Home Blog Page 1849

ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ

ಹಾಸನ, ನ.1- ನಾಳೆಯಿಂದ ನ.15ರವರೆಗೆ ನಡೆಯುವ ಹಾಸನಾಂಬ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಮುತ್ತ ಬ್ಯಾರಿಕೇಡ್ ನಿರ್ಮಾಣ ವಿದ್ಯುತ್ ಅಲಂಕಾರ , ಹೂವಿನ ಅಲಂಕಾರ ಸೇರಿದಂತೆ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ತಯಾರಿಗಳು ಮುಕ್ತಾಯದ ಹಂತದಲ್ಲಿ ಇದೆ.

ದೇವಸ್ಥಾನದ ಸುತ್ತಮುತ್ತ ಸೇರಿದಂತೆ ನಗರಸಭೆ ಎದುರು ರಸ್ತೆಯಿಂದ ದೇವಾಲಯದವರೆಗೆ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು ಹಾಗೂ ನೆಲಹಾಸು (ಮ್ಯಾಟ)ನ್ನು ಹಾಕಲಾಗಿದ್ದು ಅಲ್ಲಲ್ಲಿ ಫ್ಯಾನ್ ವ್ಯವಸ್ಥೆಯನ್ನು ಸಹ ಈ ಬಾರಿ ವಿಶೇಷವಾಗಿ ಮಾಡಲಾಗಿದೆ.

ಬ್ರಾಹ್ಮಣರ ಬೀದಿ ಸೇರಿದಂತೆ ಸಂತೆಪೇಟೆಯಿಂದ ಬರುವ ರಸ್ತೆ ಪಕ್ಕದಲ್ಲಿಯೂ ಬ್ಯಾರಿಕೆಡ್ ನಿರ್ಮಾಣ ಮಾಡಲಾಗಿದ್ದು ಇಲ್ಲಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಪ್ರವೇಶ ಕಲ್ಪಿಸಲಾಗುತ್ತಿದೆ. ದೇವಾಲಯದ ಗೋಪುರದ ಬಲ ಭಾಗದಲ್ಲಿ ಒಂದು ಸಾವಿರದ ಟಿಕೆಟ್ ಹಾಗೂ ವಿವಿಐಪಿ ಪಾಸ್ ಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದ್ದು ಇಲ್ಲಿಯೇ ಟಿಕೆಟ್ ಕೌಂಟರ್ ಗಳನ್ನುತೆರೆಯಲಾಗಿದೆ.

ದೇವಾಲಯದ ಬಲಭಾಗದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಬ್ಯಾರಿಕೆಡ್ ನಿರ್ಮಾಣ ಮಾಡಲಾಗಿದ್ದು ಜರ್ಮನ್ ಟೆಂಟ್ ಅನ್ನು ಸಹ ಹಾಕಲಾಗಿದೆ. ವೃದ್ಧರಿಗೆ ಪ್ರತ್ಯೇಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ಈ ಬಾರಿಯ ವಿಶೇಷವಾಗಿದೆ.

ನಗರಸಭೆ ಎದುರಿನ ಪ್ರವೇಶ ದ್ವಾರದಿಂದ ಅಂಗವಿಕಲರಿಗೆ ದರ್ಶನಕ್ಕೆ ಆಗಮಿಸಲು ವೀಲ್ಚೇರಿಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಪ್ರಮುಖ ಪ್ರವೇಶ ದ್ವಾರ ಹಾಗೂ ಇತರೆಡೇ ಪೊಲೀಸ್ ಹಾಗೂ ಹೋಂ ಗಾಡ್ರ್ಸ್‍ಗಳನ್ನು ನಿಯೋಜನೆ ಮಾಡಿ ಸುಲಲಿತ ಹಾಗೂ ತಡೆರಹಿತ ಭಕ್ತರ ಸಾಲು ಸಾಗಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಿಸಿ ಕ್ಯಾಮರಾ ಕಣ್ಗಾವಲು: ಆಯಕಟ್ಟು ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೂ ಬಸ್ತ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಹಾಸನಾಂಬ ದೇವಾಲಯ ಗರ್ಭಗುಡಿಯ ಎಡಭಾಗದಲ್ಲಿ ಈ ಬಾರಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇಲ್ಲಿ ದೇವಾಲಯದ ಸುತ್ತಮುತ್ತ ಹಾಗೂ ಆಯಕಟ್ಟು ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗುವ ಸಾರ್ವಜನಿಕರ ಚಲನ ವಲನ ನಿಗ ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಶಕ್ತಿ ಯೋಜನೆ : ಲಕ್ಷ ಲಕ್ಷ ಮಹಿಳಾ ಭಕ್ತರ ನಿರೀಕ್ಷೆ: ಶಕ್ತಿ ಯೋಜನೆ ಜಾರಿಯಲ್ಲಿ ಇರುವುದರಿಂದ ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಮಹಿಳಾ ಭಕ್ತರು ಈ ಬಾರಿ ಹಾಸನಾಂಬ ದರ್ಶನೋತ್ಸವಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿದ್ದು ಮಹಿಳೆಯರಿಗೆ ಶೌಚಾಲಯ, ಕುಡಿಯುವ ನೀರು, ಮಜ್ಜಿಗೆ ಸೇರಿದಂತೆ ಮಹಿಳಾ ಪೊಲೀಸ್ ನಿಯೋಜನೆ ಹೆಚ್ಚಿಸಿದೆ. ದೇವಾಲಯಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಈ ಬಾರಿ ದೊನ್ನೆ ಪ್ರಸಾದ ವಿತರಣೆಯನ್ನು ದೇವಿ ದರ್ಶನದ ಬಳಿಕ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳಿಂದ ಪರಿಶೀಲನೆ: ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ, ದೇವಸ್ಥಾನ ಆಡಳಿತ ಅಧಿಕಾರಿ ಮಾರುತಿ ಸೇರಿದಂತೆ ಇತರೆ ಕಂದಾಯ ಅಧಿಕಾರಿಗಳು ದೇವಾಲಯದ ಸುತ್ತಮುತ್ತ ಕೈಗೊಂಡಿರುವ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದು ದರ್ಶನೋತ್ಸವ ಯಶಸ್ವಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೇಸ್ತಾನ್ ಧ್ವಜ ಪ್ರದರ್ಶಿಸಿದ ನಾಲ್ವರು ಅರೆಸ್ಟ್

