ್ದಾರೆ ಎಂದು ಹೇಳಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಬಹಳಷ್ಟು ಮಂದಿ ಸಚಿವರು, ನಾಯಕರು ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು ಒಗ್ಗೂಡಿ ಮಹಾವಿಕಾಸ ಅಘಾಡಿ ಸರ್ಕಾರವನ್ನು ರಚಿಸಿದ್ದವು. ಶಿವಸೇನೆಯನ್ನು ಇಬ್ಬಾಗಿಸಿದ ಬಿಜೆಪಿ ಅದರ ನಾಯಕ ಏಕನಾಥ್‍ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿತ್ತು. ಮುಂದುವರೆದ ಭಾಗದಲ್ಲಿ ಎನ್‍ಸಿಪಿಯ ಅಜಿತ್ ಪವಾರ್ ಕೂಡ ಪಕ್ಷದಿಂದ ಹೊರ ಹೋಗಿ ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿದ್ದಾರೆ. ಸರ್ಕಾರ ಪತನವಷ್ಟೆ ಅಲ್ಲ ಮಹಾರಾಷ್ಟ್ರದ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ, ಎನ್‍ಸಿಪಿಗಳೇ ಇಬ್ಬಾಗವಾಗಿವೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಭಾರೀ ಬಹುಮತವಿದ್ದರೂ ಅದನ್ನು ಕದಲಿಸಲು ಒಳಗೊಳಗೆ ಸಂಚುಗಳು ನಡೆಯುತ್ತಿವೆ ಎಂಬ ವದ್ಧಂತಿಗಳು ವ್ಯಾಪಕವಾಗಿವೆ.

ನನ್ನ ಶಕ್ತಿಯ ಮೂಲ ನನ್ನ ಅಜ್ಜಿ : ರಾಹುಲ್‍ ಗಾಂಧಿ

ಇತ್ತೀಚೆಗೆ ಕಾಂಗ್ರೆಸ್‍ನ ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿ ದಾವಣಗೆರೆಯಲ್ಲಿ ಹೇಳಿಕೆ ನೀಡಿ ಬಿಜೆಪಿಯವರು ಕಾಂಗ್ರೆಸ್‍ನ ನಾಲ್ವರು ಶಾಸಕರನ್ನು ಭೇಟಿ ಮಾಡಿ 50 ಕೋಟಿ ರೂಪಾಯಿ ಹಾಗೂ ಸಚಿವ ಸ್ಥಾನ ನೀಡುವ ಆಮಿಷವೊಡ್ಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದರು. ಮೂಲಗಳ ಪ್ರಕಾರ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡ 66 ಶಾಸಕರ ಪಟ್ಟಿಯನ್ನು ಬಿಜೆಪಿ ನಾಯಕರು ತಯಾರು ಮಾಡಿಕೊಂಡಿದ್ದು, ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದ್ದಾರೆ ಎಂಬ ಆರೋಪಗಳಿವೆ.

ಇದಕ್ಕೆ ಪೂರಕವಾಗಿ ಬಿಜೆಪಿಯ ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕರು ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎನ್ನುತ್ತಿದ್ದಾರೆ. ಇತ್ತೀಚೆಗಷ್ಟೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‍ನ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತವಾಗಲಿದೆ ಎಂದಿದ್ದರು. ತಮ್ಮ ಸರ್ಕಾರವನ್ನು ಪತನಗೊಳಿಸುವ ಸಂಚು ನಡೆದಿರುವುದನ್ನು ಖುದ್ದು ಮುಖ್ಯಮಂತ್ರಿಯವರೂ ಒಪ್ಪಿಕೊಂಡಿದ್ದರು.