ದಸರಾ ಮಾದರಿ ದೀಪಲಂಕಾರ:
ಈಗಾಗಲೇ ನಗರದ ಪ್ರಮುಖ ರಸ್ತೆಗಳಲ್ಲಿ ದಸರಾ ಮಾದರಿ ದೀಪಲಂಕಾರ ಮಾಡಲಾಗಿದ್ದು ಡೈರಿ ವೃತ್ತ, ಸಂತೆಪೇಟೆ ಸರ್ಕಲ್, ಸುಭಾಷ್ ವೃತ್ತ, ಎನ್‍ಆರ್ ಸರ್ಕಲ್, ಹೇಮಾವತಿ ಪ್ರತಿಮೆ ಎದುರು, ಮಹಾವೀರ ಸರ್ಕಲ್, ಸಹ್ಯಾದ್ರಿ ವೃತ್ತ, ಸಾಲಗಾಮೆ ರಸ್ತೆ, ರೈಲು ನಿಲ್ದಾಣದ ಎದುರು ಸರ್ಕಲ್ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ದೀಪಲಂಕಾರ ಹಾಗೂ ಆರ್ಚ್ ಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ರಾತ್ರಿ ವೇಳೆ ರಸ್ತೆ ಹಾಗೂ ಸರ್ಕಾರಿ- ಖಾಸಗಿ ಕಟ್ಟಡಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದು ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ದರ್ಶನೋತ್ಸವ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಜೊತೆಗೆ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಪೊಲೀಸರನ್ನು ನಿಯೋಜನೆ ಮಾಡುವ ಸಂಬಂಧ ಜಿಲ್ಲಾ ಪೊಲೀಸ್ ವರಿಧಿಷ್ಠಾಕಾರಿ ಮೊಹಮ್ಮದ್ ಸುಜಿತಾ ಅವರು ಮಾಹಿತಿ ನೀಡಿದ್ದು 1200 ಪೊಲೀಸ್ ಸಿಬ್ಬಂದಿಯೊಂದಿಗೆ ಹೋಂ ಗಾಡ್ರ್ಸ್ ಗಳನ್ನು ಸಹ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ ಇತ್ತೀಚಿಗೆ ದೇವಾಲಯಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಹಾಗೂ ಬಂದೂಬಸ್ತ್ ಕುರಿತು ಮಾಹಿತಿ ಐಜಿಪಿ ಬೋರಲಿಂಗಯ್ಯ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ತುಲಾಭಾರ ವ್ಯವಸ್ಥೆ :
ಇದೇ ಪ್ರಥಮ ಬಾರಿಗೆ ಭಕ್ತಾದಿಗಳಿಗೆ ತುಲಾಭಾರ ವ್ಯವಸ್ಥೆಯನ್ನು ಮಾಡಲಾಗಿದ್ದು ಹಣ್ಣು , ತರಕಾರಿ , ಧನ ಧಾನ್ಯ ಸೇರಿದಂತೆ ಇತರೆ ವಸ್ತುಗಳ ಮೂಲಕ ತುಲಾಭಾರವನ್ನು ಮಾಡುವ ಸಂಬಂಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ತುಲಾಭಾರ ದಲ್ಲಿಯೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಟ್ರಂಪ್ ಅಧ್ಯಕ್ಷ ಚುನಾವಣೆಗೆ ಭಾರಿ ಬೆಂಬಲ

ಇ-ಹುಂಡಿ ವ್ಯವಸ್ಥೆ :
ದೇವಾಲಯ ಗರ್ಭಗುಡಿ ಹಾಗೂ ಸುತ್ತಮುತ್ತ ಈಗಾಗಲೇ ದೇವಾಲಯ ಆಡಳಿತ ಮಂಡಳಿಯಿಂದ ಹಣ ಆಭರಣ ಕಾಣಿಕೆ ಹುಂಡಿಯನ್ನು ಇಡಲಾಗಿದ್ದು ಇದರೊಂದಿಗೆ ಇದೇ ಪ್ರಥಮ ಬಾರಿ ಇ- ಪೇಮೆಂಟ್ ಕ್ಯೂಆರ್ ಕೋಡ್ ಬ್ಯಾನರ್ ವ್ಯವಸ್ಥೆಯನ್ನು ಮಾಡಲಾಗಿದೆ.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

ಬೆಂಗಳೂರು, ನ.1- ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ಶಾಲೆಗಳ ಸೌಲಭ್ಯ ಸುಧಾರಣೆಗೆ ತಮ್ಮ ಸರ್ಕಾರ ಬದ್ಧವಾಗಿದ್ದು, ಶಿಕ್ಷಣ ಇಲಾಖೆಯ ಪ್ರಸ್ತಾವನೆ ಆಧರಿಸಿ ಇಂದಿನಿಂದ ಉಚಿತ ವಿದ್ಯುತ್, ನೀರಿನ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಅದರ ಪ್ರಯುಕ್ತ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂಬ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ವರ್ಷ ಪೂರ್ತಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಬಜೆಟ್‍ನಲ್ಲೂ ಕಾರ್ಯಕ್ರಮ ಘೋಷಣೆ ಮಾಡಿ ಅನುದಾನವನ್ನೂ ಮೀಸಲಿಡಲಾಗಿದೆ. ಹಿಂದಿನ ವರ್ಷವೇ ಈ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಆಗಿನ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದರು.

ಈ ದಿನದಿಂದ ನಾವು ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ಮಾಡಬೇಕಿದೆ. ಈ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸಬೇಕು. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು. ನೆರೆ ರಾಜ್ಯದಷ್ಟು ನಾವು ಭಾಷಾಭಿಮಾನಿಗಳಲ್ಲ, ಆದರೆ ಹೆಚ್ಚು ಧಾರಾಳತನ ಅನಗತ್ಯ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ಸ್ಥಳೀಯ ಅಕೃತ ಭಾಷೆ ಮಾತನಾಡದೆ ಬದುಕಲಾಗಲ್ಲ ಎಂಬ ವಾತಾವಣ ಇದೆ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತನಾಡದೆ ಬದುಕು ನಡೆಸಬಹುದಾದ ಪರಿಸ್ಥಿತಿ ನಮ್ಮಲ್ಲಿದೆ. ಯಾವ ಭಾಷೆ ಬೇಕಾದರೂ ಕಲಿಯಿತು. ಆದರೆ ನಮ್ಮ ಸಾರ್ವಭೌಮ ಕನ್ನಡ ಭಾಷೆಯನ್ನು ಮಾತನಾಡಿ.

ಸರ್ಕಾರದಲ್ಲಿ ನಡೆಯುವ ಆಡಳಿತ ಕನ್ನಡ ಭಾಷೆಯಲ್ಲೇ ಆಗಬೇಕು. ಇಲ್ಲಿ ಕೆಲಸ ಮಾಡುವವರು ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಕನ್ನಡ ನೆಲದಲ್ಲಿದ್ದೂ ಕನ್ನಡ ಮಾತನಾಡದವರು ಹಲವು ಭಾಗಗಳಲ್ಲಿ ಇದ್ದಾರೆ. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಪ್ರತಿಯೊಬ್ಬರ, ಪ್ರತಿಯೊಂದು ಭಾಷೆಗೂ ನಾವು ಗೌರವ ಕೊಡಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯವಹರಿಸುವಾಗ, ಆಡಳಿತದಲ್ಲಿ ಕನ್ನಡ ಬಳಕೆ ಆಗಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯೂ ಚಾಚೂ ತಪ್ಪದೆ ಪಾಲಿಸಬೇಕು. ಆಗ ಮಾತ್ರ ಸುಗಮ ಆಡಳಿತ ಸಾಧ್ಯವಾಗಲಿದೆ ಎಂದು ಸೂಚಿಸಿದರು.

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದರು.

ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್ ಕಾನ್ವೆಂಟ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದು ಸರಿಯಲ್ಲ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಉದಾಹರಿಸಿದರು. ಇಂಗ್ಲಿಷ್‍ನಲ್ಲಿ ಕಲಿತರೆ ಮಾತ್ರ ಜ್ಞಾನ ಸಂಪಾದನೆ ಎಂಬ ನಂಬಿಕೆ ಸರಿಯಲ್ಲ.

ಮಹತ್ವದ ಮಾಹಿತಿ : ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡೋದು ಹೇಗೆ..?

ಕನ್ನಡ ಶಾಲೆಯಲ್ಲಿ ಓದುವ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದ ಅವರು, ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಕಲಿಕಾ ವಾತಾವರಣ ಹಾಗೂ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು , ಅಗತ್ಯ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆಧ್ಯತೆ. ಕನ್ನಡ ಶಾಲೆಗಳಲ್ಲಿ ಉತ್ತಮ ಕಲಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕನಿಷ್ಠ ಎಸ್‍ಎಸ್‍ಎಲ್‍ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು. ಕನ್ನಡದಲ್ಲಿ ಓದಿದ ಅನೇಕರು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಾಗಿದ್ದಾರೆ ಎಂದರು.

ತಮ್ಮ ಮಕ್ಕಳನ್ನು ಅವರ ಇಷ್ಟದ ಭಾಷೆಯಲ್ಲಿ ಕಲಿಸುವುದು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಮಾತೃಭಾಷೆಯ ಮಾಧ್ಯಮದಲ್ಲೇ ಕಲಿಯುವುದು ಅತ್ಯಂತ ವೈಜ್ಞಾನಿಕ ಎನ್ನುವುದನ್ನು ಗ್ರಹಿಸಬೇಕು ಎಂದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚಖಾತ್ರಿ ಯೋಜನೆಗಳ ಪೈಕಿ ನಾಲ್ಕು ಯಶಸ್ವಿಯಾಗಿ ಜಾರಿಗೆ ತಂದಿದೆ. ಕನ್ನಡಿಗರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕನ್ನಡಿಗರು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸಲು ಅಗತ್ಯ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಆರ್.ವಿ.ದೇಶಪಾಂಡೆ, ರಿಜ್ವಾನ್ ಹರ್ಷದ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ವೇದಿಕೆಯ ಸಮೀಪದಲ್ಲೇ ಪ್ರತಿಷ್ಠಾಪಿಸಿದ್ದ ಕನ್ನಡಾಂಬೆಯ ಪ್ರತಿಮೆಗೆ ಪುಷ್ಟ ನಮನ ಸಲ್ಲಿಸಿದ ಮುಖ್ಯಮಂತ್ರಿಯವರು, ವಿದ್ಯಾರ್ಥಿಗಳ ಪಥ ಸಂಚಲನದ ಗೌರವ ರಕ್ಷೆಯನ್ನು ಸ್ವೀಕರಿಸಿದರು. ಬಳಿಕ ರಾಷ್ಟ್ರ ಹಾಗೂ ಕನ್ನಡ ಧ್ವಜಾರೋಹಣ ನೇರವೇರಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಖಾಸಗಿ ಬ್ಯಾಂಕ್ ವಂಚನೆ ಬಗ್ಗೆ RBI ಕಣ್ಣು

ಮುಂಬೈ, ನ.1-ಕೆಲವು ಖಾಸಗಿ ಬ್ಯಾಂಕ್‍ಗಳು ನಡೆಸುತ್ತಿರುವ ವಂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು RBI ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಬಿಸಿನೆಸ್ ಸ್ಟ್ಯಾಂಡರ್ಡ್ ಆಯೋಜಿಸಿದ ವಾರ್ಷಿಕ ಬಿಎಫ್‍ಎಸ್‍ಐ ಒಳನೋಟ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಕ ಮೇಲ್ವಿಚಾರಣೆಯ ಪ್ರಯತ್ನಗಳ ಭಾಗವಾಗಿ ಸಮಸ್ಯೆಯನ್ನು ನೋಡುತ್ತಿದೆ ಎಂದು ಹೇಳಿದರು.