ಸರ್ದಾರ್ ಪಟೇಲ್‌ಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ನಮನ

ಇಂದು ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ವಿಧಾನಸೌಧದಲ್ಲಿ ಪ್ರತಿಜ್ಞಾವಿ ಬೋಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿಯವರು, ಬಿಜೆಪಿಯವರ ಹೇಳಿಕೆಗಳಿಗೆ ಉಪ್ಪು ಖಾರ ಹಾಕಲಾಗುತ್ತಿದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು. ನಮ್ಮ ಸರ್ಕಾರ ಸ್ಥಿರತೆಯಿಂದ ಕೂಡಿದೆ. ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬಿದ್ದು ಹೋಗಲು ಸಾಧ್ಯವಿಲ್ಲ ಎಂದು ದೃಢವಾಗಿ ಹೇಳಿದರು.

ಬಯೋಮೆಟ್ರಿಕ್‍ ವಂಚನೆ ಹೆಚ್ಚಾಗುತ್ತಿದೆ : ಪೊಲೀಸ್ ಆಯುಕ್ತ ದಯಾನಂದ

ಬೆಂಗಳೂರು, ಅ. 31- ನಗರದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಿ ಬಯೋಮೆಟ್ರಿಕ್ ವಂಚನೆ ವ್ಯಾಪಕವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎ.ಇ.ಪಿ.ಎಸ್ ಸಾಧನ(ಆಧಾರ್ ಎನೇಬಲ್ ಪಾವತಿ ವ್ಯವಸ್ಥೆ)ಯನ್ನು ಗ್ರಾಮೀಣ ಪ್ರದೇಶದ ಮತ್ತು ಅನಕ್ಷರಸ್ಥರಿಗೆ ಅನುಕೂಲ ಮಾಡಲು ಯಾವುದೇ ರೀತಿಯ ಒಟಿಪಿ, ಪಾಸ್ ವಾರ್ಡ್, ಪಿನ್ ಕೋಡ್ ಮೊಬೈಲ್ ನಂಬರ್, ನೆರವು ಇಲ್ಲದೆ ಹಣ ಪಡೆಯವು ಹಾಗೂ ವರ್ಗಾವಣೆ ಮಾಡಲು ಸರ್ಕಾರ ಈ ಸೇವೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ನನ್ನ ಶಕ್ತಿಯ ಮೂಲ ನನ್ನ ಅಜ್ಜಿ : ರಾಹುಲ್‍ ಗಾಂಧಿ

ಇದರಲ್ಲಿ ಕೇವಲ ಆಧಾರ್ ನಂಬರ್ ಮತ್ತು ಬಯೋಮೆಟ್ರಿಕ್ ಬಳಸಿ ವ್ಯವಹಾರ ಮಾಡಲಾಗುತ್ತದೆ. ಇದಕ್ಕಾಗಿ ಅನೇಕ ಕಡೆ ಮೈಕ್ರೋ ಎಟಿಎಂಗಳನ್ನೂ ಅಳವಡಿಸಲಾಗಿದೆ. ಇದನ್ನು ದುರೊಪಯೋಗ ಪಡೆಸಿಕೊಂಡಿರುವ ಸೈಬರ್ ವಂಚಕರು ಸರ್ಕಾರದ ನೊಂದಣಿ ಮತ್ತು ಮುಂದ್ರಾಂಕ ಇಲಾಖೆಯ ಅಕೃತ ವೆಬ್‍ಸೈಟ್ ಆದ ಕಾವೇರಿ ವೆಬ್‍ಸೈಟ್ ಮುಖಂತರ ಬಯೋಮೆಟ್ರಿಕ್ ಗಳನ್ನೂ ಸ್ಕ್ಯಾನ್ ಮಾಡಿಕೊಂಡು ತಾಂತ್ರಿಕವಾಗಿ ಬದಲಾಯಿಸಿ, ಸಿಲಿಕಾನ್ ಪೇಪರ್ ಮೇಲೆ ಅಚ್ಚು ಹಾಕಿ ಮೈಕ್ರೋ ಎಟಿಎಂಗಳ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ ಕಳೆದ ಮೂರೂ ನಾಲ್ಕು ತಿಂಗಳಿನಲ್ಲಿ 116 ಪ್ರಕರಣಗಳು ದಾಖಲಾಗಿವೆ ಎಂದು ಆಯುಕ್ತರು ವಿವರಿಸಿದರು.