ಕೆಲವು ಪ್ರಮುಖ ಬ್ಯಾಂಕ್‍ಗಳು ಶೇ.30 ಕ್ಕಿಂತ ಹೆಚ್ಚು ಆಟ್ರಿಷನ್ ದರಗಳನ್ನು ವರದಿ ಮಾಡುವ ಮಧ್ಯೆ ಬಂದ ಕಾಮೆಂಟ್‍ಗಳ ಬಗ್ಗೆ ದಾಸ್ ಪ್ರತಿ ಬ್ಯಾಂಕ್ ಅಂತಹ ಸಮಸ್ಯೆಗಳನ್ನು ನೋಡಿಕೊಳ್ಳಲು ಪ್ರಮುಖ ತಂಡವನ್ನು ನಿರ್ಮಿಸಬೇಕು ಎಂದು ಸೂಚಿಸಿದ್ದಾರೆ.

ಉದ್ಯೋಗ ಬದಲಾವಣೆಗೆ ಸಂಬಂಸಿದಂತೆ ಯುವಕರ ವೃತ್ತಿಜೀವನದ ದೃಷ್ಟಿಕೋನವು ಬದಲಾಗಿದೆ ಎಂದು ಅವರು ಹೇಳಿದರು ಮತ್ತು ಯುವಕರು ಈಗ ಈ ಅಂಶದ ಬಗ್ಗೆ ವಿಭಿನ್ನವಾಗಿ ಯೋಚಿಸುತ್ತಿದ್ದಾರೆ ಎಂದು ಹೇಳಿದರು.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ಆರ್ಥಿಕತೆಯ ಬೆಳವಣಿಗೆಯ ಆವೇಗವು ಬಲವಾಗಿ ಮುಂದುವರಿದಿದೆ ಮತ್ತು ಎರಡನೇ ತ್ರೈಮಾಸಿಕದಲ್ಲಿ ಈ ಸಂಖ್ಯೆಯು ತಲೆಕೆಳಗಾಗಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯು ಜಾಗತಿಕ ಬೆಳವಣಿಗೆಗೆ ದೊಡ್ಡ ಅಪಾಯವಾಗಿದೆ ಎಂದು ಅವರು ಹೇಳಿದರು ಆದರೆ ಯಾವುದೇ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಲು ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಇಟಲಿಯಿಂದ ಪಂಜಾಬ್‍ಗೆ ಬಂದು ಪತ್ನಿ ಕೊಂದ ಅನಿವಾಸಿ ಭಾರತೀಯ

ಕಪುರ್ತಲಾ, ನ.1- ಇಟಲಿಯಿಂದ ಮನೆಗೆ ಹಿಂದಿರುಗಿದ ಕೆಲವೇ ಗಂಟೆಗಳ ನಂತರ, ಪಂಜಾಬ್‍ನ ಕಪುರ್ತಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಎನ್‍ಆರ್‍ಐ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅನಿವಾಸಿ ಭಾರತೀಯ ಸುಖದೇವ್‍ಸಿಂಗ್ ತನ್ನ ಪತ್ನಿಯ ತಲೆಯನ್ನು ಪದೇ ಪದೇ ಮನೆಯ ನೆಲದ ಮೇಲೆ ಬಡಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪುರ್ತಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವತ್ಸಲಾ ಗುಪ್ತಾ ಮಾತನಾಡಿ, ಅನಿವಾಸಿ ಭಾರತೀಯನನ್ನು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದ್ದು, ಸೋಮವಾರ ಇಟಲಿಯಿಂದ ಸಂಧು ಚಾಥಾ ಗ್ರಾಮದ ತನ್ನ ಮನೆಗೆ ಮರಳಿದ್ದ ಎಂದು ತಿಳಿಸಿದ್ದಾರೆ.ಅದೇ ದಿನ, ಅವರು ತಮ್ಮ ಪತ್ನಿ ಹರ್‍ಪ್ರೀತ್ ಕೌರ್ (45) ಅವರೊಂದಿಗೆ ಯಾವುದೋ ವಿಷಯಕ್ಕೆ ತೀವ್ರ ಜಗಳವಾಡಿದರು ಎಂದು ಎಸ್‍ಎಸ್‍ಪಿ ತಿಳಿಸಿದ್ದಾರೆ.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ಸಿಂಗ್ ಅವರು ತನ್ನ ಪತ್ನಿ ಕೌರ್ ಅವರನ್ನು ತನ್ನ ಕೋಣೆಗೆ ಎಳೆದೊಯ್ದರು ಮತ್ತು ಆಕೆಯ ತಲೆಯನ್ನು ನೆಲದ ಮೇಲೆ ಪದೇ ಪದೇ ಥಳಿಸಿದ್ದರು ಹೀಗಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಅವರು ಹೇಳಿದರು. ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.