ಏಕೆಂದರೆ, ಈ ವಂಚನೆಯಲ್ಲಿ ಯಾವುದೇ ರೀತಿಯ ಒಟಿಪಿ, ಪಾಸ್ ವಾರ್ಡ್ ಇಲ್ಲದೆ ವಂಚನೆ ಆಗುವುದರಿಂದ ವಂಚಿತರ ಗಮನಕ್ಕೆ ಬರುವುದಿಲ್ಲ, ಕಾವೇರಿ ಪೋಟ್ರಲ್‍ನಲ್ಲಿ ಲ್ಯಾಂಡ್ ರೆಕಾಡ್ಸ್ ಮಾಹಿತಿ ಪಡೆದು ಬಯೋಮೆಟ್ರಿಕ್ ಮತ್ತು ಆಧಾರ್ ನಂಬರ್ ಬಳಸಿ ಮೈಕ್ರೋ ಎಟಿಎಂ ಮೂಲಕ ಹಣ ಪಡೆದು ವಂಚನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಪ್ರಕರಣವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿ ಗಮನಕ್ಕೆ ತರಲಾಗಿದೆ. ಬಯೋಮೆಟ್ರಿಕ್ ಮತ್ತು ಆಧಾರ್ ಸಂಖ್ಯೆ ಯಾರಿಗೂ ಕಾಣದಂತೆ ಮಾಡಲು ಸಲಹೆ ನೀಡಿದ್ದೇವೆ ಎಂದು ಆಯುಕ್ತರು ತಿಳಿಸಿದರು.

ಮಾನವ ಕಳ್ಳಸಾಗಣೆ ಜಾಲ : ಸಿಸಿಬಿ ದಾಳಿ, 14 ಮಂದಿ ಆರೋಪಿಗಳ ಬಂಧನ

ಬೆಂಗಳೂರು,ಅ.31- ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ನಗರದಲ್ಲಿ ಮಾನವ ಕಳ್ಳಸಾಗಣೆ ಸಂಬಂಧ ವಿಶೇಷ ಕಾರ್ಯಚಾರಣೆ ಕೈಗೊಂಡು 14ಮಂದಿ ಆರೋಪಿಗಳನ್ನು ಬಂಧಿಸಿ 20 ಮಂದಿ ನೊಂದ ಮಹಿಳೆಯರನ್ನು ಸಂರಕ್ಷಣೆ ಮಾಡಿದ್ದಾರೆ.

ಆರೋಪಿಗಳ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆ, ವರ್ತೂರು, ವಿದ್ಯಾರಣ್ಯಪುರ, ಅಮೃತಹಳ್ಳಿ ಮತ್ತು ಕೆ.ಆರ್. ಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 4 ದ್ವಿಚಕ್ರ ವಾಹನಗಳು, ಒಂದು ಮಾರುತಿ ಸ್ವಿಫ್ಟ್ ಕಾರು, 40 ಮೊಬೈಲ್‍ಗಳು, 2 ಲ್ಯಾಪ್‍ಟ್ಯಾಪ್ ಹಾಗೂ ಮೂರು ವಿವಿಧ ಕಂಪನಿಯ ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು

ಅಕ್ಟೋಬರ್ 1 ರಿಂದ ನಿನ್ನೆವರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಚಾರಣೆ ಕೈಗೊಂಡು ನಗರದ ವಿವಿಧ ಕಡೆ ದಾಳಿ ಮಾಡಿ ಬಾಂಗ್ಲದೇಶದಿಂದ ಹಾಗು ಹೊರರಾಜ್ಯಗಳಿಂದ ಮಹಿಳೆಯರನ್ನು ಮಾನವ ಕಳ್ಳಸಾಗಣೆ ಮಾಡಿಕೊಂಡು ಬಂದು ವೇಶ್ಯವಾಟಿಕೆ ನಡೆಸುತ್ತಿರುತ್ತಾರೆಂದು ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ.

ಮಹಿಳೆಯರನ್ನು ಮಾನವ ಕಳ್ಳಸಾಗಣೆ ಮಾಡಿಕೊಂಡು ಬಂದು ವೇಶ್ಯವಾಟಿಕೆ ನಡೆಸುತ್ತಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಿ, ವೇಶ್ಯವಾಟಿಕೆಗೆ ತೊಡಗಿಸಿಕೊಂಡಿದ್ದ ಒಟ್ಟು 20 ಮಂದಿ ನೊಂದ ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಪೈಕಿ ಬಾಂಗ್ಲದೇಶದ ನಾಲ್ವರು ಮಹಿಳೆಯರು, ಪಶ್ಚಿಮ ಬಂಗಾಳದ 11 ಮಂದಿ ಮಹಿಳೆಯರು, ತೆಲಂಗಾಣದ ಒಬ್ಬ ಮಹಿಳೆ, ಉತ್ತರಖಂಡದ ಒಬ್ಬ ಮಹಿಳೆ ಹಾಗು ಕರ್ನಾಟಕದ 3 ಮಹಿಳೆಯರನ್ನು ಸಂರಕ್ಷಣೆ ಮಾಡಲಾಗಿರುತ್ತದೆ. ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಕೇಂದ್ರ ಅಪರಾಧ ವಿಭಾಗ, ಸಂರಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡದವರು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

ಕಾವೇರಿ ವೆಬ್‍ಸೈಟ್‍ನಿಂದ ದಾಖಲೆ ಕದ್ದು ಬ್ಯಾಂಕ್ ಖಾತೆಗಳಿಂದ ಹಣ ಲೂಟಿ

ಬೆಂಗಳೂರು,ಅ.31-ಕರ್ನಾಟಕ ಸರ್ಕಾರದ ನೊಂದಣಿ ಮತ್ತು ಮುಂದ್ರಾಂಕ ಇಲಾಖೆಯ ಅಧಿಕೃತ ಕಾವೇರಿ ವೆಬ್‍ಸೈಟ್ ಮುಖಾಂತರ ದಾಖಲೆ ಕದ್ದು ಎ.ಇ.ಪಿ.ಎಸ್ ಸಾಧನವನ್ನು ಬಳಸಿ ಸಾರ್ವಜನಿಕರ ಗಮನಕ್ಕೆ ಬಾರದಂತೆ ಅವರ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಇಬ್ಬರನ್ನು ಯಲಹಂಕ ಸೆನ್ ಠಾಣೆ ಪೊಲೀಸರು ಬಂಧಿಸಿ 1.5ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಎರಡು ಲ್ಯಾಪ್‍ಟ್ಯಾಪ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರ ಮೂಲದ ದೀಪಕ್ ಕುಮಾರ್ (33) ಮತ್ತು ನಿವೇದಿತ್ ಕುಮಾರ್ (26) ಬಂಧಿತ ಆರೋಪಿಗಳು
ಪಿರ್ಯಾದುದಾರರ ಬ್ಯಾಂಕ್ ಖಾತೆಗಳಿಂದ ಅವರ ಗಮನಕ್ಕೆ ಬಾರದೇ, ಹಂತ ಹಂತವಾಗಿ ಒಟ್ಟು 38ಸಾವಿರ ಮತ್ತು 10 ಸಾವಿರ ಕಡಿತವಾಗಿದ್ದರ ಬಗ್ಗೆ ಅವರಿಗೆ ಯಾವುದೇ ಬ್ಯಾಂಕ್ ಮಾಹಿತಿಯಾಗಲಿ, ಓಟಿಪಿಯಾಗಲಿ, ಯಾರೊಂದಿಗೂ ಶೇರ್ ಮಾಡಿಕೊಂಡಿರುವುದಿಲ್ಲ.