4 ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕ ಅತ್ಯಾಚಾರ

ಡಿಯೋರಿಯಾ,ನ.1- ನಾಲ್ಕು ವರ್ಷದ ಬಾಲಕಿ ಮೇಲೆ 14 ವರ್ಷದ ಅಪ್ರಾಪ್ತ ಅತ್ಯಾಚಾರ ನಡೆಸಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ. ಮೇಕೆ ಮೇಯಿಸಲು ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅಪ್ರಾಪ್ತನನ್ನು ಬಂಸಲಾಗಿದೆ ಎಂದು ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ ಶರ್ಮಾ ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದುಕೊಂಡ ಆಕೆಯ ಕುಟುಂಬಸ್ಥರು ಆಕೆಯನ್ನು ಗೌರಿ ಬಜಾರ್‍ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿಂದ ಆಕೆಯನ್ನು ಡಿಯೋರಿಯಾದ ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ಅತ್ಯಾಚಾರ ಕುರಿತಂತೆ ಅಪ್ರಾಪ್ತರ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಹದಿಹರೆಯದವರನ್ನು ಬಂಧಿಸಿ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ ಚಂದ್ರಬಾಬು ನಾಯ್ಡು

ಅಮರಾವತಿ, ನ.1 (ಪಿಟಿಐ)- ಕೌಶಲ್ಯಾಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಮುಂಜಾನೆ ಇಲ್ಲಿನ ಉಂಡವಳ್ಳಿಯಲ್ಲಿರುವ ತಮ್ಮ ಮನೆ ತಲುಪಿದ್ದಾರೆ.

ಕೇಂದ್ರ ಕಾರಾಗೃಹದಲ್ಲಿರುವ ರಾಜಮಹೇಂದ್ರವರಂನಿಂದ 13 ಗಂಟೆಗಳ ಸುದೀರ್ಘ ಪ್ರಯಾಣದ ನಂತರ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕುಟುಂಬ ಸದಸ್ಯರು ಮತ್ತು ಪಕ್ಷದ ಬೆಂಬಲಿಗರಿಂದ ಭಾವನಾತ್ಮಕ ಸ್ವಾಗತದೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ಅವರ ಮನೆಗೆ ತಲುಪಿದರು.

ಟಿಡಿಪಿ ಮುಖ್ಯಸ್ಥರು ನಂತರ ಪತ್ನಿ ಎನ್ ಭುವನೇಶ್ವರಿ ಮತ್ತು ಸಂಬಂಧಿಕರೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಆಂಧ್ರಪ್ರದೇಶ ಹೈಕೋರ್ಟ್ ನಿನ್ನೆ ಅವರ ಆರೋಗ್ಯದ ಆಧಾರದ ಮೇಲೆ ನಾಯ್ಡು ಅವರಿಗೆ ನಾಲ್ಕು ವಾರಗಳ ಅವಗೆ ಮಧ್ಯಂತರ ಜಾಮೀನು ನೀಡಿತ್ತು.

ನಾಯ್ಡು ಅವರ ಬೆಂಗಾವಲು ಪಡೆ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರದಿಂದ ಹೊರಟಿತು. ಆಂಧ್ರಪ್ರದೇಶದ ಅವರ ನಿವಾಸ ಕೃಷ್ಣಾ ನದಿ ದಡದಲ್ಲಿರುವ ಗುಂಟೂರು ಜಿಲ್ಲೆಯ ಉಂಡವಳ್ಳಿಗೆ ತೆರಳುವ ಮಾರ್ಗಮಧ್ಯೆ ರಸ್ತೆಬದಿಯಲ್ಲಿ ನೂರಾರು ಜನರು ಜಮಾಯಿಸಿ ಮಾಜಿ ಸಿಎಂಗೆ ಜಯಕಾರ ಹಾಕಿದರು.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ನಾಯ್ಡು ಅವರ ದರ್ಶನ ಪಡೆಯಲು ಪಕ್ಷದ ಹಲವಾರು ಬೆಂಬಲಿಗರು ಬಂದಿದ್ದರಿಂದ ಅವರ ಪ್ರಯಾಣದ ಆರಂಭಿಕ ಭಾಗದಲ್ಲಿ ಸುಮಾರು 5 ಕಿ.ಮೀ ವರೆಗೆ ಸಂಚಾರ ಸ್ಥಗಿತಗೊಂಡಿತು. ಪಕ್ಷದ ವರಿಷ್ಠರ ಬೆಂಗಾವಲು ಪಡೆಯೊಂದಿಗೆ ಹಲವು ಟಿಡಿಪಿ ನಾಯಕರು ಕೂಡ ಇದ್ದರು.

ಹಣ ವರ್ಗಾವಣೆ ತಡೆ ಕಾಯ್ದೆ ದುರ್ಬಳಕೆ ಬಗ್ಗೆ ಕೋರ್ಟ್‍ಗಳು ಎಚ್ಚೆತ್ತುಕೊಳ್ಳಬೇಕು ; ಸಿಬಲ್

ನವದೆಹಲಿ, ನ.1 (ಪಿಟಿಐ) ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದ ಕೆಲ ದಿನಗಳ ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ದುರ್ಬಳಕೆ ಬಗ್ಗೆ ನ್ಯಾಯಾಲಯಗಳು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ.

ತನಿಖಾ ಸಂಸ್ಥೆಯು ಬಹುತೇಕ ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡಿದೆ, ಇಡಿ ಮತ್ತು ನಾಯಕರಿಗೆ ಜಾಮೀನು ನಿರಾಕರಣೆ ಸರ್ಕಾರದ ಕೈಯಲ್ಲಿ ರಾಜಕೀಯ ಅಸ್ತ್ರ ವಾಗಿ ಮಾರ್ಪಟ್ಟಿದೆ ಎಂದು ಅವರು ಆರೋಪಿಸಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಲಾಗಿದೆ ಮತ್ತು ಮೂಲಗಳ ಪ್ರಕಾರ, ನವೆಂಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯ ತನಿಖಾ ಸಂಸ್ಥೆಯ ಕಚೇರಿಯಲ್ಲಿ ಇಡಿ ಅವರು ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಾರೆ.