ಯಾವುದೇ ಅಪರಿಚಿತ ಲಿಂಕ್ ಕ್ಲಿಕ್ ಮಾಡದೇ ಇದ್ದರೂ ಕೂಡ ಖಾತೆಗಳಿಂದ ಹಣ ವರ್ಗಾವಣೆಯಾಗಿರುವುದರ ಬಗ್ಗೆ ಯಲಹಂಕ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಎರಡು ವಂಚನೆ ಪ್ರಕರಣಗಳು ದಾಖಲಾಗಿತ್ತು.

ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಸರ್ಕಾರಿ ವೆಬ್ ಸೈಟ್‍ಗಳಿಂದ ಸಾರ್ವಜನಿಕರ ನೊಂದಣಿ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಂಡು ಆಧಾರ್ ಕಾರ್ಡ್ ಮಾಹಿತಿ ಮತ್ತು ಬೆರಳಚ್ಚು ಗಳನ್ನು ನಕಲು ಮಾಡಿಕೊಂಡು ಪಿರ್ಯಾದುದಾರರ ಗಮನಕ್ಕೆ ಬಾರದಂತೆ ಆಧಾರ್ ಕಾರ್ಡ್‍ಗೆ ಲಿಂಕ್ ಆದಂತಹ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಸಿದ್ದಾರೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿ 1.5 ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ್ದ ಎರಡು ಲ್ಯಾಪ್ ಟಾಪ್, ಎರಡು ಮೊಬೈಲ್ ಫೆÇೀನ್ ಮತ್ತು ಮೂರು ಬೆರಳಚ್ಚು ಸಾಧನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಮತ್ತೊಬ್ಬ ಅರೋಪಿಯು ತಲೆ ಮರೆಸಿಕೊಂಡಿದ್ದು ಈತನ ಶೋಧ ಕಾರ್ಯ ಮುಂದುವರಿದಿದೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲಕ್ಷ್ಮೀ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಈಶಾನ್ಯ ವಿಭಾಗದ ಯಲಹಂಕ ಸೆನ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಲ್ಲಿಕಾರ್ಜುನ ಹಾಗೂ ಪಿ.ಎಸ್.ಐ ರಮಣ್‍ಗೌಡ ಅವರ ತಂಡ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಮಲೆನಾಡನ್ನು ವಿಶೇಷ ಕೃಷಿ ವಲಯವೆಂದು ಘೋಷಿಸಲು ಹಕ್ಕೊತ್ತಾಯ

ಬೆಂಗಳೂರು, ಅ.31- ಮಲೆನಾಡನ್ನು ವಿಶೇಷ ಕೃಷಿ ವಲಯವೆಂದು ಘೋಷಿಸಬೇಕು. ಅರಣ್ಯ ಕಾಯ್ದೆ ಬಗ್ಗೆ ಪುನರ್ ಮನನವಾಗಬೇಕು. ನೆಲವಾಸಿಗಳನ್ನು ಎತ್ತಂಗಡಿ ಮಾಡಬಾರದು. ಮಲೆನಾಡು-ಕರಾವಳಿ ಭಾಗಕ್ಕೆ ಹೈಕೋರ್ಟ್ ಪೀಠ ಮಂಜೂರು ಮಾಡಬೇಕು ಎಂಬ ಹಕ್ಕೊತ್ತಾಯವನ್ನು ಇಂದು ನಡೆದ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾಡಲಾಯಿತು.

ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರದ ಮಾರ್ಗೋಪಾಯಗಳ ಬಗ್ಗೆಯೂ ಪ್ರಸ್ತಾಪಿಸಲಾಯಿತು.

ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ರೋಗಗಳು ಕಾಣಿಸಿಕೊಂಡಿದ್ದು, ಪರಿಹಾರ ದೊರೆಯಬೇಕು. ಅರಣ್ಯ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಜನಪರವಾಗಿ ಕಾಯ್ದೆಗಳನ್ನು ಸರಳೀಕರಣಗೊಳಿಸಬೇಕು. ಮಡಿಕೇರಿ, ಚಿಕ್ಕಮಗಳೂರು, ಹಾಸನ ಪ್ರದೇಶದ ಕಾಫಿ, ಟೀ ಕಂಪೆನಿಯಲ್ಲಿನ ಕಾರ್ಮಿಕರ ಬವಣೆಗೆ ಸೂಕ್ತ ಪರಿಹಾರ ಸಿಗಬೇಕು. ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳು ದೊರೆಯಲು ತಾಲ್ಲೂಕಿಗೊಂದು ಕೈಗಾರಿಕಾ ಪ್ರದೇಶ ನಿರ್ಮಾಣವಾಗಬೇಕು. ಕುಂದಾಪುರ ಕನ್ನಡ ಮತ್ತು ಹವ್ಯಕ ಕನ್ನಡ ಭಾಷೆಗಳಿಗೆ ಪ್ರತ್ಯೇಕ ಅಕಾಡೆಮಿ ರಚನೆಯಾಗಬೇಕು ಎಂಬ ಒತ್ತಾಯ ಮಾಡಲಾಯಿತು.

ಕಂದಾಯ, ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಎದುರಾಗಿರುವ ತೊಡಕುಗಳನ್ನು ನಿವಾರಿಸಬೇಕು. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮೆಡಿಕಲ್, ಐಐಟಿ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಯೋಜನೆ ರೂಪಿಸಬೇಕು. ಬಗರ್‍ಹುಕುಂ ಹಾಗೂ ಜೀವನಾಧಾರಿತ ಒತ್ತುವರಿ ಕೃಷಿ ಜಮೀನಿನಲ್ಲಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮೀನುಗಾರಿಕೆಗೆ ಆಧುನಿಕ ಸ್ಪರ್ಶ ನೀಡಬೇಕು. ಕುದುರೆ ಮುಖ ನಿರಾಶ್ರಿತರಿಗೆ ಸೂರು ಕಲ್ಪಿಸಬೇಕು. ಮೀನುಗಾರಿಕೆಗೆ ಆಧುನಿಕ ಸ್ಪರ್ಶ ನೀಡಬೇಕು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಗೋರಖ್‍ಸಿಂಗ್ ವರದಿ ಜಾರಿ ಮಾಡಬೇಕು ಎಂಬುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಸಭೆಯಲ್ಲಿ ಮಾಡಲಾಯಿತು.

ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಎದುರಿಸುತ್ತಿರುವ ಹತ್ತು-ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ, ದೇವರಾಜು, ಲೋಹಿತ್ ನಾಯ್ಕರ್, ಜ್ಯೋತಿ ಪಾಟೀಲ್, ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಸಂಚಾಲಕ ಸುನಿಲ್‍ಕುಮಾರ್ ಮುರೊಳ್ಳಿ ಮತ್ತಿತರರು ಮಾತನಾಡಿ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ವಿನಯ್‍ಕುಮಾರ್ ಸೊರಕೆ, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಸುಕುಮಾರ್ ಶೆಟ್ಟಿ, ರೈತ ಮುಖಂಡ ಕೆ.ಟಿ.ಗಂಗಾಧರ್, ನಾರಾಯಣಗುರು ಹೋರಾಟ ಸಮಿತಿಯ ಸತ್ಯಜಿತ್ ಸೂರತ್‍ಕಲ್, ಹೋರಾಟಗಾರಾದ ರಾಧಾ ಸುಂದರೇಶ್, ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ ಸೇರಿದಂತೆ ಹಲವು ಮುಖಂಡರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