ಭಾರತ ಮೂಲದ ನಂದಿನಿ ದಾಸ್‍ಗೆ ಬ್ರಿಟಿಷ್ ಅಕಾಡಮಿ ಪುಸ್ತಕ ಪ್ರಶಸ್ತಿ

ಸಿಬಲ್ ಅವರು ಎಕ್ಸ್ ಪೋಸ್ಟ್‍ನಲ್ಲಿ, ಕೇಜ್ರಿವಾಲ್ ಅವರನ್ನು ಇಡಿ ಕರೆದಿದೆ. ಇಡಿ ವಿರೋಧದಲ್ಲಿರುವ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಇಡಿ ಮತ್ತು ನಾಯಕರಿಗೆ ಜಾಮೀನು ನಿರಾಕರಣೆ ಸರ್ಕಾರದ ಕೈಯಲ್ಲಿ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದೆ. ಪಿಎಂಎಲ್‍ಎಯ ದುರುಪಯೋಗದ ಬಗ್ಗೆ ನ್ಯಾಯಾಲಯಗಳು ಎಚ್ಚೆತ್ತುಕೊಳ್ಳುವ ಸಮಯ ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ನಂತರ ಮತ್ತೊಂದು ಪೋಸ್ಟ್ ನಲ್ಲಿ ಸಿಬಲ್, ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಇಂಡಿಯಾ ಬಣ ಒಂದೇ ಧ್ವನಿಯಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಮಹತ್ವದ ಮಾಹಿತಿ : ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡೋದು ಹೇಗೆ..?

ನವದೆಹಲಿ,ನ.1- ಮಾಹಿತಿ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಆಧಾರ್ ಬಳಕೆದಾರರು ಇನ್ನು ತಮ್ಮ ಡೇಟಾವನ್ನು ರಕ್ಷಿಸಲು ಮತ್ತು ಡೇಟಾ ಉಲ್ಲಂಘನೆಯನ್ನು ತಡೆಯಲು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್‍ಸೈಟ್ ಪ್ರಕಾರ, ಬಯೋಮೆಟ್ರಿಕ್ ಲಾಕ್ ಮತ್ತು ಅನ್‍ಲಾಕಿಂಗ್ ಎನ್ನುವುದು ಆಧಾರ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್‍ಗಳನ್ನು ಲಾಕ್ ಮಾಡಲು ಮತ್ತು ತಾತ್ಕಾಲಿಕವಾಗಿ ಅನ್‍ಲಾಕ್ ಮಾಡಲು ಅನುಮತಿಸುವ ಸೇವೆಯಾಗಿದೆ. ಈ ಸೌಲಭ್ಯವು ಆಧಾರ್ ಬಳಕೆದಾರರ ಬಯೋಮೆಟ್ರಿಕ್ಸ್ ಡೇಟಾದ ಗೌಪ್ಯತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ವೆಬ್‍ಸೈಟ್ ಹೇಳಿದೆ.

ಯಾವ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಬಹುದು?
ಬಯೋಮೆಟ್ರಿಕ್ ವಿಧಾನದಂತೆ ಫಿಂಗರ್‍ಪ್ರಿಂಟ್, ಐರಿಸ್ ಮತ್ತು ಮುಖವನ್ನು ಲಾಕ್ ಮಾಡಲಾಗುತ್ತದೆ ಮತ್ತು ಬಯೋಮೆಟ್ರಿಕ್ ಲಾಕ್ ಮಾಡಿದ ನಂತರ, ಆಧಾರ್ ಹೊಂದಿರುವವರು ಮೇಲೆ ತಿಳಿಸಿದ ಬಯೋಮೆಟ್ರಿಕ್ ವಿಧಾನಗಳನ್ನು ಬಳಸಿಕೊಂಡು ಆಧಾರ್ ದೃಢೀಕರಣವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆಧಾರ್ ಬಳಕೆದಾರರ ಮಾಹಿತಿ ಸೋರಿಕೆ ತಡೆಗಟ್ಟಬಹುದಾಗಿದೆ.

ಭಾರತ ಮೂಲದ ನಂದಿನಿ ದಾಸ್‍ಗೆ ಬ್ರಿಟಿಷ್ ಅಕಾಡಮಿ ಪುಸ್ತಕ ಪ್ರಶಸ್ತಿ

ಇತ್ತಿಚೆಗೆ 81 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್‍ಸೈಟ್‍ನಲ್ಲಿ ಮಾರಾಟಕ್ಕಿಟ್ಟ ಪ್ರಕರಣವನ್ನು ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರಿಸೆಕ್ಯುರಿಟಿ ಬಹಿರಂಗಪಡಿಸಿದ ನಂತರ ಆಧಾರ ಗೌಪ್ಯತೆ ಕಾಪಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸಿತ್ತು.

ಗಂಭೀರವಾದ ಡೇಟಾ ಉಲ್ಲಂಘನೆಯಲ್ಲಿ, 815 ಮಿಲಿಯನ್ ಭಾರತೀಯರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯು ಇತ್ತೀಚೆಗೆ ಡಾರ್ಕ್ ವೆಬ್‍ನಲ್ಲಿ ಮಾರಾಟವಾಗಿದೆ. ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳೊಂದಿಗೆ ಆಧಾರ್ ಮತ್ತು ಪಾಸ್‍ಪೋರ್ಟ್ ಮಾಹಿತಿಯಂತಹ ವಿವರಗಳು ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಲಭ್ಯವಿತ್ತು ಎನ್ನಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದತ್ತಸಂಚಯವು ವಿಸ್ತೃತ ವ್ಯಾಪ್ತಿ ಮತ್ತು ಮಾಹಿತಿಯ ಸೂಕ್ಷ್ಮ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ರಾಜಿ ಮಾಡಿಕೊಂಡಿರಬಹುದು ಎಂದು ಮಾಧ್ಯಮ ವರದಿಗಳು ಸೂಚಿಸಿವೆ.

ಈ ವರ್ಷದ ಆಗಸ್ಟ್‍ನಲ್ಲಿ, ಲೂಸಿಯಸ್ ಎಂದು ಕರೆಯಲ್ಪಡುವ ವ್ಯಕ್ತಿಯೊಬ್ಬ ಬ್ರೀಚ್‍ಪೋರಮ್‍ಗಳಲ್ಲಿ ಹೆಸರಿಸದ ಭಾರತೀಯ ಆಂತರಿಕ ಕಾನೂನು ಜಾರಿ ಸಂಸ್ಥೆ ಗೆ ಸಂಬಂಧಿಸಿದ 1.8 ಟೆರಾಬೈಟ್ ಡೇಟಾ ಸೋರಿಕೆಯನ್ನು ಮಾರಾಟ ಮಾಡಲು ಥ್ರೆಡ್ ಅನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ.

ದೆಹಲಿ ಮತ್ತು ಮುಂಬೈನಲ್ಲಿ ನಡೆಯುವ ವಿಶ್ವಕಪ್ ಪಂದ್ಯದ ವೇಳೆ ಪಟಾಕಿ ಸಿಡಿಸುವಂತಿಲ್ಲ

2009ರಿಂದ ಇಲ್ಲಿಯವರೆಗೆ ಸರಿಸುಮಾರು 1.4 ಶತಕೋಟಿ ಆಧಾರ್ ಕಾರ್ಡ್‍ಗಳನ್ನು ನೀಡಿದೆ. 2022 ರಲ್ಲಿ ಬ್ರೂಕಿಂಗ್ಸ್ ಇನ್‍ಸ್ಟಿಟ್ಯೂಷನ್‍ನ ವರದಿಯು ಐಡಿ ವ್ಯವಸ್ಥೆಯು ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಗುರುತಿನ ಉಪಕ್ರಮಗಳಲ್ಲಿ ಸ್ಥಾನ ಪಡೆದಿದೆ ಎಂದು ಹೈಲೈಟ್ ಮಾಡಿದೆ.

ಡೇಟಾವನ್ನು ರಕ್ಷಿಸಲು ಎನ್‍ಕ್ರಿಪ್ಶನ್, ಮಲ್ಟಿಫ್ಯಾಕ್ಟರ್ ದೃಢೀಕರಣ ಮತ್ತು ಪ್ರವೇಶ ನಿಯಂತ್ರಣಗಳಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಹೀಗಾಗಿ ನಿಮ್ಮ ಆಧಾರ್ ಮಾಹಿತಿ ಸೋರಿಕೆಯಾಗುವ ಮುನ್ನ ನಿಮ್ಮ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳುವ ಮೂಲಕ ಮುಂದೆ ಆಗಬಹುದಾದ ಅನಾಹುತದಿಂದ ಬಚಾವ್ ಆಗಬಹುದಾಗಿದೆ.

ಬಯೋಮೆಟ್ರಿಕ್ ಲಾಕ್ ಎಂದರೇನು?
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್ ಪ್ರಕಾರ, ಬಯೋಮೆಟ್ರಿಕ್ ಲಾಕ್/ಅನ್‌ಲಾಕಿಂಗ್ ಎನ್ನುವುದು ಆಧಾರ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್‌ಗಳನ್ನು ಲಾಕ್ ಮಾಡಲು ಮತ್ತು ತಾತ್ಕಾಲಿಕವಾಗಿ ಅನ್‌ಲಾಕ್ ಮಾಡಲು ಅನುಮತಿಸುವ ಸೇವೆಯಾಗಿದೆ. ಈ ಸೌಲಭ್ಯವು ನಿವಾಸಿಗಳ ಬಯೋಮೆಟ್ರಿಕ್ಸ್ ಡೇಟಾದ ಗೌಪ್ಯತೆ ಮತ್ತು ಗೌಪ್ಯತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಬಯೋಮೆಟ್ರಿಕ್ ಅನ್ನು ಲಾಕ್ ಮಾಡಲು ಈ ಹಂತಗಳನ್ನು ಅನುಸರಿಸಿ
> UIDAI ಸೈಟ್‌ಗೆ ಹೋಗಿ ಮತ್ತು ನಿಮ್ಮ ಪ್ರೊಫೈಲ್‌ಗೆ ಲಾಗ್ ಇನ್ ಮಾಡಿ
>”ಮೆನು” ಬಟನ್ ಮೇಲೆ ಕ್ಲಿಕ್ ಮಾಡಿ
>”ಬಯೋಮೆಟ್ರಿಕ್ಸ್ ಸೆಟ್ಟಿಂಗ್ಸ್” ಮೇಲೆ ಕ್ಲಿಕ್ ಮಾಡಿ
>”ಬಯೋಮೆಟ್ರಿಕ್ ಲಾಕ್ ಅನ್ನು ಸಕ್ರಿಯಗೊಳಿಸಿ” ಆಯ್ಕೆಯನ್ನು ಟಿಕ್ ಮಾಡಿ
>”ಸರಿ” ಮೇಲೆ ಟ್ಯಾಪ್ ಮಾಡಿ
>ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಪಡೆಯುತ್ತೀರಿ
>OTP ಅನ್ನು ನಮೂದಿಸಿ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಲಾಗುತ್ತದೆ.