ರಹಸ್ಯ ಕಾಪಾಡುವಲ್ಲಿ ಬಿಬಿಎಂಪಿ ಯಡವಟ್ಟು

ಬೆಂಗಳೂರು,ಅ.31- ಒಂದಲ್ಲ ಒಂದು ಯಡವಟ್ಟು ಮಾಡುವ ಬಿಬಿಎಂಪಿ ಅಧಿಕಾರಿಗಳು ಇದೀಗ ಸಾರ್ವಜನಿಕರ ರಹಸ್ಯ ಕಾಪಾಡುವಲ್ಲಿಯೂ ವಿಫಲರಾಗಿದ್ದಾರೆ. ನಗರದಲ್ಲಿರುವ ಅಕ್ರಮ ಒತ್ತುವರಿ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಾರ್ವಜನಿಕರನ್ನು ನಂಬಿಸಿ ಮಹತ್ವದ ಮಾಹಿತಿ ಪಡೆದುಕೊಂಡಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ಸಾರ್ವಜನಿಕರು ನೀಡಿದ ಮಾಹಿತಿ ವಿಚಾರವನ್ನು ಬಹಿರಂಗಪಡಿಸುವ ಮೂಲಕ ನಾವು ನಂಬಿಕೆಗೆ ಅರ್ಹರಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದ್ದಾರೆ.

ಈ ಹಿಂದೆ ಸಾರ್ವಜನಿಕರಿಂದ ಒತ್ತುವರಿ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದ ಬಿಬಿಎಂಪಿಯವರ ಮಾತನ್ನು ನಂಬಿಕೊಂಡ ಪ್ರಜ್ಞಾವಂತ ನಾಗರಿಕರು ನಗರದ ಕೆಲವು ಭಾಗಗಳಲ್ಲಿ ನಡೆದಿದ್ದ ಒತ್ತುವರಿ ಬಗ್ಗೆ ಅಗತ್ಯ ಮಾಹಿತಿ ನೀಡಿದ್ದರು. ಮಾತ್ರವಲ್ಲ, ಒತ್ತುವರಿ ಮಾಡಿರೋ ಕಟ್ಟಡಗಳ ಫೋಟೋ ಸಮೇತ ಬಿಬಿಎಂಪಿ ಗೆ ಮಾಹಿತಿ ನೀಡಿದ್ದರೂ ಆದರೆ, ಅವರ ನಿರ್ಧಾರವೇ ಈಗ ಸಾರ್ವಜನಿಕರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.

ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು

ಬಿಬಿಎಂಪಿಗೆ ಅಗತ್ಯ ಮಾಹಿತಿ ನೀಡಿದ್ದ ಸಾರ್ವಜನಿಕರ ಮಾಹಿತಿಯನ್ನು ಕೆಲ ಅಧಿಕಾರಿಗಳು ಬಹಿರಂಗಗೊಳಿಸುವ ಮೂಲಕ ಮಾತು ತಪ್ಪಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳಿಗೆ ನನಿಮ್ಮ ಒತ್ತುವರಿ ಬಗ್ಗೆ ಇಂತವರು ಮಾಹಿತಿ ನೀಡಿದರೆ ಅಂತ ಬಿಬಿಎಂಪಿಯವರು ಮಾಹಿತಿ ನೀಡಿರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಅಯುಕ್ತರು ಮಾಹಿತಿ ಸೋರಿಕೆ ಅಗಿದ್ರೆ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಬಿಬಿಎಂಪಿಯವರ ಮಾತು ನಂಬಿ ಅಗತ್ಯ ಮಾಹಿತಿ ನೀಡಿದ್ದ ಪ್ರಜ್ಞಾವಂತ ನಾಗರಿಕರು ಮತ್ತೆ ಅವರ ಮಾತು ನಂಬಿ ಮೋಸ ಹೋಗದಿರಲು ತೀರ್ಮಾನಿಸಿದ್ದಾರಂತೆ.