ಬಯೋಮೆಟ್ರಿಕ್ ಆಧಾರ್ ಡೇಟಾವನ್ನು ಅನ್‌ಲಾಕ್ ಮಾಡುವುದು ಹೇಗೆ?
ಬಯೋಮೆಟ್ರಿಕ್ ಅನ್‌ಲಾಕ್ ಅನ್ನು ನಿವಾಸಿಯು UIDAI ವೆಬ್‌ಸೈಟ್, ದಾಖಲಾತಿ ಕೇಂದ್ರ, ಆಧಾರ್ ಸೇವಾ ಕೇಂದ್ರ (ASK) ಗೆ ಭೇಟಿ ನೀಡುವ ಮೂಲಕ ಅಥವಾ m-ಆಧಾರ್ ಮೂಲಕ ಮಾಡಬಹುದು. ಈ ಸೇವೆಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಅತ್ಯಗತ್ಯ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನೋಂದಾಯಿಸದಿದ್ದರೆ, ಹತ್ತಿರದ ದಾಖಲಾತಿ ಕೇಂದ್ರ/ಮೊಬೈಲ್ ಅಪ್‌ಡೇಟ್ ಎಂಡ್ ಪಾಯಿಂಟ್‌ಗೆ ಭೇಟಿ ನೀಡಿ.

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೇಸ್ತಾನ್ ಧ್ವಜ ಪ್ರದರ್ಶಿಸಿದ ನಾಲ್ವರು ಅರೆಸ್ಟ್

ಕೋಲ್ಕತ್ತಾ, ನ.1 (ಪಿಟಿಐ) ಈಡನ್ ಗಾರ್ಡನ್ಸ್‍ನಲ್ಲಿ ನಡೆದ ಪಾಕಿಸ್ತಾನ-ಬಾಂಗ್ಲಾದೇಶ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಾಟ ನಡೆಸಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಮೈದಾನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಗೇಟ್ 6 ಮತ್ತು ಬ್ಲಾಕ್ ಎ1 ಬಳಿ ಪ್ಯಾಲೆಸ್ತೀನ್ ಧ್ವಜವನ್ನು ಬೀಸಿದ್ದಕ್ಕಾಗಿ ನಾವು ಅವರನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತರು ಕೇವಲ ಧ್ವಜ ಹಾರಾಟ ನಡೆಸಿದ್ದಾರೆ ಆದರೆ, ಅವರು ಯಾವುದೇ ಘೋಷಣೆ ಕೂಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ ಮೂಲದ ನಂದಿನಿ ದಾಸ್‍ಗೆ ಬ್ರಿಟಿಷ್ ಅಕಾಡಮಿ ಪುಸ್ತಕ ಪ್ರಶಸ್ತಿ

ಪ್ರಾಥಮಿಕ ವಿಚಾರಣೆಯ ನಂತರ, ನಾಲ್ವರು ಪ್ರೇಕ್ಷಕರು – ಬಲ್ಲಿ, ಎಕ್ಬಲ್‍ಪೋರ್ ಮತ್ತು ಕರಾಯ ಪ್ರದೇಶದ ನಿವಾಸಿಗಳನ್ನು ಬಿಡಲಾಯಿತು ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು.

ಆರಂಭಿಕ ತನಿಖೆಯಲ್ಲಿ ನಾಲ್ವರು ತಮ್ಮ ಇಪ್ಪತ್ತರ ಮಧ್ಯಭಾಗದಲ್ಲಿರುವವರು ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ-ಹಮಾಸ್ ಸಂಘರ್ಷದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಮತ್ತು ತಮ್ಮ ಸಂಚಲನಕ್ಕಾಗಿ ಅಂತರಾಷ್ಟ್ರೀಯ ಪಂದ್ಯವನ್ನು ಆರಿಸಿಕೊಂಡಿದ್ದರು.

ಮುಂಬೈ ಡಿಸಿಎಂ ಅಜಿತ್ ಪವಾರ್‌ಗೆ ಡೆಂಘೀ

ಮುಂಬೈ, ನ.1 (ಪಿಟಿಐ) ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಡೆಂಘೀ ಜ್ವರ ಮತ್ತು ದೌರ್ಬಲ್ಯದಿಂದ ಬಳಲುತ್ತಿದ್ದು, ವಿಶ್ರಾಂತಿಯ ಅಗತ್ಯವಿದೆ ಎಂದು ಅವರ ವೈದ್ಯರು ತಿಳಿಸಿದ್ದಾರೆ.

ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‍ಸಿಪಿ ನಾಯಕ ಸುನೀಲ್ ತಟ್ಕರೆ (ಅಜಿತ್ ಪವಾರ್ ಗುಂಪಿನ) ಡಾ ಸಂಜಯ್ ಕಪೋಟೆ ಅವರು, ಉಪ ಮುಖ್ಯಮಂತ್ರಿಗಳ ಪ್ಲೇಟ್‍ಲೆಟ್ ಮತ್ತು ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ಪೋರ್ಚಗೀಸ್ ಪ್ರಧಾನಿಯನ್ನು ಭೇಟಿಯಾದ ಜೈಶಂಕರ್

ಕಳೆದ ಮೂರ್ನಾಲ್ಕು ದಿನಗಳಿಂದ ಅವರು ಡೆಂಘೀ ಸೋಂಕಿನಿಂದ ಬಳಲುತ್ತಿದ್ದಾರೆ. ಅವರಿಗೆ ಜ್ವರ ಮತ್ತು ದೌರ್ಬಲ್ಯವಿದೆ ಮತ್ತು ವಿಶ್ರಾಂತಿ ಅಗತ್ಯವಿದೆ ಎಂದು ಕಪೋಟೆ ಹೇಳಿದರು. ಸೋನೋಗ್ರಫಿ ಜೊತೆಗೆ ಅವರ ಪ್ಲೇಟ್‍ಲೆಟ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಅದರಂತೆ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಪವಾರ್ ಅವರು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಹಾಜರಾಗಿರಲಿಲ್ಲ. ಎನ್‍ಸಿಪಿ ನಾಯಕ ಪ್ರಫುಲ್ ಪಟೇಲ್ ಮಾತನಾಡಿ, ಪವಾರ್‍ಗೆ ಡೆಂಗ್ಯೂ ಇರುವುದು ಪತ್ತೆಯಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ವೈದ್ಯಕೀಯ ಮಾರ್ಗದರ್ಶನ ಮತ್ತು ವಿಶ್ರಾಂತಿಯಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ.